ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಬೆಂಗಳೂರು ಅಂದ ತಕ್ಷಣ ನಮಗೆಲ್ಲಾ ಥಟ್ ಅಂಥಾ ನೆನಪಾಗೋದು ಟ್ರಾಫಿಕ್ ಕಿರಿಕಿರಿ. ಹೀಗಿರುವಾಗ ನಮಗೆ ಬೇಕಾದ ಕಡೆಗೆ ವಾಹನ ನಿಲುಗಡೆ ಅಷ್ಟು ಸುಲಭದ ಮಾತಲ್ಲ. ಹಾಗಂತ ಎಲ್ಲೆಂದರಲ್ಲೇ ವಾಹನ ನಿಲ್ಲಿಸುವುದು ಕೂಡಾ ಕಾನೂನು ಪ್ರಕಾರ ತಪ್ಪು. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಟೊಯಿಂಗ್ ವಾಹನಗಳ ಮಾಲೀಕರು ಮಾತ್ರ ವಾಹನ ಸವಾರರ ಜೇಬಿಗೆ ಭರ್ಜರಿಯಾಗಿಯೇ ಕತ್ತರಿ ಹಾಕುತ್ತಿದ್ದಾರೆ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಹೌದು, ರಾಜಧಾನಿ ಬೆಂಗಳೂರಿನಲ್ಲಿ ಸುಮಗ ಸಂಚಾರಕ್ಕಾಗಿ ಹಲವಾರು ಕಠಿಣ ಸಂಚಾರಿ ನಿಯಮಗಳನ್ನು ಜಾರಿ ತರಲಾಗಿದ್ದು, ಇದರಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧವು ಸಾಕಷ್ಟು ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ. ಇದು ಕಾನೂನು ಪ್ರಕಾರ ಸರಿಯಾದ ಕ್ರಮವಾದ್ರು ಕೂಡಾ ನೋ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸುವ ವಾಹನಗಳನ್ನು ಟೊಯಿಂಗ್ ಮಾಡುವ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆಯುತ್ತಿರುವುದು ಹೊಸ ವಿಚಾರ ಅಲ್ಲವೇ ಅಲ್ಲ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಕಾನೂನು ಪ್ರಕಾರ, ನಿಗದಿತ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳ ಪಕ್ಕ ಮತ್ತು ರಸ್ತೆಯ ತಿರುವುಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಹೀಗಾಗಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳಿಂದ ದಟ್ಟಣೆ ಉಂಟಾಗುವಂತಿದ್ದರೆ ಅವುಗಳನ್ನು ಟೋಯಿಂಗ್‌ ಮಾಡಬಹುದಾಗಿದೆ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಇದರಲ್ಲದೇ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿರುವ ವಾಹನಗಳನ್ನು ಸಹ ಸಂಚಾರಿ ಪೊಲೀಸರು ಏಕಾಏಕಿ ವಾಹನಗಳನ್ನು ಎತ್ತಿ ಒಯ್ಯುವಂತಿಲ್ಲ. ಬದಲಾಗಿ ವಾಹನದ ಸಂಖ್ಯೆ ನೋಂದಾಯಿಸಿಕೊಂಡು, ವಾಹನ ತೆಗೆಯಲು ಧ್ವನಿ ವರ್ಧಕದ ಮೂಲಕ ಪ್ರಕಟಿಸಬೇಕು.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಒಂದು ವೇಳೆ ವಾಹನದ ಮಾಲೀಕರು ಅಲ್ಲಿಯೇ ಇದ್ದಲ್ಲಿ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದಕ್ಕಾಗಿ ದಂಡ ಮತ್ತು ಈ ಹಿಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಬಾಕಿ ಇರುವ ದಂಡಗಳನ್ನು ಕಟ್ಟಿಸಿಕೊಳ್ಳಬಹುದಾಗಿದ್ದು, ವಾಹನ ಮಾಲೀಕರು ಆ ಸ್ಥಳದಲ್ಲಿ ಇಲ್ಲವಾದಲ್ಲಿ ಮಾತ್ರವೇ ಹತ್ತಿರದ ಸಂಚಾರಿ ಪೊಲೀಸ್‌ ಠಾಣೆಗೆ ವಾಹನ ಎಳೆದೊಯ್ಯಬೇಕು ಎಂಬ ನಿಯಮವಿದೆ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಜೊತೆಗೆ ವಾಹನ ಎಳೆದೊಯ್ಯುವ ಸಮಯದಲ್ಲಿ ವಾಹನ ಮಾಲೀಕರು ಬಂದು ವಾಹನ ಹಿಂದಿರುಗಿಸಲು ಮನವಿ ಮಾಡಿಕೊಂಡರೇ ಅವರಿಂದ ನೋ-ಪಾರ್ಕಿಂಗ್‌ ದಂಡ ಮತ್ತು ಟೋಯಿಂಗ್‌ ಶುಲ್ಕವನ್ನು ಪಡೆದು ಅದೇ ಕ್ಷಣದಲ್ಲಿ ವಾಹನ ಹಿಂದಿರುಗಿಸಬೇಕು.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಈ ವೇಳೆ ಪೊಲೀಸರು ಆಗಲಿ ಅಥವಾ ಟೊಯಿಂಗ್ ಸಿಬ್ಬಂದಿಯ ಠಾಣೆಗೆ ಬಂದು ವಾಹನ ಪಡೆಯುವಂತೆ ತಾಕೀತು ಮಾಡುವಂತಿಲ್ಲ, ಧಮಕಿಯೂ ಹಾಕುವಂತಿಲ್ಲ ಎಂದು ಸಂಚಾರಿ ನಿಯಮದಲ್ಲಿ ಸ್ಪಷ್ಟವಾಗಿ ಹೇಳಲಾಗುತ್ತೆ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಆದ್ರೆ ಇದ್ಯಾವುದೂ ಕೂಡಾ ಸದ್ಯಕ್ಕೆ ಬೆಂಗಳೂರಿನಲ್ಲಿ ಪಾಲನೆಯಾಗುತ್ತಿಲ್ಲ ಎನ್ನುವುದಕ್ಕೆ ಈ ಸ್ಟೋರಿಯೇ ಪ್ರಮುಖ ಸಾಕ್ಷಿ ಎಂದ್ರೆ ತಪ್ಪಾಗುವುದಿಲ್ಲ. ಕಾರಣ, ಪೊಲೀಸರ ಹಿಡಿತದಲ್ಲಿ ಇರಬೇಕಾದ ಟೊಯಿಂಗ್ ವಾಹನ ಮಾಲೀಕರು ಮತ್ತು ಸಿಬ್ಬಂದಿಯು ಪೊಲೀಸರಿಗಿಂತಲೂ ಚುರುಕಾಗಿ ಕೆಲಸ ಮಾಡುವ ಮೂಲಕ ಭರ್ಜರಿಯಾಗಿಯೇ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಎಳೆದೊಯ್ಯಲು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಟೊಯಿಂಗ್ ಮಾಡುವ ವಾಹನಗಳ ಮಾಲೀಕರು ಕಮಿಷನ್ ಆಸೆಗೆ ನಿಯಮ ಬಾಹಿರವಾಗಿ ನೋ-ಪಾರ್ಕಿಂಗ್‌ನಲ್ಲಿರುವ ವಾಹನಗಳನ್ನು ಎಳೆದೊಯ್ಯುತ್ತಿರುವ ಘಟನೆಗಳು ಹೆಚ್ಚುತ್ತಿವೆ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಸಂಚಾರಿ ನಿಯಮ ಮೀರಿ ನೋ ಪಾರ್ಕಿಂಗ್‌ನಲ್ಲಿ ನಿಂತಿರುವ ವಾಹನಗಳನ್ನು ಎಳೆದೊಯ್ಯುವಾಗ ಯಾವುದೇ ಸೂಚನೆ ನೀಡದ ಟೊಯಿಂಗ್ ಸಿಬ್ಬಂದಿಯು ವಾಹನ ಸವಾರರಿಂದ ಹಣ ಕೀಳುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಯಾವುದೇ ಕ್ರಮಕೈಗೊಳ್ಳತ್ತಿಲ್ಲ.

MOST READ: ದರೋಡೆಕೋರರ ಹೆಡೆಮುರಿ ಕಟ್ಟಲು ಡಿಸಿಪಿ ಅಣ್ಣಾಮಲೈ ಮಾಡಿದ ಪ್ಲ್ಯಾನ್ ಹೇಗಿತ್ತು ಗೊತ್ತಾ?

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಮೊನ್ನೆ ಕೂಡಾ ಇಂತದ್ದೇ ಘಟನೆ ಒಂದು ಬೆಂಗಳೂರಿನ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದಿದ್ದು, ಸಂಚಾರಿ ಪೊಲೀಸರಿಗೂ ಗೊತ್ತಿಲ್ಲದಂತೆ ನೋ ಪಾರ್ಕಿಂಗ್‌ನಲ್ಲಿರುವ ವಾಹನಗಳನ್ನು ಟೊಯಿಂಗ್ ಸಿಬ್ಬಂದಿಯು ಕಮಿಷನ್ ಆಸೆಗೆ ವಾಹನಗಳನ್ನು ಎಳೆದು ತಂದಿದ್ದಾರೆ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಈ ಬಗ್ಗೆ ಪ್ರಶ್ನೆ ಮಾಡಿದಾಗ ಬೈಕ್ ಮಾಲೀಕರಿಗೂ ಧಮ್ಕಿ ಹಾಕಿರುವ ಟೊಯಿಂಗ್ ಸಿಬ್ಬಂದಿಯು ಪೊಲೀಸರ ಸೂಚನೆ ಮೇರೆಗೆ ಟೊಯಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದ್ರೆ ಈ ಬಗ್ಗೆ ಪೊಲೀಸರಿಗೆ ಕೇಳಿದ್ರೆ ಟೊಯಿಂಗ್ ಸಿಬ್ಬಂದಿಯಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡು ಯಾವುದೇ ರೀತಿಯ ದಂಡ ವಿಧಿಸದೇ ಬಿಟ್ಟು ಕಳುಹಿಸಿದ ಪ್ರಸಂಗ ನಡೆದಿದೆ.

MOST READ: ಟೋಲ್ ಹೊರೆ ಇಳಿಸಲು ಕೇಂದ್ರ ಸರ್ಕಾರದಿಂದ ಹೊಸ ಪ್ಲ್ಯಾನ್..!

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಟೊಯಿಂಗ್ ವಾಹನದಲ್ಲಿ ಪೊಲೀಸ್ ಅಧಿಕಾರಿ ಇಲ್ಲದೆಯೇ ನೇರವಾಗಿ ಸಿಬ್ಬಂದಿಯೇ ನೋ-ಪಾರ್ಕಿಂಗ್‌ನಲ್ಲಿರುವ ವಾಹನಗಳನ್ನು ಎತ್ತಿಕೊಂಡು ಬರುತ್ತಿರುವುದು ಇಲ್ಲಿ ಸ್ಪಷ್ಟವಾಗಿದ್ದು, ಇದು ಕಮಿಷನ್ ಉದ್ದೇಶಕ್ಕಾಗಿಯೇ ಹೀಗೆಲ್ಲಾ ಮಾಡುತ್ತಿದ್ದಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ವಾಹನ ಸವಾರರೇ ಎಚ್ಚರ- ಬೆಂಗಳೂರಿನಲ್ಲಿ ಟೊಯಿಂಗ್ ವಾಹನಗಳಿಂದ ಅಂದಾ ದರ್ಬಾರ್?

ಆದ್ರೆ ಅದೇನೇ ಇರಲಿ ಕೇವಲ ಕಮಿಷನ್ ಉದ್ದೇಶಕ್ಕಾಗಿ ವಾಹನ ಮಾಲೀಕರನ್ನು ಸುಲಿಗೆ ಮಾಡುತ್ತಿರುವ ಈ ಕ್ರಮಕ್ಕೆ ಅದೆಷ್ಟೋ ಜನರ ಜೇಬು ಈಗಾಗಲೇ ಖಾಲಿಯಾಗಿದ್ದು, ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

Source: Asha Rani Prajaakeeya

Most Read Articles

Kannada
English summary
Atrocity Of Bangalore Traffic Police Towing Service. Read in Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more