TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಹೊಸ ಅವತಾರದ ಬಜಾಜ್ ಅವೆಂಜರ್ 180 ಬಿಡುಗಡೆ ಯಾವಾಗ?
ಭಾರತೀಯ ಮೋಟಾರ್ ಸೈಕಲ್ ತಯಾರಕ ಬಜಾಜ್ ಆಟೋ ಸಂಸ್ಥೆಯು ಅವೆಂಜರ್ 150 ಮಾದರಿಗಳ ಉತ್ಪಾದನೆಗೆ ಗುಡ್ ಬೈ ಹೇಳುತ್ತಿದ್ದು, ಹೊಸ ಮಾದರಿಯ ಅವೆಂಜರ್ 180 ದ್ವಿಚಕ್ರ ವಾಹನವನ್ನು ಹೊಸ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಪ್ರಾರಂಭಿಸಲು ಸಿದ್ಧವಾಗಿದೆ.
2018ರ ಜನವರಿಯಲ್ಲಿ ನವೀಕರಿಸಿದ ಅವೆಂಜರ್ 220 ಸ್ಟ್ರೀಟ್ ಮತ್ತು ಕ್ರೂಸ್ ರೂಪಾಂತರಗಳನ್ನು ಬಜಾಜ್ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಮುಂಬರುವ ಫೆಬ್ರುವರಿಯಲ್ಲಿ ಅವೆಂಜರ್ 180 ಕೂಡಾ ಖರೀದಿ ಲಭ್ಯವಾಗುವ ಸಾಧ್ಯತೆಗಳಿವೆ.
ಹೀಗಾಗಿ ಹೊಸ ಬೈಕ್ ಮಾದರಿಯು ಸುಜುಕಿ ನಿರ್ಮಾಣದ ಇಂಟ್ರುಡರ್ 150 ಬೈಕಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ನೀರಿಕ್ಷೆಗಳಿದ್ದು, ಪಲ್ಸರ್ 180 ಎಂಜಿನ್ ಅನ್ನು ಅವೆಂಜರ್ 180ನಲ್ಲಿ ಅಳವಡಿಸಿಕೊಳ್ಳಲಿದೆ.
ಉದಯೋನ್ಮುಖ ವರದಿಗಳ ಪ್ರಕಾರ ಬಿಡುಗಡೆಗೊಳ್ಳುವ ಅವೆಂಜರ್ ಸ್ಟ್ರೀಟ್ ಮತ್ತು ಕ್ರೂಸ್ ಎರಡೂ ವಾಹನಗಳು ಹಲವಾರು ಕಾಸ್ಮೆಟಿಕ್ ಅಪ್ಡೇಟ್ ಪಡೆಯಲಿದ್ದು, ಅವೆಂಜರ್ 180 ಮಾದರಿ ಯಾಂತ್ರಿಕ ಅಂಶಗಳು ಪ್ರಸ್ತುತ ಮಾರಾಟವಾಗುತ್ತಿರುವ 220 ಮಾದರಿಗೆ ಹೋಲುತ್ತದೆ.
ಹಲವಾರು ಕಾಸ್ಮೆಟಿಕ್ ಅಪ್ಡೇಟ್‌ಗಳನ್ನು ಪಡೆದುಕೊಳ್ಳಲಿದೆ ಎನ್ನುವ ವಿಚಾರವನ್ನು ಗಮನಿಸಿದರೆ, ಹೊಸ ವಾಹನವು ಸುಜುಕಿ ಇಂಟ್ರುಡರ್ 150 ಬೈಕಿಗೆ ಟಕ್ಕರ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೊಸ ಎವೆಂಜರ್ ಸರಣಿಯ ಪ್ರಮುಖ ನವೀಕರಣಗಳಲ್ಲಿ ಒಂದಾದ ಕ್ಲಾಸಿಕ್ ಸಿಂಗಲ್-ಪಾಡ್ ಘಟಕದೊಳಗೆ ಹೊಸ ಡಿಜಿಟಲ್ ಉಪಕರಣ ಕ್ಲಸ್ಟರ್ ಅಳವಡಿಸಲು ಕಂಪನಿ ಮುಂದಾಗಿದೆ.
ಹೊಸ ಅವೆಂಜರ್ 180 ಮಾದರಿಯು ಅಸ್ತಿತ್ವದಲ್ಲಿರುವ ಅವೆಂಜರ್ 150 ರೀತಿಯಲ್ಲೇ ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. ಈ ಮೂಲಲಕ 178.2 ಸಿಸಿ ಎಂಜಿನ್ ಮೂಲಕ 14.3-ಬಿಎಚ್‌ಪಿ ಮತ್ತು 12.5-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ.
ರಿವರ್ಸ್ ಗೇರ್ ಇರೋ ಬುಲೆಟ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ.... l
ಈ ಮೋಟಾರ್ ಸೈಕಲ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅವಳಿ ಶಾಕ್ ಹೊಂದಲಿದೆ. ಬಜಾಜ್ ವಾಹನವು ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳನ್ನು ನೀಡಲು ಯೋಜನೆ ರೂಪಿಸಿದೆ ಎಂಬ ಮಾಹಿತಿ ಇದೆ. ಹೊಸ ಅವೆಂಜರ್ ಸರಣಿಯನ್ನು ರಿಫ್ರೆಶ್ ಮಾಡಲು ಮುಂದಾಗಿರುವ ಬಜಾಜ್ ಹೆಚ್ಚು ಕ್ರೂಸರ್ ಪ್ರಿಯರನ್ನು ತಲುಪುವ ನಿರೀಕ್ಷೆ ಇದೆ.
2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?
Trending DriveSpark YouTube Videos
Subscribe To DriveSpark Kannada YouTube Channel - Click Here