ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

ಬಜಾಜ್ ಮೋಟಾರ್ಸ್ ಸಂಸ್ಥೆಯು ಡೋಮಿನಾರ್ 400 ಬೈಕ್‌ಗಳ ಬೆಲೆಗಳನ್ನು ಹೆಚ್ಚಿಸಿದ್ದು, ಇದು 2018ರ ಅವಧಿಯಲ್ಲೇ ಬರೋಬ್ಬರಿ ನಾಲ್ಕು ಬಾರಿ ಹೆಚ್ಚಳ ಮಾಡಿದಂತಾಗಿದೆ.

By Praveen Sannamani

ಬಜಾಜ್ ಮೋಟಾರ್ಸ್ ಸಂಸ್ಥೆಯು ಡೋಮಿನಾರ್ 400 ಬೈಕ್‌ಗಳ ಬೆಲೆಗಳನ್ನು ಹೆಚ್ಚಿಸಿದ್ದು, ಇದು 2018ರ ಅವಧಿಯಲ್ಲೇ ಬರೋಬ್ಬರಿ ನಾಲ್ಕು ಬಾರಿ ಬೆಲೆ ಹೆಚ್ಚಳ ಮಾಡಿದಂತಾಗಿದೆ. ಪ್ರತಿ ಹೆಚ್ಚಳದಲ್ಲೂ ಸರಾಸರಿ ರೂ. 2 ಸಾವಿರ ಬೆಲೆ ಹೆಚ್ಚಿಸಿರುವ ಬಜಾಜ್ ಸಂಸ್ಥೆಯು ಈ ಬಾರಿಯು ಸಹ ರೂ. 2 ಸಾವಿರ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ.

ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

ಡೋಮಿನಾರ್‍ 400 ಬೈಕ್‌ಗಳಲ್ಲಿ ಲಭ್ಯವಿರುವ ಎರಡು ವೇರಿಯೆಂಟ್‍‍ಗಳ ಮೇಲೆ ಬೆಲೆ ಏರಿಕೆ ಮಾಡಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಸದ್ಯ ಬಜಾಜ್ ಡಾಮಿನಾರ್ 400 ಬೈಕ್‍‌ ಬೆಲೆಗಳು ಎಬಿಎಸ್ ರಹಿತ ಬೈಕ್ ಮಾದರಿಗಳಿಗೆ ರೂ.1.48 ಲಕ್ಷ ಮತ್ತು ಎಬಿಎಸ್ ಬೈಕ್ ಮಾದರಿಗಳಿಗೆ ರೂ. 1.62 ಲಕ್ಷಕ್ಕೆ ಹೊಸ ದರ ಪಟ್ಟಿ ಸಿದ್ದಗೊಳಿಸಲಾಗಿದೆ.

ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

ಕಳೆದ ಮೂರು ತಿಂಗಳ ಅವಧಿಯಲ್ಲಿ ಬಜಾಜ್ ಸಂಸ್ಥೆಯು ಒಟ್ಟು ನಾಲ್ಕು ಬಾರಿ ತಮ್ಮ ಡೋಮಿನಾರ್ 400 ಬೈಕ್‍‍ನ ಮೇಲೆ ಬೆಲೆಯನ್ನು ಏರಿಕೆ ಮಾಡಿದ್ದು, ಕಳೆದ ಬಾರಿಯು ಕೂಡಾ ರೂ. 2000 ಏರಿಕೆ ಮಾಡಿತ್ತು. ಹೀಗಾಗಿ 2016ರಲ್ಲಿ ಬಿಡುಗಡೆಗೊಂಡ ಈ ಬೈಕ್ ಇದುವರೆಗೆ ರೂ. 12,000 ಸಾವಿರದಷ್ಟು ಬೆಲೆ ಹೆಚ್ಚಳವನ್ನು ಕಂಡಿದೆ.

ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

2018ರ ಜನವರಿ ತಿಂಗಳಿನಲ್ಲಿ ಬಜಾಜ್ ಡೋಮಿನರ್ 400 ಬೈಕ್ ವಿನ್ಯಾಸದಲ್ಲಿ ಗುರುತರ ಬದಲಾವಣೆಯನ್ನು ಕಂಡಿದ್ದಲ್ಲದೇ ರಾಕ್ ಮೇಟ್ ಬ್ಲಾಕ್, ಗ್ಲೇಶಿಯರ್ ಬ್ಲೂ ಮತ್ತು ಕನ್ಯಾನ್ ರೆಡ್ ಎಂಬ ಮೂರು ಹೊಸ ಪೆಯಿಂಟ್ ಸ್ಕೀಮ್ ಅನ್ನು ಪಡೆದುಕೊಂಡಿತ್ತು.

ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

ಅದಾದ ಬಳಿಕ ಪ್ರತಿ ತಿಂಗಳು ಕೊನೆಯಲ್ಲಿ ಬೆಲೆ ಏರಿಕೆ ಶಾಕ್ ನೀಡುತ್ತಲೆ ಬಂದಿರುವ ಬಜಾಜ್ ಸಂಸ್ಥೆಯು ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದಿತ್ತು. ಒಟ್ಟಿನಲ್ಲಿ ಪ್ರತಿ ತಿಂಗಳಿಗೊಮ್ಮೆ ಬೆಲೆ ಏರಿಕೆ ಶಾಕ್ ನೀಡುತ್ತಲೇ ಇರುವ ಬಜಾಜ್ ಸಂಸ್ಥೆಯು ಬೇಡಿಕೆ ಹೆಚ್ಚಳದ ವೇಳೆ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಬೈಕ್ ಮಾರಾಟದ ಮೇಲೆ ಪ್ರತಿಕೂಲಕರ ಮಾರುಕಟ್ಟೆ ಸನ್ನಿವೇಶ ಉಂಟಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

ಆದರೂ ಕಮ್ಯುಟರ್ ಬೈಕ್ ಪ್ರಿಯರ ಗಮನಸೆಳೆಯುವಲ್ಲಿ ಯಶಸ್ವಿಯಾಗಿರುವ ಬಜಾಜ್ ಡೋಮಿನಾರ್ 400 ಬೈಕ್‍‍ಗಳು ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಪೂರ್ಣ ಡಿಜಿಟಲ್ ಎನ್ಸ್ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್ ಡಿಸ್ಕ್ ಬ್ರೇಕ್ಸ್, ಅಲಾಯ್ ವೀಲ್ಸ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಆಯ್ಕೆಯಾಗಿ ಪಡೆದುಕೊಂಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿವೆ.

ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

ಎಂಜಿನ್ ಸಾಮರ್ಥ್ಯ

ಡೋಮಿನಾರ್ 400 ಬೈಕ್ 373ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 34.5 ಬಿಹೆಚ್‍‍ಪಿ ಮತ್ತು 35ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

ಇನ್ನು ಬಜಾಜ್ ಡಾಮಿನಾರ್ ಬೈಕ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿದ್ದು, ಹಿಂಭಾಗದಲ್ಲಿ ಸಿಂಗಲ್ ಗ್ಯಾಸ್ ಚಾರ್ಜ್ಡ್ ಮೋನೊಶಾಕ್ ಅನ್ನು ಹಿಂಭಾಗದಲ್ಲಿ ಪಡೆದುಕೊಂಡಿದೆ. ಬೈಕಿನ ಒಟ್ಟಾರೆ ತೂಕ 182 ಪಡೆದಿದ್ದು, ಗಂಟೆಗೆ 145 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿವೆ.

ಬಜಾಜ್ ಡೋಮಿನಾರ್ 400 ಬೈಕ್ ಬೆಲೆಗಳಲ್ಲಿ ಮತ್ತೆ ಏರಿಕೆ

ಬಜಾಜ್ ಸಂಸ್ಥೆಯು ಈಗಾಗಲೆ ತಮ್ಮ ಡೋಮಿನಾರ್ 400 ಬೈ‍‍ಕ್‍ನ ಹೊಸ ಬೆಲೆಯನ್ನು ತಮ್ಮ ಅಧಿಕೃತ ವೆಬ್‍‍ಸೈಟ್‍‍ನಲ್ಲಿ ಪ್ರಕಟಿಸಿದ್ದು, ಎಬಿಎಸ್ ರಹಿತ ಬೈಕ್ ಮಾದರಿಗಳು ರೂ.1.48 ಲಕ್ಷಕ್ಕೆ ಮತ್ತು ಎಬಿಎಸ್ ಬೈಕ್ ಮಾದರಿಗಳು ರೂ. 1.62 ಲಕ್ಷಕ್ಕೆ ಖರೀದಿಗೆ ಲಭ್ಯವಿರಲಿವೆ.

Most Read Articles

Kannada
English summary
Bajaj Dominar 400 Price Hike — Second Price Hike In As Many Months.
Story first published: Wednesday, July 11, 2018, 12:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X