ಬಜಾಜ್ ಡಾಮಿನರ್ 400 ಬೈಕ್ ಮೇಲೆ ರೂ 2,000 ಬೆಲೆ ಏರಿಕೆ..

Written By: Rahul TS

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ತಮ್ಮ ಜನಪ್ರಿಯ ಡಾಮಿನಾರ್ 400 ಬೈಕ್‍‍ನ ಮೇಲೆ ಬೆಲೆ ಏರಿಸಿದ್ದು, ಡಾಮಿನಾರ್‍‍ನ ಎರಡು ವೇರಿಯಂಟ್‍‍ಗಳ ಮೇಲೆ ಬೆಲೆ ಏರಿಕೆ ಮಾಡಿದೆ. ದೆಹಲಿಯ ಎಕ್ಸ್ ಶೋರಂ ಪ್ರಕಾರ ಬಜಾಜ್ ಡಾಮಿನಾರ್ 400 ಬೈಕ್‍‍ನ ಹೊಸ ಬೆಲೆಗಳು ಎಬಿಎಸ್ ರಹಿತ ಬೈಕ್ ರೂ.1.46 ಲಕ್ಷ ಮತ್ತು ಎಬಿಎಸ್ ಬೈಕ್ ವೇರಿಯಂಟ್‍‍ಗಳು ರೂ 1.60 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಜಾಜ್ ಡಾಮಿನರ್ 400 ಬೈಕ್ ಮೇಲೆ ರೂ 2,000 ಬೆಲೆ ಏರಿಕೆ..

ಕಳೆದ ಎರಡು ತಿಂಗಳಿನಿಂದ ಬಜಾಜ್ ಸಂಸ್ಥೆಯು ಇದು ಎರಡನೆಯ ಬಾರಿ ತಮ್ಮ ಡಾಮಿನಾರ್ 400 ಬೈಕ್‍‍ನ ಮೇಲೆ ಬೆಲೆಯನ್ನು ಏರಿಸಿದ್ದು, ಕಳೆದ ಬಾರಿಯು ಕೂಡ ರೂ. 2000 ಏರಿಕೆ ಮಾಡಿತ್ತು. 2016ರಲ್ಲಿ ಬಿಡುಗಡೆಗೊಂಡ ಈ ಬೈಕ್ ಈ ವರೆಗು ರೂ 10,000 ಸಾವಿರದಷ್ಟು ಬೆಲೆ ಹೆಚ್ಚಳವನ್ನು ಕಂಡಿದೆ.

ಬಜಾಜ್ ಡಾಮಿನರ್ 400 ಬೈಕ್ ಮೇಲೆ ರೂ 2,000 ಬೆಲೆ ಏರಿಕೆ..

2018ರ ಜನವರಿ ತಿಂಗಳಿನಲ್ಲಿ ಬಜಾಜ್ ಡಾಮಿನರ್ 400 ಬೈಕ್ ವಿನ್ಯಾಸದಲ್ಲಿ ಗುರುತರ ಬದಲಾವಣೆಯನ್ನು ಕಂಡಿದ್ದು, ರಾಕ್ ಮೇಟ್ ಬ್ಲಾಕ್, ಗ್ಲೇಶಿಯರ್ ಬ್ಲೂ ಮತ್ತು ಕನ್ಯಾನ್ ರೆಡ್ ಎಂಬ ಮೂರು ಹೊಸ ಪೆಯಿಂಟ್ ಸ್ಕೀಮ್ ಅನ್ನು ಪಡೆದುಕೊಂಡಿದೆ.

ಬಜಾಜ್ ಡಾಮಿನರ್ 400 ಬೈಕ್ ಮೇಲೆ ರೂ 2,000 ಬೆಲೆ ಏರಿಕೆ..

ಬಜಾಜ್ ಡಾಮಿನಾರ್ 400 ಬೈಕ್‍‍ಗಳು ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಪೂರ್ಣ ಡಿಜಿಟಲ್ ಎನ್ಸ್ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್ ಡಿಸ್ಕ್ ಬ್ರೇಕ್ಸ್, ಅಲಾಯ್ ವೀಲ್ಸ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಆಯ್ಕೆಯಾಗಿ ಪಡೆದುಕೊಂಡಿದೆ.

ಬಜಾಜ್ ಡಾಮಿನರ್ 400 ಬೈಕ್ ಮೇಲೆ ರೂ 2,000 ಬೆಲೆ ಏರಿಕೆ..

ಎಂಜಿನ್ ಸಾಮರ್ಥ್ಯ

ಡಾಮಿನಾರ್ 400 ಬೈಕ್ 373ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 34.5 ಬಿಹೆಚ್‍‍ಪಿ ಮತ್ತು 35ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಜಾಜ್ ಡಾಮಿನರ್ 400 ಬೈಕ್ ಮೇಲೆ ರೂ 2,000 ಬೆಲೆ ಏರಿಕೆ..

ಇನ್ನು ಬಜಾಜ್ ಡಾಮಿನಾರ್ ಬೈಕ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿದ್ದು, ಹಿಂಭಾಗದಲ್ಲಿ ಸಿಂಗಲ್ ಗ್ಯಾಸ್ ಚಾರ್ಜ್ಡ್ ಮೋನೊಶಾಕ್ ಅನ್ನು ಹಿಂಭಾಗದಲ್ಲಿ ಪಡೆದುಕೊಂಡಿದೆ. ಬೈಕಿನ ಒಟ್ಟಾರೆ ತೂಕ 182 ಪಡೆದಿದ್ದು, ಗಂಟೆಗೆ 145 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿವೆ.

ಬಜಾಜ್ ಡಾಮಿನರ್ 400 ಬೈಕ್ ಮೇಲೆ ರೂ 2,000 ಬೆಲೆ ಏರಿಕೆ..

ಬಜಾಜ್ ಸಂಸ್ಥೆಯು ಈಗಾಗಲೆ ತಮ್ಮ ಡಾಮಿನಾರ್ 400 ಬೈ‍‍ಕ್‍ನ ಹೊಸ ಬೆಲೆಯನ್ನು ತಮ್ಮ ಅಧಿಕೃತ ವೆಬ್‍‍ಸೈಟ್‍‍ನಲ್ಲಿ ಪ್ರಕತಿಸಿದ್ದು, ಬೆಲೆ ಏರಿಕೆಯ ಕಾರಣವು ಇನ್ನು ಗುಪ್ತವಾಗಿಯೆ ಉಳಿದಿದೆ. ಬೆಲೆ ಏರಿಕೆಯ ಕಾರಣದಿಂದಗಿ ಬೈಕಿನ ಮಾರಾಟದಲ್ಲಿ ಯಾವುದೆ ಬೆಳವಣಿಗೆಯು ಕಾಣಲಾಗದಾಗಿದ್ದು, 2018ರ ಮಾರ್ಚ್ ತಿಂಗಳಿನಲ್ಲಿ ಕೇವಲ 1,561 ಯೂನಿಟ್ ಡಾಮಿನಾರ್ 400 ಬೈಕ್‍‍ಗಳು ಮಾತ್ರ ಮಾರಾಟಗೊಂಡಿವೆ.

ಬಜಾಜ್ ಡಾಮಿನರ್ 400 ಬೈಕ್ ಮೇಲೆ ರೂ 2,000 ಬೆಲೆ ಏರಿಕೆ..

ಮೇಲೆ ಹೇಳಿರುವ ಹಾಗೆ ಬೆಲೆ ಏರಿಕೆಯ ಕಾರಣ ಇನ್ನು ಬಹಿರಂಗಪಡಿಸಲಿಲ್ಲವಾದರೂ ಡಾಮಿನಾರ್ ಬೈಕ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 1.36 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಮಹೀಂದ್ರಾ ಯುಟಿ300 ಬೈಕ್‍‍ಗೆ ಪೈಪೋಟಿಯನ್ನು ನೀಡುತ್ತಿದೆ.

Read more on bajaj price hike
English summary
Bajaj Dominar 400 Price Hike.
Story first published: Tuesday, May 15, 2018, 13:01 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark