ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

By Rahul Ts

2018ರ ಜುಲೈ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಗೆ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ತಮ್ಮ ಹಲವಾರು ಉತ್ಪಾದನೆಗಳನ್ನು ಪರಿಚಿಯಿಸಿದ್ದಾರೆ. ಸುಜುಕಿ ಮತ್ತು ಹೋಂಡಾ ಸಂಸ್ಥೆಗಳು ತಮ್ಮ ಮಾರಾಟದ ಶ್ರೇಣಿಯನ್ನು ಹೆಚ್ಚಿಸಿಕೊಳ್ಳಲು ಹಲವಾರು ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ್ದಾರೆ.

ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

2017ರ ಜುಲೈ ತಿಂಗಳಿಗೆ ಹೋಲಿಸಿದರೆ 2018ರ ಜುಲೈ ತಿಂಗಳಿನಲ್ಲಿ ಮಾರಾಟದ ಸಂಖ್ಯೆಯು ಹೆಚ್ಚಿದ್ದು, ಬಜಾಜ್, ಸುಜುಕಿ ಮತ್ತು ಟಿವಿಎಸ್ ಅಂತಹ ಸಂಸ್ಥೆಗಳು ಹೆಚ್ಚಿನ ಮಾರಾಟವನ್ನು ಕಂಡಿದೆ. ಈ ನಿಟ್ಟಿನಲ್ಲಿ ಯಾವ ಯಾವ ಸಂಸ್ಥೆಗಳು ಎಷ್ಟು ವಾಹನಗಳನ್ನು ಮಾರಾಟವಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಂದಿನ ಈ ಲೇಖನದಲ್ಲಿ.

ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

ಭಾರತೀಯ ದ್ವಿಚಕ್ರ ವಾಹನದ ಮಾರುಕಟ್ಟೆಯಲ್ಲಿ ಟೂ-ವ್ಹೀಲರ್ ಸಂಸ್ಥೆಗಳ ಮಾರಾಟದ ಅಂಕಿ ಅಂಶ ಇಲ್ಲಿದೆ ನೋಡಿ..

Brand July 2018 Sales (In Units Sold) Percentage Growth
Honda Two-Wheelers 548,577 0.74
Bajaj Auto 400,343 30
Royal Enfield 69,063 7
Suzuki Two-Wheelers 53,321 56.6
ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

ಹೋಂಡಾ ಮೋಟರ್‍‍ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ

ಹೋಂಡಾ ಮೋಟರ್‍‍ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು 2017ರ ಜುಲೈ ತಿಂಗಳಿನಲ್ಲಿ 5,44,529 ಯೂನಿಟ್ ಮಾರಾಟ ಮಾಡಿದ್ದರೆ ಇನ್ನು 2018ರ ಜುಲೈ ತಿಂಗಳಿನಲ್ಲಿ 5,48,577 ಯೂನಿಟ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಅಂದರೆ ಕಳೆದ ಜುಲೈಗಿಂತಾ ಸುಮಾರು ಶೇಕಡ 0.74 ರಷ್ಟು ಅಧಿಕವಾಗಿ ಮಾರಾಟ ಮಾಡಿದೆ.

ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

ಬಜಾಜ್ ಆಟೋ

ಬಜಾಜ್ ಆಟೋ ಸಂಸ್ಥೆಯು 2017ರ ಜುಲೈ ತಿಂಗಳಿನಲ್ಲಿ 3,07,727 ಯೂನಿಟ್ ವಾಹನಗಳನ್ನು ಮಾರಾಟಮಾದಿದ್ದರೆ ಇನ್ನು 2018ರ ಜುಲೈ ತಿಂಗಳಿನಲ್ಲಿ 4,00,343 ಯೂನಿಟ್ ವಾಹನಗಳನ್ನು ಮಾರಾಟಮಾಡಿದೆ. ಅಂದರೇ ವಾಹನಗಳ ಮಾರಾಟದಲ್ಲಿ ಬಜಾಜ್ ಸಂಸ್ಥೆಯು 2017ರ ಜುಲೈ ತಿಂಗಳಿಗಿಂತಾ ಈ ಜುಲೈ‍ನಲ್ಲಿ ಶೇಕಡ 30ರಷ್ಟು ಅಧಿಕವಾಗಿ ಮಾರಾಟ ಮಾಡಿದೆ.

ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

ರಾಯಲ್ ಎನ್‍‍ಫೀಲ್ಡ್

ಈಚರ್ ಮೋಟರ್ಸ್ ಸ್ವಾಮ್ಯದ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಕಳೆದ 2017ರ ಜುಲೈ ತಿಂಗಳಿಗಿಂತಾ ಈ ಬಾರಿ ಮಾರಾಟದಲ್ಲಿ ಶೇಕಡ 7ರಷ್ಟು ಹೆಚ್ಚಿದೆ. ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು 2017ರ ಜುಲೈ ತಿಂಗಳಿನಲ್ಲಿ 64,459 ಯೂನಿಟ್ ವಾಹನಗಳನ್ನು ಮಾರಾಟ ಮಾಡಿದರೆ ಇನ್ನು 2018ರ ಜುಲೈ ತಿಂಗಳಿನಲ್ಲಿ 69,063 ಯೂನಿಟ್ ಬೈಕ್‍‍ಗಳನ್ನು ಮಾರಾಟ ಮಾಡಿದೆ.

ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

ಸುಜುಕಿ ಟೂ-ವ್ಹೀಲರ್ಸ್

2018ರ ಜುಲೈ ತಿಂಗಳಿನ ದ್ವಿಚಕ್ರ ವಾಹನಗಳಾ ಮಾರಾಟದ ಅಂಕಿ ಅಂಶಗಳಲ್ಲಿ ಸುಜುಕಿ ಟೂ-ವ್ಹೀಲರ್ಸ್ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ 2017ರ ಜುಲೈಗಿಂತ 2018ರ ಜುಲೈ ತಿಂಗಳಿನಲ್ಲಿ ಶೇಕಡ 56.6ರಷ್ಟು ವಾಹನಗಳನ್ನು ಮಾರಾಟ ಮಾಡಿದೆ.

ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

ಸುಜುಕಿ ಟೂ-ವ್ಹೀಲರ್ಸ್ 2018ರ ಜುಲೈ ತಿಂಗಳಿನಲ್ಲಿ ಜಿಕ್ಸರ್ ಎಸ್‍ಪಿ ಮತ್ತು ಬರ್ಗ್‍‍ಮನ್ ಸ್ಟ್ರೀಟ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ್ದು, ಈ ವಾಹನಗಳಿಗಾಗಿ ಗ್ರಾಹಕರು ಖರೀದಿಸಲು ಮುಗುಬೀಳುತ್ತಿದ್ದಾರೆ. 2017ರ ಜುಲೈ ತಿಂಗಳಿನಲ್ಲಿ ಸುಜುಕಿ ಟೂ-ವ್ಹೀಲರ್ಸ್ 34,038 ವಾಹನಗಳನ್ನು ಮಾರಾಟ ಮಾಡಿದ್ದರೆ ಇನ್ನು 2018ರ ಜುಲೈ ತಿಂಗಳಿನಲ್ಲಿ 53,321 ವಾಹನಗಳನ್ನು ಮಾರಾಟ ಮಾಡಿದೆ.

ಜುಲೈ ಮಾಸದ ಮಾರಾಟದಲ್ಲಿ ಯಾವ ಟೂ-ವ್ಹೀಲರ್ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ ಗೊತ್ತಾ.?

ಟಿವಿಎಸ್ ಮೋಟರ್ಸ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಮೋಟರ್ಸ್ 2017ರ ಜುಲೈ ತಿಂಗಳಿಗಿಂತ ಈ ವರ್ಷದ ಜುಲೈ ತಿಂಗಳಿನ ಮಾರಾಟದಲ್ಲಿ ಶೇಕಡ 18ರಷ್ಟು ಹೆಚ್ಚು ಮಾರಾಟ ಮಾಡಿದೆ. ಅಂದರೆ 2017ರ ಜುಲೈ ತಿಂಗಳಿನಲ್ಲಿ ಸಂಸ್ಥೆಯು 2,71,171 ವಾಹನಗಳನ್ನು ಮಾರಾಟ ಮಾಡಿದ್ದರೆ ಇನು 2018ರ ಜುಲೈ ತಿಂಗಳಿನಲ್ಲಿ 3,21,179 ವಾಹನಗಳನ್ನು ಮಾರಾಟ ಮಾಡಿದೆ.

Kannada
English summary
Bike Sales July 2018 Report: Suzuki India Records Their Highest-Ever Monthly Sales Till Date.
Story first published: Friday, August 3, 2018, 12:07 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more