Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ಇನೊವಾ ಕ್ರಿಸ್ಟಾ ಹಿಂದಿಕ್ಕಿದ ರೆನಾಲ್ಟ್ ಟ್ರೈಬರ್
ರೆನಾಲ್ಟ್ ಟ್ರೈಬರ್ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಕಂಪನಿಯು ಕಳೆದ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಟ್ರೈಬರ್ ಎಂಪಿವಿಯನ್ನು ಬಿಡುಗಡೆ ಮಾಡಿದ್ದರು. ಭಾರತದಲ್ಲಿ ಈ ಎಂಪಿವಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ರೆನಾಲ್ಟ್ ಟ್ರೈಬರ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 4,710 ಯುನಿಟ್‍ಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಟ್ರೈಬರ್ ಮಾರಾಟದಲ್ಲಿ ಟೊಯೊಟಾ ಇನೊವಾ ಕ್ರಿಸ್ಟಾ ಎಂಪಿವಿಯನ್ನು ಹಿಂದಿಕ್ಕಿದೆ. ರೆನಾಲ್ಟ್ ಟ್ರೈಬರ್ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆ ರೂ.4.95 ಲಕ್ಷವಾಗಿದೆ.

ಟೊಯೊಟಾ ಇನೊವಾ ಕ್ರಿಸ್ಟಾ ಭಾರತದ ಅತ್ಯಂತ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ. ಇದು ಪ್ರತಿ ತಿಂಗಳು ಬ್ರ್ಯಾಂಡ್‍ಗೆ ಮತ್ತು ಇದರ ವೈಶಿಷ್ಟ್ಯಗಳಿಗೆ ತಕ್ಕಂತೆ ಉತ್ತಮ ಮಾರಾಟವಾಗುತ್ತಿದೆ. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಟ್ರೈಬರ್ ಎಂಪಿವಿ ಮುಂದೆ ದೇಶಿಯ ಮಾರುಕಟ್ಟೆಯಲ್ಲಿ ಮಂಡಿಯೂರಿದೆ. ಕಳೆದು ಸೆಪ್ಟೆಂಬರ್ ತಿಂಗಳು ಟ್ರೈಬರ ಎಂಪಿವಿಗಿಂತ ಸುಮಾರು 500 ಯುನಿಟ್‍ಗಳು ಕಡಿಮೆ ಮಾರಾಟವಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಟ್ರೈಬರ್ 4,710 ಯುನಿಟ್‍ಗಳು ಮಾರಾಟವಾಗಿದ್ದರೆ ಟೊಯೊಟಾ ಇನೊವಾ ಕ್ರಿಸ್ಟಾದ 4,225 ಯುನಿಟ್‍ಗಳು ಮಾರಾಟವಾಗಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಭಾರತದ ಫ್ರೆಂಚ್ ಕಾರು ತಯಾರಕರಿಂದ ತಯಾರಿಸಿದ ಕಾಂಪ್ಯಾಕ್ಟ್-ಎಂಪಿವಿಯಾಗಿದೆ. ಎಂಪಿವಿ ಎಂಟ್ರಿ ಲೆವೆಲ್ ಕ್ವಿಡ್ ಹ್ಯಾಚ್‍ಬ್ಯಾಕ್‍ನಂತೆಯೇ ಅದೇ ಸಿಎಂಎಫ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ರೆನಾಲ್ಟ್ ಟ್ರೈಬರ್ ಏಳು ಸೀಟ್‍ಗಳನ್ನು ಹೊಂದಿದ್ದು, ಹಿಂಭಾಗದ ಸೀಟ್‍ಗಳನ್ನು ಅಗತ್ಯವಿದ್ದಾಗ ಅದನ್ನು ಬಳಸಬಹುದು ಇಲ್ಲದಿದ್ದರೆ ಅದನ್ನು ಮಡಚಿಕೊಳ್ಳಬಹುದು.

ರೆನಾಲ್ಟ್ ಟ್ರೈಬರ್ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದೆ. ಈ ಕಾರು ಬ್ರ್ಯಾಂಡ್‍ನ ಇತರ ಕಾರುಗಳಿಗಿಂತ ಹೆಚ್ಚು ಆಕರ್ಷಕ, ದುಬಾರಿ ಮತ್ತು ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಹೊಸ ಟ್ರೈಬರ್ ಇಂಟಿರಿಯರ್‍ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರೆನಾಲ್ಟ್ ಟ್ರೈಬರ್ ಸಿಂಗಲ್ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ ರೆನಾಲ್ಟ್ ಕ್ವಿಡ್ ಕಾರಿನ ಮಾದರಿಯ ಎಂಜಿನ್ ಇದಾಗಿದೆ. ಈ ಎಂಜಿನ್ 67 ಬಿಎಚ್‍ಪಿ ಪವರ್ ಮತ್ತು 90 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂಡಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಟ್ರೈಬರ್ ಕಾರು ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಜಾರಿಯಾಗಲಿರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಎಂಜಿನ್ ಹೊಂದಿದೆ. ಮುಂದಿನ ಹಂತದಲ್ಲಿ ಎಎಂಟಿ ಆವೃತ್ತಿಯನ್ನು ಪರಿಚಯಿಸಲಿದೆ ಎಂದು ಕಂಪನಿಯು ಅಧಿಕೃತವಾಗಿ ಮಾಹಿತಿ ನೀಡಿದೆ.

ಟೊಯೊಟಾ ಇನೊವಾ ದೇಶಿಯ ಮಾರುಕಟ್ಟೆಯಲ್ಲಿ ಸುಮಾರು ಒಂದು ದಶಕದಿಂದಲೂ ಇದೆ. ಎಂಪಿವಿ ವಿಭಾಗದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಕಾರು. ಈ ಎಂಪಿವಿ ಹಲವಾರು ಬಾರಿ ನವೀಕರಣ ನಡೆಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಇಂದಿಗೂ ಮಾರುಕಟ್ಟೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಎಂಪಿವಿಗಳಲ್ಲಿ ಒಂದಾಗಿದೆ. ದೂರ ಪ್ರಯಾಣವನ್ನು ನಡೆಸಲು ಹೆಚ್ಚಿನವರ ಈ ಎಂಪಿವಿಯನ್ನು ಆಯ್ಕೆ ಮಾಡುತ್ತಾರೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟೊಯೊಟಾ ಇನೊವಾ ಕ್ರಿಸ್ಟಾ ಎಂಪಿವಿ ಇತ್ತೀಚಿಗೆ ನವೀಕರಿಸಲಾಗಿದೆ ಮತ್ತು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಒಂದು ಪೆಟ್ರೋಲ್ ಮತ್ತು ಎರಡು ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿದೆ. ಟೊಯೊಟಾ ಇನೊವಾ ಕ್ರಿಸ್ಟಾದ ಎಲ್ಲಾ ರೂಪಾಂತರಗಳು ಸಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ರೆನಾಲ್ಟ್ ಟ್ರೈಬರ್ ಮಾರಾಟವು ಜನಪ್ರಿಯ ಟೊಯೊಟಾ ಇನೊವಾ ಕ್ರಿಸ್ಟಾವನ್ನು ಹಿಂದಿಕ್ಕಿದೆ. ಎಂಪಿವಿ ವಿಭಾಗದಲ್ಲಿ ರೆನಾಲ್ಟ್ ಟ್ರೈಬರ್ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ರೆನಾಲ್ಟ್ ಟ್ರೈಬರ್ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.