ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಬೈಕ್‍ ಮಾದರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೀರೋ ಕಂಪನಿಯ ಸ್ಪ್ಲೆಂಡರ್ ಮತ್ತು ಎಚ್‌ಎಫ್ ಡಿಲಕ್ಸ್ ಪ್ರಯಾಣಿಕರ ಮಾದರಿಗಳೊಂದಿಗೆ ಮಾರಾಟದಲ್ಲಿ ಪ್ರಾಬಲ್ಯ ಮುಂದುವರಿಸಿದೆ ಎಂಬುವುದು ಈ ಪಟ್ಟಿಯಿಂದ ತಿಳಿಯುತ್ತದೆ.

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಬೈಕ್‍‍ಗಳ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಎಂಟ್ರಿ ಲೆವೆಲ್ ಬೈಕ್‍ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 244,667 ಯುನಿಟ್‍‍ಗಳು ಮಾರಾಟವಾಗಿವೆ. ಆದರೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 285,508 ಯುನಿ‍ಟ್‍ಗಳು ಮಾರಾಟವಾಗಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.14 ರಷ್ಟು ಕುಸಿತ ಕಂಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ಹೀರೋ ಎಚ್‍ಎಫ್ ಡಿಲಕ್ಸ್ ಬೈಕ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಎಚ್‍ಎಫ್ ಡಿಲಕ್ಸ್ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಿಂದ ಬಿಡುಗಡೆಗೊಳಿಸಿದ ಮತ್ತೊಂದು ಪ್ರಯಾಣಿಕರ ಬೈಕ್ ಇದಾಗಿದೆ. ಹೀರೋ ಎಚ್ಎಫ್ ಡಿಲಕ್ಸ್ ಕಳೆದ ತಿಂಗಳು 195,093 ಯು‍‍ನಿ‍ಟ್‍ಗಳು ಮಾರಾಟವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 201,240 ಯುನಿ‍‍ಟ್‍ಗಳು ಮಾರಾಟವಾಗಿತ್ತು. ಕಳೆದ ಸೆಪ್ಟೆಂಬರ್ ಮಾರಾಟವನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.3 ರಷ್ಟು ಕುಸಿತವಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ಹೋಂಡಾ ಮೋಟರ್ ಸೈಕಲ್‌ ಕಂಪನಿಯ ಸಿಬಿ ಶೈನ್‌ನೊಂದಿಗೆ ಮೊದಲ ಮೂರನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಹೋಂಡಾ ಸಿಬಿ ಶೈನ್ ಹಿಂದಿನ ಸೆಪ್ಟೆಂಬರ್ ತಿಂಗಳಲ್ಲಿ 88,893 ಯುನಿಟ್‍‍ಗಳು ಮಾರಾಟವಾಗಿದೆ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 80,612 ಯುನಿ‍‍ಟ್‍ಗಳು ಮಾರಾಟವಾಗಿವೆ.

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ಬಜಾಜ್ ಪಲ್ಸರ್ ಮತ್ತು ಹೀರೋ ಗ್ಲ್ಯಾಮರ್ ನಾಲ್ಕನೇ ಸ್ಥಾನಕ್ಕೆ ಪ್ರಬಲ ಪೈಪೋಟಿಯನ್ನು ನೀಡಿದ್ದಾರೆ. ಆದರೆ ಬಜಾಜ್ ಪಲ್ಸರ್ ನಾಲ್ಕನೇ ಸ್ಥಾನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಜಾಜ್ ಪಲ್ಸರ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 68,068 ಯುನಿಟ್‍‍ಗಳು ಮಾರಾಟವಾಗಿತ್ತು. ಹೀರೋ ಗ್ಲ್ಯಾಮರ್ 62,016 ಯುನಿಟ್‌ಗಳು ಮಾರಾಟವಾಗಿವೆ. ಈ ಎರಡು ದ್ವಿಚಕ್ರ ಬ್ರ್ಯಾಂಡ್‍‍ಗಳಾದ ಬಜಾಜ್ ಪಲ್ಸರ್ ಶೇ.23 ಮತ್ತು ಹೀರೋ ಗ್ಲ್ಯಾಮರ್ ಶೇ.25 ರಷ್ಟು ಮಾರಾಟದಲ್ಲಿ ಕುಸಿತವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾದ ಟಾಪ್ 10 ಬೈಕ್‍‍ಗಳ ಪಟ್ಟಿಇಲ್ಲಿವೆ.

ಸ್ಥಾನ ಮಾದರಿಗಳು ಸೆ.19 ಸೆ.18 ವ್ಯತ್ಯಾಸ
1 ಹೀರೋ ಸ್ಪ್ಲೆಂಡರ್ 2,44,667 2,85,508 -14.30
2 ಹೀರೋ ಎಚ್‌ಎಫ್ ಡಿಲಕ್ಸ್ 1,95,093 2,01,240 -3.05
3 ಹೋಂಡಾ ಸಿಬಿ ಶೈನ್‌ 88,893 80,612 10.27
4 ಬಜಾಜ್ ಪಲ್ಸರ್ 68,068 89,374 -23.84
5 ಹೀರೋ ಗ್ಲ್ಯಾಮರ್ 62,016 82,864 -25.16
6 ಬಜಾಜ್ ಸಿಟಿ 100 51,778 89,387 -42.07
7 ಬಜಾಜ್ ಪ್ಲಾಟಿನಾ 43,978 67,450 -34.80
8 ಹೀರೋ ಪ್ಯಾಶನ್ 40,672 95,057 -57.21
9 ಟಿವಿಎಸ್ ಅಪಾಚೆ 29,889 55,460 -46.11
10 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 29,376 44,021 -33.27
ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾದ ಟಾಪ್ 10 ಬೈಕ್‍‍ಗಳ ಪಟ್ಟಿಯಲ್ಲಿ ಐದರ ನಂತರ ಸ್ಥಾನವನ್ನು ಬಜಾಜ್ ಸಿಟಿ 100, ಬಜಾಜ್ ಪ್ಲಾಟಿನಾ, ಹೀರೋ ಪ್ಯಾಶನ್, ಟಿವಿಎಸ್ ಅಪಾಚೆ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗಳು ಕ್ರಮವಾಗಿ ಸ್ಥಾನವನ್ನು ಪಡೆದುಕೊಂಡಿದೆ. ಬಜಾಜ್ ಕಂಪನಿಯ ಜನಪ್ರಿಯ ಸಿಟಿ 100 ಸೆಪ್ಟೆಂಬರ್ ತಿಂಗಳಲ್ಲಿ 51,778 ಯುನಿಟ್‍‍ಗಳು ಮಾರಾಟವಾಗುವ ಮೂಲಕ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ಏಳನೇ ಸ್ಥಾನವನ್ನು 43,978 ಯುನಿಟ್‍ಗಳು ಮಾರಾಟವಾಗುವ ಮೂಲಕ ಬಜಾಜ್ ಪ್ಲಾಟಿನಾ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಹೀರೋ ಪ್ಯಾಶನ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 40,672 ಯುನಿಟ್‍‍ಗಳು ಮಾರಾಟವಾಗಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ಸೆಪ್ಟೆಂಬರ್ ತಿಂಗಳ ಅತಿ ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಟಿವಿಎಸ್ ಅಪಾಚೆ 29,887 ಯು‍ನಿ‍ಟ್‍ಗಳು ಮಾರಾಟವಾಗಿ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ರಾಯಲ್ ಎನ್‍‍ಫೀಲ್ಡ್ 29,376 ಯು‍‍ನಿ‍ಟ್‍ಗಳು ಮಾರಾಟವಾಗಿದ್ದು, ಟಾಪ್ 10 ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್‍‍ಗಳಿವು

ಸೆಪ್ಟೆಂಬರ್ ತಿಂಗಳಿಲ್ಲಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಮತ್ತು ಎಚ್‌ಎಫ್ ಡಿಲಕ್ಸ್ ಮುನ್ನಡೆ ಸಾಧಿಸಿದೆ, ಹೀರೋ ಬ್ರ್ಯಾಂಡ್ ದೇಶಿಯ ಮಾರುಕಟ್ಟೆಯಲ್ಲಿ ಪಾರಪತ್ಯ ಸಾಧಿಸುತ್ತಿದೆ. ಹೋಂಡಾ ಮಾರಾಟವು ಕುಸಿತ ಕಂಡಿದೆ, ಆದರೆ ನಿಧಾನಗತಿಯಲ್ಲಿ ಸುಧಾರಿಸುತ್ತಿದೆ.

Most Read Articles

Kannada
English summary
Top-Selling Bikes In India For September 2019: Hero Splendor Continues To Dominate The Market - Read in Kannada
Story first published: Monday, October 21, 2019, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X