ಆಟೋ ಎಕ್ಸ್ ಪೋ 2018: ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್ ಬಿಡುಗಡೆ

Written By: Rahul

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯಾದ ಎಂಫ್ಲಕ್ಸ್ ಮೋಟಾರ್ಸ್ ಸಂಸ್ಥೆಯು ಮೊದಲ ಪ್ರಯತ್ನದಲ್ಲೇ ವಿನೂತನ ಎಂಫ್ಲಕ್ಸ್ ಒನ್ ಎನ್ನುವ ಎಲೆಕ್ಟ್ರಿಕ್ ಸೂಪರ್ ಬೈಕ್ ಮಾದರಿಯನ್ನು ದೆಹಲಿಯಲ್ಲಿ ನಡೆಯುತ್ತಿರುವ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದೆ.

ಆಟೋ ಎಕ್ಸ್ ಪೋ 2018: ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್ ಬಿಡುಗಡೆ

ಎಂಫ್ಲಕ್ಸ್ ಒನ್ ಎಲೆಕ್ಟ್ರಿಕ್ ಸೂಪರ್ ಬೈಕ್‌ಗಳು ಕೋಟೆಡ್ ಅಲಾಯ್ ಚಕ್ರಗಳು ಮತ್ತು ಅಲ್ಟ್ರಾಲೈಟ್ ಕಾರ್ಬನ್ ಫೈಬರ್ ಪ್ಯಾನೆಲ್ ಹೊಂದಿದ್ದು, ಬೈಕಿನ ಆರಂಭಿಕ ಬೆಲೆ 6 ಲಕ್ಷ ಮತ್ತು ಉನ್ನತ ಮಾದರಿಯ ಬೈಕಿನ ಬೆಲೆಯನ್ನು ರೂ.11 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಆಟೋ ಎಕ್ಸ್ ಪೋ 2018: ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್ ಬಿಡುಗಡೆ

ಪ್ರಮುಖ ವಿಚಾರ ಅಂದ್ರೆ ಎಂಫ್ಲಕ್ಸ್ ಒನ್ ಬೈಕ್‌ಗಳು ಭಾರತದಲ್ಲಿ ಕೇವಲ 199 ಯೂನಿಟ್ ಗಳು ಮಾತ್ರ ಮಾರಾಟಕ್ಕೆ ಲಭ್ಯವಿದ್ದು, ಇನ್ನುಳಿದ 300 ಯೂನಿಟ್ ಗಳನ್ನು ವಿದೇಶ ಮಾರುಕಟ್ಟೆಗಳಿಗಾಗಿ ಸಿದ್ಧಗೊಳಿಸಲಾಗಿದೆ.

ಆಟೋ ಎಕ್ಸ್ ಪೋ 2018: ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್ ಬಿಡುಗಡೆ

ಎಂಜಿನ್ ವೈಶಿಷ್ಟ್ಯತೆ

ಎಂಫ್ಲಕ್ಸ್ ಒನ್ ಬೈಕ್‌ಗಳು 3 ಹಂತದ ಎಸಿ ಇಂಡಕ್ಷನ್ ಮೋಟಾರ್ ಮೂಲಕ ಕ್ರಮಿಸಲಿದ್ದು, 9.7kwh ಬ್ಯಾಟರಿ ಪ್ಯಾಕ್ ಹೊಂದಿದೆ. ಜೊತೆಗೆ ಸ್ಯಾಮ‌್ಸಂಗ್ ಸೆಲ್ಸ್ ಮಾದರಿಯ ಏರ್ ಕೂಲ್ಡ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಪವರ್ ಟ್ರೈನ್‌ನೊಂದಿಗೆ 71 ಬಿಎಚ್‌ಪಿ ಉತ್ಪಾದಿಸಬಲ್ಲದು.

ಆಟೋ ಎಕ್ಸ್ ಪೋ 2018: ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್ ಬಿಡುಗಡೆ

ಹೀಗಾಗಿಯೇ ಅರ್ಧ ಗಂಟೆಯಲ್ಲಿ ಬೈಕ್ ಬ್ಯಾಟರಿಯು ಶೇಕಡಾ 85ರಷ್ಟು ಚಾರ್ಜ್ ಆಗಲಿದ್ದು, ಕೇವಲ 3 ಸೆಕೆಂಡುಗಳಲ್ಲಿ 100 ಕಿಮಿ ವೇಗ ಪಡೆಯುವ ಗುಣ ಎಂಫ್ಲಕ್ಸ್ ಬೈಕ್‌ಗಳಿಗಿದೆ. ಈ ಮೂಲಕ ಒಂದು ಗಂಟೆಯ ಅವಧಿಯಲ್ಲಿ 200ಕಿಮಿಯಷ್ಟು ದೂರ ಕ್ರಮಿಸಬಲ್ಲವು.

ಆಟೋ ಎಕ್ಸ್ ಪೋ 2018: ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್ ಬಿಡುಗಡೆ

ಗಮನಸೆಳೆಯುವ ಹೆಡ್ ಲ್ಯಾಂಪ್

ಹೌದು.. ಎಂಫ್ಲಕ್ಸ್ ಒನ್ ಬೈಕ್‌ಗಳಲ್ಲಿ ಮುಂಭಾಗದ ಹಾಗೂ ಹಿಂಭಾಗದಲ್ಲಿ ಒದಗಿಸಲಾಗಿರುವ ಉದ್ದನೆಯ ಎಲ್ಇಡಿ ಹೆಡ್ ಲೈಟ್‌ಗಳು ಆಕರ್ಷಕವಾಗಿದ್ದು, ಇವು ಬೈಕಿ ಅಂದ ಹೆಚ್ಚಿಸಿರುವುದಲ್ಲದೇ ಆಕ್ರಮಣಕಾರಿ ನೋಟವನ್ನು ನೀಡಿದೆ.

ಆಟೋ ಎಕ್ಸ್ ಪೋ 2018: ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್ ಬಿಡುಗಡೆ

ಇನ್ನು ಎಂಫ್ಲಕ್ಸ್ ಒನ್ ಬೈಕ್‌ಗಳು ಗ್ಲಾಸ್ ಫೈಬರ್ ಬಾಡಿ ಪ್ಯಾನೆಲ್ ಅನ್ನು ಹೊಂದಿದ್ದು, ಭವಿಷ್ಯದಲ್ಲಿ ಬರಲಿರುವ ಅಪ್‌ಗ್ರೇಡ್ ವರ್ಷನ್ ಬೈಕುಗಳು ಕಾರ್ಬನ್ ಫೈಬರ್ ಬಾಡಿ ಪ್ಯಾನಲ್ ಗಳನ್ನು ಹೊಂದಿರಲಿವೆ. ವಿಶೇಷ ಅಂದ್ರೆ ಇದರ ಸೀಟ್‌ದಳು ನೆಲಮಟ್ಟಕ್ಕಿಂತ 810ಎಂಎಂ ಎತ್ತರವಾಗಿವೆ.

ಆಟೋ ಎಕ್ಸ್ ಪೋ 2018: ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್ ಬಿಡುಗಡೆ

ಒಟ್ಟಿನಲ್ಲಿ ಎಂಫ್ಲಕ್ಸ್ ಒನ್ ಭಾರತದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಆಗಿ ಹೊರಹೊಮ್ಮಿದ್ದು, ಸದ್ಯ ದೇಶದ ಪ್ರತಿಷ್ಠಿತ ಮೋಟಾರ್ ಬೈಕ್ ತಯಾರಕ ಸಂಸ್ಥೆಗಳು ಬಿಡುಗಡೆಗೊಳಿಸಲಿರುವ ಎಲೆಕ್ಟ್ರಿಕ್ ಬೈಕ್‌ಗಳ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂದು ನಿರೀಕ್ಷಿಸಬೇಕಿದೆ.

Read more on superbike auto expo 2018
English summary
Emflux One Electric Superbike Launched In India At Rs 6 Lakh - Specs, Range & Images.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark