2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

Written By:
Recommended Video - Watch Now!
Bangalore Traffic Police Rides With Illegal Number Plate - DriveSpark

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಸದ್ಯ ಮೂರು ಪ್ರಮುಖ ಹೊಸ ಬೈಕ್‌ಗಳನ್ನು ಪರಿಚಯಿಸುತ್ತಿದ್ದು, ಫೆಬ್ರುವರಿ 7ರಿಂದ ಆರಂಭಗೊಳ್ಳಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಗ್ರಾಹಕರ ಕೈಸೇರಲಿವೆ.

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರೊಂದಿಗೆ ಅಭಿನಾಭಾವ ಸಂಬಂಧ ಹೊಂದಿರುವ ಹೀರೋ ಸಂಸ್ಥೆ ಈಗಾಗಲೇ ಹತ್ತಾರು ಬೈಕ್ ಮಾದರಿಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ವಿಶೇಷ ಬೈಕ್‌ಗಳನ್ನು ಅಭಿವೃದ್ಧಿ ಮಾಡಿದೆ.

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

01. ಹೀರೋ ಎಕ್ಸ್‌ಟ್ರಿಮ್ 200

ಈ ಹಿಂದೆ 2016ರ ಆಟೊ ಎಕ್ಸ್ ಪೋದಲ್ಲಿ ಎಕ್ಸ್‌ಟ್ರಿಮ್ 200 ಎಸ್ ಮೋಟಾರ್ ಸೈಕಲ್‌ನ ಪರಿಕಲ್ಪನೆಯನ್ನು ಪ್ರದರ್ಶನ ಮಾಡಿದ್ದ ಹೀರೋ ಸಂಸ್ಥೆಯು ಫೆ.7ರಿಂದ ನಡೆಯಲಿರುವ 2018ರ ಆಟೋ ಮೇಳದಲ್ಲಿ ಪ್ರದರ್ಶನ ಮಾಡಿದ ನಂತರ ಬಿಡುಗಡೆ ಮಾಡಲಿದೆ.

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಯನ್ನು ಕಲ್ಪಿಸಿರುವ ಹಿನ್ನೆಲೆ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿಯು ಇತರೆ ಕಂಪನಿಗಳ 180ಸಿಸಿ ಯಿಂದ 220 ಸಿಸಿ ಸಾಮರ್ಥ್ಯ ಬೈಕ್‌ಗಳಿಂತ ಭಿನ್ನತೆಯನ್ನು ಹೊಂದಿದ್ದು, ಕೆಲವು ವರದಿಗಳ ಪ್ರಕಾರ 150 ಸಿಸಿ ಸಾಮರ್ಥ್ಯದ ಮಾದರಿಯ ಕೂಡಾ ಬಿಡುಗಡೆಯಾಗಲಿದೆ ಎನ್ನಲಾಗಿದೆ.

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

ಎಂಜಿನ್ ಸಾಮರ್ಥ್ಯ

ಸ್ಪೋರ್ಟಿ ಲುಕ್‌ನೊಂದಿಗೆ 200ಸಿಸಿ ಸಾಮರ್ಥ್ಯ ನೀಡಿರುವ ಹಿನ್ನೆಲೆ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕಿನಲ್ಲಿ ಏರ್ ಕೂಲ್ಡ್ ಎಂಜಿನ್ ಅಳವಡಿಕೆ ಮಾಡಲಾಗಿದ್ದು, ಬಿಡುಗಡೆ ಬಳಿಕ ಆಯಿಲ್ ಕೂಲ್ಡ್ ಆವೃತ್ತಿಯ ಎಂಜಿನ್ ಆಯ್ಕೆಯು ಕೂಡಾ ಲಭ್ಯವಾಗಲಿದೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

02. 125ಸಿಸಿ ಸ್ಕೂಟರ್

ಹೀರೋ ಬಿಡುಗಡೆ ಮಾಡಲಿರುವ ಬೈಕ್ ಮಾದರಿಗಳಲ್ಲಿ ವಿನೂತನ ಸ್ಕೂಟರ್ ಕೂಡಾ ಸೇರಿದ್ದು, 125 ಸಿಸಿ ಸಾಮರ್ಥ್ಯದ ಸ್ಕೂಟರ್ ಅನ್ನು ಅಭಿವೃದ್ಧಿ ಮಾಡಿದೆ. ಆದ್ರೆ ಹೊಸ ಸ್ಕೂಟರ್ ಬಗ್ಗೆ ಯಾವುದೇ ಮಾಹಿತಿ ನೀಡದ ಹೀರೋ ಸಂಸ್ಥೆಯು ಫೆ.7ಕ್ಕೆ ಬಿಗ್ ಸರ್ಫೈಸ್ ನೀಡಲಿದೆ.

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

ಕೆಲವು ವರದಿ ಪ್ರಕಾರ ಹೀರೋ ಅಭಿವೃದ್ಧಿ ಮಾಡಿರುವ ಸ್ಕೂಟರಿನ ಹೆಸರು ಡೇರ್ ಎನ್ನಲಾಗಿದ್ದು, 125ಸಿಸಿ ಸಾಮರ್ಥ್ಯ ಸ್ಕೂಟರ್‌ಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಡೇರ್ 125 ಉತ್ಪಾದನೆ ಮಾಡಿದೆ ಎನ್ನಲಾಗಿದೆ.

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

03. ಎಕ್ಸ್‌ಪಲ್ಸ್

ಅಡ್ವೆಂಚರ್ ಬೈಕ್‌ಗಳ ವಿಭಾಗಕ್ಕೆ ಹೊಚ್ಚ ಹೊಸ ಬೈಕ್ ಅನ್ನು ಅಭಿವೃದ್ಧಿ ಮಾಡಿರುವ ಹೀರೋ ಸಂಸ್ಥೆಯು ವಿಶೇಷ ವಿನ್ಯಾದ ಎಕ್ಸ್‌‌ಪಲ್ಸ್ ಬೈಕ್ ಅನ್ನು ಅಭಿವೃದ್ಧಿ ಮಾಡಿದ್ದು, ಈ ಹಿಂದೆ 2017ರ ಇಐಸಿಎಂಎ ಆಟೋ ಎಕ್ಸ್‌ಪೋ ಮೊದಲ ಬಾರಿಗೆ ಪ್ರದರ್ಶನ ಮಾಡಿತ್ತು.

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

ಆಪ್ ರೋಡ್ ಪ್ರಿಯರಿಗೆ ಸ್ಪೆಷಲ್ ರೈಡ್ ಅನುಭವ ನೀಡಲಿರುವ ಎಕ್ಸ್‌ಪಲ್ಸ್ ಬೈಕ್ ಮಾದರಿಯು 200 ಸಿಸಿ ಎಂಜಿನ್ ಹೊಂದಿದ್ದು, ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್, ಬೈಕ್ ಮುಂಭಾಗದ ಡಿಸೈನ್ ಹೊಸ ಬೈಕಿನ ಹೈಲೈಟ್ಸ್.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಅತ್ಯವಶ್ಯಕ 10 ಸಲಹೆಗಳು

 2018ರಲ್ಲಿ ಬಿಡುಗಡೆಯಾಗಲಿರುವ ಹೀರೋ ಬಹುನಿರೀಕ್ಷಿತ ಬೈಕ್‌ಗಳು ಯಾವವು?

ಈ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲಿರುವ ಹೀರೋ ಮೋಟೋಕಾರ್ಪ್, ಫೆಬ್ರುವರಿ 7ರಿಂದ 14ರ ತನಕ ನಡೆಯಲಿರುವ 2018ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಎಕ್ಸ್‌ಟ್ರಿಮ್ 200,125ಸಿಸಿ ಸ್ಕೂಟರ್, ಎಕ್ಸ್‌ಪಲ್ಸ್ ಸೇರಿದಂತೆ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಇನ್ನು ಹಲವು ಮಾದರಿಗಳನ್ನು ಪ್ರದರ್ಶನ ಮಾಡಲಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Auto Expo 2018: Upcoming Hero Bikes In India - Lineup Revealed.
Story first published: Saturday, January 20, 2018, 16:05 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark