ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಎಕ್ಸ್-ಬ್ಲೇಡ್ ಬೈಕ್ ಬಿಡುಗಡೆ
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ವಿಭಾಗವು ತನ್ನ ಬಹುನೀರಿಕ್ಷಿತ ಎಕ್ಸ್-ಬ್ಲೇಡ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.78,500ಕ್ಕೆ ನಿಗದಿ ಮಾಡಿದೆ.
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ವಿಭಾಗವು ತನ್ನ ಬಹುನೀರಿಕ್ಷಿತ ಎಕ್ಸ್-ಬ್ಲೇಡ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.78,500ಕ್ಕೆ ನಿಗದಿ ಮಾಡಿದೆ.

ಈ ಹಿಂದೆ 2018 ಆಟೋ ಎಕ್ಸ್‌ಪೆೋದಲ್ಲಿ ಎಕ್ಸ್-ಬ್ಲೇಡ್ 160ಸಿಸಿ ಬೈಕ್ ಮಾದರಿಯನ್ನು ಅನಾವರಣಗೊಳಿಸಿದ್ದ ಹೋಂಡಾ ಸಂಸ್ಥೆಯು ಇದೀಗ ಮಾರುಕಟ್ಟೆಗೆ ಪರಿಚಯಿಸಿದ್ದು, ಅತ್ಯುತ್ತಮ ಬೆಲೆಗಳಲ್ಲಿ ಬೆಸ್ಟ್ ಸ್ಪೋರ್ಟಿ ಕಮ್ಯುಟರ್ ಬೈಕ್ ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.

ಕ್ರೀಡಾತ್ಮಕ ಸ್ಟೈಲಿಷ್ ವಿನ್ಯಾಸ, ಫ್ಯೂಚರಿಸ್ಟಿಕ್ ಎಲ್‌ಇಡಿ ಹೆಡ್‌ಲೈಟ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಸ್ಪೋರ್ಟಿ ಡ್ಯುಯಲ್ ಔಟ್ಲೆಟ್ ಸೌಲಭ್ಯಗಳನ್ನು ಈ ಬೈಕ್ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಇದಲ್ಲದೇ ಎಕ್ಸ್-ಬ್ಲೇಡ್‌ನಲ್ಲಿ ನೀಡಲಾಗಿರುವ ಹೊಸ ಗ್ರಾಫಿಕ್ಸ್ ವಿನ್ಯಾಗಳು ಗೇರ್ ಶಿಫ್ಟರ್, ಯೂನಿಕ್ ವಿಭಜಿತ ಗ್ರಾಬ್ ರೈಲ್ ಮತ್ತು ಸ್ಟೈಲಿಷ್ ಅಲಾಯ್ ಚಕ್ರಗಳು ಸಹ ಸ್ಪೋರ್ಟಿ ಲುಕ್ ಬೈಕ್ ಖರೀದಿಸುವ ಗ್ರಾಹಕರನ್ನು ಸೆಳೆಯಲಿದೆ.

ಎಂಜಿನ್ ಸಾಮರ್ಥ್ಯ
ಸಿಬಿ ಹಾರ್ನೆಟ್ 160ಆರ್ ಬೈಕ್ ಮಾದರಿಯಲ್ಲೇ ಹೋಂಡಾ ಇಕೊ ಟೆಕ್ನಾಲಜಿ (ಎಚ್‌ಇಟಿ) ಪ್ರೇರಿತ 162.71 ಸಿಸಿ ಸಾಮರ್ಥ್ಯದ ಏರ್‌ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್-ಬ್ಲೇಡ್ ಬೈಕ್‌ಗಳು 13.93ಬಿಎಚ್‌ಪಿ ಮತ್ತು 13.9ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಇದರೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಬೈಕ್‌ಗಳು ಫ್ರಂಟ್ ಡಿಸ್ಕ್ ಬ್ರೇಕ್, ಆಲ್ ನ್ಯೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ಯೂಬ್‌ಲೆಸ್ ಚಕ್ರಗಳು ಮತ್ತು ಗೇರ್ ಪೊಜಿಷನ್ ಇಂಡಿಕೇಟರ್‌ಗಳನ್ನು ಪಡೆದುಕೊಂಡಿದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಎಕ್ಸ್-ಬ್ಲೇಡ್ ಆವೃತ್ತಿಗಳಲ್ಲಿ ಆಯ್ಕೆ ರೂಪದಲ್ಲಿ ಎಬಿಎಸ್ ಮಾದರಿಗಳು ಕೂಡಾ ಲಭ್ಯವಿದ್ದು, ಐದು ವಿವಿಧ ಬಣ್ಣಗಳಲ್ಲಿ ಈ ಬೈಕ್‌ಗಳನ್ನು ಖರೀದಿಸಬಹುದಾಗಿದೆ.

ಲಭ್ಯವಿರುವ ಬಣ್ಣಗಳು
ಮ್ಯಾಟೆ ಮಾರ್ವೆಲ್ ಬ್ಯೂ ಮೆಟಾಲಿಕ್, ಪರ್ಲ ಇಗ್ನಿಯಸ್ ಬ್ಲ್ಯಾಕ್, ಮ್ಯಾಟೆ ಫ್ರೊಜೊನ್ ಸಿಲ್ವರ್, ಪರ್ಲ್ ಸ್ಪ್ಯಾರ್ಟನ್ ರೆಡ್, ಮ್ಯಾಟೆ ಮಾರ್ಷಲ್ ಗ್ರಿನ್ ಮೆಟಾಲಿಕ್ ಬಣ್ಣಗಳಲ್ಲಿ ಎಕ್ಸ್-ಬ್ಲೇಡ್ ಲಭ್ಯವಿವೆ.

ಈ ಮೂಲಕ ಸಿಬಿ ಹಾರ್ನೆಟ್ 160ಆರ್ ಬೈಕಿಗಿಂತಲೂ ವಿಭಿನ್ನವಾಗಿರುವ ಎಕ್ಸ್-ಬ್ಲೇಡ್ ಬೈಕ್‌ಗಳು ಬೆಲೆ ವಿಚಾರದಲ್ಲೂ ಗ್ರಾಹಕರನ್ನು ಆಕರ್ಷಿಸುವ ನೀರಿಕ್ಷೆಯಿದ್ದು, ಆಸಕ್ತ ಗ್ರಾಹಕರು ರೂ.5 ಸಾವಿರ ಮುಂಗಡ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಇದರೊಂದಿಗೆ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ ಎನ್ಎಸ್160, ಹೀರೋ ಎಕ್ಸ್‌ಟ್ರಿಮ್ ಸ್ಪೋರ್ಟ್, ಯಮಹಾ ಎಸ್‌ಝೆಡ್-ಆರ್‌ಆರ್, ಸುಜುಕಿ ಜಿಕ್ಸರ್ ಮತ್ತು ಬಿಡುಗಡೆಯಾಗಲಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್‌ಗಳಿಗೆ ತೀವ್ರ ಸ್ಪರ್ಧೆ ನೀಡುವ ನೀರಿಕ್ಷೆಯಿದೆ.


Click it and Unblock the Notifications








