ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

By Praveen Sannamani

ಕಳೆದ ತಿಂಗಳಷ್ಟೇ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ತನ್ನ ರೇಸ್ ಎಡಿಷನ್ ಮಾದರಿಯಾದ ಹೆಚ್‌ಪಿ4 ರೇಸ್ ಬೈಕ್ ಅನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಈ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 85 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ. ಇದೀಗ ಭಾರತದಲ್ಲಿ ಹೊಸ ಬೈಕ್ ಮಾರಾಟ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ಬೈಕ್ ಇದೀಗ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ದವಾಗುತ್ತಿದೆ.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಬಿಎಂಡಬ್ಲ್ಯು ಸಂಸ್ಥೆಯು ಟ್ರ್ಯಾಕ್ ಪರ್ಫಾಮೆನ್ಸ್ ಉದ್ದೇಶಕ್ಕಾಗಿಯೇ ಹೆಚ್‌ಪಿ4 ರೇಸ್ ಬೈಕ್ ಆವೃತ್ತಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ವಿಶ್ವಾದ್ಯಂತ ಕೇವಲ 750 ಬೈಕ್‌ಗಳು ಮಾತ್ರವೇ ಮಾರಾಟಕ್ಕಿರಲಿವೆ. ಹೀಗಾಗಿ ಇದು ಲಿಮಿಟೆಡ್ ಎಡಿಷನ್ ಮಾದರಿಯಾಗಿದ್ದು, ಕಾರ್ಬನ್ ಫೈಬರ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾದ ಮೊದಲ ಸೂಪರ್ ಬೈಕ್ ಇದಾಗಿದೆ.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಸಾಮಾನ್ಯ ರಸ್ತೆಗಳಲ್ಲಿ ಈ ಬೈಕಿಗಿಲ್ಲ ಪ್ರವೇಶವಿಲ್ಲ..!

ಹೌದು, ಇದೊಂದು ಸಂಪೂರ್ಣ ಟ್ರ್ಯಾಕ್ ಬೈಕ್ ಮಾದರಿಯಾಗಿರುವುದರಿಂದ ಸಾಮಾನ್ಯ ರಸ್ತೆಗಳಲ್ಲಿ ಈ ಬೈಕಿಗೆ ಪ್ರವೇಶವಿಲ್ಲ. ಟ್ರ್ಯಾಕ್ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಮಾತ್ರವೇ ಈ ಬೈಕ್ ಅನ್ನು ಬಳಕೆಮಾಡಬೇಕಷ್ಟೇ.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಹೆಚ್‌ಪಿ4 ರೇಸ್ ಬೈಕ್ ತೂಕ ಕಡಿತಗೊಳಿಸುವ ಸಲುವಾಗಿ ಕಾರ್ಬನ್ ಫೈಬರ್ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಇದರಿಂದ ಇತರೆ ರೇಸ್ ಬೈಕ್‌ಗಳಿಂತಲೂ ಈ ಬೈಕಿನ ತೂಕವು ಬರೋಬ್ಬರಿ 35 ಕೆ.ಜಿ ಕಡಿಮೆ ಭಾರ ಹೊಂದಿದೆ.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಇದೇ ಕಾರಣಕ್ಕಾಗಿಯೇ ಬೈಕಿನ ಬೆಲೆಯು ಹೆಚ್ಚಳವಾಗಿರಲು ಕಾರಣವಾಗಿದ್ದು, 171 ಕೆಜಿ ತೂಕ ಹೊಂದಿರುವ ಈ ಬೈಕ್ ಟ್ರ್ಯಾಕ್‌ನಲ್ಲಿ ಅದ್ಬುತ ಪ್ರದರ್ಶನ ತೊರಬಲ್ಲವು. ಜೊತೆಗೆ ರೇಸ್ ಪ್ರಿಯರಿಗೆ ಅನುಕೂಲಕರವಾಗುವಂತ ಹಲವು ಅತ್ಯಾಧುನಿಕ ರೈಡಿಂಗ್ ಸೌಲಭ್ಯಗಳು ಈ ಬೈಕಿನಲ್ಲಿವೆ.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಎಂಜಿನ್ ಸಾಮರ್ಥ್ಯ

999-ಸಿಸಿ ಇನ್ ಲೈನ್, ಫೌರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ರೇಸ್ ಎಂಜಿನ್ ಸೌಲಭ್ಯವನ್ನ ಹೊಂದಿರುವ ಹೆಚ್‌ಪಿ4 ರೇಸ್ ಬೈಕ್‌ಗಳು 6-ಸ್ಪೀಡ್ ರೇಸಿಂಗ್ ಟ್ರಾನ್ಸ್‌ಮಿಷನ್‌ನೊಂದಿಗೆ 215-ಬಿಎಚ್‌ಪಿ ಮತ್ತು 120-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಜೊತೆಗೆ ಸ್ಟ್ರೇಟ್ ಕಟ್ ಗೇರ್‌ಬಾಕ್ಸ್ ಹೊಂದಿರುವ ಈ ಬೈಕ್‌ಗಳು ಟ್ರ್ಯಾಕ್‌ನಲ್ಲಿ ಸಹಕಾರಿಯಾಗಲಿದ್ದು, ಮುಂಭಾಗದಲ್ಲಿ ಒಹೊ ಲೈನ್ ಎಫ್‌ಜಿಆರ್ 300 ಫ್ರೊಕ್ಸ್ ಮತ್ತು ಹಿಂಭಾಗದಲ್ಲಿ ಒಹೊ ಲೈನ್ ಟಿಟಿಎಕ್ಸ್ 36 ಜಿಪಿ ಮೊನೊಶಾರ್ಕ್ ಪಡೆದುಕೊಂಡಿದೆ.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಇದರೊಂದಿಗೆ 320ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220ಎಂಎಂ ರಿಯರ್ ಡಿಸ್ಕ್ ಬ್ರೇಕ್ ಮತ್ತು ಟೈಟಾನಿಯಂ ಅಕ್ರೊಪ್ರೊವಿಕ್ ಎಕ್ಸಾಸ್ಟ್ ಹೊಂದಿರುವ ಹೆಚ್‌ಪಿ4 ರೇಸ್ ಬೈಕ್ ಮಾದರಿಯು ದುಬಾರಿ ಬೆಲೆಯ ಟೈರ್ ಮಾದರಿಯಾದ 17-ಇಂಚಿನ ಪಿರೆಲ್ಲಿ ಡೈಯಾಬ್ಲೊ ಸ್ಲಿಕ್ ಎಸ್‌ಸಿ2 ಟೈರ್ ಸೌಲಭ್ಯ ಹೊಂದಿದೆ.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಇನ್ನು ಸುರಕ್ಷೆತೆಗಾಗಿ ಹೆಚ್‌ಪಿ4 ರೇಸ್ ಬೈಕ್‌ಗಳಲ್ಲಿ ಅಲ್ಯುನಿಯಂ WSBK ಸ್ವಿಂಗ್‌ಗಾರ್ಮ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೊಲರ್, ಎಂಜಿನ್ ಬ್ರೇಕಿಂಗ್, ವೀಲ್ಲಿ ಕಂಟ್ರೋಲರ್, ಪಿಟ್ ಲೆನ್ ಲಿಮಿಟರ್ ಮತ್ತು ಆ್ಯಂಟಿ ಹೊಪಿಂಗ್ ಕ್ಲಚ್ ಜೋಡಣೆಯಿದೆ.

ಭಾರತಕ್ಕೂ ಕಾಲಿಟ್ಟ 85 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತದಲ್ಲಿ ಲಭ್ಯವಿರುವ 1.12 ಕೋಟಿ ಮೌಲ್ಯದ ಡುಕಾಟಿ 1299 ಸೂಪರ್ ಲೆಗ್ಗರ್ ಸೂಪರ್ ಬೈಕಿಗಿಂತಲೂ ಹೆಚ್ಚಿನ ಗುಣಮಟ್ಟ ಹೊಂದಿರುವ ಹೆಚ್‌4 ರೇಸ್ ಬೈಕ್‌ಗಳು ರೇಸಿಂಗ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಲಿದ್ದು, ಲಿಮಿಟೆಡ್ ಎಡಿಷನ್ ಆಗಿರುವುದರಿಂದ ಕೇವಲ 750 ಬೈಕ್‌ಗಳು ಮಾತ್ರವೇ ಖರೀದಿಗೆ ಲಭ್ಯವಿರಲಿವೆ.

Most Read Articles

Kannada
Read more on bmw motorrad super bike
English summary
India’s First BMW HP4 Race Bike Arrives.
Story first published: Friday, August 10, 2018, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X