ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಜಾವಾ ಹೊಸ ಬೈಕ್‌ ಮಾದರಿಗಳು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದು, ಇದೀಗ ಶೀಘ್ರದಲ್ಲೇ ಗ್ರಾಹಕರ ಕೈಸೇರುವ ನೀರಿಕ್ಷೆಯಲ್ಲಿವೆ. ಹೊಸ ಬೈಕ್ ಉತ್ಪಾದನಾ ಪ್ರಕ್ರಿಯೆ ಜೋರಾಗಿದ್ದು, ಡೀಲರ್ಸ್ ಯಾರ್ಡ್‌ಗಳಲ್ಲಿ ಹೊಸ ಬೈಕ್‌ಗಳನ್ನು ಸ್ಟಾಕ್ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಸದ್ಯ ಜಾವಾ ಬೈಕ್‌ಗಳ ಖರೀದಿಗಾಗಿ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾತ್ರ ಪಡೆದುಕೊಳ್ಳಲಾಗುತ್ತಿದ್ದು, ಮುಂದಿನ ಜನವರಿ ಆರಂಭದಲ್ಲಿ ಅಧಿಕೃತವಾಗಿ ಬೈಕ್ ವಿತರಣೆ ಆರಂಭವಾಗಲಿದೆ. ಹೀಗಾಗಿ ಬೈಕ್ ವಿತರಣೆಗೆ ಸಕಲ ಸಿದ್ದತೆ ನಡೆಸಿರುವ ಮಹೀಂದ್ರಾ ಸಂಸ್ಥೆಯು ಅದಕ್ಕೂ ಮುನ್ನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಗ್ರಾಹಕರಿಗೆ ಟೆಸ್ಟ್ ರೈಡ್ ಕಲ್ಪಿಸುವ ಮೂಲಕ ಆರ್‌ಇ ಸಂಸ್ಥೆಗೆ ಟಕ್ಕರ್ ನೀಡುತ್ತಿದೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಜಾವಾ ಬೈಕ್ ಭಾರತದಲ್ಲಿ ಮರುಬಿಡುಗಡೆಯಾಗಿದ್ದೆ ತಡ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಒಂದು ರೀತಿ ತಳಮಳ ಶುರುವಾಗಿದೆ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ, ಇಷ್ಟು ದಿನಗಳ ಕಾಲ ಹೊಸ ಜಾವಾ ಬೈಕ್ ಮೊದಲಿನ ಗತ್ತು ಪಡೆದುಕೊಂಡಿರುತ್ತೊ ಇಲ್ಲವೋ ಅನ್ನುವ ಗೊಂದಲಗಳಿದ್ದವು. ಆದ್ರೆ ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಜಾವಾ ತೀವ್ರ ಪೈಪೋಟಿ ನೀಡಿದೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಸಂಸ್ಥೆಯು ಯಶಸ್ವಿಯಾಗಿದೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಮಹೀಂದ್ರಾ ಸಂಸ್ಥೆಯು ಸದ್ಯ ಮೂರು ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನ ಬಿಡುಗಡೆ ಮಾಡಿದಲ್ಲಿ ಇದರಲ್ಲಿ ಜಾವಾ ಪೆರಾಕ್ ಎನ್ನುವ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಇದರಿಂದ ರಾಯಲ್ ಎನ್‌ಫೀಲ್ಡ್ ಖರೀದಿ ಯೋಜನೆಯಲ್ಲಿದ್ದ ಬಹುತೇಕ ಗ್ರಾಹಕರು ಜಾವಾ ಬೈಕ್‌ಗತ್ತ ಮುಖ ಮಾಡಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಬರೋಬ್ಬರಿ 46 ಸಾವಿರ ಬೈಕ್‌ಗಳನ್ನು ಮಾರಾಟ ಮಾಡಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ನವೆಂಬರ್ ತಿಂಗಳಿನಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಅಕ್ಟೋಬರ್ ಅವಧಿಯಲ್ಲಿನ ಬೈಕ್ ಮಾರಾಟಕ್ಕೂ ಮತ್ತೆ ನವೆಂಬರ್ ಅವಧಿಯಲ್ಲಿನ ಬೈಕ್ ಮಾರಾಟಕ್ಕೂ ಶೇ.10 ರಷ್ಟು ನಷ್ಟ ಅನುಭವಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಜಾವಾ ಅಬ್ಬರದ ಮುಂದೆ ಕಂಗಾಲಾಗಿ ಹೋಗಿದೆ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ರಾಯಲ್ ಎನ್‌ಫೀಲ್ಡ್‌ ಬೈಕ್ ಮಾರಾಟಕ್ಕೆ ಶೇ.100ರಷ್ಟು ಪೈಪೋಟಿ ನೀಡಬೇಕು ಎನ್ನುವ ಜಾವಾ ಗುರಿಗೆ ಮೊದಲ ಜಯ ಸಿಕ್ಕಿದೆ. ಹೀಗಾಗಿ ಜನವರಿಯಿಂದ ರಸ್ತೆಗಿಳಿಯಲಿರುವ ಜಾವಾ ಬೈಕ್‌ಗಳು ಮತ್ತಷ್ಟು ಹವಾ ಸೃಷ್ಠಿಸುವುದರಲ್ಲಿ ಎರಡು ಮಾತಿಲ್ಲ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಆಕರ್ಷಕ ಬೆಲೆಗಳು ಮತ್ತು ತಾಂತ್ರಿಕವಾಗಿ ಬಲಿಷ್ಠವಾಗಿರುವ ಜಾವಾ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಸಂಸ್ಥೆಯನ್ನೇ ಗುರಿಯಾಗಿಸಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಜಾವಾ ಮತ್ತು ಜಾವಾ 42 ಬೈಕ್‌ಗಳು ಕ್ಲಾಸಿಕ್ 350 ಬೈಕ್‌ಗಳಿಗೆ ಹೆಚ್ಚಿನ ಪೈಪೋಟಿ ನೀಡುತ್ತಿವೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಜೊತೆಗೆ ರಾಯಲ್ ಎನ್‌ಫೀಲ್ಡ್ ಖರೀದಿಸುವ ಗ್ರಾಹಕರನ್ನ ತನ್ನತ್ತ ಸೆಳೆಯುವ ಉದ್ದೇಶ ಮತ್ತೊಂದು ಯೋಜನೆ ಆರಂಭಿಸಿರುವ ಜಾವಾ ಸಂಸ್ಥೆಯು, ದೇಶದ ವಿವಿಧ ನಗರಗಳಲ್ಲಿ ನೆಲೆಗೊಂಡಿರುವ ರಾಯಲ್ ಎನ್‌ಫೀಲ್ಡ್ ಶೋರೂಂ ಎದುರಲ್ಲೇ ಹೊಸ ಬೈಕ್ ಡೀಲರ್ಸ್ ತೆರೆಯುವುದಾಗಿ ಹೇಳಿಕೊಂಡಿರುವುದು ಮಾರಾಟದಲ್ಲಿ ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

MOST READ: ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಇನ್ನು ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಜಾವಾ ಹೊಸ ಬೈಕ್ ಗ್ರಾಹಕರ ಕೈಸೇರಲು ದಿನಗಣನೆ ಶುರು..!

ಒಟ್ಟಿನಲ್ಲಿ ಭಾರತೀಯ ಗ್ರಾಹಕರ ಅಭಿರುಚಿಗಳನ್ನು ಅರಿತು ಜಾವಾ ಬೈಕ್‌ಗಳಲ್ಲಿ ಹೊಸ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಜಾವಾ ಬೈಕ್‌ಗಳನ್ನು ಹೊರತರುವ ಇರಾದೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಯಾವ ಮಟ್ಟಿಗೆ ಬೇಡಿಕೆ ಗಿಟ್ಟಿಸಿಕೊಳ್ಳಲಿವೆ ಎನ್ನವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
English summary
Jawa and Jawa 42 first photos of production. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X