ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಈ ಹಿಂದೆಯೆ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 125 ಮೋಟಾರ್‍‍ಬೈಕಿನ ಬಿಡುಗಡೆಯ ಕುರಿತಾಗಿ ಮಾಹಿತಿಯನ್ನು ಮತ್ತು ಈ ಕೆಟಿಎಂ 125 ಬೈಕಿನ ಬುಕ್ಕಿಂಗ್ ಪ್ರಕ್ರಿಯೆಯ ಬಗ್ಗೆ ಕೂಡಾ ಮಾಹಿತು ನೀಡಿದ್ದೆವು. ಆದರೆ ಇದೇ ಮೊದಲ ಬಾರಿಗೆ ದೇಶಿಯ ರಸ್ತೆಗಳಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಹೊಸ ಕೆಟಿಎಂ ಡ್ಯೂಕ್ 125 ಪುಣೆ ನಗರದ ಸಮೀಪದಲ್ಲಿ ಕಾಣಿಸಿಕೊಂಡಿದ್ದು, ಈ ಸ್ಪೈ ವೀಡಿಯೋನಲ್ಲಿ ಹೀರೋ ಸ್ಪ್ಲೆಂಡರ್ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಕೆಟಿಎಂ ಬೈಕ್‍ನ ಬಗ್ಗೆ ಕೇಳುತ್ತಿರುವುದನ್ನು ನೀವು ಕಾಣಬಹುದಾಗಿದೆ. ಆನಂತರ ಸ್ಪ್ಲೆಂಡರ್ ಬೈಕಿನವನು ವಿಡಿಯೋ ಮಾಡುತ್ತಿರುವುದನ್ನು ಅರಿತು ವೇಗದ ಚಾಲನೆಯನ್ನು ಶುರು ಮಾಡಿದನು.

ಕೆಟಿಎಂ ಡ್ಯೂಕ್ 125 ಬೈಕ್ ಮಾದರಿಗಳು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿದ್ದು, ಇದೀಗ ಭಾರತದಲ್ಲೂ ಹೊಸ ಬೈಕ್ ಉತ್ಪನ್ನವನ್ನು ಪರಿಚಯಿಸಲು ಮುಂದಾಗಿರುವ ಕೆಟಿಎಂ ಸಂಸ್ಥೆಯು ನವೆಂಬರ್ ಅಂತ್ಯಕ್ಕೆ ಹೊಸ ಬೈಕ್ ಬಿಡುಗಡೆಯ ಇರಾದೆಯಲ್ಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಕೆಟಿಎಂ ಸಂಸ್ಥೆಯು ಸದ್ಯ 200 ಡ್ಯೂಕ್ ಮಾದರಿಯನ್ನು ಎಂಟ್ರಿ ಲೆವಲ್ ಬೈಕ್ ಮಾದರಿಯಾಗಿ ಮಾರಾಟ ಮಾಡುತ್ತಿದ್ದು, ದುಬಾರಿ ಬೆಲೆಯ ನಡುವೆಯೂ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಹೀಗಿರುವಾಗ ಕಳೆದ ಕೆಲ ತಿಂಗಳಿನಿಂದ ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಂಟ್ರಿ ಲೆವಲ್ ಸ್ಪೋರ್ಟಿ ಬೈಕ್ ಹೊರತರುತ್ತಿರುವುದು ಕೆಟಿಎಂಗೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಹೀಗಾಗಿ ವಿದೇಶಿ ಮಾರುಕಟ್ಟೆಯಲ್ಲಿರುವ ತನ್ನ ಜನಪ್ರಿಯ 125 ಡ್ಯೂಕ್ ಬೈಕ್ ಮಾದರಿಯ ಮಾರಾಟವನ್ನು ಭಾರತದಲ್ಲೂ ಆರಂಭಿಸುವ ಯೋಜನೆಯಲ್ಲಿರುವ ಕೆಟಿಎಂ ಸಂಸ್ಥೆಯು ಎಂಟ್ರಿ ಲೆವಲ್ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯುವ ತವಕದಲ್ಲಿದ್ದು, ಪರ್ಫಾಮೆನ್ಸ್ ಪ್ರಿಯರಿಗೂ ಇದು ಅತ್ಯುತ್ತಮ ಆಯ್ಕೆಯಾಗಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಕೆಟಿಎಂ ಸಂಸ್ಥೆಯು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ದುಬಾರಿ ಬೆಲೆಯ 1290 ಸೂಪರ್ ಡ್ಯೂಕ್ ಸಹ ಮಾರಾಟ ಮಾಡುತ್ತಿದ್ದು, ಅದೇ ಬೈಕಿನ ಡಿಸೈನ್ ಪ್ರೇರಿತ ಬೇಬಿ ಡ್ಯೂಕ್(125 ಡ್ಯೂಕ್) ಹೊರತರುತ್ತಿರುವುದು ಸ್ಪೋರ್ಟಿ ಬೈಕ್ ಪ್ರಿಯರಿಗೆ ಹಬ್ಬವೇ ಸರಿ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಎಂಜಿನ್ ಸಾಮರ್ಥ್ಯ

125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.7-ಬಿಎಚ್‌ಪಿ ಮತ್ತು 11.80-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಇದರೊಂದಿಗೆ 125 ಸಿಸಿ ಎಂಜಿನ್ ಬೈಕ್‌ಗಳಲ್ಲೇ ಇದು ಪವರ್ ಫುಲ್ ಎಂಜಿನ್ ಮಾದರಿ ಎನ್ನಿಸಲಿದ್ದು, ಮುಂಭಾಗದಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡಬ್ಲ್ಯಪಿ ಮೊನೊಶಾರ್ಕ್ ಸಸ್ಷೆಂಷನ್ ಪಡೆದಿರಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಇನ್ನು ಬೈಕಿನ ಬ್ರೇಕಿಂಗ್ ವಿಭಾಗವು ಸಹ ವಿಶ್ವದರ್ಜೆಯ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, 300-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 230-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಜೊತೆಗೆ ಬಾಷ್ ನಿರ್ಮಾಣದ ಡ್ಯುಯಲ್ ಚಾನಲ್ ಎಬಿಎಸ್ ಜೋಡಣೆ ಹೊಂದಿರಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಮತ್ತೊಂದು ಮಾಹಿತಿ ಪ್ರಕಾರ, ಭಾರತದಲ್ಲಿ ಬಿಡುಗಡೆ ಮಾಡಲಿರುವ 125 ಡ್ಯೂಕ್ ಬೈಕ್ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಎಬಿಎಸ್ ಬದಲಾಗಿ ಸಿಬಿಎಸ್(ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ) ಸೌಲಭ್ಯವನ್ನು ಸಹ ಒದಗಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಭಾರತದಲ್ಲಿ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಮಾತ್ರವೇ ಎಬಿಎಸ್ ಕಡ್ಡಾಯವಾಗುತ್ತಿರುವುದಿಂದ ಸಿಬಿಎಸ್ ಒದಗಿಸಬಹುದು ಎನ್ನಲಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ತಾಂತ್ರಿಕವಾಗಿ ಎಬಿಎಸ್ ಮತ್ತು ಸಿಬಿಎಸ್ ಒಂದೇ ರೀತಿಯ ಕಾರ್ಯನಿರ್ವಹಣಾ ಗುಣಹೊಂದಿದ್ದರೂ, ಎಬಿಎಸ್‌ಗೆ ಇರುವ ಮಾನ್ಯತೆ ಸಿಬಿಎಸ್‌ಗೆ ಇಲ್ಲ. ವಾಸ್ತವವಾಗಿ ಸಿಬಿಎಸ್ ಕೂಡಾ ಬೈಕಿನ ಬ್ರೇಕಿಂಗ್ ವಿಭಾಗದಲ್ಲಿ ಅದ್ಬುತ ಕಾರ್ಯನಿರ್ವಹಣೆ ಹೊಂದಿದ್ದು, ಎಬಿಎಸ್‌ನಂತೆಯೇ ಕಾರ್ಯನಿರ್ವಹಿಸಬಲ್ಲದು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಇದರಿಂದ ದುಬಾರಿ ಬೆಲೆಯ ಎಬಿಎಸ್ ಬದಲಾಗಿ ಅಗ್ಗದ ಬೆಲೆಗೆ ಲಭ್ಯವಾಗುವ ಸಿಬಿಎಸ್ ಜೋಡಣೆ ಮಾಡುವ ಬಗ್ಗೆಯು ಚಿಂತನೆ ನಡೆಸಿರುವ ಕೆಟಿಎಂ ಸಂಸ್ಥೆಯು ಗ್ರಾಹಕರ ಆದ್ಯತೆ ಮೇರೆಗೆ ಸಿಬಿಎಸ್ ಬೇಕೋ ಅಥವಾ ಎಬಿಎಸ್ ಬೇಕೋ ಎನ್ನುವುದನ್ನು ಸದ್ಯದಲ್ಲೇ ನಿರ್ಧರಿಸಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಒಂದು ವೇಳೆ ಎಬಿಎಸ್ ಅಳವಡಿಕೆ ಹೊಂದಿದ್ದಲ್ಲಿ 125 ಡ್ಯೂಕ್ ಬೆಲೆ ತುಸು ದುಬಾರಿ ಎನ್ನಿಸಲಿದ್ದು, ಎಂಟ್ರಿ ಲೆವಲ್ ಬೈಕಿಗೆ ಯಾವೆಲ್ಲಾ ಅಗತ್ಯ ತಾಂತ್ರಿಕ ಸೌಲಭ್ಯ ಬೇಕೋ ಅದೆಲ್ಲವೂ ಬೇಬಿ ಡ್ಯೂಕ್‌ನಲ್ಲಿ ಇರಲಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

ಬೈಕಿನ ಬೆಲೆಗಳು(ಅಂದಾಜು)

ತಾಂತ್ರಿಕವಾಗಿ ಬಲಿಷ್ಠವಾಗಿರುವ 125 ಡ್ಯೂಕ್ ಬೈಕ್ ಮಾದರಿಯ ಬೆಲೆ ಕೆಟಿಎಂ ಶೋರೂಂ ಸಿಬ್ಬಂದಿಯ ಮಾಹಿತಿ ಪ್ರಕಾರ, ಆನ್ ರೋಡ್ ಬೆಲೆ ರೂ. 1.40 ಲಕ್ಷದಿಂದ ರೂ.1.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಇದಕ್ಕಾಗಿಯೇ ಗ್ರಾಹಕರಿಂದ ರೂ. 1 ಸಾವಿರ ಮುಂಗಡ ಪಡೆದುಕೊಳ್ಳುತ್ತಿರುವ ಅಧಿಕೃತ ಮಾರಾಟಗಾರರು ಹೊಸ ಬೈಕ್ ನವೆಂಬರ್ ಅಂತ್ಯಕ್ಕೆ ಇಲ್ಲವೇ ಡಿಸೆಂಬರ್ ಆರಂಭದಲ್ಲಿ ಖರೀದಿಗೆ ಲಭ್ಯವಿರಲಿವೆ ಎನ್ನುವ ಮಾಹಿತಿ ನೀಡುತ್ತಿದ್ದಾರೆ.

Video Courtesy: The Dukeist

Most Read Articles

Kannada
Read more on ktm duke
English summary
KTM 125 Duke Spotted Testing In India — Launch Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X