ಖರೀದಿಗೆ ಲಭ್ಯವಾದ 2018ರ ಹೀರೋ ಎಚ್‌ಎಫ್ ಡಾನ್‌- ಬೆಲೆ ರೂ.37,400

Written By:
Recommended Video - Watch Now!
Bangalore Traffic Police Rides With Illegal Number Plate - DriveSpark

ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ಜನಪ್ರಿಯ ಬೈಕ್ ಮಾದರಿಯಾದ ಎಚ್ಎಫ್ ಡಾನ್ ವಿನೂತನ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.37,400ಕ್ಕೆ ನಿಗದಿ ಮಾಡಿದೆ.

ಖರೀದಿಗೆ ಲಭ್ಯವಾದ 2018ರ ಹೀರೋ ಎಚ್‌ಎಫ್ ಡಾನ್‌- ಬೆಲೆ ರೂ.37,400

ಅತಿ ಹೆಚ್ಚು ಮೈಲೇಜ್ ನೀರಿಕ್ಷಿಸುವ ಗ್ರಾಹಕರ ಆಯ್ಕೆಯಲ್ಲಿ ನಂ.1 ಸ್ಥಾನದಲ್ಲಿರುವ ಹೀರೋ ಎಚ್ಎಫ್ ಡಾನ್ ಸದ್ಯ ವಿನೂತನ ತಂತ್ರಜ್ಞಾನಗಳ ಪ್ರೇರಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮೊದಲ ಹಂತವಾಗಿ ಒರಿಸ್ಸಾ ರಾಜ್ಯದಲ್ಲಿ ಹೊಸ ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಖರೀದಿಗೆ ಲಭ್ಯವಾದ 2018ರ ಹೀರೋ ಎಚ್‌ಎಫ್ ಡಾನ್‌- ಬೆಲೆ ರೂ.37,400

ಹೀಗಾಗಿ ಮುಂದಿನ ವಾರದೊಳಗೆ ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲೂ 2018ರ ಎಚ್ಎಫ್ ಡಾನ್ ಮಾದರಿಗಳನ್ನು ಖರೀದಿಗೆ ಲಭ್ಯವಾಗಲಿದ್ದು, ಬಿಎಸ್ 4 ಸೇರಿದಂತೆ ಹಿಂದಿನ ಆವೃತ್ತಿಗಿಂತ ಹೆಚ್ಚಿನ ಗುಣಮಟ್ಟದ ಹೊರ ವಿನ್ಯಾಸ ಹೊಂದಿದೆ.

ಖರೀದಿಗೆ ಲಭ್ಯವಾದ 2018ರ ಹೀರೋ ಎಚ್‌ಎಫ್ ಡಾನ್‌- ಬೆಲೆ ರೂ.37,400

ಎಂಜಿನ್ ಸಾಮರ್ಥ್ಯ

97.2-ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಹೆಚ್ಎಫ್ ಡಾನ್ ಬೈಕ್ 8.2-ಬಿಎಚ್‌ಪಿ ಮತ್ತು 8.05-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಖರೀದಿಗೆ ಲಭ್ಯವಾದ 2018ರ ಹೀರೋ ಎಚ್‌ಎಫ್ ಡಾನ್‌- ಬೆಲೆ ರೂ.37,400

ಬೈಕ್ ಹೊರ ವಿನ್ಯಾಸ

105 ಕೆಜಿ ಭಾರ ಹೊಂದಿರುವ ಹೆಚ್ಎಫ್ ಡಾನ್ ಬೈಕ್ ಆವೃತ್ತಿಗಳು ಈ ಹಿಂದಿನಗಿಂತ ಕಡಿಮೆ ತೂಕ ಹೊಂದಿದ್ದು, 9.5-ಲೀಟರ್ ಪೆಟ್ರೋಲ್ ಟ್ಯಾಂಕ್ ಪಡೆದುಕೊಂಡಿರುವುದು ದೂರದ ಪ್ರಯಾಣಕ್ಕೆ ಅನುಕೂಲಕರವಾಗಿದೆ ಎನ್ನಬಹುದು.

ಖರೀದಿಗೆ ಲಭ್ಯವಾದ 2018ರ ಹೀರೋ ಎಚ್‌ಎಫ್ ಡಾನ್‌- ಬೆಲೆ ರೂ.37,400

ಲಭ್ಯವಿರುವ ಬಣ್ಣಗಳು

ರೆಡ್ ಆ್ಯಂಡ್ ಬ್ಲ್ಯಾಕ್ ಮಿಶ್ರಿತ ಮತ್ತು ರೆಡ್

Trending On DriveSpark Kannada:

ಬಿಡುಗಡೆಗೆ ಸಜ್ಜುಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಅತ್ಯವಶ್ಯಕ 10 ಸಲಹೆಗಳು

ಖರೀದಿಗೆ ಲಭ್ಯವಾದ 2018ರ ಹೀರೋ ಎಚ್‌ಎಫ್ ಡಾನ್‌- ಬೆಲೆ ರೂ.37,400

ಮೈಲೇಜ್

ಹೀರೋ ಮೋಟೋಕಾರ್ಪ್ ಹೇಳಿಕೊಂಡಿರುವ ಪ್ರಕಾರ ಹೊಸ ಬೈಕ್ ಮಾದರಿಯು ಪ್ರತಿ ಲೀಟರ್‌ ಪೆಟ್ರೋಲ್‌ಗೆ 75 ಕಿಮಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಮುಂಭಾಗದ ಚಕ್ರದಲ್ಲಿ 130ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 110ಎಂಎಂ ಡ್ರಮ್ ಬ್ರೇಕ್ ಹೊಂದಿದೆ.

ಖರೀದಿಗೆ ಲಭ್ಯವಾದ 2018ರ ಹೀರೋ ಎಚ್‌ಎಫ್ ಡಾನ್‌- ಬೆಲೆ ರೂ.37,400

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವಿನೂತನ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೆಚ್ಎಫ್ ಡಾನ್ ಬೈಕ್‌ಗಳು ಪ್ರಸ್ತುತ ಬೈಕ್ ಮಾದರಿಗಳಾದ ಬಜಾಜ್ ಸಿಟಿ 100, ಟಿವಿಎಸ್ ಸ್ಪೋರ್ಟ್ ಮಾದರಿಗಳಿಗೆ ತೀವ್ರ ಪ್ರತಿಸ್ಪರ್ಧೆ ನೀಡಲಿದ್ದು, ಮುಂದಿನ ವಾರದೊಳಗೆ ರಾಜ್ಯದಲ್ಲೂ ಅಧಿಕೃತ ಮಾರಾಟಕ್ಕೆ ಲಭ್ಯವಿರಲಿವೆ.

Trending On DriveSpark Kannada:

ಈ ಹತ್ತು ಸಾಮಾನ್ಯ ಕಾರಣಗಳು ಒಂದು ದುರಂತಕ್ಕೆ ಕಾರಣವಾಗಬಲ್ಲವು...

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

Trending DriveSpark YouTube Videos

Subscribe To DriveSpark Kannada YouTube Channel - Click Here

Read more on hero motocorp
English summary
2018 Hero HF Dawn Launched In India; Priced At Rs 37,400

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark