ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

Written By:
Recommended Video - Watch Now!
Bajaj Discover 110 And Discover 125 Launched In India | First Look - DriveSpark

ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾದ ವಿನ್ಯಾಸ ಮತ್ತು ಕಡಿಮೆ ದರಕ್ಕೆ ಹೆಸರುವಾಸಿಯಾಗಿರುವ ಬಜಾಜ್ ಕಂಪನಿಯು ನೂತನ ವರ್ಷಕ್ಕೆ ಡಿಸ್ಕವರ್ ಬೈಕ್ ಆವೃತ್ತಿಗಳಲ್ಲಿ ನೂತನವಾಗಿರುವ ಡಿಸ್ಕವರ್ 110 ಬೈಕ್ ಮತ್ತು 2018ರ ಡಿಸ್ಕವರಿ 125 ಆವೃತ್ತಿಯುನ್ನು ಬಿಡುಗಡೆ ಮಾಡಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

ಈಗಾಗಲೇ ಡಿಸ್ಕವರ್ 125 ಮತ್ತು 100 ಸಿಸಿ ಮಾದರಿಯನ್ನು ಬಜಾಜ್ ಬಿಡುಗಡೆ ಮಾಡಿತ್ತಾದರೂ ಹೊಸ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸದಾಗಿ 110 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಆರಂಭಿಕ ಡಿಸ್ಕವರ್ 110 ಬೈಕ್ ಬೆಲೆಯು ರೂ.50,176ಕ್ಕೆ ಮತ್ತು ಡಿಸ್ಕವರ್ 125 ಉನ್ನತ ಮಾದರಿಯ ಬೆಲೆಯು ರೂ. 55, 994ಕ್ಕೆ ಲಭ್ಯವಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

ಹೀಗಾಗಿ ಕಡಿಮೆ ಬೆಲೆಗಳಲ್ಲಿ ಉತ್ತಮ ಇಂಧನ ಕಾರ್ಯಕ್ಷಮತೆ ಬಯಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಲಿದ್ದು, ಈ ಹಿಂದಿನ ಡಿಸ್ಕವರ್ 100 ಬದಲಾಗಿ ಡಿಸ್ಕವರ್ 110 ಮಾದರಿಗಳು ಖರೀದಿಗೆ ಸಿಗಲಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125
ಬೈಕ್ ಮಾದರಿಗಳು ಬೆಲೆಗಳು
ಡಿಸ್ಕವರ್ 110 ರೂ. 50,176
ಡಿಸ್ಕವರ್125 (ಡ್ರಮ್ ಬ್ರೇಕ್) ರೂ. 53,171
ಡಿಸ್ಕವರ್ 125 (ಡಿಸ್ಕ್ ಬ್ರೇಕ್) ರೂ. 55,994
ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

ಇನ್ನು ಬಜಾಜ್ ಸಂಸ್ಥೆಯು ಪರಿಚಯಿಸಿರುವ ಡಿಸ್ಕವರ್ 110 ಬಗ್ಗೆ ಹೇಳುವುದಾದರೇ ಈ ಹಿಂದಿನ ಡಿಸ್ಕವರ್ 125 ಮತ್ತು ಡಿಸ್ಕವರ್ 100 ಸಿಸಿ ಬೈಕ್‌ಗಳಿಗೆ ಹೋಲಿಸಿದಲ್ಲಿ ಹೊಸ ಬೈಕ್‌ನ ವಿನ್ಯಾಸ, ಗ್ರಾಫಿಕ್ಸ್‌ಗಳಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದ್ದು, ಮೈಲೇಜು ಅನ್ನು ಹೆಚ್ಚಾಗಿ ಗಮನಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.

Trending On DriveSpark Kannada:

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ನಿಯಂತ್ರಣ ತಪ್ಪಿದ ಹೈ ಸ್ಪಿಡ್‌ ಕಾರು- ಎದುರಿಗೆ ಬರುತ್ತಿದ್ದ ಹಿರೋ ಬೈಕ್ ಪೀಸ್ ಪೀಸ್....

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

ಕಡುಗಪ್ಪು ಬಣ್ಣ ಹೊಂದಿರುವ ಅಲಾಯ್ ಚಕ್ರಗಳು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಮತ್ತು ಎಂಜಿನ್ ಸೇರಿದಂತೆ ಎಲ್ಲವೂ ಕಪ್ಪು ಬಣ್ಣವನ್ನು ಹೊಂದಿದ್ದು, ಹಳೆಯ ಬೈಕ್‌ಗಳಿಗಿಂತ ಸ್ವಲ್ಪ ಭಿನ್ನತೆವಾಗಿ ಕಾಣುವ ಸ್ಪೋರ್ಟ್ ಮಾದರಿಯ ಗ್ರಾಫಿಕ್ಸ್‌ಗಳನ್ನು ನಾವು ಇದರಲ್ಲಿ ಕಾಣಬಹುದಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

ಎಂಜಿನ್ ಸಾಮರ್ಥ್ಯ

ಡಿಸ್ಕವರ್ 110 ಮಾದರಿಯು 115.5 ಸಿಸಿ, 4 ಸ್ಟೋಕ್, ಏರ್ ಕೂಲ್ಡ್ DTS-iಎಂಜಿನ್ ಹೊಂದಿದ್ದು, ಎಲೆಕ್ಟ್ರಿಕ್ ಸ್ಟಾರ್ಟರ್ ಮತ್ತು ಡ್ರಮ್ ಬ್ರೇಕ್ ಸಿಸ್ಟಂನೊಂದಿಗೆ 8.48-ಬಿಎಚ್‌ಪಿ ಹಾಗೂ 9.81-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

ಅಂತೆಯೇ ಡಿಸ್ಕವರ್ 125 ಮಾದರಿಯು 124.6 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್, ಎಲೆಕ್ಟ್ರಿಕ್ ಸ್ಟಾರ್ಟರ್, ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಆವೃತ್ತಿಗಳನ್ನು ಆಯ್ಕೆ ಮೇರೆಗೆ ಖರೀದಿಸಬಹುದು.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ವಿನೂತನ ಡಿಸ್ಕವರ್ 110 ಮತ್ತು ಡಿಸ್ಕವರ್ 125

ಒಟ್ಟಿನಲ್ಲಿ ಹೊಸ ವರ್ಷದಲ್ಲಿ ದೇಶಿಯ ಮಾರುಕಟ್ಟೆಯ ಬೈಕ್ ಮಾರಾಟದಲ್ಲಿ ಸಂಚಲನ ಮುಡಿಸುವುದು ಬಹುತೇಕ ಖಚಿತವಾಗಿದ್ದು, ನೀವು ಒಂದು ವೇಳೆ ಹೊಸ ವರ್ಷದಲ್ಲಿ ಬೈಕ್ ಕೊಳ್ಳಬೇಕು ಅದು ಕಡಿಮೆ ದರ ಹಾಗೂ ಉತ್ತಮ ಶೈಲಿಯನ್ನು ಹೊಂದಿರಬೇಕು ಎಂದು ನೀವು ಬಯಸಿದಲ್ಲಿ ಈ ಬೈಕ್ ನಿಮಗೆ ಇಷ್ಟವಾಗಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on bajaj ಬಜಾಜ್ bike
English summary
Bajaj Discover 110 & Discover 125 Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark