ಭಾರತದಲ್ಲಿ ಬಿಡುಗಡೆಗೊಂಡ ಹೋಂಡಾ ಸಿಬಿಆರ್ 250ಆರ್ ಬೈಕ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತನ್ನ ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸದಾಗಿ ಬಿಎಸ್ 4 ಎಂಜಿನ್ ಅನ್ನು ಪಡೆದುಕೊಂಡಿದೆ.

By Rahul Ts

ದೆಹಲಿಯ ಎಕ್ಸ್ ಶೋರಂ ಪ್ರಕಾರ ಸ್ಟ್ಯಾಂಡರ್ಡ್ ಮಾದರಿಯು ರೂ. 1.64 ಲಕ್ಷಕ್ಕೆ ಮತ್ತು ಎಬಿಎಸ್ ಮಾದರಿಯು 1.93 ಲಕ್ಷಕ್ಕೆ ದೊರೆಯಲಿದೆ ಎನ್ನಲಾಗಿದ್ದು, ಈ ಬೈಕ್ ಮೊದಲ ಬಾರಿಗೆ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಳಿಸಲಾಗಿತ್ತು.

ಭಾರತದಲ್ಲಿ ಬಿಡುಗಡೆಗೊಂಡ ಹೋಂಡಾ ಸಿಬಿಆರ್ 250ಆರ್ ಬೈಕ್..

ಎಂಜಿನ್ ಸಾಮರ್ಥ್ಯ

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಮಾದರಿಯು 249ಸಿಸಿ ಲಿಕ್ವಿಡ್ ಕೂಲ್ಡ್ 4 ವಾಲ್ವೆ ಡಿಒಹೆಚ್‍ಸಿ, ಪಿಜಿಎಂ ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 26.5-ಬಿಹೆಚ್‍ಪಿ ಮತ್ತು 22.9-ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿವೆ.

ಭಾರತದಲ್ಲಿ ಬಿಡುಗಡೆಗೊಂಡ ಹೋಂಡಾ ಸಿಬಿಆರ್ 250ಆರ್ ಬೈಕ್..

ಜೊತೆಗೆ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಗಂಟೆಗೆ 135 ಕಿಲೋಮೀಟರ್ ಟಾಪ್‌2ಸ್ಪೀಡ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೋಂಡಾ ಸಿಬಿಆರ್ 250ಆರ್ ಬೈಕ್..

ವೈಶಿಷ್ಟ್ಯತೆಗಳು

ಹೋಂಡಾ ಸಿಬಿಆರ್ 250ಆರ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಸ್ಪೋರ್ಟಿ ಗ್ರಾಫಿಕ್ಸ್, ನವೀಕರಿಸಲಾದ ಕ್ಲಸ್ಟರ್ ಮತ್ತು ರೇಸಿಂಗ್ ಮಫ್ಲರ್‍‍‍ಗಳನ್ನು ಪಡೆದಿದ್ದು, 167 ಕೆಜಿ ತೂಕ ಮತ್ತು 13 ಲೀಟರ್‍ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೋಂಡಾ ಸಿಬಿಆರ್ 250ಆರ್ ಬೈಕ್..

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಮೇಟ್ ಆಕ್ಸಿಸ್ ಗ್ರೇ ಮೆಟಾಲಿಕ್ ವಿತ್ ಮಾರ್ಸ್ ಆರೆಂಜ್, ಮೇಟ್ ಆಕ್ಸಿಸ್ ಗ್ರೇ ಮೆಟಾಲಿಕ್ ವಿತ್ ಸ್ಟ್ರೈಕಿಂಗ್ ಗ್ರೀನ್, ಪರ್ಲ್ ಎಲ್ಲೋ ಸ್ಪೋರ್ಟ್ ಮತ್ತು ಸ್ಪೋರ್ಟ್ಸ್ ರೆಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೋಂಡಾ ಸಿಬಿಆರ್ 250ಆರ್ ಬೈಕ್..

ಸ್ಪೋರ್ಟ್ಸ್ ಬೈಕ್ ರೈಡಿಂಗ್ ಪ್ರಿಯರಿಗೆ ಈ ಬೈಕ್ ಅನುಕೂಲವಾಗಿದ್ದು, ರೈಡಿಂಗ್ ವೇಳೆ ಹೊಸ ರೀತಿಯ ಅನುಭವನ್ನು ನೀಡಲಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಈ ಬೈಕ್ ಕೆಟಿಎಂ ಆರ್‍‍ಸಿ 200, ಬಜಾಜ್ ಪಲ್ಸರ್ ಆರ್‍ಎಸ್ 200, ಯಮಹಾ ಫೇಝರ್ 25 ಮತ್ತು ಟಿವಿಎಸ್ ಅಪಾಚೆ ಆರ್‍ಆರ್310 ಬೈಕ್‌ಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೋಂಡಾ ಸಿಬಿಆರ್ 250ಆರ್ ಬೈಕ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

2. ಬೇಸಿಗೆಯಲ್ಲಿ ನಿಮ್ಮ ವಾಹನಗಳ ರಕ್ಷಣೆ ಹೇಗೆ? ಇಲ್ಲಿದೆ ಸರಳ ಉಪಾಯ..

3. ಹೊಸ ಕಾರುಗಳ ಉತ್ಪಾದನೆಗಾಗಿ ಒಂದಾದ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್

4. ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ...

5. ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು..

Most Read Articles

Kannada
Read more on honda sports bike
English summary
New Honda CBR250R Launched In India; Prices Start At Rs 1.64 Lakh.
Story first published: Monday, April 2, 2018, 11:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X