ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

ದೇಶಿಯ ಮಾರುಕಟ್ಟೆಯಲ್ಲಿನ ಸ್ಕೂಟರ್ ವಿಭಾಗದಲ್ಲಿ ಹಲವು ದಾಖಲೆಗಳಿಗೆ ಕಾರಣವಾಗಿರುವ ಹೋಂಡಾ ಡಿಯೋ ಸ್ಕೂಟರ್‌ಗಳು ಮೊದಲ ಬಾರಿಗೆ ಬಿಡುಗಡೆಯಾದಾಗಿನ ಬೇಡಿಕೆಯನ್ನು ಇದುವರೆಗೂ ಅದೇ ರೀತಿ ಕಾಯ್ದುಕೊಂಡಿದ್ದು, ಇದೀಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲು

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿನ ಸ್ಕೂಟರ್ ವಿಭಾಗದಲ್ಲಿ ಹಲವು ದಾಖಲೆಗಳಿಗೆ ಕಾರಣವಾಗಿರುವ ಹೋಂಡಾ ಡಿಯೋ ಸ್ಕೂಟರ್‌ಗಳು ಮೊದಲ ಬಾರಿಗೆ ಬಿಡುಗಡೆಯಾದಾಗ ಇದ್ದ ಬೇಡಿಕೆಯನ್ನು ಇದುವರೆಗೂ ಅದೇ ರೀತಿ ಕಾಯ್ದುಕೊಂಡಿದ್ದು, ಇದೀಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಉದ್ದೇಶ ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

2018ರ ಡಿಯೋ ಸ್ಕೂಟರ್‌ಗಳು ಹೊಸ ಬಣ್ಣಗಳ ಆಯ್ಕೆಗೆ ಲಭ್ಯವಿದ್ದು, ಸ್ಕೂಟರಿನ ಹೊರ ವಿನ್ಯಾಸಗಳಲ್ಲೂ ಪ್ರಮುಖ ಬದಲಾವಣೆ ತರಲಾಗಿದೆ. ಹೀಗಾಗಿ ಸ್ಕೂಟರ್ ಬೆಲೆಗಳಲ್ಲೂ ತುಸು ಏರಿಕೆ ಮಾಡಿರುವ ಹೋಂಡಾ ಸಂಸ್ಥೆಯು ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 50,296ಕ್ಕೆ ನಿಗದಿ ಮಾಡಿದೆ.

ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

ಇನ್ನು ಡಿಯೋ ಸ್ಕೂಟರ್‌ಗಳಲ್ಲೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡಿಯೋ ಎಸ್‌ಟಿಡಿ( 51,292) ಮತ್ತು ಡಿಯೋ ಡಿಎಲ್ಎಕ್ಸ್ (53,292) ಎಂಬ ಎರಡು ಉನ್ನತ ಮಾದರಿಗಳ ಖರೀದಿಗೆ ಲಭ್ಯವಿದ್ದು, ಒಟ್ಟು ನಾಲ್ಕು ವಿವಿಧ ಬಣ್ಣಗಳಲ್ಲಿ ಖರೀದಿ ಮಾಡಬಹುದು.

ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

ಎಂಜಿನ್ ಸಾಮರ್ಥ್ಯ

ಬಿಎಸ್ 4 ವೈಶಿಷ್ಯ್ಟತೆಗಳೊಂದಿಗೆ 109.19ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿರುವ ಡಿಯೋ ಸ್ಕೂಟರ್‌ಗಳು 8-ಬಿಎಚ್‌ಪಿ ಮತ್ತು 8.9-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ವಿ-ಮ್ಯಾಟಿಕ್ ಟ್ರಾನ್‌ಮಿಷನ್ ಗೇರ್‌‌ಬಾಕ್ಸ್ ಪಡೆದಿರುವ ಡಿಯೋ ಸ್ಕೂಟರ್‌ಗಳು ಪ್ರತಿ ಗಂಟೆಗೆ 83 ಕಿ.ಮೀ ಟಾಪ್ ಸ್ಪೀಡ್ ಸಾಧಿಸಬಲ್ಲವು.

ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

ಇನ್ನು 2002ನೇ ಇಸವಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿರುವ ಹೋಂಡಾ ಡಿಯೋ ಇದುವರೆಗೆ 18 ಲಕ್ಷ ಹೆಮ್ಮೆಯ ಗ್ರಾಹಕರನ್ನು ಹೊಂದಿದ್ದು, ನ್ಯೂ ಎಲ್‌ಇಡಿ ಪೊಶಿಷನ್ ಲ್ಯಾಂಪ್, ಕಾಂಟ್ರಾಸ್ಟ್ ಡ್ಯುಯಲ್ ಟೋನ್ ಕಲರ್ ಬಾಡಿ, ಬೋಲ್ಡರ್ ಸ್ಪೋರ್ಟಿಯರ್ ಗ್ರಾಫಿಕ್ಸ್ ಹಾಗೂ ಎರಡು ಹೊಸ ಬಣ್ಣಗಳನ್ನು ಪಡೆದಿದೆ.

ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇಕೋ ಸ್ಪಿಡ್ ಇಂಡಿಕೇಟರ್, ಫೌರ್ ಇನ್ ಒನ್ ಸೀಟ್ ಓಪನರ್ ಸ್ವಿಚ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಸಹ ಇರಲಿದ್ದು, ಇದು ಆಕ್ಟಿವಾ 5ಜಿ ಸ್ಕೂಟರ್ ಮಾದರಿಯಲ್ಲಿನ ಬಹುತೇಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

ಇದಲ್ಲದೇ ನೂತನ ವಿ-ಆಕಾರದ ಫ್ರಂಟ್ ಎಲ್‌ಇಡಿ ಪೊಶಿಷನ್ ಲ್ಯಾಂಪ್, ಹೊಸತಾದ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳು ಸಹ ಇದರಲಿದ್ದು, ಸುರಕ್ಷಿತ ಚಾಲನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಹೀಗಾಗಿ ಡಿಯೋ ಸ್ಕೂಟರ್‌ಗಳಲ್ಲಿ ಕಾಂಬಿ ಬ್ರೇಕ್ ಸಿಸ್ಟಂ (ಸಿಬಿಎಸ್) ಜೊತೆ ಇಕ್ವಾಲೈಜರ್ ಟೆಕ್ನಾಲಜಿ ಇರಲಿದೆ.

ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

ಖರೀದಿಗೆ ಲಭ್ಯವಿರುವ ಬಣ್ಣಗಳು

ಈ ಹಿಂದೆ ಲಭ್ಯವಿರುವ ಬಣ್ಣಗಳ ಜೊತೆಗೆ ಹೊಸದಾಗಿ ಡ್ಯಾಜೆಲ್ ಯೆಲ್ಲೋ ಮೆಟಾಲಿಕ್, ಮ್ಯಾಟೆ ಎಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟೆ ಮಾರ್ಷಲ್ ಗ್ರಿನ್ ಮೆಟಾಲಿಕ್ ಮತ್ತು ಪರ್ಲ್ ಇಗ್ನಿಸ್ ಬ್ಲ್ಯಾಕ್ ಬಣ್ಣಗಳಲ್ಲಿ ಹೊಸ ಡಿಯೋ ಆಯ್ಕೆ ಮಾಡಬಹದು.

ವಿಶೇಷ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಹೋಂಡಾ ಡಿಯೋ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಣ್ಣದ ಬದಲಾವಣೆ ಸೇರಿದಂತೆ ಹಲವು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಹೊಸ ಡಿಯೋ ಸ್ಕೂಟರ್‌ಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಯಮಹಾ ರೇ ಜೆಡ್, ಟಿವಿಎಸ್ ಎನ್‌ಟಾರ್ಕ್ ಮತ್ತು ಹೀರೋ ಡ್ಯುಯೆಟ್ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Most Read Articles

Kannada
Read more on honda scooter
English summary
Read In Kannada: 2018 Honda Dio Launched In India; Prices Start At Rs 50,296
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X