ಬಿಡುಗಡೆಗೂ ಮುನ್ನ ಸದ್ದು ಮಾಡಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಟೀಸರ್

Written By:

ಇದೇ ತಿಂಗಳು ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಾಗುವ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಟೀಸರ್ ಬಿಡುಗಡೆ ಮಾಡಲಾಗಿದ್ದು, ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿರುವ ಅಪಾಚೆ ಆರ್‌ಟಿಆರ್ 160 ಬೈಕ್ ಹತ್ತಾರು ಕಾರಣಗಳಿಂದಾಗಿ ವಿಶೇಷ ಆವೃತ್ತಿಯಾಗುವ ತವಕದಲ್ಲಿದೆ.

ಬಿಡುಗಡೆಗೂ ಮುನ್ನ ಸದ್ದು ಮಾಡಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಟೀಸರ್

ಕಳೆದ ಮೂರು ನಾಲ್ಕು ತಿಂಗಳಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದಲ್ಲದೇ ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಅಪಾಚೆ ಆರ್‌ಟಿಆರ್ 160 ಇದೀಗ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಹೊಸ ಬೈಕಿನ ವಿನ್ಯಾಸಗಳು ಎಡ್ಜಿ ಡಿಸೈನ್‌ಗಳೊಂದಿಗೆ ಅಭಿವೃದ್ಧಿಗೊಂಡಿರುವುದು ಟೀಸರ್‌ನಲ್ಲಿ ಬಹಿರಂಗವಾಗಿದೆ.

ಬಿಡುಗಡೆಗೂ ಮುನ್ನ ಸದ್ದು ಮಾಡಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಟೀಸರ್

ಅಪಾಚೆ ಆರ್‌ಟಿಆರ್ 200 4ವಿ ಪ್ಯಾಟ್‌ಫಾರ್ಮ್ ಅಡಿಯಲ್ಲೇ ಅಪಾಚೆ ಆರ್‌ಟಿಆರ್ 160 ಬೈಕ್‌ಗಳನ್ನು ಸಿದ್ದಗೊಳಿಸಲಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಚಾರ್ಸಿ, ಬಾಡಿ ವರ್ಕ್ ಮತ್ತು ವೈಶಿಷ್ಟ್ಯತೆಗಳು ಹೊಸ ಬೈಕಿನ ಪ್ರಮುಖಾಂಶಗಳು.

ಬಿಡುಗಡೆಗೂ ಮುನ್ನ ಸದ್ದು ಮಾಡಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಟೀಸರ್

ಇದರ ಜೊತೆಗೆ ಗುರುತರ ಬದಲಾವಣೆಗಳಾದ ಸಿಂಗಲ್ ಪೀಸ್ ಹ್ಯಾಂಡಲ್‌ಬಾರ್, ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಹಿಂಬದಿಯ ಚಕ್ರಗಳಲ್ಲಿ ಮೊನೊಶಾರ್ಕ್ ಸಸ್ಪೆಷನ್, ಎಲ್ಇಡಿ ಟೈಲ್‌ ಲೈಟ್ ಮತ್ತು ಡ್ಯುಯಲ್ ಪೋರ್ಟ್ ಎಕ್ಸಾಸ್ಟ್ ಮಫ್ಲರ್ ಒದಗಿಸಲಾಗಿದೆ.

ಬಿಡುಗಡೆಗೂ ಮುನ್ನ ಸದ್ದು ಮಾಡಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಟೀಸರ್

ಎಂಜಿನ್ ಸಾಮರ್ಥ್ಯ

ಹೊಸ ಅಪಾಚೆ ಆರ್‌ಟಿಆರ್ 160 ಬೈಕ್‌ಗಳು 160 ಸಿಸಿ ಎಂಜಿನ್ ಹೊಂದಿರಲಿದ್ದು, ಡಿಸ್ಕ್ ಬ್ರೇಕ್ ಹಾಗೂ ಸಿಂಗಲ್ ಚಾನೆಲ್ ಎಬಿಎಸ್ ಟೆಕ್ನಾಲಜಿ ಜೊತೆಗೆ ಆಯ್ಕೆ ರೂಪದಲ್ಲಿ ರಿರ್ ಡಿಸ್ಕ್ ಬ್ರೇಕ್ ಕೂಡಾ ಲಭ್ಯವಿರಲಿದೆ.

ಬಿಡುಗಡೆಗೂ ಮುನ್ನ ಸದ್ದು ಮಾಡಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಟೀಸರ್

ಈ ಮೂಲಕ ಕಮ್ಯುಟರ್ ಮೋಟಾರ್ ಸೈಕಲ್ ವಿಭಾಗದಲ್ಲಿ ಹೊಸ ಸಂಚಲಯನ ಸೃಷ್ಠಿಸಲಿರುವ ಅಪಾಚೆ ಆರ್‌ಟಿಆರ್ 160 ಬೈಕ್‌ಗಳು, ಪರ್ಫಾಮೆನ್ಸ್ ಬೈಕ್ ಪ್ರಿಯರಿಗೆ ಹೊಸ ರೈಡಿಂಗ್ ಅನುಭವ ನೀಡಲಿವೆ.

ಟಿವಿಎಸ್ ಸಂಸ್ಥೆಯು ಬಿಡುಗಡೆ ಮಾಡಿರುವ ಅಪಾಚೆ ಆರ್‌ಟಿಆರ್ 160 ಟೀಸರ್ ಇಲ್ಲದೆ ವೀಕ್ಷಿಸಿ...

ಬಿಡುಗಡೆಗೂ ಮುನ್ನ ಸದ್ದು ಮಾಡಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಟೀಸರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ನ್ಯೂ ಡಿಸೈನ್ ಆಧರಿತ ಅಪಾಚೆ ಆರ್‌ಟಿಆರ್ 160 ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯ ತವಕದಲ್ಲಿದ್ದು, ಬಜಾಜ್ ಪಲ್ಸರ್ ಎನ್ಎಸ್160, ಸುಜುಕಿ ಜಿಕ್ಸರ್ ಮತ್ತು ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್‌ಗಳಲ್ಲಿ ಪೈಪೋಟಿ ನೀಡುವ ಸಾಧ್ಯತೆಗಳಿವೆ.

Read more on tvs apache
English summary
New TVS Apache RTR 160 Teased Ahead Of Launch.
Story first published: Tuesday, March 13, 2018, 19:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark