ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು..

ತನಾ ಕ್ಲಾಸಿಕ್ ಶೈಲಿಯ ಬೈಕ್‍‍ಗಳಿಂದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದ ರಾಯಲ್‍ ಎನ್‍‍ಫೀಲ್ಡ್ ತಮ್ಮ ಕ್ಲಾಸಿಕ್ ಶ್ರೇಣಿಯ ಬೈಕ್‍‍ಗಳಿಗೆ ಎಬಿಎಸ್ ಸಿಸ್ಟಮ್ ಅನ್ನು ಒದಗಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸಲಿದೆ.

By Rahul Ts

ತನಾ ಕ್ಲಾಸಿಕ್ ಶೈಲಿಯ ಬೈಕ್‍‍ಗಳಿಂದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದ ರಾಯಲ್‍ ಎನ್‍‍ಫೀಲ್ಡ್ ತಮ್ಮ ಕ್ಲಾಸಿಕ್ ಶ್ರೇಣಿಯ ಬೈಕ್‍‍ಗಳಿಗೆ ಎಬಿಎಸ್ ಸಿಸ್ಟಮ್ ಅನ್ನು ಒದಗಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸಲಿದೆ. ಇದೀಗ ಎಬಿಎಸ್ ಅಧಾರಿತ ಬೈಕ್‍‍ಗಳ ಚಿತ್ರಗಳು ಸೋರಿಕೆಯಾಗಿದ್ದು, ಇದೇ ಆಗಸ್ಟ್ 28ರಂದು ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು..

ಸೋರಿಕೆಯಾದ ಎಬಿಎಸ್ ಆಧಾರಿತ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಶ್ರೇಣಿಯ ಬೈಕ್‍‍ಗಳಲ್ಲಿ ಗಮನಿಸಿದರೆ ಹೊಸದಾಗಿ ಮೇಟ್ ಫಿನಿಶ್ ಕಲರ್ ಸ್ಕೀಮ್ ಅನ್ನು ಪಡೆದಿರಲಿದ್ದು, ಹೆಡ್‍‍ಲ್ಯಾಂಪ್ ಬೆಜೆಲ್ ಮತ್ತು ಎಕ್ಸಾಸ್ಟ್ ಮಫ್ಲರ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಬೈಕಿನ ಫ್ಯುಯಲ್ ಟ್ಯಾಂಕ್ 49 ಎಂಬ ಸ್ಪೆಷಲ್ ಸಂಖ್ಯೆಯನ್ನು ಅನ್ನು ಅಳವಡಿಸಲಾಗಿದ್ದು, ಸಂಖ್ಯೆಯನ್ನು ಬಿಳಿಬಣ್ಣದೊಂದಿಗೆ ಆರೆಂಜ್ ಮತ್ತು ಹಸಿರು ಬ್ಯಾಕ್‍‍ಗ್ರೌಂಡ್ ಅನ್ನು ನೀಡಲಾಗಿದೆ.

ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು..

ಕ್ಲಾಸಿಕ್ ರೇಂಜ್ ಬೈಕ್‍‍‍ಗಳು ಎಬಿಎಸ್ ಅನ್ನು ಪಡೆದುಕೊಂಡಿದ್ದೇ ಆದಲ್ಲಿ, ಅವುಗಳು ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಲ್ಲಿ ಸುರಕ್ಷಾ ಆಧಾರಿತ ಎಬಿಎಸ್ ಅನ್ನು ಪಡೆದ ಬೈಕ್‍‍ಗಳಾಗಲಿದೆ. ಈಗಾಗಲೆ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಎಬಿಎಸ್ ಆಧಾರಿತ ಬೈಕ್‍‍ಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ರವಾನಿಸುತ್ತಿದೆ.

ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು..

ಪ್ರಸ್ಥುತ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್ ಸಂಸ್ಥೆಯಲ್ಲಿ ಹೆಚ್ಚಾಗಿ ಮಾರಾಟಗೊಳ್ಳುತ್ತಿರುವ ಬೈಕ್ ಅಗಿದ್ದು, ಪ್ರತೀ ತಿಂಗಳು 35,000 ಬೈಕ್‍‍ಗಳು ಮಾರಾಟವಾಗುತ್ತಿದೆ. ಇದೀಗ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ನಲ್ಲಿ ಎಬಿಎಸ್ ಅನ್ನು ಅಳವಡಿಸಿ ಬಿಡುಗಡೆಗೊಳಿಸಿದ್ದೇ ಆದಲ್ಲಿ ಇನ್ನು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ.

ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು..

ಹೊಸ ಶ್ರೇಣಿಯ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್‍‍ಗಳು 346ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಅನ್ನು ಪಡೆದುಕೊಂಡಿರಲಿದ್ದು, 19.8 ಬಿಹೆಚ್‍‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ನೀಡುತ್ತದೆ. ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಅಳವಡಿಸಲಾಗಿದೆ.

ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು..

ಇದಲ್ಲದೇ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ತಮ್ಮ ಬೈಕ್‍‍ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ರಿಯರ್ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸುವ ಕಾರ್ಯದಲ್ಲಿದ್ದು, ಎಬಿಎಸ್ ಅನ್ನು ಹೊತ್ತು ಬಿಡುಗಡೆಗೊಳ್ಳಲಿರುವ ಹೊಸ ಬೈಕ್‍‍ಗಳು ಸಾಧಾರಣ ಬೈಕ್‍‍ಗಿಂತಾ ಬೆಲೆಯಲ್ಲಿ ಸುಮಾರು 10,000 ಸಾವಿರದಿಂದ 15000 ಸಾರಿವರದ ವರೆಗು ಅಧಿಕವಾಗಬಹುದು ಎನ್ನಲಾಗಿದೆ.

ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ತಮ್ಮ ಕ್ಲಾಸಿಕ್ ಶ್ರೇಣಿಯ ಬೈಕ್‍‍ಗಳಿಗೆ ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಯನ್ನು ಒದಗಿಸಿ ಬಿಡುಗಡೆಗೊಳಿಸುವ ಆಲೋಚನೆಯು ಮೆಚ್ಚಲೇ ಬೇಕಿದ್ದು, ಪ್ರಸ್ಥುತ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಅಧಿಕವಾಗಿ ಮಾರಾಟಗೊಳ್ಳುತ್ತಿರುವ ಬೈಕ್ ಆಗಿದ್ದು, ಏಪ್ರಿಲ್ 2019ರೊಳಗೆ ಸರ್ಕಾರದ ಆದೇಶದಂತೆ ಸಂಸ್ಥೆಯಲ್ಲಿನ ಎಲ್ಲಾ 125ಸಿಸಿ ಗಿಂತ ಹೆಚ್ಚಿನ ಬೈಕ್‍‍ಗಳಲ್ಲಿ ಎಬಿಎಸ್ ಅನ್ನು ಅಳವಡಿಸಲಿ ಎಂಬ ನಿರೀಕ್ಷೆ ಇದೆ.

Most Read Articles

Kannada
Read more on royal enfield safety
English summary
Royal Enfield Classic 350, Bullet 350 And Bullet ES To Get ABS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X