ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ರಾಯಲ್ ಎನ್‍ಫೀಲ್ಡ್ ಬೈಕುಗಳು ಕೆಲ ದಿನಗಳ ಹಿಂದಷ್ಟೆ ತಮ್ಮ ಬುಲೆಟ್ ಬೈಕ್‍‍ಗಳಿಗೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸುವ ಮೂಲಕ ಬುಲೆಟ್ ಪ್ರಿಯರಿಗೆ ರಾಯಲ್ ಎನ್‌ಫೀಲ್ಡ್ ಹೊಸ ಸುದ್ದಿ ನೀಡಿತ್ತು.

By Rahul Ts

ತಮ್ಮ ಕ್ಲಾಸಿಕ್ ಶೈಲಿ ಹಾಗೂ ಎಂಜಿನ್ ಸಾಮರ್ಥ್ಯದಿಂದಲೇ ಜನಪ್ರಿಯವಾಗಿರುವ ರಾಯಲ್ ಎನ್‍ಫೀಲ್ಡ್ ಬೈಕುಗಳು ಕೆಲ ದಿನಗಳ ಹಿಂದಷ್ಟೆ ತಮ್ಮ ಬುಲೆಟ್ ಬೈಕ್‍‍ಗಳಿಗೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸುವ ಮೂಲಕ ಬುಲೆಟ್ ಪ್ರಿಯರಿಗೆ ರಾಯಲ್ ಎನ್‌ಫೀಲ್ಡ್ ಹೊಸ ಸುದ್ದಿ ನೀಡಿತ್ತು.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಜನಪ್ರಿಯ ಹಿಮಾಲಯನ್ ಬೈಕುಗಳಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿದ್ದು, ಇದರ ಜೊತೆಗೆ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಹಾಗೂ ಥಂಡರ್‍‍ಬರ್ಡ್ ಬೈಕ್‌ಗಳಲ್ಲೂ ಕೂಡಾ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸುವ ಬಗ್ಗೆ ಸುಳಿವು ನೀಡಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂಗಳು ಮುಂಭಾಗದ ಚಕ್ರಗಳಿಗೆ ಮಾತ್ರ ಅಳವಡಿಸಲಾಗುತ್ತಿದ್ದು, ಹಿಂಭಾಗದ ಚಕ್ರಗಳಲ್ಲಿ ಪ್ಯಾನಿಕ್ ಬ್ರೇಕಿಂಗ್ ಸನ್ನಿವೇಶದಲ್ಲಿ ಲಾಕ್ ಆಗುವ ತಂತ್ರಜ್ಞಾನ ಅಳವಡಿಸಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ಡ್ಯುಯಲ್ ಚಾನೆಲ್ ಎಬಿಎಸ್ ಯುನಿಟ್ ಎರಡೂ ಚಕ್ರಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಬ್ರೇಕ್ ಹಾಕಿದಾಗ ಲಾಕ್ ಮಾಡದಂತೆ ತಡೆಯಲು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಆರ್‌ಇ ಸಂಸ್ಥೆಯು ಬಿಡಗಡೆಗೊಳಿಸಲಿರುವ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕುಗಳಿಗೂ ಕೂಡ ಡ್ಯುಯಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಿವೆ ಎನ್ನಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

2018 ಏಪ್ರಿಲ್ 1 ರಿಂದ ಸರ್ಕಾರದ ಆದೇಶದಂತೆ ಎಲ್ಲಾ 125ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಕಡ್ಡಾಯವಾಗಿ ಅಳವಡಿಸಲೇಬೇಕಾಗಿದ್ದು, ಈ ನಿಟ್ಟಿನಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತನ್ನು ಎಲ್ಲಾ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿವೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ಎಬಿಎಸ್ ಬ್ರೇಕಿಂಗ್ ಸಿಸ್ಟಂನಿಂದಾಗಿ ಬೈಕ್ ಸವಾರರಿಗೆ ಹೆಚ್ಚಿನ ಸುರಕ್ಷತೆ ಸಿಗಲಿದ್ದು, ಬೈಕ್ ಸ್ಕಿಡ್ ತೊಂದರೆಯಿಂದ ಮುಕ್ತಿ ಸಿಗಲಿದೆ. ಇದೇ ಕಾರಣಕ್ಕೆ ಹಿಮಾಲಯನ್ ಬೈಕ್‌ಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅಳವಡಿಕೆಯು ಮಹತ್ವದ ನಿರ್ಧಾರ ಎನ್ನಬಹುದು.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಫ್ಯುಯಲ್ ಇಂಜೆಕ್ಟೆಡ್ ಹಿಮಾಲಯನ್ ಬೈಕುಗಳು 2017ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡಗಡೆಗೊಳಿಸಿದ್ದು, ಜನವರಿ 2018 ರಲ್ಲಿ ರಾಯಲ್ ಎನ್‍ಫೀಲ್ಡ್ ಅಡ್ವೆಂಚರ್ ಮೋಟಾರ್‍‍ ಸೈಕಲ್‍‍ನ ಸ್ಲೀಟ್ ಎಡಿಷನ್ ಕೂಡಾ ಪರಿಚಯಿಸಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕುಗಳು 411ಸಿಸಿ ಸಿಂಗಲ್ ಸಿಲಿಂಡರ್ ಏರ್ ಅಥವಾ ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 24.5 ಬಿಹೆಚ್‍ಪಿ ಹಾಗು 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ, ಈಗಾಗಲೇ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಡ್ಯುಯಲ್ ಚಾನೆಲ್ ಹೊಂದಿರುವ ಹಿಮಾಲಯನ್ ಬೈಕುಗಳನ್ನು ವಿದೇಶದ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿದ್ದು ದೇಶಿಯ ಮಾರುಕಟ್ಟೆಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿರುವ ಹಿಮಾಲಯನ್ ಬೈಕುಗಳನ್ನು ಮಾರಾಟಗೊಳಿಸುವುದು ದೊಡ್ಡ ವಿಷಯ ಅಲ್ಲವೇ ಅಲ್ಲ ಎನ್ನಬಹುದು.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿವೆ ಆರ್‌ಇ ಹಿಮಾಲಯನ್ ಬೈಕ್‌ಗಳು...

ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 1.67 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಗ್ರಾಹಕರು ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅಳವಡಿಸಲಾಗಿರುವ ಹೊಸ ಬೈಕ್ ಮಾದರಿಗಳು ಬೇಕಾದಲ್ಲಿ ಹೆಚ್ಚುವರಿ ರೂ.10 ರಿಂದ ರೂ.12 ಸಾವಿರದ ಮೊತ್ತ ನೀಡಿ ಖರೀದಿಸಬೇಕಾಗುತ್ತೆ.

Most Read Articles

Kannada
Read more on royal enfield
English summary
Royal Enfield Himalayan To Get Dual-Channel ABS.
Story first published: Wednesday, April 11, 2018, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X