ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಕ್ಲಾಸಿಕ್ ವಿನ್ಯಾಸದ ಮತ್ತು ಅಧಿಕ ಸಾಮರ್ಥ್ಯದ ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ, ಜನಪ್ರಿಯತೆಯನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಬಹುನಿರೀಕ್ಷಿತ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ಗಳನ್ನು ನವೆಂಬರ್ 14ರಂದು ಬಿಡುಗಡೆಗೊಳಿಸಿತ್ತು.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಆದರೆ ಇದೀಗ ಬಿಡುಗಡೆಗೊಂಡ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ಗಳಿಗಾಗಿ ಬೇಡಿಕೆಯು ಹೆಚ್ಚುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆಯುತ್ತಿದೆ. ಆದ್ದರಿಂದ ಸಂಸ್ಥೆಯು ಹೊಸ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಮಾಡಿರುವ ಗ್ರಾಹಕರ ಕೈಗೆ ಬೈಕ್ ಸೇರಲು ಮೂರು ತಿಂಗಳು ಕಾಯಲೇ ಬೇಕಂತೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ನೀವಿಂದು ಹೊಸ ಆರ್‍ಇ ಟ್ವಿನ್ ಬೈಕ್‍ಗಳನ್ನು ಬುಕ್ಕಿಂಗ್ ಮಾಡಿಕೊಂಡಿದ್ದಲ್ಲಿ, ಡೆಲಿವರಿಯನ್ನು ಪಡೆಯಲು ತಪ್ಪದೇ ಮೂರು ತಿಂಗಳು ಕಾಯಬೇಕಿದೆ. ಮೊದಲನೆಯ ಬ್ಯಾಚ್‍ನಲ್ಲಿ ಇಂಟರ್‍‍ಸೆಪ್ಟರ್ 650 ಬೈಕ್‍ಗಳನ್ನು ಬುಕ್ ಮಾಡಲಗಿದ್ದ ಗ್ರಾಹಕರ ಕೈಗೆ 2019ರ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಕೈ ಸೇರಲಿದೆ ಎನ್ನಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಇನ್ನು ದೇಶದಲ್ಲಿನ ಅನೇಕ ರಾಯಲ್ ಎನ್‍ಫೀಲ್ಡ್ ಅಧಿಕೃತ ಶೋರಂಗಳಲ್ಲಿ ಇಂಟರ್‍‍ಸೆಪ್ಟರ್ 650 ಬೈಕ್‍ಗಳ ಟೆಸ್ಟ್ ರೈಡಿಂಗ್ ಅನ್ನು ಸಹ ಪ್ರಾರಂಭಿಸಿದ್ದು, ಶೀಘ್ರವೇ ಕಾಂಟಿನೆಂಟಲ್ ಜಿಟಿ 650 ಬೈಕಿನ ಟೆಸ್ಟ್ ಡ್ರೈವಿಂಗ್ ಅನ್ನು ಸಹ ಪ್ರಾರಂಭಿಸಲಿದ್ದಾರೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಗಾಗಿ ಬುಕಿಂಗ್ ಪ್ರಕ್ರಿಯೆಯ ಬಗ್ಗೆ ಒಳ್ಳೆಯ ವಿಷಯ ಕೇಂದ್ರೀಕೃತವಾಗಿದೆ. ನಿಮ್ಮ ಬುಕಿಂಗ್ ನೇರವಾಗಿ ರಾಯಲ್ ಎನ್ಫೀಲ್ಡ್ ಫ್ಯಾಕ್ಟರಿಗೆ ಹೋಗಲಿದೆ ಜೊತೆಗೆ ವಿತರಣಾ ಸಮಯಾವಧಿಗೆ ಯಾವುದೇ ನಿಯಂತ್ರಣವನ್ನು ಹೊಂದಿರುವುದಿಲ್ಲ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಸಾಧಾರಣವಾಗಿ ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಡಿಮ್ಯಾಂಡ್ ಇದ್ದೇ ಇರುತ್ತದೆ, ಆದರೆ ಸಂಸ್ಥೆಯು ನೂತನವಾಗಿ ಬಿಡುಗಡೆಗೊಳಿಸಿದ ಈ 650 ಟ್ವಿನ್ ಬೈಕ್‍ಗಳ ಬಗ್ಗೆ ಮಾಹಿತಿ ತಿಳಿಯಲು ಮುಂದಕ್ಕೆ ಓದಿರಿ..

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಬಿಡುಗಡೆಯಾದ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.50 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ 650 ರೂ. 2.65 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 300 ಬೈಕ್‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಬುಕ್ಕಿಂಗ್ ಹೇಗೆ.?

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ಗಳನ್ನು ಖರೀದಿಸಲು ಇಚ್ಛಿಸುವ ಗ್ರಾಹಕರು, ಸಮೀಪದಲ್ಲಿರುವ ರಾಯಲ್ ಎನ್‍ಫೀಲ್ಡ್ ಡೀಲರ್‍‍ನ ಹತ್ತಿರ ರೂ.5000 ಮುಂಗಡ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಈ ಎರಡೂ ಬೈಕ್‍‍ಗಳು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ನೋಟವನ್ನು ಪಡೆದುಕೊಂಡಿದೆ. ಕಾಂಟಿನೆಂಟಲ್ ಜಿಟಿ 650 ಕೆಫ್ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಬೈಕ್‍ಗಳ ವಿನ್ಯಾಸ

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍‍‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಕೇಫ್ ರೇಸರ್ ವಿನ್ಯಾಸವನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 1950ರ ದಶಕದಲ್ಲಿನ ಕೆಫ್‍ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಕೆತ್ತಲಾದ ಫ್ಯುಯಲ್ ಟ್ಯಾಂಕ್, ತೂಕದ ನಿಲುವು, ರಿಯರ್-ಫೂಟ್ ಪೆಗ್ಸ್ ಮತ್ತು ಹ್ಯಾಂಡಲ್‍ಬಾರ್‍‍ನ ಮೇಲೆ ಕ್ಲಿಪ್ ಅನ್ನು ಒದಗಿಸಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಎಂಜಿನ್ ವೈಶಿಷ್ಟ್ಯತೆ

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47ಬಿಹೆಚ್‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಬಣ್ಣಗಳು

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ವಿವಿಧ ಮತ್ತು ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇಂಟರ್‍‍ಸೆಪ್ಟರ್ 650 - ಮಾರ್ಕ್ ತ್ರೀ, ಗ್ಲಿಟ್ಟರ್ & ಡಸ್ಟ್, ಆರೆಂಜ್ ಕ್ರಶ್, ರ್‍ಯಾವಿಶಿಂಗ್ ರೆಡ್, ಸಿಲ್ವರ್ ಸ್ಪೆಕ್ಟ್ರಾ ಮತ್ತು ಬೇಕರ್ ಎಕ್ಸ್ಪ್ರೆಸ್ ಎಂಬ 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಆರ್‍ಇ 650 ಟ್ವಿನ್ ಬೈಕ್‍‍ಗಳನ್ನು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಇನ್ನು ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ - ಬ್ಲಾಕ್ ಮ್ಯಾಜಿಕ್, ವೆಂಚುರ ಬ್ಲೂ, ಮಿಸ್ಟರ್ ಕ್ಲೀನ್, ಡಾ.ಮೈಹೆಂ ಮತ್ತು ಐಸ್ ಕ್ವೀನ್ ಎಂಬ 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Source: Cartoq

Most Read Articles

Kannada
Read more on royal enfield sale price
English summary
Royal Enfield Interceptor & Continental GT650: Waiting periods, delivery timelines revealed.
Story first published: Monday, November 26, 2018, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X