ಬಿಡುಗಡೆಗೊಂಡ 2018ರ ಹಯಾಬುಸಾ- ಹೊಸ ಬೈಕಿನ ವಿಶೇಷತೆಗಳೇನು? ಬೆಲೆ ಎಷ್ಟು?

Posted By: Rahul TS
Recommended Video - Watch Now!
India Car Stunts Caught On Camera

ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಸುಜುಕಿಯು ಭಾರತದಲ್ಲಿ 2018ರ ಹಯಾಬುಸಾ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.13.87 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಹೊಸ ಬಣ್ಣ ಮತ್ತು ಆಕರ್ಷಕವಾದ ಗ್ರಾಫಿಕ್ಸ್ ಬಾಡಿಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ 2018ರ ಹಯಾಬುಸಾ- ಹೊಸ ಬೈಕಿನ ವಿಶೇಷತೆಗಳೇನು? ಬೆಲೆ ಎಷ್ಟು?

2018ರ ಸುಜುಕಿ ಹಯಾಬುಸಾ ಪರ್ಲ್ ಮಿರಾ ರೆಡ್/ಪರ್ಲ್ ಗ್ಲೇಸಿಯರ್ ವೈಟ್ ಮತ್ತು ಗ್ಲಾಸ್ ಸ್ಪಾರ್ಕ್ ಬ್ಲಾಕ್ ಬಣ್ಣಗಳೊಂದಿಗೆ ಲಭ್ಯವಿದ್ದು, ಗ್ಲಾಸ್ ಸ್ಪಾರ್ಕ್ ಬ್ಲಾಕ್ ಬಣ್ಣದ ಆವೃತಿಯು 2017 ಹಯಾಬುಸಾ ಬೈಕಿನ ಬಣ್ಣವನ್ನು ಕೆಂಪು ಬಣ್ಣದಿಂದ ಆವರಿಸಿದೆ. ಇನ್ನು ಈ ಬೈಕ್ ಬಿಳಿ ಬಣ್ಣವನ್ನು ಹೊಂದಿರುವುದರಿಂದ ಇದರ ಲುಕ್ ಕೂಡಾ ಆಕರ್ಷಕವಾಗಿದೆ.

ಬಿಡುಗಡೆಗೊಂಡ 2018ರ ಹಯಾಬುಸಾ- ಹೊಸ ಬೈಕಿನ ವಿಶೇಷತೆಗಳೇನು? ಬೆಲೆ ಎಷ್ಟು?

2016ರಲ್ಲಿ ಸುಜುಕಿ ಮೊಟಾರ್ ಸೈಕಲ್ ಇಂಡಿಯಾ ಸಂಸ್ಥೆಯು ಸ್ಥಳೀಯವಾಗಿ ಜೋಡಣೆಯಾದ GSX1300R ಹಯಾಬುಸಾವನ್ನು ಅಗ್ಗದ ಬೆಲೆಯೊಂದಿಗೆ ಮಾರಾಟ ಮಾಡಲು ಪ್ರಾರಂಭಿಸಿದ್ದು, CKD(ಕಂಪ್ಲೀಟ್ ನಾಕ್ ಡೌನ್) ಮುಖಾಂತರ ಮಾರಾಟವಾಗುತ್ತಿದೆ ಮತ್ತು ಬೈಕಿನ ಪಾರ್ಟ್ ಗಳನ್ನು ಗುರುಗ್ರಾಮ್‌ನಲ್ಲಿರುವ SIMPL ಕಾರ್ಖಾನೆಯಲ್ಲಿ ಜೋಡಿಸಲ್ಪಟ್ಟಿದೆ.

ಬಿಡುಗಡೆಗೊಂಡ 2018ರ ಹಯಾಬುಸಾ- ಹೊಸ ಬೈಕಿನ ವಿಶೇಷತೆಗಳೇನು? ಬೆಲೆ ಎಷ್ಟು?

2018ರ ಹಯಾಬುಸಾ ಬೈಕ್ ಮಾದರಿಯು 1,340 ಸಿಸಿ ಇನ್-ಲೈನ್, ನಾಲ್ಕು ಸಿಲಿಂಡರ್, ಫ್ಯೂಲ್-ಇಂಜೆಕ್ಟೆಡ್, ಲಿಕ್ವಿಡ್ ಕೂಲ್ಡ್ DOHC ಎಂಜಿನ್ ನೊಂದಿಗೆ 197-ಬಿಹೆಚ್ ಪಿ ಮತ್ತು 155-ಎನ್ಎಂ ಟಾರ್ಕ್ ಗಳನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ 2018ರ ಹಯಾಬುಸಾ- ಹೊಸ ಬೈಕಿನ ವಿಶೇಷತೆಗಳೇನು? ಬೆಲೆ ಎಷ್ಟು?

ಇದರೊಂದಿಗೆ ಬೈಕಿನ ಎಂಜಿನನ್ನು 5-ಸ್ಪೀಡ್ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದ್ದು, ಈ ಸೂಪರ್ ಬೈಕ್ ಕೇವಲ 2.74 ಸೆಕೆಂಡಿನಲ್ಲಿ 0-100 km/hನಿಂದ 299 km/h ರವರೆಗೆ ಅಲ್ಪಾವಧಿಯಲ್ಲಿ ಚಲಾಯಿಸಬಹುದು.

ಬಿಡುಗಡೆಗೊಂಡ 2018ರ ಹಯಾಬುಸಾ- ಹೊಸ ಬೈಕಿನ ವಿಶೇಷತೆಗಳೇನು? ಬೆಲೆ ಎಷ್ಟು?

ಫೆಬ್ರವರಿ 7ರಿಂದ 14ರ ತನಕ ನಡೆಯಲಿರುವ ಆಟೊ ಎಕ್ಸ್ಪೋ 2018ರಲ್ಲಿ ಸುಜುಕಿ ಮೋಟಾರ್ ಸೈಕಲ್ ತಂಡವು 2018ರ ಹೊಸ ಹಯಾಬುಸಾ ಬೈಕನ್ನು ಪ್ರದರ್ಶನಗೊಳಿಸಲಿದ್ದು ಇದರ ಜೊತೆಗೆ ಬರ್ಗ‌ಮನ್ ಸ್ಟ್ರೀಟ್ ಮತ್ತು ವಿ-ಸ್ಟ್ರೋಮ್ 650 ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಲಿದೆ.

ಬಿಡುಗಡೆಗೊಂಡ 2018ರ ಹಯಾಬುಸಾ- ಹೊಸ ಬೈಕಿನ ವಿಶೇಷತೆಗಳೇನು? ಬೆಲೆ ಎಷ್ಟು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಹಯಾಬುಸಾ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿದ್ದು, 2017ರಿಂದ ಸುಜುಕಿ ಹಯಾಬುಸಾ ಮಾದರಿಗಳು ಮೇಡ್ ಇನ್ ಇಂಡಿಯಾ ಖ್ಯಾತಿಯೊಂದಿಗೆ ಮಾರಾಟಗೊಳ್ಳುತ್ತಿವೆ. ಈಗ 2018ರ ಹಯಾಬುಸಾ ಬೈಕ್ ಬಿಡುಗಡೆಯಾಗಿದ್ದು, ಈ ಮೂಲಕ ಮತ್ತಷ್ಟು ಕುತೂಹಲ ಹುಟ್ಟುಹಾಕಿರುವ ಸುಜುಕಿಯು ಕವಾಸಕಿಯ ZX-14R ಬೈಕಿಗೆ ಪೈಪೋಟಿಯನ್ನು ನೀಡಲಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on suzuki hayabusa
English summary
2018 Suzuki Hayabusa Launched In India.
Story first published: Thursday, February 1, 2018, 19:39 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark