ಹೆಲ್ಮೆಟ್ ರಹಿತ ಚಾಲಕರಿಗೆ ಚೆನ್ನೈ ಪೊಲೀಸರಿಂದ ಹೊಸ ಪಾಠ..
ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆಯು ಬಹಳ ಅಪಾಯಕಾರಿ. ಹೆಲ್ಮೆಟ್‍ನ ಕುರಿತಾಗಿ ಹಲವಾರು ಜಾಹಿರಾತುಗಳು ಮತ್ತು ಜನಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಹಾಗು ಪೊಲೀಸರು ಹಮ್ಮಿಕ್ಕೊಳ್ಳುತ್ತಿದ್ದರು ಈಗಲೂ ಕೂಡಾ ಹಲವರು ಇದನ್ನು ನಿರ್ಲಕ್ಷ್ಯ ಮಾಡುತ್ತಾ ಹೆಲ್ಮೆಟ್ ಇಲ್ಲದೆಯೆ ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಿದ್ದಾರೆ.

ಯಾವುದೇ ಆಸ್ಪತ್ರೆಯ ಅಪಘಾತದ ವಾರ್ಡ್‍ಗೆ ಹೋಗಿ ನೋಡಿದಾಗ ಅಲ್ಲಿನ ದೃಷ್ಯವೇ ನಮಗೆ ಬಹಳ ನೋವನ್ನುಂಟು ಮಾಡುತ್ತದೆ. ರಸ್ತೆ ಅಪಾಘಾತಕ್ಕೆ ಒಳಗಾದವರನು ಇಲ್ಲಿಗೆ ಕರೆತರಲಾಗುತ್ತದೆ ಮತ್ತು ಕೆಲವರ ಪರಿಸ್ಥಿತಿಯು ನಿರ್ಣಾಯಕವಾಗಿದ್ದು, ಅಲ್ಲಿಯೆ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಚೆನ್ನೈ ನಗರದ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘನಕಾರಿಗೆ ಪಾಠವನ್ನು ಕಲಿಸಲು ಮತ್ತೊಂದು ಹೆಜ್ಜೆ ಮುಂದೆ ಹಾಕಿದ್ದು, ಹೆಲ್ಮೆಟ್ ಇಲ್ಲದೆಯೆ ಸವಾರಿ ಮಾಡುವವರನ್ನು ಹಿಡಿದು ಆ ನಗರದಲ್ಲಿನ ಸರ್ಕಾರಿ ಕಿಲ್ಪಾಡ್ ಮೆಡಿಕಲ್ ಆಸ್ಪತ್ರೆಯ ಅಪಘಾತಗಳ (Casualty)ವಾರ್ಡ್‍ಗೆ ಕರೆದೊಯ್ದಿದ್ದಾರೆ.

ಅಲ್ಲಿ ಹೆಲ್ಮೆಟ್ ರಹಿತ ಚಾಲನೆಯಿಂದಾಗಿ ಗಾಯ, ಅಪಘಾತ ಮತ್ತು ಮರಣದ ಪ್ರಕರಣಗಳಿಗೆ ಸಾಕ್ಷಿಯಾದವರನ್ನು ತೋರಿಸಿ, ಅವರ ಕುಟುಂಬಗಳು ಮತ್ತು ಪ್ರೀತಿಪ್ರಿಯರು ತಮ್ಮ ಗುಣಮುಕ್ತದ ಬಗ್ಗೆ ಅನುಕಂಪ ತೋರುತ್ತಿರುವವರ ಭಾವನೆಗಳ ಬಗ್ಗೆ ಅಲ್ಲಿ ಹೇಳಲಾಗಿದೆ.

ಸಂಚಾರಿ ನಿಮಯಗಳನ್ನು ಉಲ್ಲಂಘನೆ ಮಾಡಿದವರಿಗೆ ಇದು ಮುಂದಿನ ಹಂತದ ಸಂದೇಶವಾಗಿ ಇದನ್ನು ಮಾಡಲಾಗಿದ್ದು, ಟ್ರಾಫಿಕ್ ನಿಯಮಗಳನ್ನು ಅನುಸರಿಸದಿದ್ದರೆ ಇಂತಹ ಪರಿಸ್ಥಿತಿಯೆ ಅವರಿಗೂ ಬರುವುದಾಗಿ ಹೆಚ್ಚರಿಸಲಾಗಿದೆ.

ದ್ವಿಚಕ್ರ ವಾಹನಗಳಿಗಾಗಿ ಇರುವ ಟಾಫಿಕ್ ನಿಯಮಗಳು ನಮ್ಮ ಶ್ರೇಯಸ್ಸಿಗಾಗಿಯೆ ಮೀಸಲಾಗಿದ್ದು, ಆದರೆ ಇವುಗಳನ್ನು ಇನ್ನೂ ಬಹುತೇಕ ದ್ವಿಚಕ್ರ ವಾಹನ ಚಾಲಕರು ನಿರ್ಲಕ್ಷ್ಯ ಮಾಡುತ್ತಿರುವುದಲ್ಲದೇ ತಮ್ಮ ಸುರಕ್ಷತೆಯ ಆಗಮನಕ್ಕಾಗಿ ಮನೆಯಲ್ಲಿ ಕಾಯುತ್ತಿರುವ ಜೀವಿಗಳ ಬಗ್ಗೆ ಕೂಡ ಅವರು ಮರೆಯುತ್ತಿದ್ದಾರೆ.

ಹಾನ್ ಹಾಪ್ಕಿನ್ಸ್ ಮತ್ತು ಐಐಟಿ ಮುಂಬೈರವರು ಇತ್ತೀಚೆಗಿನ ಸುರಕ್ಷತಾ ಸಮೀಕ್ಷೆಯ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದು, ಈ ವರದಿಯ ಪ್ರಕಾರ ಜನರು ಇನ್ನು ವಾಹನ ಚಾಲನೆ ವೇಳೆ ಪ್ರಾಣವನ್ನು ಲೆಕ್ಕಿಸುತ್ತಿಲ್ಲ ಎನ್ನಬಹುದು.

ಏಕೆಂದರೆ ವರರಿಯ ಪ್ರಕಾರ ಮುಂಬೈನಲ್ಲಿನ 20,00,000 ಲಕ್ಷಕ್ಕು ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಅವರಲ್ಲಿ ಕೇವಲ ಶೇಕಡ 1ರಷ್ಟು ಅಂದರೆ 20,000 ಸಾವಿರ ಮಂದಿ ಹಿಂಬದಿಯ ಸವಾರರು ಮಾತ್ರ ಹೆಲ್ಮೆಟ್ ಧರಿಸುತ್ತಿದ್ದಾರಂತೆ.

2015-2017ರ ಅವಧಿಯಲ್ಲಿ ಮುಂಬೈಯಲ್ಲಿ ದ್ವಿಚಕ್ರವಾಹನಗಳ ಒಟ್ಟು 404 ಮಾರಣಾಂತಿಕ ಅಪಘಾತಗಳು ಸಂಭವಿಸಿದವು ಮತ್ತು ಅವುಗಳಲ್ಲಿ ಹೆಚ್ಚಿನ ಪ್ರಾಣಗಳು ಪಿಲಿಯನ್ ರೈಡರ್ಸ್ ಆಗಿದೆ ಎಂದರೆ ನೀವೆ ಯೋಚನೆ ಮಾಡಿ.

ರೋಡ್ ಸೇಫ್ಟಿ ಕುರಿತಾಗಿ ಸುಪ್ರೀಂ ಕೋರ್ಟ್ ಸಮಿತಿಯು ಹೆಲ್ಮೆಟ್‍ಗಳನ್ನು ದ್ವಿಚಕ್ರವಾಹನಗಳ ಸವಾರರಿಗೆ ಮಾತ್ರವಲ್ಲದೆ ಹಿಂಬದಿಯ ಸವಾರರಿಗೂ ಸಹ ಹೆಲ್ಮೆಟ್ ಧರಿಸಲು ತೀರ್ಪನ್ನು ನೀಡಿದೆ. ಆದರೆ ಎಷ್ಟು ಮಂದಿ ಈ ಆದೇಶವನ್ನು ಅನುಸರಿಸುತ್ತಿದ್ದಾರೆ ಹಾಗು ಎಷ್ಟು ಮಂದಿ ಇದನ್ನು ಗಾಳಿಗೆ ಬಿಟ್ಟಿದ್ದಾರೆ ಎಂಬುದು ಈ ವರದಿಯು ಹೇಳುತ್ತದೆ.

ಇನ್ನು ಇಂತಹ ಕಾರ್ಯಕ್ರಮಗಳನ್ನು ನಮ್ಮ ರಾಜ್ಯದ ಪೊಲೀಸರು ಹಮ್ಮಿಕೊಂದು ಹೆಲ್ಮೆಟ್ ರಹಿತ ಚಾಲಕರಿಗೆ ಸರಿಯಾದ ಪಾಠವನ್ನು ಕಲಿಸಲು ಮುಂದಾದರೆ, ಕೆಲವರಾದರೂ ಟ್ರಾಫಿಕ್ ನಿಯಮದ ಬಗ್ಗೆ ಮತ್ತು ತಮ್ಮ ಹಾಗು ತಮ್ಮ ಮನೆಯವರ ಬಗ್ಗೆ ಚಿಂತಿಸುತ್ತಾರೆ ಎಂಬುದು ನಮ್ಮ ಭರವಸೆಯಾಗಿದೆ.


Click it and Unblock the Notifications








