TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮಾರಾಟದಲ್ಲಿ ಕೆಟಿಎಂ ಆರ್‌ಸಿ390 ಹಿಂದಿಕ್ಕಿದ ಟಿವಿಎಸ್ ಅಪಾಚೆ ಆರ್‌ಆರ್310
ದೇಶಿಯ ಮಾರುಕಟ್ಟೆಯಲ್ಲಿನ ಪ್ರವೇಶ ಮಟ್ಟದ ಕ್ರೀಡಾ ಬೈಕ್‌ಗಳ ವಿಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಟಿವಿಎಸ್ ಅಪಾಚೆ ಆರ್‌ಆರ್ ಬೈಕ್‌ಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೆಟಿಎಂ ಆರ್‌ಸಿ390, ನಿಂಜಾ 300, ಬೆನೆಲ್ಲಿ 302 ಆರ್ ಮತ್ತು ಬಜಾಜ್ ಡೊಮಿನಾರ್ 400 ಬೈಕುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.
ಕಳೆದ ಡಿಸೆಂಬರ್‌ನಲ್ಲಿ ಅಪಾಚೆ ಆರ್‌ಆರ್310 ಬೈಕ್‌ಗಳನ್ನು ಬಿಡುಗಡೆ ಮಾಡಿದ್ದ ಟಿವಿಎಸ್ ಸಂಸ್ಥೆಯು ಇದೀಗ ಹೊಸ ಬೈಕ್‌ಗಳ ಬೆಲೆಯಲ್ಲಿ ಭಾರೀ ಬದಲಾವಣೆ ತಂದಿದೆ. ಈ ಹಿಂದೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.05 ಲಕ್ಷ ಬೆಲೆ ಹೊಂದಿದ್ದ ಆರ್‌ಆರ್310 ಬೈಕ್‌ಗಳ ಬೆಲೆಯನ್ನು ಇದೀಗ ಹೆಚ್ಚುವರಿಯಾಗಿ ರೂ.18 ಸಾವಿರ ಏರಿಕೆ ಮಾಡಲಾಗಿದೆ.
ಹೀಗಿದ್ದರೂ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಅಪಾಚೆ ಆರ್‌ಆರ್310 ಬೈಕ್‌ಗಳು ಕಳೆದ ಮಾರ್ಚ್ ತಿಂಗಳಿನಲ್ಲಿ ಕೆಟಿಎಂ ಆರ್‌ಸಿ390 ಬೈಕುಗಳಿಂತ ಹೆಚ್ಚಿನ ಮಟ್ಟದಲ್ಲಿ ಮಾರಾಟಗೊಂಡಿರುವುದು ಆಟೋ ಉದ್ಯಮ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮಾರ್ಚ್ ಅವಧಿಯಲ್ಲಿ ಕೆಟಿಎಂ ಆರ್‌ಸಿ390 ಬೈಕ್‌ಗಳು 719 ಯೂನಿಟ್ ಮಾರಾಟಗೊಂಡರೇ, ಅದೇ ಅವಧಿಯಲ್ಲಿ ಗ್ರಾಹಕರ ಆಕರ್ಷಣೆಗೆ ಕಾರಣವಾದ ಅಪಾಚೆ ಆರ್‌ಆರ್310 ಬೈಕ್‌ಗಳು 983 ಯುನಿಟ್‌ಗಳು ಮಾರಾಟಗೊಳ್ಳುವ ಮೂಲಕ ಕೆಟಿಎಂ ಸಂಸ್ಥೆಗೆ ಟಕ್ಕರ್ ನೀಡಿದೆ.
ಸದ್ಯ ಅಪಾಚೆ ಆರ್‌ಆರ್310 ಬೈಕ್‌ಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಹೊಸ ಬೈಕ್ ಖರೀದಿಗೆ ಕನಿಷ್ಠ ಅಂದ್ರು 3 ರಿಂದ 4 ತಿಂಗಳ ಕಾಯಲೇ ಬೇಕಾದ ಅನಿವಾರ್ಯತೆಯಿದೆ. ಯಾಕೇಂದ್ರೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೈಕ್ ಉತ್ಪಾದನೆ ಮಾಡುತ್ತಿರುವ ಟಿವಿಎಸ್, ಅಪಾಚೆ ಆರ್‌ಆರ್310 ಮಾರಾಟ ಪ್ರಕ್ರಿಯೆ ಹೊಸ ತಂತ್ರ ರೂಪಿಸುತ್ತಿದೆ.
ಇನ್ನು ಬಿಎಂಡಬ್ಲ್ಯು ಇಂಜಿನಿಯರಿಂಗ್‌ನ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಆಯ್ಕೆಯನ್ನು ಈ ಹೊಸ ಅಪಾಚೆ ಆರ್‌ಆರ್310 ಬೈಕ್ ಹೊಂದಿದ್ದು, ಇದೇ ಎಂಜಿನ್ ಆಯ್ಕೆಯನ್ನು ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳಲ್ಲೂ ಸಹ ನೀಡಲಾಗಿದೆ.
ಹಿಗಾಗಿಯೇ ಅಪಾಚೆ ಆರ್‌ಆರ್310 ಬೈಕ್ ಕೇವಲ 7.17 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ. ಇನ್ನು ಈ ಬೈಕ್ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಾಯಿಸಲಿದೆ. ಈ ಬೈಕ್ 169.5 ಕಿ.ಗ್ರಾಂ ತೂಗುತ್ತದೆ. ಇನ್ನು ಮಿಚೆಲಿನ್ ಪೈಲಟ್ ಸ್ಟ್ರೀಟ್ ರೇಡಿಯಲ್ ಟೈರುಗಳನ್ನು ಅಳವಡಿಸಲಾಗಿದೆ.
ಅಪಾಚೆ ಆರ್‌ಆರ್310 ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಂಡಿದ್ದು, ಈ ಎಂಜಿನ್ 28 ಎನ್ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.
ಟಿವಿಎಸ್ ಅಪಾಚೆ ಆರ್‌ಆರ್310 ಮೋಟಾರ್ ಸೈಕಲ್ 'ಲೈಟ್ ವೆಯಿಟ್ ಟ್ರೆಲ್ಲಿಸ್ ಫ್ರೇಮ್' ಆಧಾರದ ಮೇಲೆ ನಿರ್ಮಾಣವಾಗಿದೆ ಮತ್ತು ಕಯಾಬಾನಿಂದ ಟ್ಯೂನ್ ಮಾಡಲಾಗಿರುವ ಸಸ್ಪೆಷನ್ ನೋಡಬಹುದಾಗಿದೆ.
ಆರ್‌ಟಿಆರ್ ಹೆಸರು ಸ್ಪೋರ್ಟ್ಸ್ ಬೈಕ್ ಪ್ರತಿನಿಧಿಸಲಿದೆ ಮತ್ತು ಆರ್‌ಆರ್ ಹೆಸರು ಸೂಪರ್ ಸ್ಪೋರ್ಟ್ ಪ್ರತಿನಿಧಿಸಲಿದೆ. ಸದ್ಯ ಈ ಟಿವಿಎಸ್‌ನ ಪ್ರೀಮಿಯಂ ಪೋರ್ಟ್‌ಫೋಲಿಯೋ ವಿಭಾಗವು ಸ್ಪೋರ್ಟ್ಸ್, ಟೂರಿಂಗ್ ಮತ್ತು ಹೆರಿಟೇಜ್ ಮಾದರಿಗಳನ್ನು ಒಳಗೊಂಡಿದೆ.