ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್ 125..!!

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಕೆಲದಿನಗಳ ಹಿಂದಷ್ಟೆ ತಮ್ಮ ಎನ್‍‍‍‍‍ಟಾರ್ಕ್ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡಾಗಿನಿಂದಲೂ ಸುಮಾರು 14.695 ಯೂನಿಟ್ ಸ್ಕೂಟರ್‍‍ಗಳು ಮಾರಾಟಗೊಂಡಿವೆ ಎನ್ನಲಾಗಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಕೆಲದಿನಗಳ ಹಿಂದಷ್ಟೆ ತಮ್ಮ ಎನ್‍‍‍‍‍ಟಾರ್ಕ್ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡಾಗಿನಿಂದಲೂ ಸುಮಾರು 14.695 ಯೂನಿಟ್ ಸ್ಕೂಟರ್‍‍ಗಳು ಮಾರಾಟಗೊಂಡಿವೆ ಎನ್ನಲಾಗಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಇದೇ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‍‍ಟಾರ್ಕ್ 125 ಸ್ಕೂಟರ್ 125ಸಿಸಿ ಸರಣಿಯ ಹೋಂಡಾ ಗ್ರಾಜಿಯಾ ಸ್ಕೂಟರ್ ಅನ್ನು ಮಾರಾಟದಲ್ಲಿ ಹಿಂದಿಕ್ಕಿದ್ದು, ಮೇ ತಿಂಗಳಲ್ಲಿ ಗ್ರಾಜಿಯಾ 12,068 ಯೂನಿಟ್ ಮಾರಾಟಗೊಂಡರೆ ಎನ್‍‍ಟಾರ್ಕ್ 14,695 ಯೂನಿಟ್ ಮಾರಾಟಗೊಂಡಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಏಪ್ರಿಲ್ ತಿಂಗಳಲ್ಲಿ ಗ್ರಾಜಿಯಾ ಸುಮಾರು 26,000 ಯೂನಿಟ್ ಮಾರಾಟಗೊಂಡಿತ್ತು ಆದರೆ ಮೇ ತಿಂಗಳಿನಲ್ಲಿ ಗ್ರಾಹಕರು ಗ್ರಾಜಿಯಾ ಬಿಟ್ಟು ಎನ್‍‍ಟಾರ್ಕ್ ಸ್ಕೂಟರ್‍‍ನತ್ತ ಒಲವು ತೋರಿದ್ದಾರೆ. ಹಾಗದರೆ ಎನ್‍ಟಾರ್ಕ್ ಸ್ಕೂಟರ್‍‍ನಲ್ಲಿ ಅಂತ ವಿಶೇಷತೆ ಏನಿದೆ ಎಂಬುದನ್ನು ಕೆಳಗಿನ ಸ್ಲೈಡರ್‍‍ನಲ್ಲಿ ತಿಳಿಯಿರಿ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

125ಸಿಸಿ ಸ್ಕೂಟರ್ ಮಾದರಿಗಳಲ್ಲೇ ವಿನೂತನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಎನ್ ಟಾರ್ಕ್125 ಸ್ಕೂಟರ್‌ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 58,750 ಬೆಲೆ ಪಡೆದುಕೊಂಡಿದ್ದು, ಹೊಸ ಸ್ಕೂಟರ್‌ನಲ್ಲಿ ಸ್ಮಾರ್ಟ್ ಕನೆಕ್ವಿಟಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ ಇದರ ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಇದು ಪ್ಯಾಡಲ್ ಶಿಫ್ಟರ್‌ನಿಂದ ನಿರ್ವಹಿಸಲಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಹೆಸರಲ್ಲೇ ಸೂಚಿಸಿರುವಂತೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಇನ್ನು ಮುಂಭಾಗದಲ್ಲಿ 30 ಎಂಎಂ ಟೆಲಿಸ್ಕೋಪಿಕ್ ಸಸ್ಷೆಂಷನ್ ಹಾಗೆಯೇ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಇರಲಿದ್ದು, 22 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್ ಪಡೆದುಕೊಂಡಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 125 ಸಿಸಿ ಸಿವಿಐಟಿ ರೆವ್ ಎಂಜಿನ್ ಹೊಂದಿದ್ದು, 9.27-ಬಿಎಚ್‌ಪಿ ಮತ್ತು 10.4-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

125 ಸಿಸಿ ಎಂಜಿನ್ ಹೊಂದಿದ್ದರು ಪ್ರತಿ ಗಂಟೆಗೆ 95 ಕಿಮಿ ಟಾಪ್ ಸ್ಪೀಡ್ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳು ಪ್ರಸ್ತುತ ಸ್ಕೂಟರ್ ಮಾದರಿಗಳಿಂತ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಕಾಯ್ದುಕೊಂಡಿವೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಇದಲ್ಲದೆ ಮುಂದುವರಿದ ಎಲ್‌ಇಡಿ ಪರದೆ ಕೂಡಾ ಹೊಂದಿದ್ದು, ಎಂಜಿನ್ ಹಾಗೂ ಚಾಲನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ. ಪ್ರಸ್ತುತ ಎಲ್‌ಇಡಿ ವ್ಯವಸ್ಥೆಯು ಇತರೆ ಡಿವೈಸ್‌ಗಳಿಗೆ ಸಂಪರ್ಕ ಸೇವೆಯನ್ನು ಒದಗಿಸಲಿದ್ದು, ಮೊಬೈಲ್ ಚಾರ್ಜಿಂಗ್ ಸ್ಲಾಟ್ ಕೂಡಾ ಇರಲಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ನೋಡಲು ಬಲಿಷ್ಠವಾಗಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಪೆಟಲ್ ಡಿಸ್ಕ್ ಬ್ರೇಕ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಪಾರ್ಕಿಂಗ್ ಬ್ರೇಕ್, ನೆವಿಗೆಷನ್ ಅಸಿಸ್ಟಂಟ್, ಮಲ್ಟಿಪಲ್ ರೈಡಿಂಗ್ ಮೂಡ್‌ಗಳನ್ನು ಅಳವಡಿಸಲಾಗಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಜೊತೆಗೆ ಆಟೋ ಚೋಕ್, ಇಂಟೆಲಿಜೆಂಟ್ ಇಗ್ನಿಷನ್ ಸಿಸ್ಟಂ, ಸ್ಪ್ಲಿಟ್ ಟೈಪ್ ಇಂಟೇಕ್ ಡಿಸೈನ್, ಫೋಮ್ ಆನ್ ಪೇಪರ್ ಏರ್ ಫಿಲ್ಟರ್ ಮತ್ತು ವಿಶೇಷವಾದ ಆಯಿಲ್ ಕೂಲಿಂಗ್ ಸಿಸ್ಟಂ, ಕಂಬಿಶನ್ ಚೆಂಬರ್ ಸಿಸ್ಟಂ ಅನ್ನು ಸೇರಿಸಲಾಗಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಟಿವಿಎಸ್ ಎನ್‌ಟಾರ್ಕ್ 125 ಭಾರತದ ಮೊದಲ ಸ್ಮಾರ್ಟ್ ಕನೆಕ್ಟಿವಿಟಿ ಹೊಂದಿರುವ ಸ್ಕೂಟರಾಗಿದ್ದು, ಫೋನಿನೊಂದಿಗೆ ಬ್ಲೂಟೂಥ್ ಕನೆಕ್ಟ್ ಮಾಡಬಹುದಾಗಿದ್ದು, ಹಾಗೆಯೇ ನ್ಯಾವಿಗೇಶನ್ ಅಸಿಸ್ಟ್ ಅನ್ನು ಕೂಡಾ ಹೊಂದಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಸ್ಪೀಡ್ ರೆಕಾರ್ಡರ್, ಲ್ಯಾಪ್ ಟೈಮರ್, ಫೋನ್ ಬ್ಯಾಟರಿ ಶಕ್ತಿ ಸೂಚಕ, ಹಿಂದೆ ಪಾರ್ಕ್ ಮಾಡಿರುವ ಜಾಗ, ಆವೆರೇಜ್ ಸ್ಪೀಡ್ ಹಾಗೆಯೇ ಕ್ರೀಡೆ ಮತ್ತು ಬೀದಿಗಳಂತಹ ಅನೇಕ ಸವಾರಿ ಅಂಕಿ ಅಂಶಗಳ ವಿಧಾನಗಳನ್ನು ಒಳಗೊಂಡಿದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಅದಾಗ್ಯೂ ಈ ಸ್ಕೂಟರ್ ಬ್ಲೂಟೂಥ್ ನೊಂದಿಗೆ ಕನೆಕ್ಟ್ ಆಗಿರುವುದರಿಂದ Incoming ಕರೆಗಳು ಮತ್ತು ಸಂದೇಶಗಳು ಕೂಡ ಇನ್ಪೋಟೈನ್‌ಮೆಂಟ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವುದಲ್ಲದೇ, Incoming ಕರೆಗಳಿಗೆ ನೀವು ವಾಹನ ಚಾಲನೆಯಲ್ಲಿದ್ದಿರಿ ಎಂಬ ಆಟೋ ರಿಪ್ಲೆ ಸಂದೇಶವನ್ನು ಕೂಡ ಕಳುಹಿಸುತ್ತದೆ.

ಗ್ರಾಜಿಯಾ ಸ್ಕೂಟರ್ ಅನ್ನು ಹಿಂದಿಕ್ಕಿದ ಎನ್‍‍ಟಾರ್ಕ್..!!

ಹೊರಗಡೆ ಪ್ಯುಯಲ್ ಟ್ಯಾಂಕ್, ಎಂಜಿನ್ ಕಿಲ್ ಸ್ವಿಚ್, ಪಾಸ್ ಬೈ ಸ್ವಿಚ್, ಪಾರ್ಕಿಂಗ್ ಬ್ರೇಕ್ಸ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಯುಎಸ್ ಬಿ ಫೋನ್ ಚಾರ್ಜರ್ ಮತ್ತು 22 ಲೀಟರ್ ಅಂಡರ್ ಸೀಟ್ ಸ್ಪೆಸ್ ಹೊಂದಿದೆ.

Most Read Articles

Kannada
Read more on sales
English summary
TVS NTorq 125 BEATS Honda Activa-based Grazia automatic scooter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X