TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಅತಿ ಹೆಚ್ಚು ಮೈಲೇಜ್ ನೀಡುವ ಟಿವಿಎಸ್ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ಬಿಡುಗಡೆ
ಅಗ್ಗದ ಬೆಲೆಯ ಸ್ಪೋರ್ಟ್ ಬೈಕ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಟಿವಿಎಸ್ ಸಂಸ್ಥೆಯು ಸದ್ಯ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.44,166ಕ್ಕೆ ನಿಗದಿಗೊಳಿಸಿದೆ.
ಟಿವಿಎಸ್ ಸ್ಪೋರ್ಟ್ ಬೈಕ್ ಬಿಡುಗಡೆ ನಂತರ ಇದುವರೆಗೆ 20 ಲಕ್ಷ ಯುನಿಟ್‌ಗಳು ಮಾರಾಟಗೊಂಡಿದ್ದು, ಇದೇ ವೇಳೆ ಟಿವಿಎಸ್ ಸಂಸ್ಥೆಯು ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ಮಾದರಿಯನ್ನು ಹೊರತಂದಿದೆ. ಇದರಲ್ಲಿ ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ ಕಿಕ್ ಸ್ಟಾರ್ಟ್ ಅಥವಾ ಎಲೆಕ್ಟ್ರಿಕ್ ಸ್ಟಾರ್ಟ್ ಆವೃತ್ತಿಯನ್ನು ಖರೀದಿಸಬಹುದಾಗಿದ್ದು, ಬೆಲೆಗಳಲ್ಲೂ ಬದಲಾವಣೆ ಪಡೆದಿವೆ.
ಟಿವಿಎಸ್ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್
ಕಿಕ್ ಸ್ಟಾರ್ಟ್ ವರ್ಷನ್- ರೂ.44,166
ಎಲೆಕ್ಟ್ರಿಕ್ ಸ್ಟಾರ್ಟ್ ವರ್ಷನ್- ರೂ.46,257
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಿವಿಎಸ್ ಸ್ಪೋರ್ಟ್ ಬ್ಲ್ಯಾಕ್ ಅಲಾಯ್ ಅಗ್ರಶ್ರೇಣಿ ಬೈಕಿಗಿಂತಲೂ ಹೊಸ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ತಾಂತ್ರಿಕವಾಗಿ ಭಿನ್ನವಾಗಿದ್ದರೂ ಬೈಕಿನ ವಿನ್ಯಾಸಗಳಲ್ಲಿ ಎರಡು ಸಹ ಒಂದೇ ಮಾದರಿಯಲ್ಲಿವೆ.
ತಾಂತ್ರಿಕ ಅಂಶಗಳು
ಇಕೋ ಮತ್ತು ಪವರ್ ಮೂಡ್ ಸೌಲಭ್ಯ ಹೊಂದಿರುವ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ಬೈಕ್‌ಗಳು 10 ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯ ಪಡೆದಿದ್ದು, ಸುರಕ್ಷೆತೆಗಾಗಿ ಎರಡು ಬದಿ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಅಳವಡಿಸಲಾಗಿದೆ.
ಎಂಜಿನ್ ಸಾಮರ್ಥ್ಯ
ಈ ಹಿಂದಿನಂತೆಯೇ ಎಂಜಿನ್ ಮಾದರಿಯನ್ನು ಮುಂದುವರಿಸಲಾಗಿದ್ದು, 99.7ಸಿಸಿ ಏರ್ ಕೂಲ್ಡ್ ಡ್ಯೂರಾಲೈಫ್ ಎಂಜಿನ್ ಹೊಂದಿದೆ. ಈ ಮೂಲಕ 7.3-ಬಿಎಚ್‌ಪಿ ಮತ್ತು 7.5-ಎನ್ಎಂ ಟಾರ್ಕ್ ಉತ್ಪಾದಿಸುವ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್‌ಗಳು 4-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.
ಮೈಲೇಜ್
ಇಂಧನ ಕಾರ್ಯಕ್ಷಮತೆಗಾಗಿಯೇ ಹೆಚ್ಚಿನ ಒತ್ತು ನೀಡಿರುವ ಟಿವಿಎಸ್ ಸಂಸ್ಥೆಯು ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ಮಾದರಿಯನ್ನು ಪ್ರತಿ ಲೀಟರ್‌ಗೆ 95 ಕಿ.ಮೀ ಮೈಲೇಜ್ ಹಿಂದಿರುಗಿಸುವಂತೆ ಎಂಜಿನ್ ವೈಶಿಷ್ಟ್ಯತೆಯನ್ನ ಜೋಡಣೆ ಮಾಡಿದೆ.
ಲಭ್ಯವಿರುವ ಬಣ್ಣಗಳು
ಬಿಡುಗಡೆಯಾಗಿರುವ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ಬೈಕ್‌ಗಳು ಈಗಾಗಲೇ ಅಧಿಕೃತ ಬೈಕ್ ಶೋರಂಗಳಲ್ಲಿ ಖರೀದಿಗೆ ಲಭ್ಯವಾಗಿದ್ದು, ಇಂಡಿಗೋ ಸ್ಟ್ರೀಕ್, ಟೀಮ್ ಬ್ಲ್ಯೂ, ಮೆರ್ಕ್ಯೂರಿ ಗ್ರೇ, ಬ್ಲೇಜ್ ರೆಡ್, ಡ್ಯಾಜ್ಲಿಂಗ್ ವೈಟ್, ಎಲೆಕ್ಟ್ರಿಕ್ ಗ್ರಿನ್, ಬ್ಲ್ಯಾಕ್ ಸಿಲ್ವರ್, ವಲ್ಕನೋ ರೆಡ್ ಬಣ್ಣಗಳಲ್ಲಿ ಖರೀದಿಸಬಹುದು.
ಇದರೊಂದಿಗೆ ಮುಂಭಾದಲ್ಲಿ ಟೆಲಿಸ್ಕೋಪಿಕ್ ಫ್ರೋಕ್ಸ್ ಅಪ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ಬರ್ಸ್ ಪಡೆದಿರುವ ಟಿವಿಎಸ್ ಸ್ಪೋರ್ಟ್ ಬೈಕ್‌ಗಳು ಅರಾಮದಾಯಕ ಪ್ರಯಾಣಕ್ಕೂ ಉತ್ತಮ ಮಾದರಿಗಳಾಗಿದ್ದು, ಪ್ರತಿ ಮಾದರಿಯು ಸಹ ಅಲಾಯ್ ಚಕ್ರಗಳನ್ನು ಪಡೆದಿರುತ್ತವೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಕಮ್ಯುಟರ್ ಬೈಕ್ ವಿಭಾಗದಲ್ಲೇ ಸದ್ಯ ಹೊಸ ದಾಖಲೆ ಸೃಷ್ಠಿಸುತ್ತಿರುವ ಟಿವಿಎಸ್ ಸ್ಪೋರ್ಟ್ ಬೈಕ್‌ಗಳು ಮಧ್ಯಮ ವರ್ಗದ ಗ್ರಾಹಕರ ಬೆಸ್ಟ್ ಛಾಯ್ಸ್ ಬೈಕ್ ಮಾದರಿಯಾಗಿದೆ. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಿಲ್ವರ್ ಅಲಾಯ್ ಎಡಿಷನ್ ಬಿಡುಗಡೆ ಮಾಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ..
ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?
ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?