ಭಾರತದಲ್ಲಿ ಮೂರು ಹೊಸ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಲಿದೆ ಯುಎಂ ಮೋಟಾರ್ ಸೈಕಲ್ಸ್

Written By:
Recommended Video - Watch Now!
Fire Accident In Chengicherla, Telangana | Petrol Tanker Blast

ಅಮೆರಿಕದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಯುಎಂ ಮೋಟಾರ್ ಸೈಕಲ್ಸ್ ಮುಂಬರುವ ದಿನಗಳಲ್ಲಿ ಮೂರು ವಿನೂತನ ಬೈಕ್ ಮಾದರಿಗಳನ್ನು ಪರಿಚಯಿಸುತ್ತಿದ್ದು, ಇದಕ್ಕೂ ಮುನ್ನ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಒಂದನ್ನು ಬಿಡುಗಡೆ ಮಾಡುವ ಸುಳಿವು ನೀಡದೆ.

ಭಾರತದಲ್ಲಿ ಮೂರು ಹೊಸ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಲಿದೆ ಯುಎಂ ಮೋಟಾರ್ ಸೈಕಲ್ಸ್

ಸದ್ಯ ಭಾರತದಲ್ಲಿ ಕ್ರೂಸರ್ ಬೈಕ್ ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಯುಎಂ ಮೋಟಾರ್ಸ್ ಹೊಸ ಯೋಜನೆ ರೂಪಿಸಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಯುಎಂ ಮೋಟಾರ್ಸ್ ನಿರ್ಮಾಣದ ಪ್ರಮುಖ ಮೂರು ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡುವ ತವಕದಲ್ಲಿವೆ.

ಭಾರತದಲ್ಲಿ ಮೂರು ಹೊಸ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಲಿದೆ ಯುಎಂ ಮೋಟಾರ್ ಸೈಕಲ್ಸ್

ವರದಿಗಳ ಪ್ರಕಾರ ಯುಎಂ ಮೋಟಾರ್ಸ್ ಸಂಸ್ಥೆಯು ಕಮಾಂಡೋ ಐರಾನ್ 300, ಕಮಾಂಡೋ 300 ಎಲ್ಎಕ್ಸ್ ಮತ್ತು ವೆಗಾಸ್ 300 ಕ್ರೂಸರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಬೈಕ್‌ಗಳು ಒಂದೇ ಫ್ಯಾಟ್‌ಫಾರ್ಮ್ ಅಡಿ ಉತ್ಪಾದನೆ ಮಾಡಲಾಗಿದೆ.

ಭಾರತದಲ್ಲಿ ಮೂರು ಹೊಸ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಲಿದೆ ಯುಎಂ ಮೋಟಾರ್ ಸೈಕಲ್ಸ್

ಹೀಗಾಗಿ ಬರಲಿರುವ ಮೂರು ಬೈಕ್‌ಗಳು ಕೂಡಾ 279.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಂಡಿದ್ದು, ಹೊರ ಭಾಗದ ವಿನ್ಯಾಸಗಳನ್ನು ಹೊರತುಪಡಿಸಿ ಒಂದೇ ಮಾದರಿಯ ಎಂಜಿನ್ ವೈಶಿಷ್ಟ್ಯತೆಗಳನ್ನು ಹೊಂದಿರಲಿವೆ.

ಭಾರತದಲ್ಲಿ ಮೂರು ಹೊಸ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಲಿದೆ ಯುಎಂ ಮೋಟಾರ್ ಸೈಕಲ್ಸ್

ಜೊತೆಗೆ ಮಾರಾಟಕ್ಕೆ ಲಭ್ಯವಿರುವ ರಿನೆಗ್ರೆಡ್ ಬೈಕ್ ಮಾದರಿಗಳ ವಿನ್ಯಾಸವನ್ನೇ ಹೊಲುವ ಹೊಸ ಬೈಕ್‌ಗಳು ಬೆಲೆ ವಿಚಾರದಲ್ಲೂ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಫೆ.7ರಿಂದ ನಡೆಯಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಲಿವೆ.

Trending On DriveSpark Kannada:

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಬಿಡುಗಡೆಗೆ ಸಜ್ಜುಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಭಾರತದಲ್ಲಿ ಮೂರು ಹೊಸ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಲಿದೆ ಯುಎಂ ಮೋಟಾರ್ ಸೈಕಲ್ಸ್

ಇನ್ನು ಭಾರತದಲ್ಲೇ ಹೊಸ ಬೈಕ್‌ಗಳ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಉತ್ತರಾಖಂಡ್‌ದಲ್ಲಿ ಬೈಕ್ ಉತ್ಪಾದನಾ ಕೇಂದ್ರವನ್ನು ತೆರೆದಿರುವ ಯುಎಂ ಮೋಟಾರ್ಸ್, ಬೈಕ್‌ಗಳ ಬೆಲೆ ಕಡಿಮೆಗೊಳಿಸುವ ಉದ್ದೇಶದಿಂದ ಹೊಸ ಯೋಜನೆ ರೂಪಿಸಿದೆ.

ಭಾರತದಲ್ಲಿ ಮೂರು ಹೊಸ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಲಿದೆ ಯುಎಂ ಮೋಟಾರ್ ಸೈಕಲ್ಸ್

ಡ್ರೈವ್ ಸ್ಪಾಕ್ ಅಭಿಪ್ರಾಯ

ಅಮೆರಿಕ ಸಯುಂಕ್ತ ಸಂಸ್ಥಾನ ರಾಷ್ಟ್ರಗಳಲ್ಲಿ ಕ್ರೂಸರ್ ಬೈಕ್ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸಿರುವ ಯುಎಂ ಮೋಟಾರ್ಸ್ 2016ರಿಂದ ಭಾರತದಲ್ಲಿ ತನ್ನ ವಾಣಿಜ್ಯ ಚಟುವಟಿಕೆ ಆರಂಭಿಸಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಬೈಕ್‌ಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ ಎನ್ನಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on um motorcycles
English summary
UM Motorcycles To Launch Three New Cruiser Bikes In India.
Story first published: Thursday, January 25, 2018, 13:19 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark