ತಾಂತ್ರಿಕ ದೋಷ- ಎಫ್‌ಝೆಡ್ 25 ಮತ್ತು ಫೇಜರ್ 25 ಬೈಕ್‌ಗಳನ್ನು ಹಿಂಪಡೆಯಲಿದೆ ಯಮಹಾ

Written By:

ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಯಮಹಾ ಸಂಸ್ಥೆಯ ಬಹುಬೇಡಿಕೆ ಎಫ್‌ಝೆಡ್ 25 ಮತ್ತು ಫೇಜರ್ 25 ಬೈಕ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಹಿನ್ನೆಲೆ ತಾಂತ್ರಿಕ ದೋಷ ಹೊಂದಿರುವ ಸುಮಾರು 24 ಸಾವಿರ ಬೈಕ್‌ಗಳನ್ನು ಹಿಂಪಡೆಯುತ್ತಿದೆ.

ಎಫ್‌ಝೆಡ್25 ಮತ್ತು ಫೇಜರ್ 25 ಬೈಕ್‌ಗಳನ್ನು ಹಿಂಪಡೆಯಲಿದೆ ಯಮಹಾ

ಯಮಹಾ ನಿರ್ಮಾಣದ ಎಫ್‌ಝೆಡ್ 25 ಮತ್ತು ಫೇಜರ್ 25 ಬೈಕ್‌ಗಳ ಹೆಡ್ ಕವರ್‌ನಲ್ಲಿನ ಬೊಲ್ಟ್‌ಗಳು ತಾಂತ್ರಿಕ ದೋಷವನ್ನು ಹೊಂದಿದ್ದು, ಗ್ರಾಹಕರ ದೂರಿನ್ವಯ ಯಮಹಾ ಸಂಸ್ಥೆಯು ಬೈಕ್‌ಗಳನ್ನು ಹಿಂಪಡೆದು ಸಮಸ್ಯೆ ಬಗೆಹರಿಸಲು ಮುಂದಾಗಿದೆ.

Recommended Video - Watch Now!
Bangalore Bike Accident At Chikkaballapur Near Nandi Upachar - DriveSpark
ಎಫ್‌ಝೆಡ್25 ಮತ್ತು ಫೇಜರ್ 25 ಬೈಕ್‌ಗಳನ್ನು ಹಿಂಪಡೆಯಲಿದೆ ಯಮಹಾ

ಹೀಗಾಗಿ ಮಾರಾಟಗೊಂಡಿರುವ ಎಫ್‌ಝೆಡ್ 25 21,640 ಬೈಕ್‌ಗಳು ಮತ್ತು ಫೇಜರ್ 25 2,257 ಬೈಕ್‌ಗಳಲ್ಲಿ ಹೆಡ್ ಕವರ್‌ ಬೊಲ್ಟ್‌ಗಳ ತಾಂತ್ರಿಕ ದೋಷವಿದ್ದು, ಕೂಡಲೇ ಸಮಸ್ಯೆ ಪರಿಹಾರಕ್ಕೆ ಯಮಹಾ ಹೊಸ ಯೋಜನೆ ರೂಪಿಸಿದೆ.

ಎಫ್‌ಝೆಡ್25 ಮತ್ತು ಫೇಜರ್ 25 ಬೈಕ್‌ಗಳನ್ನು ಹಿಂಪಡೆಯಲಿದೆ ಯಮಹಾ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಯಮಹಾ ಸಂಸ್ಥೆಯು ಎಫ್‌ಝೆಡ್ 25 ಮತ್ತು ಫೇಜರ್ 25 ಬೈಕ್‌ ಆವೃತ್ತಿಯಲ್ಲಿನ ದೋಷಗಳನ್ನು ಕೂಡಲೇ ಸರಿಪಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದು, ಉತ್ಪಾದನೆಯ ಸಂದರ್ಭದಲ್ಲಿ ಆದ ತಾಂತ್ರಿಕ ದೋಷಕ್ಕೆ ವಿಷಾದ ವ್ಯಕ್ತಪಡಿಸಿದೆ.

ಎಫ್‌ಝೆಡ್25 ಮತ್ತು ಫೇಜರ್ 25 ಬೈಕ್‌ಗಳನ್ನು ಹಿಂಪಡೆಯಲಿದೆ ಯಮಹಾ

ಅಂದಹಾಗೆ ಸ್ವಿಂಗ್ ಎಫ್‌ಝೆಡ್ 25 ಮತ್ತು ಫೇಜರ್ 25 ಬೈಕ್‌ ಆವೃತ್ತಿಯಲ್ಲಿನ ದೋಷದಿಂದಾಗಿ ಬೈಕ್ ಚಾಲನೆ ವೇಳೆ ಹೆಚ್ಚಿನ ಶಬ್ದ ಬರುವುದುದಲ್ಲದೇ ಧೀರ್ಘವಾಧಿಯ ಪ್ರಯಾಣದ ಅವಧಿಯಲ್ಲಿ ಹೆಡ್ ಕವರ್ ಬಿಚ್ಚಿಕೊಳ್ಳುವ ಸಾಧ್ಯತೆಗಳಿವೆ.

Trending On DriveSpark Kannada:

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಎಫ್‌ಝೆಡ್25 ಮತ್ತು ಫೇಜರ್ 25 ಬೈಕ್‌ಗಳನ್ನು ಹಿಂಪಡೆಯಲಿದೆ ಯಮಹಾ

ಇದರಿಂದಾಗಿ ಅಪಘಾತಗಳಾಗುವ ಸಾಧ್ಯತೆಗಳಿದ್ದು, ಇದೇ ಕಾರಣಕ್ಕೆ ತನ್ನ ನೆಚ್ಚಿನ ಗ್ರಾಹಕರಲ್ಲಿ ಮನವಿ ಮಾಡಿರುವ ಯಮಹಾ ಸಂಸ್ಥೆಯು ಎಫ್‌ಝೆಡ್ 25 ಮತ್ತು ಫೇಜರ್ 25 ಬೈಕ್‌ ಮಾಲೀಕರು ಈ ಕೂಡಲೇ ಹತ್ತಿರ ಅಧಿಕೃತ ಡೀಲರ್ಸ್‌ಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದೆ.

ಎಫ್‌ಝೆಡ್25 ಮತ್ತು ಫೇಜರ್ 25 ಬೈಕ್‌ಗಳನ್ನು ಹಿಂಪಡೆಯಲಿದೆ ಯಮಹಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ಪಾದನಾ ಸಂದರ್ಭದಲ್ಲಿ ತಾಂತ್ರಿಕ ದೋಷಗಳು ಕಂಡುಬರುವುದು ಸಾಮಾನ್ಯ ವಿಚಾರವಾಗಿದ್ದು, ಒಂದು ವೇಳೆ ನೀವು ಕೂಡಾ ಎಫ್‌ಝೆಡ್ 25 ಮತ್ತು ಫೇಜರ್ 25 ಬೈಕ್‌ಗಳ ಮಾಲೀಕರಾಗಿದ್ದರೆ ಈ ಕೂಡಲೇ ನಿಮ್ಮ ಹತ್ತಿರದ ಶೋರಂಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

Trending On DriveSpark Kannada:

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

Trending DriveSpark YouTube Videos

Subscribe To DriveSpark Kannada YouTube Channel - Click Here

Read more on yamaha recall
English summary
Yamaha FZ25 & Fazer 25 Recalled In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark