ಬಹಿರಂಗಗೊಂಡ ಪಲ್ಸರ್ 180ಎಫ್ ಎಬಿಎಸ್ ನ ಬೆಲೆಯ ಮಾಹಿತಿ

ಬಜಾಜ್ ಪಲ್ಸರ್ 180 ಎಫ್ ಬೈಕ್ ಅನ್ನು ಈ ವರ್ಷದ ಮಾರ್ಚ್‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿಲಾಯಿತು. ಬಜಾಜ್ ಪಲ್ಸರ್ 180 ನಿಯೋನ್ ಹೆಸರಿನ, ಈ ಬೈಕ್ ಅನ್ನು ಎಬಿಎಸ್ ಇಲ್ಲದೇ ಬಿಡುಗಡೆಗೊಳಿಸಲಾಗಿತ್ತು. ಬಜಾಜ್ ಈ ಬೈಕ್ ಅನ್ನು ಪಲ್ಸರ್ 180 ನಿಯೋನ್ ಎಂದು ಕರೆದಿದ್ದರೂ, ಈ ಬೈಕಿನ ಹಿಂಭಾಗದಲ್ಲಿ 180 ಎಫ್ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ.

ಬಹಿರಂಗಗೊಂಡ ಪಲ್ಸರ್ 180ಎಫ್ ಎಬಿಎಸ್ ನ ಬೆಲೆಯ ಮಾಹಿತಿ

ಈಗ ಬಿಡುಗಡೆಗೊಳಿಸಿರುವ ಬಜಾಜ್ ಪಲ್ಸರ್ 180 ಎಫ್ ಬೈಕಿನಲ್ಲಿ ಎಬಿಎಸ್ ಅಳವಡಿಸಲಾಗಿದ್ದು, ಆಯ್ದ ಡೀಲರ್ ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಇಂಡಿಯನ್ ಆಟೋಸ್ ಬ್ಲಾಗ್ ಮೂಲಗಳ ಪ್ರಕಾರ, ಆಯ್ದ ಡೀಲರ್ ಗಳು ಬುಕ್ಕಿಂಗ್ ಶುರುಮಾಡಿದ್ದಾರೆ. ಪುಣೆ ಮೂಲದ ಡೀಲರ್ ಗಳು ಖಚಿತಪಡಿಸಿರುವಂತೆ ಪಲ್ಸರ್ 180 ಎಫ್ ಎಬಿಎಸ್ ಬೆಲೆಯನ್ನು ಪುಣೆಯ ಎಕ್ಸ್ ಶೋ ರೂಂ ದರದಂತೆ ರೂ. 94,278 ಎಂದು ನಿಗದಿಪಡಿಸಲಾಗಿದೆ.

ಬಹಿರಂಗಗೊಂಡ ಪಲ್ಸರ್ 180ಎಫ್ ಎಬಿಎಸ್ ನ ಬೆಲೆಯ ಮಾಹಿತಿ

ನವಿ ಮುಂಬೈ ಮೂಲದ ಡೀಲರ್ ಗಳು ಖಚಿತಪಡಿಸಿರುವಂತೆ ಈ ಮೋಟಾರ್ ಬೈಕ್ ಗಳಿಗಾಗಿ ಬುಕ್ಕಿಂಗ್ ಶುರುವಾಗಿದೆ. ಪಲ್ಸರ್ 180 ಎಫ್ ಬೈಕಿನಲ್ಲಿ ಎಬಿಎಸ್ ಇಲ್ಲದ ಕಾರಣ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವ ಉದ್ದೇಶದಿಂದ ಬಿಡುಗಡೆ ಮಾಡಲಾಗಿತ್ತು. ಈ ಮೊದಲು ಪಲ್ಸರ್ 180ಎಫ್ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋ ರೂಂ ದರದಂತೆ ರೂ. 87,450 ಎಂದು ನಿಗದಿಪಡಿಸಲಾಗಿತ್ತು.

ಬಹಿರಂಗಗೊಂಡ ಪಲ್ಸರ್ 180ಎಫ್ ಎಬಿಎಸ್ ನ ಬೆಲೆಯ ಮಾಹಿತಿ

ಹೊಸ ಸುರಕ್ಷಾ ನಿಯಮಗಳು 1ನೇ ಏಪ್ರಿಲ್ 2019ರಿಂದ ಜಾರಿಗೆ ಬಂದಿರುವುದರಿಂದ ಬಜಾಜ್ ಪಲ್ಸರ್ ಬೈಕಿನಲ್ಲಿ ಎಬಿಎಸ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ. ಬಜಾಜ್ ಪಲ್ಸರ್ 180 ಎಫ್ ಬೈಕ್ ಪಲ್ಸರ್ 180 ಮಾದರಿ ಹೊಂದಿದ್ದ ಎಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ.

ಬಹಿರಂಗಗೊಂಡ ಪಲ್ಸರ್ 180ಎಫ್ ಎಬಿಎಸ್ ನ ಬೆಲೆಯ ಮಾಹಿತಿ

ಮೆಕಾನಿಕಲ್ ಸ್ಪೆಸಿಫಿಕೇಶನ್ ಗಳು ಸಹ ಸ್ಟಾಂಡರ್ಡ್ ಮಾದರಿಯನ್ನೇ ಹೊಂದಿರಲಿವೆ. ಈ ಬೈಕ್ 178.6 ಸಿಸಿ ಏರ್ ಕೂಲ್ ಸಿಂಗಲ್ ಸಿಲಿಂಡರ್ ಡಿಟಿಎಸ್-ಐ ಎಂಜಿನ್ ಹೊಂದಿರಲಿದ್ದು, 17 ಬಿಹೆಚ್‍ಪಿ ಯನ್ನು 8,500 ಆರ್‍‍ಪಿಎಂ ನಲ್ಲಿ ಮತ್ತು 14 ಎನ್ಎಂ ಟಾರ್ಕ್ ಅನ್ನು 6,500ಆರ್‍‍ಪಿ ಎಂ ನಲ್ಲಿ ಉತ್ಪಾದಿಸಲಿದೆ. ಇನ್ನು ಸ್ಟೈಲಿಂಗ್ ನ ಬಗ್ಗೆ ಹೇಳುವುದಾದರೆ ವಿಶೇಷತೆಗಳನ್ನು ಬಜಾಜ್ 220 ಎಫ್ ನಿಂದ ಪಡೆಯಲಾಗಿದೆ. 260 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಮುಂಭಾಗದಲ್ಲಿ, 230 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಹಿಂಭಾಗದಲ್ಲಿ, ಇದರ ಜೊತೆಗೆ ಲಂಬವಾಗಿ ಜೋಡಿಸಲಾಗಿರುವ ಮಿರರ್ ಮತ್ತು ರೇರ್‍‍ವೀವ್ ಮೀರರ್ ಗಳನ್ನು ಅಳವಡಿಸಲಾಗಿದೆ.

ಬಹಿರಂಗಗೊಂಡ ಪಲ್ಸರ್ 180ಎಫ್ ಎಬಿಎಸ್ ನ ಬೆಲೆಯ ಮಾಹಿತಿ

ಸಿಂಗಲ್ ಚಾನೆಲ್ ಎಬಿಎಸ್ ಅನ್ನು ರೇರ್ ಲಿಫ್ಟ್ ಪ್ರೊಟೆಕ್ಷನ್ ಸಿಸ್ಟಮ್ ನೊಂದಿಗೆ ಅಳವಡಿಸಲಾಗಿದೆ. ಮುಂಭಾಗದಲ್ಲಿ ಆಂಟಿ ಫ್ರಿಕ್ಷನ್ ಬುಷ್ ಗಳನ್ನು ಟೆಲಿಸ್ಕೋಪಿಕ್ ಫೊರ್ಕ್ ಗಳ ಜೊತೆ ಮತ್ತು ಹಿಂಭಾಗದಲ್ಲಿ ಫೈವ್-ವೇ ಅಡ್ಜಸ್ಟಬಲ್ ನೈಟ್ರೊಕ್ಸ್ ಶಾಕ್ ಅಬ್ಸರ್ವರ್‍‍ಗಳನ್ನು ಅಳವಡಿಸಲಾಗಿದೆ.

MUST READ: ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಬಹಿರಂಗಗೊಂಡ ಪಲ್ಸರ್ 180ಎಫ್ ಎಬಿಎಸ್ ನ ಬೆಲೆಯ ಮಾಹಿತಿ

ಬಜಾಜ್ ಪಲ್ಸರ್ 180 ಎಫ್ ಗ್ಲಾಸ್ ಬ್ಲಾಕ್ ವಿತ್ ನಿಯೊನ್ ರೆಡ್ ಹೈ ಲೈಟ್ ಮತ್ತು ಮ್ಯಾಟ್ ಸಿಲ್ವರ್ ವಿತ್ ನಿಯೊನ್ ಆರೇಂಜ್ ಹೈ ಲೈಟ್ ಎಂಬ ಎರಡು ಬಣ್ಣಗಳಲ್ಲಿ ದೊರೆಯಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

ಬಹಿರಂಗಗೊಂಡ ಪಲ್ಸರ್ 180ಎಫ್ ಎಬಿಎಸ್ ನ ಬೆಲೆಯ ಮಾಹಿತಿ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ತನ್ನ 180 ಎಫ್ ಬೈಕಿಗೆ ನಿಯೊನ್ ಎಂಬ ಹೆಸರಿಸದೇ ಇರುವ ಎಂಬ ಬಗ್ಗೆ ಮಾಹಿತಿ ಇಲ್ಲ. ಪಲ್ಸರ್ 220 ಎಫ್ ನ ನಂತರ ಹೆಚ್ಚು ಸ್ಟೈಲ್ ಹೊಂದಿರುವ ಬೈಕ್ ಆಗಿದೆ. ನಿಯೊನ್ ನ ವಿಶೇಷತೆಗಳ ಬಗ್ಗೆ ಯಾವುದೇ ಖಚಿತತೆ ಇಲ್ಲ. ಬ್ಲಾಕ್ ಬಣ್ಣದ ಮೋಟಾರ್ ಸೈಕಲ್ ಅತ್ಯುತ್ತಮವಾಗಿ ಕಾಣುತ್ತದೆ.

Most Read Articles

Kannada
English summary
Bajaj Pulsar 180F ABS Price Revealed — Bookings Open At Select Dealerships - Read in Kannada
Story first published: Wednesday, April 24, 2019, 10:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X