ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಇಟಲಿಯ ಮಿಲನ್‌ನಲ್ಲಿ ನಡೆದ ಇಐಸಿಎಂಎ ಮೋಟಾರ್‌ ಶೋದಲ್ಲಿ ಬೆನೆಲ್ಲಿ ಕಂಪನಿಯು ತನ್ನ 2020ರ ಸರಣಿಯ ಹೊಸ ಬೈಕುಗಳನ್ನು ಅನಾವರಣಗೊಳಿಸಿತು. ಹೊಸ ಹಾಗೂ ಅಪ್‍‍ಡೇಟ್ ಮಾಡಲಾದ ಬೈಕುಗಳಲ್ಲಿ ಟಿಆರ್‌ಕೆ 502 ಹಾಗೂ ಟಿಆರ್‌ಕೆ 502 ಎಕ್ಸ್ ಬೈಕುಗಳು ಸೇರಿವೆ.

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಈ ಬೈಕುಗಳ ಹಿಂದಿನ ಆವೃತ್ತಿಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಅಪ್‍‍ಡೇಟ್‍‍ಗೊಳಿಸಲಾದ ಬೈಕುಗಳನ್ನು 2020ರಿಂದ ಮಾರಾಟ ಮಾಡಲಾಗುವುದು. 2020 ಟಿಆರ್‌ಕೆ 502 ಹಾಗೂ ಟಿಆರ್‌ಕೆ 502 ಎಕ್ಸ್ ಬೈಕುಗಳು ತಮ್ಮ ಇತ್ತೀಚಿನ ಆವೃತ್ತಿಯಲ್ಲಿ ಇಷ್ಟೊಂದು ವಿನ್ಯಾಸಗಳನ್ನು ಹೊಂದಿರುವುದಿಲ್ಲ.

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಈ ಕಾರಣಕ್ಕಾಗಿ ಈ ಎರಡೂ ಬೈಕುಗಳಲ್ಲಿ ವಿಂಡ್‌ಸ್ಕ್ರೀನ್ ಹಾಗೂ ಏರ್ ಡಿಫ್ಲೆಕ್ಟರ್‌ಗಳೊಂದಿಗೆ ಸೆಮಿ ಫೇರಿಂಗ್ ಡಿಸೈನ್ ಹಾಗೂ ಇತರ ಫೀಚರ್‍‍ಗಳ ನಡುವೆ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಟ್ವಿನ್ ಪಾಡ್ ಹೆಡ್‌ಲೈಟ್‍‍ಗಳನ್ನು ಕಾಣಬಹುದು.

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಆಧುನಿಕವಾದ ಹಾಗೂ ಆಕರ್ಷಕವಾದ ನೋಟಕ್ಕಾಗಿ ಟಿಆರ್‌ಕೆ 502 ಹೊಸ ಗ್ರಾಫಿಕ್ಸ್ ಹಾಗೂ ಪ್ಲಾಸ್ಟಿಕ್ ಟೆಕ್ಸ್ ಚರ್‍‍ಗಳನ್ನು ಅಳವಡಿಸಿರುವುದಾಗಿ ಬೆನೆಲ್ಲಿ ಹೇಳಿದೆ. ಟಿಆರ್‌ಕೆ 502 ಎಕ್ಸ್ ಬ್ಯಾಕ್‌ಲಿಟ್ ಸ್ವಿಚ್‌ಗೇರ್, ಟಿಆರ್‌ಕೆ ಲೊಗೊದೊಂದಿಗೆ ಹೊಸ ರೇರ್ ವೀವ್ ಮಿರರ್ ಡಿಸೈನ್ ಹಾಗೂ ಹೊಸ ಹ್ಯಾಂಡ್ ಗ್ರಿಪ್‍‍ಗಳಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಹೊಸ ಹ್ಯಾಂಡಲ್‌ಬಾರ್ ಹಾಗೂ ಕ್ಲಚ್ ಲಿವರ್ ಈಗ ಅಡ್ಜಸ್ಟಬಲ್ ಆಗಿವೆ. ಅಲ್ಯೂಮಿನಿಯಂ ಅಲಾಯ್ ಹಾಗೂ ಹೊಸ ಸೀಟುಗಳಿರುವ ಹಿಂಭಾಗದಲ್ಲಿ ರೇರ್ ಪ್ಯಾನಿಯರ್ ರ್‍ಯಾಕ್‍‍ಗಳಲ್ಲಿ ಬದಲಾವಣೆ ಮಾಡಲಾಗಿದೆ.

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಆಫ್ ರೋಡ್ ಮಾದರಿಯಾದ 502 ಎಕ್ಸ್ ಬೈಕಿನಲ್ಲಿಯೂ ಸಹ 19 ಇಂಚಿನ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಹಾಗೂ 17 ಇಂಚಿನ ರೇರ್ ವ್ಹೀಲ್‍‍ಗಳಿದ್ದು, ಕ್ರಮವಾಗಿ 110/80-19 ಹಾಗೂ 150/70-17 ಸೆಕ್ಷನ್ ಟಯರ್‌ಗಳನ್ನು ಹೊಂದಿವೆ.

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಈ ಎರಡೂ ಬೈಕುಗಳಿಗೆ ಹೋಲಿಸಿದರೆ, ರಸ್ತೆ ಆಧಾರಿತ ಬೈಕಿನ ಎರಡೂ ಬದಿಯಲ್ಲಿ 17 ಇಂಚಿನ ಅಲಾಯ್ ವ್ಹೀಲ್‍‍ಗಳಿದ್ದು, ಟ್ಯೂಬ್‍‍ಲೆಸ್ ಟಯರ್‍‍ಗಳಿವೆ. 500 ಸಿಸಿಯ ಇನ್‍‍ಲೈನ್ ​​ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 8-ವಾಲ್ವ್ (ಪ್ರತಿ ಸಿಲಿಂಡರ್‌ಗೆ 4 ವಾಲ್ವ್) ಡಿಒಹೆಚ್‌ಸಿ ಎಂಜಿನ್ ಹೊಂದಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 35 ಕಿ.ವ್ಯಾ ಅಥವಾ 47.6 ಬಿ‍‍‍ಹೆಚ್‌ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 46 ಎನ್‌ಎಂ ಅಥವಾ 4.7 ಕೆಜಿಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಎರಡೂ ವಾಹನಗಳನ್ನು ಟ್ರೆಲ್ಲಿಸ್ ಫ್ರೇಂನೊಂದಿಗೆ ಸ್ಟೀಲ್ ಪ್ಲೇಟ್‍‍ಗಳೊಂದಿಗೆ ತಯಾರಿಸಲಾಗಿದೆ. ಶಾಕ್ ಅಬ್ಸಾರ್ವರ್‍‍ಗಳಿಗಾಗಿ ಬೈಕಿನ ಮುಂಭಾಗದಲ್ಲಿ 50 ಎಂಎಂನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಸಸ್ಪೆಂಷನ್‍‍ಗಳಿಗಾಗಿ ಈ ಎರಡೂ ಬೈಕುಗಳ ಮುಂಭಾಗದಲ್ಲಿ 140 ಎಂಎಂ ಸಸ್ಪೆಂಷನ್ ಟ್ರಾವೆಲ್‍‍ಗಳಿವೆ. ಟಿಆರ್‌ಕೆ 502 ಎಕ್ಸ್ ಬೈಕಿನ ಹಿಂಭಾಗದಲ್ಲಿ ದೊಡ್ಡ ಸಸ್ಪೆಂಷನ್ ಟ್ರಾವೆಲ್ ಅಳವಡಿಸಲಾಗಿದೆ. ಬ್ರೇಕಿಂಗ್‍‍ಗಳಿಗಾಗಿ ಎರಡೂ ಬೈಕುಗಳ ಮುಂಭಾಗದಲ್ಲಿ ಟ್ವಿನ್ 320 ಎಂಎಂ ಫ್ರಂಟ್ ಡಿಸ್ಕ್ ಗಳಿವೆ.

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಆದರೆ, ರೋಡ್-ಸ್ಪೆಕ್ ಟಿಆರ್‍‍ಕೆ 502 ಬೈಕ್, 4 ಪಿಸ್ಟನ್ ಕ್ಯಾಲಿಪರ್‍ ಹೊಂದಿದ್ದರೆ, ಟಿಆರ್‍‍ಕೆ 502 ಎಕ್ಸ್ ಬೈಕ್ 2 ಪಿಸ್ಟನ್ ಕ್ಯಾಲಿಪರ್ ಅನ್ನು ಹೊಂದಿದೆ. ಈ ಎರಡೂ ಬೈಕುಗಳ ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್ ಕ್ಯಾಲಿಪರ್ ಹೊಂದಿರುವ 260 ಎಂಎಂ ಡಿಸ್ಕ್ ಗಳಿವೆ.

ಎರಡು ಹೊಸ ಬೈಕುಗಳನ್ನು ಅನಾವರಣಗೊಳಿಸಿದ ಬೆನೆಲ್ಲಿ

ಟಿಆರ್‌ಕೆ 502 ಎಕ್ಸ್ ಬೈಕಿನಲ್ಲಿ ಪೆಟಲ್ ಟೈಪಿನ ಡಿಸ್ಕ್ ಗಳಿದ್ದರೆ, ಟಿಆರ್‌ಕೆ 502 ಬೈಕಿನಲ್ಲಿ ಸಾಂಪ್ರಾದಾಯಿಕ ಮಾದರಿಯ ರೋಟರ್‍‍ಗಳಿವೆ. ಟಿಆರ್‌ಕೆ 502 ಹಾಗೂ ಟಿಆರ್‌ಕೆ 502 ಎಕ್ಸ್ ಬೈಕುಗಳನ್ನು - ಬಿಳಿ, ಕೆಂಪು, ನೀಲಿ ಹಾಗೂ ಆಂಥ್ರಾಸೈಟ್ ಗ್ರೇ - ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Benelli trk 502 502x motorcycles unveiled at 2019 eicma - Read in Kannada
Story first published: Wednesday, November 13, 2019, 10:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X