ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಬಿಎಸ್-6 ನಿಯಮ ಜಾರಿಗೆ ದಿನಗಣನೆ ಶುರುವಾಗಿದ್ದು, ಬಿಎಸ್-4 ವಾಹನಗಳ ಸ್ಟಾಕ್ ಮೇಲೆ ಆಟೋ ಉತ್ಪಾದನಾ ಸಂಸ್ಥೆಗಳು ಭರ್ಜರಿ ಆಫರ್ ಘೋಷಿಸುತ್ತಿವೆ. ಬಿಎಂಡಬ್ಲ್ಯು ಮೋಟಾರಾಡ್ ಸಹ ಇದೀಗ ಜಿ 310ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್ ನೀಡುತ್ತಿದ್ದು, ಪ್ರೀಮಿಯಂ ಸ್ಪೋರ್ಟ್ ಬೈಕ್ ಖರೀದಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಹೌದು, ಬಿಎಂಡಬ್ಲ್ಯು ಮೋಟೊರಾಡ್ ಸಂಸ್ಥೆಯು ಜಿ 310ಆರ್ ಮತ್ತು ಜಿ 310ಜಿಎಸ್ ಬೈಕ್‌ಗಳ ಖರೀದಿ ಮೇಲೆ ಗರಿಷ್ಠ ರೂ.1 ಲಕ್ಷ ಮುಖಬೆಲೆಯ ವಿವಿಧ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಹೊಸ ಆಫರ್‌ನಲ್ಲಿ ಒಂದು ವರ್ಷದ ಉಚಿತ ಇನ್ಸುರೆನ್ಸ್, ಉಚಿತ ರಸ್ತೆ ತೆರಿಗೆ, ಉಚಿತ ನೋಂದಣಿ, ಅನ್ ಲಿಮಿಟೆಡ್ ಕಿ.ಮೀ ವಾರಂಟಿ ಮತ್ತು ಬೈಕ್ ಖರೀದಿಗೆ ಬೇಕಿರುವ ಸಾಲದ ಮೇಲೆ ಅತಿ ಕಡಿಮೆ ಬೆಲೆಯ ಬಡ್ಡಿದರಗಳನ್ನು ಒದಗಿಸುತ್ತಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಸದ್ಯ ಜಿ 310ಆರ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.2.99 ಲಕ್ಷ ಬೆಲೆ ಹೊಂದಿದ್ದರೆ, ಜಿ 310ಜಿಎಸ್ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.3.49 ಲಕ್ಷ ಬೆಲೆ ಪಡೆದುಕೊಂಡಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಇನ್ನು ಬಿಎಂಡಬ್ಯು ಸಂಸ್ಥೆಯು ಮೊದಲ ಬಾರಿಗೆ ಭಾರತದಲ್ಲೇ ತನ್ನ ಹೊಸ ಬೈಕ್ ಉತ್ಪನ್ನಗಳನ್ನು ಅಭಿವೃದ್ಧಿ ಮಾಡಿದ್ದು, ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಟಿವಿಎಸ್ ಜೊತೆ ಕೈಜೋಡಿಸಿದೆ. ತಮಿಳುನಾಡಿನ ಹೊಸೂರುನಲ್ಲಿರುವ ಟಿವಿಎಸ್ ಬೈಕ್ ಉತ್ಪಾದನಾ ಘಟಕದಲ್ಲೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನ ಉತ್ಪಾದನೆ ಮಾಡಿರುವುದು ಮತ್ತೊಂದು ವಿಶೇಷ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಜಿ 310 ಆರ್ ಬೈಕ್ (ಸ್ಟ್ರೀಟ್ ಫೈಟರ್)

ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಆವೃತ್ತಿಯು ನಕೆಡ್ ಮೋಟಾರ್ ಸೈಕಲ್ ವಿನ್ಯಾಸಗಳೊಂದಿಗೆ ಗ್ರಾಹಕರ ಕೈ ಸೇರಿದ್ದು, ಬಿಎಂಡಬ್ಲ್ಯು ಎಸ್ 1000 ಬೈಕ್ ಮಾದರಿಯಲ್ಲೇ 41ಎಂಎಂ ಯುಎಸ್‌ಡಿ ಗೋಲ್ಡನ್ ಫೋಕ್ಸ್, 17-ಇಂಚಿನ ಫೈವ್ ಸ್ಪೋಕ್ ಕಾಸ್ಟ್ ಅಲ್ಯುನಿಯಂ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

ಬರೋಬ್ಬರಿ 158.5 ಕೆ.ಜಿ ತೂಕ ಹೊಂದಿರುವ ಜಿ 310 ಆರ್ ಬೈಕ್‌ಗಳು ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಲಭ್ಯವಿರುವ ಬಣ್ಣಗಳು- ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿರುವ ಜಿ 310 ಆರ್ ಬೈಕ್‌ಗಳನ್ನ ಸ್ಟೈಲ್ ಹೆಚ್‌ಪಿ( ಪರ್ಲ್ ವೈಟ್ + ಹೆಚ್‌ಪಿ ಬ್ಯಾಡ್ಜ್), ಕಾಸ್ಮಿಕ್ ಬ್ಲ್ಯಾಕ್ ಮತ್ತು ರೇಸಿಂಗ್ ರೆಡ್ ಬಣ್ಣಗಳಲ್ಲಿ ಖರೀದಿಸಬಹುದು.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಜಿ 310 ಜಿಎಸ್(ಅಂಡ್ವೆಚರ್)

ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಮಾದರಿಯು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಫ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳ ನೆಚ್ಚಿನ ಆಯ್ಕೆಯಾಗಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಸ್ಟ್ರೀಟ್ ಫೈಟರ್ ಖ್ಯಾತಿಯ ಜಿ 310 ಆರ್ ಬೈಕಿಗಿಂತಲೂ ಉದ್ದಳತೆಯಲ್ಲಿ ಹೆಚ್ಚಿರುವ ಜಿ 310 ಜಿಎಸ್ ಬೈಕ್‌ಗಳು 169.5 ಕೆ.ಜಿ ತೂಕ ಪಡೆದುಕೊಂಡಿದ್ದು, ಮುಂಭಾಗದಲ್ಲಿ 19 ಇಂಚಿನ ವೀಲ್ಹ್‌ಗಳನ್ನ ಬಳಕೆ ಮಾಡಿದ್ದಲ್ಲಿ ಹಿಂಭಾಗ ಚಕ್ರಗಳು 17 ಇಂಚು ಗಾತ್ರ ಹೊಂದಿವೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಸುರಕ್ಷತೆಯಲ್ಲೂ ಜಿ 310 ಜಿಎಸ್ ಬೈಕಿನಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಜಿ 310 ಆರ್ ಬೈಕಿನಂತೆಯೇ ಡ್ಯುಯಲ್ ಚಾನೆಲ್ ಎಬಿಎಸ್ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನ ಸೇರಿಸಲಾಗಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಲಭ್ಯವಿರುವ ಬಣ್ಣಗಳು- ಪ್ರಮುಖ ಮೂರು ಬಣ್ಣಗಳಲ್ಲಿ ಲಭ್ಯವಿರುವ ಜಿ 310 ಜಿಎಸ್ ಬೈಕ್‌ಗಳು ರೇಸಿಂಗ್ ರೆಡ್, ಪರ್ಲ್ ವೈಟ್ ಮೆಟಾಲಿಕ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಎಂಜಿನ್ ಸಾಮರ್ಥ್ಯ

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್‌ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಒಂದೇ ಮಾದರಿಯ ಎಂಜಿನ್ ಪಡೆದುಕೊಂಡಿವೆ. ಎರಡು ಬೈಕ್‌ಗಳಲ್ಲೂ 313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ. ಇದೇ ಎಂಜಿನ್ ಅನ್ನು ಟಿವಿಎಸ್ ಅಪಾಚೆ ಆರ್‌ಆರ್310 ಬೈಕ್‌ನಲ್ಲಿ ನೋಡಬಹುದಾಗಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ಗಳು 34-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಎರಡು ಬೈಕ್ ಮಾದರಿಗಳಲ್ಲೂ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310ಜಿಎಸ್ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್

ಈ ಮೂಲಕ ಪ್ರತಿ ಗಂಟೆಗೆ 145 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಇಂಧನ ದಕ್ಷತೆಯಲ್ಲೂ ಉತ್ತಮವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 30ರಿಂದ 35 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು.

Most Read Articles

Kannada
English summary
BMW G 310 R, G 310 GS: Year-End Benefits Of Up To Rs 1 Lakh. Read more in Kannada.
Story first published: Tuesday, December 24, 2019, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X