ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

ಚೀನಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಸಿಎಫ್‍ಮೋಟೊ ಮೊನ್ನೆಯಷ್ಟೆ ಆಕರ್ಷಕ ಬೆಲೆಗಳಲ್ಲಿ ದೇಶಿಯ ಮಾರುಕಟ್ಟೆಗೆ ತಮ್ಮ ಹೊಸ ನಾಲ್ಕು ಮೋಟಾರ್‍‍ಸೈಕಲ್‍ಗಳನ್ನು ಪರಿಚಯಿಸಿದೆ. ಸಿಎಫ್‍ಮೋಟೊ ಬಿಡುಗಡೆ ಮಾಡಲಾದ ಬೈಕ್‍ಗಳು ರೂ. 2.29 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

ಸಿಎಫ್‍ಮೋಟೊ ಬಿಡುಗಡೆ ಮಾಡಲಾದ 300ಎನ್‍ಕೆ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.29 ಲಕ್ಷ, 650ಎನ್‍ಕೆ ಬೈಕ್ ರೂ. 3.99 ಲಕ್ಷದ ಬೆಲೆ, 650ಎಂಟಿ ರೂ. 4.99 ಮತ್ತು 650ಜಿಟಿ ಬೈಕ್ ರೂ. 5.49 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಲೆಕ್ಕ ಹಾಕಿದರೆ 650ಸಿಸಿ ಹೊಂದಿರುವ ಈ ಬೈಕ್‍ಗಳಿಗೆ ಬೆಲೆ ತುಂಬಾ ಕಡಿಮೆ ಅಂತಾನೇ ಹೇಳ್ಬೋದು.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

ಸಧ್ಯಕ್ಕೆ ಸಿಎಫ್‍ಮೋಟೊ ಬಿಡುಗಡೆ ಮಾಡಲಾಗಿರುವ ಬೈಕ್‍ಗಳಲ್ಲಿ ಒಂದು 300ಎನ್‍ಕೆ ಮತ್ತು 650ಎನ್‍ಕೆ ಬೈಕ್‍ಗಳು ನೇಕೆಡ್ ಸ್ಟ್ರೀಟ್ ಫೈಟರ್ಸ್ ಆದರೆ, 650ಎಂಟಿ ಎಂಬ ಒಂದು ಆಡ್ವೆಂಚರ್ ಟೂರರ್ ಮತ್ತು 650ಜಿಟಿ ಎಂಬ ಒಂದು ಸ್ಪೋರ್ಟ್-ಟೂರರ್ ಬೈಕ್‍ಗಳಾಗಿದೆ. ಇವುಗಳ ಬೆನ್ನಲ್ಲೆ ಸಂಸ್ಥೆಯು 400ಸಿಸಿ ಬೈಕ್ ಅನ್ನು ಸಹ ಬಿಡುಗಡೆ ಮಾಡುವುದಾಗಿ ಸಂಸ್ಥೆಯು ಮಾಹಿತಿಯನ್ನು ಹೊರಹಾಕಿತ್ತು.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

400ಸಿಸಿ ಆಧಾರಿತ ಬೈಕ್‍ನೊಂದಿಗೆ ಸಿಎಫ್‍ಮೋಟೊ ಸಂಸ್ಥೆಯು ಎಲೆಕ್ಟ್ರಿಕ್ ಬೈಕ್ ಅನ್ನು ಸಹ ಬಿಡುಗಡೆ ಮಾಡಲಿದ್ದು, ಈ ಬೈಕಿನ ಕುರಿತಾದ ಕೆಲ ಮಾಹಿತಿಗಳು ಇದೀಗ ಹೊರಬಂದಿದೆ. ಮಹಿತಿಗಳ ಪ್ರಕಾರ ಸಂಸ್ಥೆಯು ಬಿಡುಗಡೆ ಮಾಡಲಿರುವ ಹೊಸ ಎಲೆಕ್ಟ್ರಿಕ್ ಬೈಕ್ 300ಎನ್‍ಕೆ ಬೈಕ್‍ ಅನ್ನು ಆಧರಿಸಲಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

300ಎನ್‍ಕೆ ಬೈಕಿನ ಆಧಾರದ ಮೇಲೆ ಬಿಡುಗಡೆಯಾಗಲಿರುವ ಹೊಸ ಎಲೆಕ್ಟ್ರಿಕ್ ಬೈಕ್ ಇದೇ ವರ್ಷದ ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳುವ ಸಾಧ್ಯತೆಗಳಿದ್ದು, 2020ರಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಹಾಗೆಯೆ 2020ರ ಮಧ್ಯಂತರದಲ್ಲಿ ಸಿಎಫ್‍ಮೋಟೊ ತಮ್ಮ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡುವ ಬಹುತೇಕ ಸಾಧ್ಯತೆಗಳಿವೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಸಿಎಫ್‍ಮೋಟೊ ಸಂಸ್ಥೆಯು ಬಿಡುಗಡೆ ಮಾಡಲಿರುವ ಹೊಸ ಎಲೆಕ್ಟ್ರಿಕ್ ಬೈಕ್ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯು ಹೊರಹಾಕಲಿಲ್ಲವಾದರೂ, ರಿವೋಲ್ಟ್ ಸಂಸ್ಥೆಯು ಬಿಡುಗದೆ ಮಾಡಲಿರುವ ಆರ್‍‍ವಿ400 ಬೈಕಿಗೆ ಟಕ್ಕರ್ ನೀಡುವ ಹಾಗೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

ಅಂದರೆ ಸಧ್ಯ ರಿವೋಲ್ಟ್ ಪರಿಚಯಿಸಲಿರುವ ಆರ್‍‍ವಿ400 ಬೈಕ್ ಒಂದು ಬಾರಿಯ ಸಂಪೂರ್ಣ ಚಾರ್ಜ್‍ಗೆ ಸುಮಾರು 156 ಕಿಲೋಮೀಟರ್ ರೇಂಜ್ ನೀಡಲಿದ್ದು, ಸಿಎಫ್‍ಮೋಟೊ ಬಿಡಿಗಡೆ ಮಾಡಲಿರುವ ಎಲೆಕ್ಟ್ರಿಕ್ ಬೈಕ್ ರಿವೋಲ್ಟ್ ಬೈಕ್‍ಗಿಂತಲೂ ಹೆಚ್ಚಿನ ರೇಂಜ್ ಅನ್ನು ನೀಡುವ ಹಾಗೆ ಅಭಿವೃದ್ದಿ ಮಾಡಲಿದೆ ಎಂದು ನಾವು ಅಂದಾಜಿಸಬಹುದಾಗಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

ಇನ್ನು ಸಿಎಫ್‍ಮೋಟೊ ಕಂಪೆನಿಯು ಬಿಡುಗಡೆ ಮಾಡಲಾದ ಎಲ್ಲಾ ಬೈಕ್‍ಗಳನ್ನು ದೇಶಿಯವಾಗಿ ಉಪಕರಣಗಳನ್ನು ಜೋಡಿಸಲಾಗುತ್ತದೆ. ಈ ಬೈಕ್ ಅನ್ನು ಚೀನಾದಿಂದ ಸಿಕೆಡಿ (ಕಂಪ್ಲೀಟ್ಲಿ ಕ್ನಾಕ್ಡ್ ಡೌನ್) ಯೂನಿಟ್ ಮಾರ್ಗದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿರುವ ಎಎಂಡಬ್ಲ್ಯೂ ಮೋಟಾರ್‍‍ಸೈಕಲ್ಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿ ತಮ್ಮ 4 ಹೊಸ ಬೈಕ್‍ಗಳ ಉಪಕರಣಗಳು, ಮಾರಾಟ ಮತ್ತು ಸರ್ವೀಸಿಂಗ್‍ನ ಬಾಧ್ಯತೆಯನ್ನು ನೀಡಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

ಎಎಂಡಬ್ಲ್ಯೂ ಮೋಟಾರ್‍‍ಸೈಕಲ್ಸ್ ಹೈದೆರಾಬಾದ್‍‍ನ ಸಮೀಪದಲ್ಲಿರುವ ಪ್ಲಾಂಟ್ನಲ್ಲಿ ನಾಲ್ಕು ಹೊಸ ಬೈಕ್‍ಗಳ ಉತ್ಪಾದನೆಯನ್ನು ಮಾಡಲಾಗುತ್ತದೆ. ಎಎಂಡಬ್ಲ್ಯೂ ವರ್ಷಕ್ಕೆ 10,000 ಯೂನಿಟ್ ಬೈಕ್‍ಗಳನ್ನು ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದ್ದು, ಎಲೆಕ್ಟ್ರಿಕ್ ಬೈಕ್ ಅನ್ನು ಸಹ ಅದೇ ಪ್ಲಾಂಟ್‍ನಲ್ಲಿ ಉತ್ಪಾದನೆ ಮಾಡಲಿದೆ. ಸಧ್ಯ ಸಿಎಫ್‍ಮೋಟೊ ರಾಷ್ಟ್ರದೆಲ್ಲೆಡೆ ಏಳು ಡೀಲರ್‍‍ಶಿಪ್‍ಗಳನ್ನು ತೆರಯಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಡೀಲರ್‍‍ಶಿಪ್‍ಗಳನ್ನು ತೆರೆಯುವುದಾಗಿ ಹೇಳಿಕೊಂಡಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಸಿಎಫ್‍ಮೋಟೊ

ಸಿಎಫ್‍ಮೋಟೊ ಸಂಸ್ಥೆಯು ತಮ್ಮ ಹೊಸ ಎಲೆಕ್ಟ್ರಿಕ್ ಬೈಕ್ ಮತ್ತು 400ಸಿಸಿ ಬೈಕ್ ಅನ್ನು ಬಿಡುಗಡೆ ಮಾಡಲು ಇನ್ನು ಸುಮಾರು 18 ರಿಂದ 24 ತಿಂಗಳುಗಳ ಸಮಯವಿದ್ದು, ಈ ನಡುವಿನಲ್ಲಿ ಸಂಸ್ಥೆಯು ಅಥೆರ್ ಮತ್ತು ರಿವೋಲ್ಟ್ ಸಂಸ್ಥೆಗಳ ಹಾಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಅನ್ನು ತೆರೆಯುವ ಯೋಜನೆಯಲ್ಲಿದೆ.

Most Read Articles

Kannada
English summary
CFMoto Electric Bike India Launch Details. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X