ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಚಾಲ್ತಿಯಲ್ಲಿರುವ ಎಲೆಕ್ಟ್ರಿಕ್ ವಾಹನಗಳಿಗೆ ಮರು ಪ್ರಮಾಣಪತ್ರವನ್ನು ಪಡೆಯಬೇಕೆನ್ನುವ ಹೊಸ ನಿಯಮದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಸ್ಥಗಿತಗೊಂಡಿದ್ದು, ಸರ್ಕಾರದ ಈ ನಡೆಯಿಂದಾಗಿ ದ್ವಿಚಕ್ರ ಮತ್ತು ತ್ರಿ ಚಕ್ರ ಎಲೆಕ್ಟ್ರಿಕ್ ವಾಹನಗಳ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಫೇಮ್2 ಯೋಜನೆಯನ್ವಯ ಸರ್ಕಾರವು ಎಲೆಕ್ಟ್ರಿಕ್ ವಾಹನಗಳು ಮರು ಪ್ರಮಾಣ ಪತ್ರ ಪಡೆಯುವ ನಿಯಮವನ್ನು ಜಾರಿಗೆ ತಂದಿದೆ.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಎಕಾನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, ಕಳೆದ ಮಾರ್ಚ್ ತಿಂಗಳಿನಲ್ಲಿ ಸುಮಾರು 6,000 ದಷ್ಟು ಮಾರಾಟವಾಗಿದ್ದ ವಾಹನಗಳ ಸಂಖ್ಯೆ ಈ ತಿಂಗಳಿನಲ್ಲಿ ಶೂನ್ಯಕ್ಕೆ ಬಂದು ನಿಂತಿದೆ. ಫೇಮ್ ಯೋಜನೆಯಡಿ ಕಡಿಮೆ ಸಬ್ಸಿಡಿ ನೀಡುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆಯು ದುಬಾರಿಯಾಗಿದೆ. ಫೇಮ್2 ಯೋಜನೆಯಡಿ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಳಿಗೆ ಮಾತ್ರ ಸಬ್ಸಿಡಿ ದೊರೆಯಲಿದೆ.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಸೊಸೈಟಿ ಆಫ್ ಮ್ಯಾನುಫ್ಯಾಕ್ಚರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಸ್ಎಂಇವಿ) ಡೈರೆಕ್ಟರ್ ಜನರಲ್, ಸೊಹಿಂದರ್ ಗಿಲ್ ರವರ ಪ್ರಕಾರ, ಏಪ್ರಿಲ್ ತಿಂಗಳಿನಲ್ಲಿ ಯಾವುದೇ ಮಾರಾಟವಾಗಿಲ್ಲ. ಕೇವಲ 3 ವಾಹನಗಳಿಗೆ ಸರ್ಕಾರಿ ಸಂಸ್ಥೆಗಳಿಂದ ಪ್ರಮಾಣಪತ್ರವನ್ನು ನೀಡಲಾಗಿದೆ.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಫೇಮ್2 ರ ಅಡಿಯಲ್ಲಿ ಯಾವುದೇ ಮಾರಾಟವನ್ನು ಮಾಡಲಾಗಿಲ್ಲ. ಮೇ ತಿಂಗಳಿನಲ್ಲೂ ಸಹ ಉದ್ಯಮವು ಕೆಲವು ನೂರುಗಳಷ್ಟು ವಾಹನಗಳನ್ನು ಮಾರಾಟ ಮಾಡಬಹುದು. ಆಗಸ್ಟ್ ತಿಂಗಳ ಹೊತ್ತಿಗೆ ಮಾರಾಟದಲ್ಲಿ ಮತ್ತೆ ಚೇತರಿಕೆ ಕಾಣಬಹುದು.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಭಾರತ ಸರ್ಕಾರದ ಫೇಮ್2 ಯೋಜನೆಯಡಿಯಲ್ಲಿ, ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್ (ಸಿಎಂವಿಆರ್) 1989ರ ನಿಯಮ 126 ರನ್ವಯ ಪ್ರಮಾಣಪತ್ರ ಪಡೆಯಲು ಒರಿಜಿನಲ್ ಎಕ್ವಿಪ್ ಮೆಂಟ್ ಮ್ಯಾನು ಫ್ಯಾಕ್ಚರರ್ಸ್ (ಒಇಎಂ) ಕಡ್ಡಾಯವಾಗಿ ಬೇಕಾಗಿರುತ್ತದೆ. ಪ್ರಮಾಣ ಪತ್ರ ಪಡೆದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪ್ರತಿ ಕಿಲೋ ವ್ಯಾಟ್ ಗಂಟೆಗೆ (ಕೆಡಬ್ಲೂಹೆಚ್) ರೂ.10,000 ಸಬ್ಸಿಡಿ ಪಡೆಯುತ್ತವೆ. ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆಗೆ 3 ತಿಂಗಳು ಬೇಕಾಗುತ್ತದೆ, ಆದರೆ ತಯಾರಕರ ಪ್ರಕಾರ ಸರ್ಕಾರವು ಅವರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡುತ್ತಿಲ್ಲ.

MOST READ: ಬಹಿರಂಗಗೊಂಡ 2020ರ ಡಾಕರ್ ರ್‍ಯಾಲಿ ಮಾರ್ಗಗಳು

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಫೇಮ್ 2 ಯೋಜನೆಯು ಕಳೆದ ತಿಂಗಳು ಜಾರಿಗೆ ಬಂತು. ಬಹುತೇಕ ತಯಾರಕರು 50% ರಷ್ಟು ಲೋಕಲೈಸೇಷನ್ ಅವಶ್ಯಕತೆಯನ್ನು ಪೂರೈಸಿಲ್ಲ. ಎನ್‍ಡಿಎಸ್ ಎಕೋ ಮೋಟಾರ್ಸ್ ನ ಅಧ್ಯಕ್ಷ ಎಂ ಹೆಚ್ ರೆಡ್ಡಿ ರವರು ಮಾತನಾಡಿ, ಮರು ಪ್ರಮಾಣ ಪತ್ರ ಪಡೆಯಲು ಮತ್ತು ಲೋಕಲೈಸೇಷನ್ ಅವಶ್ಯಕತೆ ಗಳನ್ನು ಪೂರೈಸಿಲು ನಮಗೆ ಯಾವುದೇ ಕಾಲಾವಕಾಶ ನೀಡಲಿಲ್ಲ. ಸದ್ಯಕ್ಕೆ ಬಿಡಿಭಾಗಗಳನ್ನು ಸ್ಥಳಿಯವಾಗಿ ಪೂರೈಸಲು ಯಾವುದೇ ಸ್ಥಳಿಯ ಕಂಪನಿಯು ಇಲ್ಲದೇ ಇರುವುದರಿಂದ ಮಾರಾಟವು ಸ್ಥಗಿತಗೊಂಡಿದೆ. ನಮಗೆ ಒಂದು ವರ್ಷದ ಕಾಲಾವಧಿ ನೀಡಿದ್ದರೆ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸುತ್ತಿದ್ದೇವು, ವಾಹನಗಳ ಬೇಡಿಕೆಗಳಿಗೂ ಯಾವುದೇ ತೊಂದರೆಯಾಗುತ್ತಿರಲಿಲ್ಲ ಎಂದು ತಿಳಿಸಿದರು.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಇಂಟರ್ನಲ್ ಕಂಬಸ್ಜನ್ ಎಂಜಿನ್ ವಾಹನಗಳ ಬಗ್ಗೆ ಹೇಳುವುದಾದರೆ, ಅವುಗಳ ಮಾರಾಟ ಅಧಿಕವಾಗಿದ್ದು, ಡೀಲರ್ ಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಆದ ಕಾರಣ ಬೆಲೆಗಳು ಸಹ ಸ್ಪರ್ಧಾತ್ಮಕವಾಗಿವೆ. ಅವರೂ ಸಹ 15-20% ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಾರೆ. ದೇಶಿಯ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಮಾರಾಟವು ವಾರ್ಷಿಕವಾಗಿ ಒಂದು ಮಿಲಿಯನ್ ತಲುಪುವವರೆಗೆ ಮಾರಾಟಗಾರರು ಅವುಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಫೇಮ್ 2 ರ ಯೋಜನೆಯಲ್ಲಿನ ಸೌಲಭ್ಯಗಳನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕರು ಸ್ಥಳಿಯವಾಗಿ 50% ರಷ್ಟು ಎಕ್ಸ್ ಫ್ಯಾಕ್ಟರಿ ಮಾಡಿರಬೇಕು. ಮೋಟಾರ್ಸ್, ಕಂಟ್ರೊಲರ್ಸ್ ಮತ್ತು ಬ್ಯಾಟರಿಗಳು ಎಕ್ಸ್ ಫ್ಯಾಕ್ಟರಿ ದರಕ್ಕಿಂತ ಜಾಸ್ತಿಯಾಗಿದ್ದು, ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಉದ್ಯಮದ ಪ್ರಕಾರ ಸರ್ಕಾರವು ಅವರಿಗೆ ದೀರ್ಘಾವಧಿಯ ಕಾಲಾವಕಾಶ ನೀಡಬೇಕು. ಅವರಿಗೆ 5 ರಿಂದ 10 ವರ್ಷಗಳ ಕಾಲಾವಕಾಶ ನೀಡಿದರೆ, ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಿದೆ. ಸ್ಥಳಿಯವಾಗಿ ಬಿಡಿ ಭಾಗಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಹೀರೋ ಎಲೆಕ್ಟ್ರಿಕ್ ನ ಸಿಇಒ ಗಿಲ್ ರವರ ಪ್ರಕಾರ, ಫೇಮ್1 ರ ಯೋಜನೆಯಡಿ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗಾಗಿ ಡಿಮ್ಯಾಂಡ್ ಇನ್ಸೆಟಿವ್ ಅನ್ನು ರೂ. 22,000 ಗಳಿಗೆ ಏರಿಸಿತ್ತು.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಎಲೆಕ್ಟ್ರಿಕ್ ವೆಹಿಕಲ್ ಉದ್ಯಮದ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ 1 ಮಿಲಿಯನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆ ಮಾಡುವುದು ಬಹಳ ಕಷ್ಟವಾಗಿರಲಿದೆ. ಈ ಯಾವ ಸವಾಲುಗಳು ಇರದ ಕಳೆದ ಆರ್ಥಿಕ ವರ್ಷದಲ್ಲಿ 1.26 ಲಕ್ಷ ಇವಿಗಳನ್ನು ಮಾರಾಟ ಮಾಡಲಾಗಿತ್ತು.

ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಆರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಸರ್ಕಾರದ ಕ್ರಮವು ಉತ್ತಮವಾಗಿತ್ತು. ಆದರೆ ಈಗ ಅನುಸರಿಸುತ್ತಿರುವ ನೀತಿಯು ಎಲೆಕ್ಟ್ರಿಕ್ ವಾಹನಗಳಿಗೆ ಮಾರಕವಾಗಲಿದೆ. ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೂ ರಿಯಾಯಿತಿಗಳನ್ನು ಕಡಿಮೆ ಮಾಡಲಾಗುತ್ತಿದೆ. ಸರ್ಕಾರವು ಹಸಿರು ನೀತಿಯನ್ನು ಉತ್ತೇಜಿಸಲು ಈಗಿರುವ ಕಠಿಣ ನೀತಿಯನ್ನು ತೆಗೆದುಹಾಕಿ, ಎಲೆಕ್ಟ್ರಿಕ್ ಉದ್ಯಮಕ್ಕೆ ಪೂರಕವಾದ ಹೊಸ ನೀತಿಯನ್ನು ಜಾರಿಗೆ ತರಬೇಕು.

Most Read Articles

Kannada
English summary
Electric Vehicle Production Comes To A Halt — Another Roadblock In The Electric Revolution - Read in Kannada
Story first published: Tuesday, April 30, 2019, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X