ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಹೀರೋ ಸಂಸ್ಥೆಯ ಸ್ಪ್ಲೆಂಡರ್ ಬೈಕ್ ಮೊನ್ನೆಯಷ್ಟೆ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ತನ್ನ 25 ವರ್ಷವನ್ನು ಪೂರೈಸಿದ್ದು, ಇದೀಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇನೆಂದರೆ ಹೀರೋ ಸ್ಪ್ಲೆಂಡರ್ ಬೈಕ್ ದೇಶದಲ್ಲಿ ಬಿಎಸ್-6 ಎಂಜಿನ್ ಆಧಾರಿತವಾದ ಮೊದಲ ಮೋಟಾರ್‍‍ಸೈಕಲ್ ಎನ್ನಿಸಿಕೊಂಡಿದೆ.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಹೌದು, ಹೀರೋ ಸ್ಪ್ಲೆಂಡರ್ ಐ-ಸ್ಮಾರ್ಟ್ ಮೋಟಾರ್‍‍ಸೈಕಲ್ ಇದೀಗ ದೇಶದ ಮೊದಲ ಬಿಎಸ್-6 ಎಂಜಿನ್ ಆಧಾರಿತ ಬೈಕ್ ಆಗಿರಲಿದ್ದು, ಕೇಂದ್ರ ಸರ್ಕಾರವು ಹೊಸ ಎಮಿಷನ್ ರೂಲ್ಸ್ ಅನ್ನು ಜಾರಿ ಮಾಡುವ ಒಂಬತ್ತು ತಿಂಗಳ ಹಿಂದೆಯೆ ಈ ಕಾರ್ಯವನ್ನು ಮಾಡಲಾಗಿದೆ. ಆದರೆ ಬಿಎಸ್-6 ಎಂಜಿನ್ ಆಧಾರಿತ ಹೀರೋ ಸ್ಪ್ಲೆಂಡರ್ ಬೈಕಿನ ಎಂಜಿನ್ ವೈಶಿಷ್ಟ್ಯತೆಗಳ ಬಗ್ಗೆ ಇನ್ನು ಸ್ಪಷ್ಠನೆ ಸಿಗಲಿಲ್ಲವಾಗಿದ್ದು, ಮತ್ತಷ್ಟು ಮಾಹಿತಿಗಳಿಗಾಗಿ ಕಾಯ್ದು ನೋಡಬೇಕಿದೆ.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನರೇಂದ್ರ ಮೋದಿರವರ ಸರ್ಕಾರವು ಭಾರತ್ ಸ್ಟೇಜ್ (ಬಿ‍ಎಸ್)6 ನಿಯಮಗಳನ್ನು 2022 ರಿಂದ ಜಾರಿಗೆ ತರಲು ನಿರ್ಧರಿಸಿತ್ತು. ಆದರೆ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಎರಡು ವರ್ಷ ಮುಂಚಿತವಾಗಿಯೇ ನಿಯಮಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು. 2020ರ ನಂತರ ಬಿ‍ಎಸ್6 ಮಾಲಿನ್ಯಕ್ಕೆ ಹೊಂದಿಕೊಳ್ಳುವ ವಾಹನಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಹೇಳಿದರು.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಹೀರೋ ಮೋಟೋಕಾರ್ಪ್ ಸಂಸ್ಥೆಯು ಪ್ರಪಂಚದಲ್ಲಿ ಕಮ್ಯೂಟರ್ ಬೈಕ್‍ಗಳ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಕೇವಲ ಭಾರತದಲ್ಲಿಯೆ ಸುಮಾರು ಶೇಕಡ 46ಕ್ಕು ಹೆಚ್ಚು ಬೈಕ್‍ಗಳನ್ನು ಮಾರಾಟ ಮಾಡಿದೆ ಎಂದರೆ ನಂಬಲೇಬೇಕು.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಭಾರತದಲ್ಲಿ ವಿವಿದ ಬಗೆಯ ದ್ವಿಚಕ್ರ ವಾಹನಗಳ ಬೇಡಿಕೆಯು ಹೆಚ್ಚಿದ್ದು, ಹಲವಾರು ವಿದೇಶಿ ವಾಹನ ತಯಾರಕ ಸಂಸ್ಥೆಗಳು ಹೆಚ್ಚಿನ ಮೊತ್ತದ ಬಂಡವಾಳವನ್ನು ಹೂಡಿದ್ದಾರೆ. ಈ ನಿಟ್ಟಿನಲ್ಲಿ ಹೋಂಡಾ ಟೂ ವ್ಹೀಲರ್ಸ್, ಸುಜುಕಿ ಮೋಟಾರ್‍‍ಸೈಕಲ್ಸ್ ಮತ್ತು ಯಮಹಾ ಸಂಸ್ಥೆಗಳು ಕೂಡಾ ಪಟ್ಟಿಯಲ್ಲಿವೆ.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಸುಮಾರು 7 ಲಕ್ಷಕ್ಕು ಅಧಿಕವಾಗಿ ಮಾರಾಟಗೊಂಡ ಹೀರೋ ಸ್ಪ್ಲೆಂಡರ್ ಬೈಕ್‍ಗಳು ಸತತ ಐದನೆಯ ಬಾರಿ ಈ ದಾಖಲೆಯನ್ನು ಮಾಡಿದೆ. 2018ರ ಏಪ್ರಿಲ್‍ನಿಂದ ಸೆಪ್ಟೆಂಬರ್‍ ತಿಂಗಳ ವರೆಗು ಹೀರೋ ಮೋಟೋಕಾರ್ಪ್ ಸಂಸ್ಥೆಯು 42 ಲಕ್ಷದ ವಾಹನಗಳನ್ನು ಮಾರಾಟ ಮಾಡಿದ್ದು, ಈ ಹಬ್ಬದ ಋತುವಿನಲ್ಲಿ ಇನ್ನು ಹೆಚ್ಚಿನ ಮಾರಟವನ್ನು ಮಾಡುವ ತವಕದಲ್ಲಿದ್ದಾರೆ.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಸ್ಪ್ಲೆಂಡರ್ ಬೈಕ್ ಮಾತ್ರವಲ್ಲದೇ ಹೀರೋ ಮೋಟೋಕಾರ್ಪ್ ಸಂಸ್ಥೆಯ ಪ್ಯಾಷನ್ ಬೈಕ್‍ಗಳು ಕೂಡಾ ಮಾರುಕಟ್ಟೆಯಲ್ಲಿ ಉತ್ತಮವಾದ ಮಾರಾಟವನ್ನು ಕಾಣುತ್ತಿದೆ. ಹೀರೋ ಮೋಟೋಕಾರ್ಪ್ ಸಂಸ್ಥೆಯು ಕೇವಲ ಮೋಟಾರ್‍‍ಬೈಕ್‍ಗಳಲ್ಲಿ ಮಾತ್ರವಲ್ಲದೇ, ಸ್ಕೂಟರ್‍‍ಗಳಲ್ಲಿಯು ಅಧಿಕವಾದ ಮಾರಾಟವನ್ನು ಕಾಣುತ್ತಿದೆ.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಸಂಸ್ಥೆಯ ಸ್ಕೂಟರ್‍‍ಗಳಾದ ಹೀರೋ ಡ್ಯುಯೆಟ್ ಮತ್ತು ಮಯೆಸ್ಟ್ರೋ ಎಡ್ಜ್ ಸ್ಕೂಟರ್‍‍ಗಳು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಸಂಸ್ಥೆಯು 200ಸಿಸಿ ಮೋಟಾರ್‍‍ಸೈಕಲ್‍ಗಳ ಸರಣಿಯಲ್ಲಿ ತಮ್ಮ ಹೀರೋ ಎಕ್ಸ್ಟ್ರೀಮ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದಾರೆ.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಹೀರೋ ಮೋಟೋಕಾರ್ಪ್ ಸಂಸ್ಥೆಯ ಸ್ಪ್ಲೆಂಡರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 20ವರ್ಷಗಳಿಂದ ಇದೆ. ಹಲವಾರು ಬಾರಿ ಉತ್ತಮವಾಗಿ ಮಾರಾಟಗೊಂಡ ದ್ವಿಚಕ್ರ ವಾಹನಗಳ ಪ್ರಶಸ್ತಿಯನ್ನು ಪಡೆದಿದೆ ಈ ಸ್ಕೂಟರ್, ಆದರೆ ಇದೀಗ ಈ ವರ್ಷ ಈ ಪ್ರಶಸ್ತಿಯನ್ನು ಹೋಂಡಾ ಆಕ್ಟೀವಾ ತಮ್ಮದಾಗಿಸಿಕೊಂಡಿದೆ. ಹೀರೋ ಸ್ಪ್ಲೆಂಡರ್ ಪ್ರಸ್ತುತ ಪ್ಲಸ್, ಪ್ಲಸ್ ಐ3ಎಸ್ ಮತ್ತು ಐಸ್ಮಾರ್ಟ್ 110 ಎಂಬ ಮೂರು ವೇರಿಯಂಟ್‍ಗಳಲ್ಲಿ ಮಾರಾಟಗೊಳ್ಳುತ್ತಿದೆ.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಎಂಜಿನ್ ವಿಚಾರಕ್ಕೆ ಬಂದರೆ ಹೀರೋ ಸ್ಪ್ಲೆಂಡರ್ ಬೈಕ್ 97.2ಸಿಸಿ ಏರ್ ಕೂಲ್ಡ್, ಸಿಂಗಲ್ ಎಂಜಿನ್ ಸಹಾಯದಿಂದ 8.2ಬಿಹೆಚ್‍ಪಿ ಮತ್ತು 8.05ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೀರೋ ಸ್ಪ್ಲೆಂಡರ್ - ದೇಶದಲ್ಲಿ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ದ್ವಿಚಕ್ರ ವಾಹನ

ಇನ್ನು ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ 109.15ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 9.3ಬಿಹೆಚ್‍ಪಿ ಮತ್ತು 9ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಎರಡೂ ಎಂಜಿನ್‍ಗಳನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
Hero Splendor Becomes The First BS-VI Compliant Two-Wheeler. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X