Just In
Don't Miss!
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಜಾವಾ
ಜಾವಾ ಮೋಟಾರ್‌ಸೈಕಲ್ಸ್ ಜಾವಾದ ಆನಿವರ್ಸರಿ ಎಡಿಷನ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಜಾವಾ ಬೈಕುಗಳನ್ನು ಜೆಕ್ ಮೂಲದ ಕಂಪನಿಯ 90ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಜಾವಾ ಆನಿವರ್ಸರಿ ಎಡಿಷನ್ ಬೈಕುಗಳ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.73 ಲಕ್ಷಗಳಾಗಿದೆ.

ಆನಿವರ್ಸರಿ ಎಡಿಷನ್‍ನ ಕೇವಲ 90 ಯುನಿಟ್‍ಗಳನ್ನು ಬಿಡುಗಡೆಗೊಳಿಸಲಾಗುವುದು. ಈ ಬೈಕ್ ಹಲವಾರು ವಿಶೇಷ ಡೆಕಲ್, ಅಪ್‍ಡೇಟೆಡ್ ಲಿವರಿ ಹಾಗೂ ಹೊಸ ಬಣ್ಣವನ್ನು ಹೊಂದಿರಲಿದೆ. ವಿಶೇಷ ಡೆಕಲ್ ಹಾಗೂ ಬಣ್ಣವನ್ನು 1929ರಲ್ಲಿ ಬಿಡುಗಡೆಗೊಳಿಸಲಾಗಿದ್ದ ಜಾವಾ 500 ಒಹೆಚ್‍ವಿ ಬೈಕಿನ ನೆನಪಿಗಾಗಿ ಬಿಡುಗಡೆಗೊಳಿಸಲಾಗಿದೆ.

ಆನಿವರ್ಸರಿ ಎಡಿಷನ್ ಬೈಕಿನಲ್ಲಿ ಜಾವಾ ಕಂಪನಿಯ ಮೊದಲ ಬೈಕಿನಲ್ಲಿದ್ದಂತಹ ಲಿವರಿಯನ್ನು ಅಳವಡಿಸಲಾಗುವುದು. ಈ ಲಿವರಿಯು ಕೆಂಪು ಹಾಗೂ ಐವರಿ ಬಣ್ಣವನ್ನು ಹೊಂದಿರಲಿದೆ. ಇದರ ಜೊತೆಗೆ ಫ್ಯೂಯಲ್ ಟ್ಯಾಂಕ್ ಮೇಲೆ ಪಿನ್ ಸ್ಟ್ರಿಪಿಂಗ್ ಹೊಂದಿರಲಿದೆ.

ಈ ಬೈಕಿನಲ್ಲಿರುವ ಎಕ್ಸಾಸ್ಟ್ ಪೈಪ್ ಹಾಗೂ ಎಂಜಿನ್ ಕಾಂಟ್ರಾಸ್ಟ್ ಕ್ರೋಮ್ ಬಣ್ಣವನ್ನು ಹೊಂದಿರಲಿವೆ. ಆನಿವರ್ಸರಿ ಎಡಿಷನ್ ಬೈಕುಗಳ ಫ್ಯೂಯಲ್ ಟ್ಯಾಂಕಿನ ಮೇಲೆ ಲಾಂಛನದ ಜೊತೆಗೆ ವಿಶಿಷ್ಟವಾದ ಸೀರಿಯಲ್ ನಂಬರ್ ಇರಲಿದೆ.

ಈ ಕಾಸ್ಮೆಟಿಕ್ ಅಪ್‍ಡೇಟ್‍ಗಳ ಜೊತೆಗೆ ಆನಿವರ್ಸರಿ ಎಡಿಷನ್ ಬೈಕುಗಳ ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಈ ಬೈಕಿನಲ್ಲಿ ಜಾವಾ ಕಂಪನಿಯ ಉಳಿದ ಬೈಕುಗಳಲ್ಲಿರುವ 293 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಇರಲಿದೆ.

ಈ ಎಂಜಿನ್ 26 ಬಿಹೆಚ್‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡಿನ ಗೇರ್‍ಬಾಕ್ಸ್ ಹೊಂದಿದೆ. ಸಸ್ಪೆಂಷನ್‍ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡ್ಯೂಯಲ್ ಶಾಕ್ ಅಬ್ಸರ್ವರ್‍ಗಳಿವೆ.

ಬ್ರೇಕಿಂಗ್‍ಗಳಿಗಾಗಿ ಬೈಕಿನ ಎರಡೂ ಬದಿಯಲ್ಲಿ ಡಿಸ್ಕ್ ಬ್ರೇಕ್‍ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಲಿಮಿಟೆಡ್ ಎಡಿಷನ್ ಬೈಕುಗಳು ಅಕ್ಟೋಬರ್ 15ರಿಂದ ಡೀಲರ್‍ಗಳ ಬಳಿ ಲಭ್ಯವಿರಲಿವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಜಾವಾ ಬೈಕುಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು ಈ ಆನಿವರ್ಸರಿ ಎಡಿಷನ್ ಬೈಕುಗಳನ್ನು ಪಡೆಯಲಿದ್ದಾರೆ. ಈ ಸ್ಪೆಷಲ್ ಎಡಿಷನ್ ಬೈಕ್ ಅನ್ನು ಖರೀದಿಸ ಬಯಸುವ ಗ್ರಾಹಕರು ಅಕ್ಟೋಬರ್ 22ರೊಳಗೆ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದಾಗಿದೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಜಾವಾ ಕಂಪನಿಯು 90 ಗ್ರಾಹಕರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಿದೆ. ಅವರು ಈ ಆನಿವರ್ಸರಿ ಎಡಿಷನ್ ಬೈಕುಗಳನ್ನು ತಕ್ಷಣವೇ ಪಡೆಯಲಿದ್ದಾರೆ. ಈ ವಿಶೇಷ ಆವೃತ್ತಿಯ ಬೈಕುಗಳ ವಿತರಣೆಯನ್ನು ನವೆಂಬರ್‍ನಿಂದ ಆರಂಭಿಸಲಾಗುವುದು.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಜಾವಾ ಕಂಪನಿಯು ಕಳೆದ ವರ್ಷದ ನವೆಂಬರ್‍ನಲ್ಲಿ ಮತ್ತೆ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿತು. ಕಂಪನಿಯು ಸದ್ಯಕ್ಕೆ ಜಾವಾ ಹಾಗೂ ಜಾವಾ 42 ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಈ ಎರಡೂ ಬೈಕುಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ.

ಈ ಬೈಕುಗಳ ಕಾಯುವ ಅವಧಿಯು 9ರಿಂದ 10 ತಿಂಗಳಾಗಿದೆ. ಜಾವಾ ಕಂಪನಿಯು ಭಾರತದಲ್ಲಿ ಇನ್ನೂ ಮೂರು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ. ಇದರಲ್ಲಿ ಕಳೆದ ವರ್ಷದ ನವೆಂಬರ್‍ನಲ್ಲಿ ಪ್ರದರ್ಶಿಸಲಾದ ಪೆರಕ್ ಬಾಬರ್ ಬೈಕ್ ಸಹ ಸೇರಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಜಾವಾ ಕಂಪನಿಯ ಆನಿವರ್ಸರಿ ಎಡಿಷನ್ ಬೈಕುಗಳನ್ನು ಬಿಡುಗಡೆಗೊಳಿಸುವ ಮೂಲಕ ತನ್ನ 90 ವರ್ಷಗಳ ಅಸ್ತಿತ್ವಕ್ಕೆ ಗೌರವ ನೀಡುತ್ತಿದೆ. ಜಾವಾ ಬೈಕುಗಳನ್ನು ಮೊದಲ ಬಾರಿಗೆ 1929ರಲ್ಲಿ ಜೆಕೊಸ್ಲೊವಾಕಿಯಾದಲ್ಲಿ ಫ್ರಾಂಟಿಸೆಕ್ ಜನೆಸೆಕ್‍ರವರು ಬಿಡುಗಡೆಗೊಳಿಸಿದ್ದರು.

ಮೊಟ್ಟ ಮೊದಲ ಬಾರಿಗೆ ಜಾವಾ 500 ಒಹೆಚ್‍ವಿ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಈ ಬೈಕಿನ ಆಧಾರದ ಮೇಲೆ ಹೊಸ ಆನಿವರ್ಸರಿ ಎಡಿಷನ್ ಬೈಕ್ ಅನ್ನು ತಯಾರಿಸಲಾಗಿದೆ. ಜಾವಾ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ 350 ಬೈಕುಗಳಿಗೆ ಪೈಪೋಟಿ ನೀಡುತ್ತವೆ.