ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಯುವಕರ ನೆಚ್ಚಿನ ಕೆಟಿಎಂ ಬೈಕ್

ಯುವಕರ ನೆಚ್ಚಿನ ಬೈಕ್ ಆದ ಕೆಟಿಎಂ ತನ್ನ ಹೊಸ 390 ಅಡ್ವೆಂಚರ್ ಬೈಕಿನ ಹೊಸ ವೀಡಿಯೋ ಜಾಹೀರಾತನ್ನು ಬಿಡುಗಡೆಗೊಳಿಸಿದೆ. ಪವರ್‍‍ಫುಲ್ ಕೆ‍ಟಿಎಂ ಬೈಕ್‍ನ ಜಾಹೀರಾತಿನ ಮೂಲಕ ಹೊಸ 390 ಅಡ್ವೆಂಚರ್ ಬೈಕ್ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಯುವಕರ ನೆಚ್ಚಿನ ಕೆಟಿಎಂ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಕೆಟಿಎಂ 390 ಅಡ್ವೆಂಚರ್ ಇಐಸಿಎಂಎನಲ್ಲಿ ಅನಾವರಣಗೊಂಡಿತ್ತು. ಈ ಮೂಲಕ ಡ್ಯೂಕ್ ಶ್ರೇಣಿಯ ಬೈಕುಗಳಲ್ಲಿ ಹೊಸ ಸದಸ್ಯನ ಸೇರ್ಪಡೆಯಾಗಿದೆ. ಈ ಬೈಕನ್ನು ಭಾರತದಲ್ಲಿ ತಯಾರಿಸಲಾಗುವುದು ಮತ್ತು ವಿದೇಶಿ ಮಾರುಕಟ್ಟೆಗಳಿಗೆ ರಪ್ತು ಮಾಡಲಾಗುವುದು.

ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಯುವಕರ ನೆಚ್ಚಿನ ಕೆಟಿಎಂ ಬೈಕ್

ಕೆಟಿಎಂ ಹೊಸ 390 ಅಡ್ವೆಂಚರ್ ಯುರೋಪ್ ಮತ್ತು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಕೆಟಿಎಂನ ಕಾಂಪ್ಯಾಕ್ಟ್ ಅಡ್ವೆಂಚರ್ ಟೂರರ್ ಶಿಲ್ಡ್ ಆಕಾರದ ಎಲ್‍ಇಡಿ ಹೆಡ್‍‍ಲ್ಯಾಂಪ್, ವಿಸ್ತರಿಸಿದ ಫ್ಯೂಯಲ್ ಟ್ಯಾಂಕ್, ವಾಟರ್ ವೆಡಿಂಗ್ ಮತ್ತು ಡಿಜಿಟಲ್ ಟಿಎಫ್‍‍ಟಿ ಡಿಸ್‍‍ಪ್ಲೇಯನ್ನು ಹೊಂದಿದೆ.

ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಯುವಕರ ನೆಚ್ಚಿನ ಕೆಟಿಎಂ ಬೈಕ್

ಹೊಸ 390 ಅಡ್ವೆಂಚರ್ ಬೈಕ್ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸೀಟಿನ ಎತ್ತರವು 855 ಎಂಎಂಗಳಾಗಿದೆ. 390 ಅಡ್ವೆಂಚರ್ ಬೈಕ್, 14.8 ಲೀಟರಿನ ಫ್ಯೂಲ್ ಟ್ಯಾಂಕ್‍ ಅನ್ನು ಹೊಂದಿರಲಿದೆ. 158 ಕೆ.ಜಿ ತೂಕವನ್ನು ಹೊಂದಿರುವ ಈ ಬೈಕಿನ ತೂಕವು 390 ಡ್ಯೂಕ್ ಬೈಕಿಗಿಂತ ತುಸು ಹೆಚ್ಚಾಗಿದೆ.

ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಯುವಕರ ನೆಚ್ಚಿನ ಕೆಟಿಎಂ ಬೈಕ್

390 ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 19 ಇಂಚಿನ ದೊಡ್ಡ ಟಯರ್ ಹಾಗೂ ಹಿಂಭಾಗದಲ್ಲಿ 17 ಇಂಚಿನ ಟಯರ್‍‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್, ಎರಡು ಡಿಸ್ಕ್ ಬ್ರೇಕ್‍‍ಗಳು ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಯುವಕರ ನೆಚ್ಚಿನ ಕೆಟಿಎಂ ಬೈಕ್

ಅಡ್ವೆಂಚರ್ ಕಾರ್ಯಕ್ಷಮತೆಗೆ ಅನುಗುಣವಾದ ಟಯರ್‍‍ಗಳನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಟ್ರಿಲ್ಲಿಸ್ ಸ್ಯಾಡಲ್ ಸ್ಟೇಗಳು ಹಿಂಭಾಗದ ಲಗೇಜ್ ರ‍್ಯಾಕ್‌, ಪ್ಯಾನಿಯರ್‍, ಫ್ರೇಮ್ ಸ್ಲೈಡರ್ ಮತ್ತು ಎಂಜಿನ್ ಗಾರ್ಡ್‍‍ಗಳಂತಹ ಹಲವಾರು ವೈಶಿಷ್ಟ್ಯಗಳಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಯುವಕರ ನೆಚ್ಚಿನ ಕೆಟಿಎಂ ಬೈಕ್

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್, 390 ಡ್ಯೂಕ್ ಹಾಗೂ ಆರ್‍‍ಸಿ ಮಾದರಿಯ ಬೈಕುಗಳಲ್ಲಿರುವ 373.2 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 43 ಬಿ‍‍ಹೆಚ್‍‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಸ್ಲಿಪ್ ಮತ್ತು ಅಸಿಸ್ಟ್ ಮೋಡ್ ಮತ್ತು ಸೂಪರ್‍‍ಮೋಟೊ ಮೋಡ್ ಅನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಕೆಟಿಎಂ 390 ಡ್ಯೂಕ್ ಬೈಕ್ ಅನ್ನು ಕಂಪನಿಯು ಪುಣೆ ಬಳಿಯ ಬಜಾಜ್ ಚಕಾನ್ ಘಟಕದಲ್ಲಿ ತಯಾರಿಸಲಿದೆ. ಈ ಬೈಕ್ ಆಸ್ಟ್ರಿಯನ್ ಬ್ರ್ಯಾಂಡ್‍‍ನ ಬಹುನಿರೀಕ್ಷಿತ ಬೈಕ್‍‍ಗಳಲ್ಲಿ ಒಂದಾಗಿದೆ. ಈ ಬೈಕಿನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ ಕೆಟಿಎಂ 390 ಅಡ್ವೆಂಚರ್ ಬೈಕಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.5 ಲಕ್ಷಗಳಿಂದ ರೂ.3 ಲಕ್ಷಗಳವರೆಗೆ ಬೆಲೆ ಹೊಂದಿರುವ ಸಾಧ್ಯತೆಗಳಿವೆ. ಈ ಬೈಕ್ ಬಿಎಂಡಬ್ಲ್ಯು ಜಿ310 ಜಿಎಎಸ್ ಮತ್ತು ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕುಗಳಿಗೆ ಪೈಪೋಟಿಯನ್ನು ನೀಡಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಯುವಕರ ನೆಚ್ಚಿನ ಕೆಟಿಎಂ ಬೈಕ್

ಬಿಡುಗಡೆಗೊಳಿಸಿದ ಜಾಹೀರಾತು ವೀಡಿಯೋ ನೋಡುಗರಿಗೆ ಕುತೂಹಲ ಮೂಡಿಸುವಂತಿದೆ. ಯುವಕರನ್ನು ಆಕರ್ಷಿಸುವಂತೆ ಈ ವೀಡಿಯೋ ಜಾಹೀರಾತನ್ನು ತಯಾರಸಲಾಗಿದೆ. ಯುವಕರ ಕನಸಿನ ಕೆಟಿಎಂ ಬೈಕ್ ತನ್ನ ಗ್ರಾಹಕರಿಗೆ ಜಾಹೀರಾತಿ ಮೂಲಕ ದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

Most Read Articles

Kannada
Read more on ಕೆಟಿಎಂ
English summary
KTM 390 Adventure Exhaust Note In New TVC Video - Read in Kannada
Story first published: Saturday, November 9, 2019, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X