Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯ ಸನಿಹದಲ್ಲಿ ವೆಸ್ಪಾ ಪ್ರತಿಸ್ಪರ್ಧಿ ಲ್ಯಾಂಬ್ರೆಟ್ಟಾ..!
90ರ ದಶಕದಲ್ಲಿ ಜನಪ್ರಿಯಗೊಂಡು ಕಾರಣಾಂತರಗಳಿಂದ ಸ್ಕೂಟರ್ ಉತ್ಪಾದನೆದಿಂದ ದೂರ ಉಳಿದಿದ್ದ ಇಟಾಲಿ ಮೂಲದ ಐಕಾನಿಕ್ ಸ್ಕೂಟರ್ ಬ್ರ್ಯಾಂಡ್ ಲ್ಯಾಂಬ್ರೆಟ್ಟಾ ಸಂಸ್ಥೆಯು ಇದೀಗ ಹೊಸ ಸ್ಕೂಟರ್ ಉತ್ಪನ್ನಗಳೊಂದಿಗೆ ಮತ್ತೊಮ್ಮೆ ಕಮಾಲ್ ಮಾಡಲು ಸಜ್ಜಾಗುತ್ತಿದ್ದು, 2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರವಷ್ಟೇ ಮಾರುಕಟ್ಟೆಗೆ ಪ್ರವೇಶಿಸುವ ಸುಳಿವು ನೀಡಿದೆ.

ಭಾರತದಲ್ಲಿ ಸದ್ಯ ಹಳೆಯ ಐಕಾನಿಕ್ ಬ್ರಾಂಡ್ ವಾಹನಗಳಿಗೆ ಮರುಜೀವ ನೀಡುವ ಪ್ರಕ್ರಿಯೆ ಜೋರಾಗಿದೆ. ಜಾವಾ ಬಿಡುಗಡೆ ಮಾಡಿದ ಬೆನ್ನೆಲ್ಲೇ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಈ ಹಿಂದಿನ ಜನಪ್ರಿಯ ವಾಹನಗಳನ್ನು ಮರುಬಿಡುಗಡೆ ಮಾಡುವ ತವಕದಲ್ಲಿವೆ.
ಕಳೆದ ವರ್ಷವಷ್ಟೇ ಇಟಾಲಿಯ ಮಿಲಾನ್ ಶೋ (ಇಐಸಿಎಂಎ)ನಲ್ಲಿ ಹೊಸ ಮಾದರಿಯ ಸ್ಕೂಟರ್ ಉತ್ಪನ್ನಗಳನ್ನು ಪ್ರದರ್ಶನ ಮಾಡಿದ್ದ ಲ್ಯಾಂಬ್ರೆಟ್ಟಾ ಸಂಸ್ಥೆಯು 2019ರ ಆರಂಭದಲ್ಲಿ ಭಾರತದಲ್ಲೂ ಹೊಸ ಸ್ಕೂಟರ್ ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿತ್ತು. ಆದ್ರೆ ಹೊಸ ಸ್ಕೂಟರ್ ಬಿಡುಗಡೆಯ ಬಗೆಗೆ ತಟಸ್ಥವಾಗಿದ್ದ ಲ್ಯಾಂಬ್ರೆಟ್ಟಾ ಸಂಸ್ಥೆಯು ಇದೀಗ ಮತ್ತೆ ಹೊಸ ಸ್ಕೂಟರ್ ಬಿಡುಗಡೆಯ ಕುರಿತಂತೆ ಮತ್ತೆ ಸುದ್ದಿಗೆ ಬಂದಿದ್ದು, ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಒಳಗೊಂಡ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಸುಮಾರು ಎರಡು ದಶಕಗಳಿಂದ ಜಾಗತಿಕ ಮಾರುಕಟ್ಟೆಯಿಂದಲೇ ಮರೆಯಾಗಿದ್ದ ಲ್ಯಾಂಬ್ರೆಟ್ಟಾ ಇದೀಗ ಹೊಸ ಸ್ಕೂಟರ್ ಬಿಡುಗಡೆ ಮಾಡುತ್ತಿರುವ ಭಾರತದಲ್ಲಿ ಅಷ್ಟೇ ಅಲ್ಲದೆ ಯುರೋಪ್ ಮಾರುಕಟ್ಟೆಗಳಲ್ಲೂ ಸಹ ಆಕರ್ಷಣೆಗೆ ಕಾರಣವಾಗಿದ್ದು, ಐಕಾನಿಕ್ ಸ್ಕೂಟರ್ ಮೇಲೆ ಸವಾರಿ ಮಾಡಿ ಮತ್ತೆ ಹಳೆಯ ನೆನೆಪುಗಳನ್ನು ನೆನಪಿಸಿಕೊಳ್ಳಲು ಅದೆಷ್ಟೋ ಜನ ತುದಿಗಾಲ ಮೇಲೆ ನಿಂತಿದ್ದಾರೆ.

ಲ್ಯಾಂಬಿ ಎಂದೇ ಜನಪ್ರಿಯಗೊಂಡಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ಮೊಟ್ಟಮೊದಲ ಬಾರಿಗೆ 1947ರಲ್ಲಿ ಇಟಲಿಯಲ್ಲಿ ಉತ್ಪಾದನೆಗೊಂಡಿದ್ದವು. ತದನಂತರ ದಿನಗಳಲ್ಲಿ ಇಡೀ ಯುರೋಪ್ ಮಾರುಕಟ್ಟೆಯನ್ನೇ ಆವರಿಸಿದ್ದ ಲ್ಯಾಂಬಿ ಸ್ಕೂಟರ್ 1972ರಲ್ಲಿ ಭಾರತದಲ್ಲೂ ಬಿಡುಗಡೆಯಾಗಿತ್ತು.

ಇಟಾಲಿಯನ್ ಸ್ಕೂಟರ್ ಬ್ರಾಂಡ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್(ಎಸ್ಐಎಲ್) ಸಂಸ್ಥೆಯು ಉತ್ತರಪ್ರದೇಶದ ಲಕ್ನೋದಲ್ಲಿ ಮೊದಲ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿತ್ತು. 1972ರಿಂದ 1997ರ ಅವಧಿಯಲ್ಲಿ ಭಾರತದಲ್ಲಿ ಮಾರಾಟಕ್ಕಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಲ್ಯಾಂಬ್ರೆಟ್ಟಾ ಹೆಸರಿನ ಬದಲಿಗೆ 'ವಿಜಯ್ ಸೂಪರ್' ಸ್ಕೂಟರ್ ಹೆಸರಿನೊಂದಿಗೆ ಮಾರಾಟಗೊಳ್ಳುತ್ತಿದ್ದವು.

ಇನ್ನೊಂದು ವಿಶೇಷ ಅಂದ್ರೆ, ಭಾರತದಿಂದಲೇ ಯುರೋಪ್ ಮಾರುಕಟ್ಟೆಗಳಿಗೆ ಲ್ಯಾಂಬ್ರೆಟ್ಟ್ ಸ್ಕೂಟರ್‌ಗಳನ್ನು ರಫ್ತು ಮಾಡುತ್ತಿದ್ದ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ವಿಜಯ್ ಸೂಪರ್ ಹೆಸರಿನ ಸ್ಕೂಟರ್‌ಗಳನ್ನೇ ಹೆಸರು ಬದಲಿಸಿ ವಿದೇಶಿ ಮಾರುಕಟ್ಟೆಗಳ ಬೇಡಿಕೆ ಪೂರೈಕೆ ಮಾಡುತ್ತಿತ್ತು.

ಆದ್ರೆ 1980ರ ದಶಕದಲ್ಲಿ ರಸ್ತೆಗಿಳಿದ ಬಜಾಜ್ ಚೇತಕ್ ಸ್ಕೂಟರ್‌ಗಳ ಅಬ್ಬರದ ಮುಂದೆ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳ ಸದ್ದು ಮರೆಯಲಾಗ ತೊಡಗಿತು. ಇದರಿಂದಾಗಿಯೇ 1997ರ ಹೊತ್ತಿಗೆ ಲ್ಯಾಂಬ್ರೆಟ್ಟಾ ಮಾರಾಟದಲ್ಲಿ ಭಾರೀ ನಷ್ಟ ಅನುಭವಿಸಿದ ಎಸ್ಐಎಲ್ ಸಂಸ್ಥೆಯು ಲ್ಯಾಂಬಿಗೆ ಗುಡ್ ಬೈ ಹೇಳಿತು.
MOST READ: ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಅದುವರೆಗೂ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿ ನಂತರದ ದಿನಗಳಲ್ಲಿ ಹಿನ್ನಡೆ ಅನುಭವಿಸುತ್ತಾ ಬಂದಿದ್ದ ಲ್ಯಾಂಬ್ರೆಟ್ಟಾ ಸಂಸ್ಥೆಯು ಅಗ್ಗದ ಬೆಲೆಯ ಚೇತಕ್ ಸ್ಕೂಟರ್ ಮುಂದೆ ನೆಲಕಚ್ಚಿದ್ದಲ್ಲದೇ ಭಾರತೀಯ ಮಾರುಕಟ್ಟೆಯಿಂದ ದೂರವೇ ಉಳಿಯಿತು.

ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಐಕಾನಿಕ್ ಆಟೋ ಬ್ರಾಂಡ್‌ಗಳಿಗೆ ಮರುಜೀವ ಬರುತ್ತಿದ್ದು, ಈ ಹಿನ್ನೆಲೆ ಪ್ರಸ್ತುತ ಗ್ರಾಹಕರ ಬೇಡಿಕೆಯೆಂತೆ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿದೆ.
MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಪ್ರತಿ 2 ವರ್ಷಗಳಿಗೆ ಒಂದು ಬಾರಿ ನಡೆಯುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಲ್ಯಾಂಬ್ರೆಟ್ಟಾ ಹೊಸ ಸ್ಕೂಟರ್‌ಗಳು ಪ್ರದರ್ಶನಗೊಳ್ಳಲಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಹೊಸ ಸ್ಕೂಟರ್‌ಗಳು ಗ್ರಾಹಕರ ಕೈ ಸೆರಲಿವೆ.

ತಾಂತ್ರಿಕವಾಗಿ ವೆಸ್ಪಾ ಸ್ಕೂಟರ್‌ಗಳಷ್ಟೇ ಬಲಿಷ್ಠವಾಗಿರುವ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ಉತ್ತಮ ಬ್ಯಾಟರಿ ಸೌಲಭ್ಯವನ್ನು ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗಾಗಿ ಹೊಸ ಸ್ಕೂಟರ್‌ಗಳು ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿವೆ.