ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಮಹೀಂದ್ರಾ ಸಂಸ್ಥೆಯು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಅಷ್ಟಾಗಿ ಮುನ್ನಡೆ ಸಾಧಿಸಿಲ್ಲವಾದರೂ ಮಜೊ ಮತ್ತು ಗಸ್ಟೊ ಸ್ಕೂಟರ್ ಮಾರಾಟವನ್ನು ಇನ್ನು ಮುಂದುವರಿಸಿದ್ದು, ಗಸ್ಟೊ ಸ್ಕೂಟರ್ ಮಾರಾಟದಲ್ಲಿ ಬೇಡಿಕೆ ಇಲ್ಲದೆ ಇದ್ದರೂ ಸಹ ಗ್ರಾಹಕರ ಬೇಡಿಕೆ ಮೇರೆಗೆ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಭಾರತದಲ್ಲಿ ಕಳೆದ ಏಪ್ರಿಲ್ 1ರಿಂದ ಪ್ರತಿ 125 ಸಿಸಿ ಮೇಲ್ಪಟ್ಟ ಎಲ್ಲಾ ವಾಹನಗಳನ್ನು ಸಿಬಿಎಸ್ ಮತ್ತು 150 ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್ ಸೌಲಭ್ಯವನ್ನು ಕಡ್ಡಾಯಗೊಳಿಸಿದೆ. ಆದ್ರೆ ಹೊಸ ನಿಯಮಕ್ಕೆ ಅನುಗುಣವಾಗಿ ಗಸ್ಟೊ ಸ್ಕೂಟರ್‌ಗಳನ್ನು ಉನ್ನಕರಿಸಲು ಹಿಂದೇಟು ಹಾಕಿದ್ದ ಮಹೀಂದ್ರಾ ಸಂಸ್ಥೆಯು ಇದೀಗ ಗ್ರಾಹಕರ ಬೇಡಿಕೆ ಮೇರೆಗೆ ಹೊಸ ನಿಯಮಗಳಿಗೆ ಅನುಗುಣವಾಗಿ ಮರುಬಿಡುಗಡೆ ಮಾಡಿದೆ. 110 ಮತ್ತು 125 ಎರಡು ಮಾದರಿಯಲ್ಲಿರುವ ಗಸ್ಟೊ ಸ್ಕೂಟರ್‌ಗಳು ಇದೀಗ ಸಿಬಿಎಸ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಿವೆ.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

110 ಗಸ್ಟೊ ಸ್ಕೂಟರ್‌ನಲ್ಲಿ ಡಿಎಕ್ಸ್ ಮತ್ತು ವಿಎಕ್ಸ್ ಆವೃತ್ತಿಯು ಮಾರಾಟಕ್ಕಿದ್ದು, ಇದರಲ್ಲಿ ಡಿಎಕ್ಸ್ ಮಾದರಿಯು(ನಾನ್ ಸಿಬಿಎಸ್) ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.50,660 ಬೆಲೆ ಹೊಂದಿದ್ದರೆ ಸಿಬಿಎಸ್ ಹೊಂದಿರುವ ವಿಎಕ್ಸ್ ಮಾದರಿಯು ರೂ.55,660 ಬೆಲೆ ಹೊಂದಿದೆ.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಹಾಗೆಯೇ 125 ಗಸ್ಟೊ ಆವೃತ್ತಿಯು ಸಿಂಗಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಸಿಬಿಎಸ್ ಜೊತೆ ಇನ್ನು ಕೆಲವು ಪ್ರೀಮಿಯಂ ಫೀಚರ್ಸ್‌ಗಳು ಹೊಂದಿದೆ. ವಿಎಕ್ಸ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರುವ ಗಸ್ಟೊ 125 ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.58 ಸಾವಿರ ಬೆಲೆ ಹೊಂದಿದೆ.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಡ್ರಮ್ ಬ್ರೇಕ್‌ಗಿಂತ ಸಿಬಿಎಸ್(ಕಾಂಬಿ ಬ್ರೇಕಿಂಗ್ ಸಿಸ್ಟಂ) ಹೊಂದಿರುವ ದ್ವಿಚಕ್ರ ವಾಹನಗಳು ಉತ್ತಮ ಹಿಡಿತ ಸಾಧಿಸುವಲ್ಲಿ ನೆರವಾಗಲಿದ್ದು, ಬ್ರೇಕ್ ಒತ್ತಿದಾಗ ಒಂದು ಬದಿಯ ಬ್ರೇಕ್ ಎರಡು ಭಾಗಗಳಿಗೂ ಅನ್ವಯಿಸುವಂತೆ ಇದನ್ನು ಸಿದ್ದಪಡಿಸಲಾಗಿದೆ. ಅಂದರೆ, ಬೈಕ್ ಚಾಲನೆ ಮಾಡುವಾಗ ನೀವು ಒಂದು ಯಾವುದೇ ಭಾಗದ ಒಂದು ಬ್ರೇಕ್ ಒತ್ತಿದರೂ ಅದು ಎರಡು ಭಾಗಕ್ಕೂ ಅನ್ವಯವಾಗಲಿದ್ದು, ಇದರಿಂದ ಸ್ಕಿಡ್ ಆಗುವ ಸಾಧ್ಯತೆಗಳು ಕಡಿಮೆ ಎನ್ನಬಹುದು.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಅದೇ ಡ್ರಮ್ ಬ್ರೇಕ್‌ಗಳಿದ್ದಲ್ಲಿ ನೀವು ಸಡನ್ ಆಗಿ ಒಂದೇ ಬದಿಯ ಬ್ರೇಕ್ ಒತ್ತಿದಾಗ ಸಹಜವಾಗಿ ಸ್ಕಿಡ್ ತೊಂದರೆ ಎದುರಾಗುವುದು ಕಾಮನ್. ಆದ್ರೆ ಸಿಬಿಎಸ್ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಎಬಿಎಸ್ ಸೌಲಭ್ಯವಿದ್ದಲ್ಲಿ ವೇಗದ ಚಾಲನೆ ವೇಳೆಯೂ ಸುಲಭವಾಗಿ ಬ್ರೇಕಿಂಗ್ ವ್ಯವಸ್ಥೆ ಮೇಲೆ ಹಿಡಿತ ಸಾಧಿಸಬಹುದು.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಇದಕ್ಕಾಗಿಯೇ ಕೇಂದ್ರ ಸರ್ಕಾರವು 2019ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ 125ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಸಿಬಿಎಸ್ ಮತ್ತು 150 ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್ ಸೌಲಭ್ಯವನ್ನು ಕಡ್ಡಾಯಗೊಳಿಸಲಾಗಿದ್ದು, ಈಗಾಗಲೇ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮಕ್ಕೆ ಅನುಗುಣವಾಗಿಯೇ ಹೊಸ ವಾಹನಗಳನ್ನು ಮಾರಾಟ ಮಾಡುತ್ತಿವೆ.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಮಹೀಂದ್ರಾ ಮಾತ್ರ ಹೊಸ ನಿಯಮ ಜಾರಿಗೆ ಬಂದು ಮೂರು ತಿಂಗಳ ನಂತರ ಗಸ್ಟೊ ಮತ್ತು ಮೊಜೊ ಬೈಕ್‌ಗಳನ್ನು ಸಿಬಿಎಸ್ ಮತ್ತು ಎಬಿಎಸ್ ವರ್ಷನ್‌ಗಳಲ್ಲಿ ಉನ್ನತಿಕರಿಸಿದ್ದು, ಹೊಸ ಸೌಲಭ್ಯಗಳೊಂದಿಗೆ ಗ್ರಾಹಕರ ಸೆಳೆಯಲು ಆಕರ್ಷಕ ಬೆಲೆಗಳಲ್ಲಿ ನವೀಕೃತ ಸ್ಕೂಟರ್‌ಗಳನ್ನು ಹೊರತಂದಿದೆ.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಇನ್ನು ಗಸ್ಟೊ ಸ್ಕೂಟರ್‌ಗಳು ಆರಂಭಿಕವಾಗಿ 110 ಮಾದರಿಯು 109 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ನೊಂದಿಗೆ 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಸ್ಕೂಟರ್‌ನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಟೈಪ್ ಹೈಡ್ರಾಲಿಕ್ ಸೆಟ್-ಅಪ್ ಜೋಡಣೆ ಹೊಂದಿದೆ.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಇದರಲ್ಲಿ 125 ಗಸ್ಟೊ ಕೂಡಾ ಉತ್ತಮ ಎಂಜಿನ್ ಕಾರ್ಯಕ್ಷಮತೆಯ 124-ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 8.5-ಬಿಎಚ್‌ಪಿ ಮತ್ತು 10-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪರ್ಫಾಮೆನ್ಸ್ ಹಾಗೂ ಇಂಧನ ಕಾರ್ಯಕ್ಷಮತೆಯಲ್ಲೂ ಇದು ಗಮನಸೆಳೆಯುತ್ತೆ.

ನವೀಕೃತ ಮಹೀಂದ್ರಾ ಗಸ್ಟೊ 110 ಮತ್ತು 125 ವರ್ಷನ್ ಬಿಡುಗಡೆ

ಜೊತೆಗೆ ಹೊಸ ಸ್ಕೂಟರ್‌ಗಳಲ್ಲಿ ರಿಮೋಟ್ ಫ್ಲಿಪ್ ಕೀ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಆಸನ ಸೌಲಭ್ಯ, ಫೈಡ್ ಮಿ ಲ್ಯಾಂಪ್ಸ್, ಗೈಡ್ ಲ್ಯಾಂಪ್, ಡಿಜಿಟಲ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್ ಮತ್ತು ಸೀಟಿನ ಕೆಳಭಾಗದಲ್ಲಿ 12-ಲೀಟರ್ ಸಾಮರ್ಥ್ಯದ ಅಂಡರ್ ಸ್ಟೊರೆಜ್ ನೀಡಿರುವುದು ಹೊಸ ಸ್ಕೂಟರ್ ಮಾರಾಟವು ಈ ಬಾರಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

Most Read Articles

Kannada
English summary
Mahindra Gusto 110 CBS & 125 CBS Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X