ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ಮೋಟಾರ್ ಸೈಕಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಮಹೀಂದ್ರಾ ಕಂಪನಿಯ ಮೊಜೊ ಬೈಕ್ ಆರಂಭದಲ್ಲಿ ಹೆಚ್ಚು ಪ್ರಚಾರ ಪಡೆದರೂ ನಂತರ ಕಂಪನಿಯ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಯಿತು. ಮಹೀಂದ್ರಾ ಕಂಪನಿಯು ನಂತರ ಬೈಕ್ ನಲ್ಲಿ ಅಳವಡಿಸಿದ್ದ ದುಬಾರಿ ಬಿಡಿ ಭಾಗಗಳನ್ನು ತೆಗೆದು ಹಾಕಿ ಮೋಟಾರ್ ಸೈಕಲ್ ಬೆಲೆಯನ್ನು ಕಡಿಮೆ ಮಾಡಿ ಮೊಜೊ ಯುಟಿ ಹೆಸರಿನಲ್ಲಿ ಬಿಡುಗಡೆಗೊಳಿಸಿದರೂ ಯಶಸ್ವಿಯಾಗಲಿಲ್ಲ.

ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ಮಹೀಂದ್ರಾ ಟೂ ವ್ಹೀಲರ್ ಲಿಮಿಟೆಡ್‍ನ ಆರ್ & ಡಿ ವಿಭಾಗವು, ಈ ಮೋಟಾರ್‍‍‍‍ಸೈಕಲ್ ಯೋಜನೆಯನ್ನು ಕೈಬಿಟ್ಟು ತನ್ನ ಗಮನವನ್ನು ಕ್ಲಾಸಿಕ್ ಲೆಜೆಂಡ್ ಬೈಕುಗಳನ್ನು ಅಭಿವೃದ್ಧಿಪಡಿಸುವತ್ತಾ ಹರಿಸಿದೆ. ಜಾವಾದ ಹೊಸ ಮೋಟಾರ್‍‍‍‍ಸೈಕಲ್‍ಗಳು ಬೇಸಿಕ್ ಎಂಜಿನ್ ಆರ್ಕಿಟೆಕ್ಚರ್ ಸೇರಿ ಬಹುತೇಕ ಭಾಗಗಳನ್ನು ಮೊಜೊ ಮೋಟಾರ್‍‍‍‍ಸೈಕಲ್‍ನಿಂದ ಪಡೆದಿವೆ. ಈ ಚಿತ್ರದಲ್ಲಿ ತೋರಿಸಿರುವಂತೆ ಮುಂಭಾಗದಲ್ಲಿ ಎಬಿಎಸ್ ರಿಂಗ್ ಇದ್ದು ಇದರ ಜೊತೆಗೆ ಎಬಿಎಸ್ ವಾರ್ನಿಂಗ್ ಲೈಟ್‍ಗಳನ್ನು ಅಳವಡಿಸಲಾಗಿದೆ.

ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ಮೊಜೊ ಬೈಕಿನಲ್ಲಿ ಎಬಿಎಸ್ ಅಭಿವೃದ್ದಿ ಪಡಿಸುತ್ತಿರುವ ಕಾರ್ಯವು ಹಲವಾರು ದಿನಗಳಿಂದ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಸೆಗ್ಮೆಂಟಿನ ಬೈಕುಗಳಲ್ಲಿ ಕಡ್ಡಾಯಗೊಳಿಸಲಾಗಿರುವ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಮಹೀಂದ್ರಾದ ಈ ಬೈಕಿನಲ್ಲೂ ಅಳವಡಿಸಲಾಗಿದೆ.

Image Courtesy:Rakesh Kumar

ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ಎಬಿಎಸ್ ಹೊಂದಲಿರುವ ಮೊಜೊ ಮೋಟಾರ್‍‍‍‍ಸೈಕಲ್‍ ಯುಎಸ್ ಡಿ ಫೋರ್ಕ್, ಡ್ಯುಯಲ್ ಸೈಲೆಂಸರ್, ಪಿರೆಲಿ ಟಯರ್ ಮತ್ತು ಫ್ಯೂಯಲ್ ಇಂಜೆಕ್ಷನ್ ಹೊಂದಿದ್ದ ಮೂಲ ಆವೃತ್ತಿಯ ಎಕ್ಸ್ ಟಿ ಸರಣಿಗೆ ಸೇರಿರುವುದಿಲ್ಲ.

ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ರೆಗ್ಯುಲರ್ ಟೆಲೆಸ್ಕೋಪಿಕ್ ಫ್ರಂಟ್ ಫೋರ್ಕ್, ಸಿಂಗಲ್ ಸೈಲೆಂಸರ್, ಎಂಆರ್‍ಎಫ್ ಟಯರ್, ಕಾರ್ಬೋರೇಟರ್ ಹೊಂದಿದ್ದ ಕಡಿಮೆ ಬೆಲೆಯ ಆವೃತ್ತಿ ಯುಟಿ ಸರಣಿಗಾಗಲಿ ಸೇರುವುದಿಲ್ಲ. ಮಹೀಂದ್ರಾ ಮೊಜೊ ಎಬಿಎಸ್ ಬೈಕ್ ಹೊಸ ಮಾದರಿಯಲ್ಲಿ ಬರಲಿದ್ದು, ಬೆಲೆ ಮತ್ತು ಎಕ್ವಿಪ್ ಮೆಂಟ್ ಗಳ ಮಧ್ಯೆ ಬ್ಯಾಲೆನ್ಸ್ ಮಾಡಲಿದೆ. ಹೊಸ ಎಬಿಎಸ್ ವೆರಿಯಂಟ್ ರೆಗ್ಯುಲರ್ ಟೆಲಿಸ್ಕೋಪಿಕ್ ಫೋರ್ಕ್, ಫ್ಯುಯಲ್ ಇಂಜೆಕ್ಷನ್ ಮತ್ತು ಸಿಂಗಲ್ ಸೈಲೆಂಸರ್ ಗಳನ್ನು ಹೊಂದಿರಲಿದೆ.

ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ಮುಂಬರುವ ಮಾದರಿಗಳಲ್ಲಿ ಮಹೀಂದ್ರಾ ಟೂ ವ್ಹೀಲರ್ ಕಂಪನಿಯು ಪಿರೆಲಿ ಅಥವಾ ಎಂಆರ್‍ಎಫ್ ಟಯರ್‍‍ಗಳಲ್ಲಿ ಯಾವುದನ್ನು ಅಳವಡಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಹೆಚ್ಚುವರಿಯಾಗಿ ಎಬಿಎಸ್ ಅಳವಡಿಸುವುದರಿಂದ ಬೈಕ್‍ಗಳ ಬೆಲೆ ಏರಿಕೆಯಾಗಲಿದ್ದು, ಹೊಸ ಕಾನ್ಫಿಗರೇಷನ್ ಅಳವಡಿಸಿಕೊಳ್ಳುವುದರಿಂದ ಮಹೀಂದ್ರಾ ಕಂಪನಿಯು ಬೆಲೆ ಏರಿಕೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.

MOST READ: ಬಹಿರಂಗವಾಯಿತು ಸುಜುಕಿ ಜಿಕ್ಸರ್ 250 ಬೈಕ್ ಎಂಜಿನ್ ಮಾಹಿತಿ

ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ಮೊಜೊ ಮೋಟಾರ್ ಸೈಕಲ್, ಫ್ಯೂಯಲ್ ಇಂಜೆಕ್ಟೆಡ್ ಬಿಎಸ್4 ಆವೃತ್ತಿಯ, 26.8 ಪಿಎಸ್ ಮತ್ತು 30 ಎನ್ಎಂ ಟಾರ್ಕ್ ಉತ್ಪಾದಿಸುವ 300 ಸಿಸಿ ಲಿಕ್ವಿಡ್ ಕೂಲರ್ ನ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಟ್ರಾನ್ಸ್ ಮಿಷನ್ 6 ಸ್ಪೀಡ್ ಯುನಿಟ್ ಆಗಿರಲಿದೆ. 22.7 ಹೆಚ್‍ಪಿ ಮತ್ತು 25.2 ಎನ್ಎಂ ಟಾರ್ಕ್ ಉತ್ಪಾದಿಸುವ ಕಾರ್ಬೊರೇಟೆಡ್ ಆವೃತ್ತಿಯನ್ನು ಸ್ಥಗಿತಗೊಳಿಸಲಾಗುವುದು.

ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ದೆಹಲಿಯ ಎಕ್ಸ್ ಶೋರೂಂ ದರದಂತೆ ಮಹೀಂದ್ರಾ ಮೊಜೊ ಎಕ್ಸ್ ಟಿ 300 ಬೆಲೆಯನ್ನು ರೂ. 1.79 ಲಕ್ಷಗಳೆಂದು ನಿಗದಿಪಡಿಸಲಾಗಿದೆ. ಒಂದು ಸೈಲೆಂಸರ್ ಕ್ಯಾನಿಸ್ಟರ್ ಅನ್ನು ತೆಗೆದು ಹಾಕುವುದರಿಂದ ಹೊಸ ಮಾದರಿಯಲ್ಲಿರುವ ಎಬಿಎಸ್ ಬೆಲೆಯು ಕಡಿಮೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Mahindra Mojo ABS launch in a few days as single variant - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X