ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಕೆ‍ಟಿ‍ಎಂ ಡ್ಯೂಕ್ 790 ಬೈಕ್ ಅನ್ನು ಕೆ‍‍ಟಿ‍ಎಂ ಇಂಡಿಯಾ ಸೆಪ್ಟೆಂಬರ್ 23ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಕೆ‍ಟಿ‍ಎಂ 790 ಡ್ಯೂಕ್ ಬೈಕ್ ಅನ್ನು ಸ್ಕಾಲ್ ಪೆಲ್ ಎಂದೂ ಸಹ ಕರೆಯಲಾಗುತ್ತದೆ. ಬೈಕುಗಳ ಬಗ್ಗೆ ಕ್ರೇಜ್ ಹೊಂದಿರುವ ಬಾಲಿವುಡ್ ನಟ ಡಿನೊ ಮೊರಿಯಾರವರು ದುಬಾರಿ ಬೆಲೆಯ ಕೆ‍ಟಿ‍ಎಂ 790 ಡ್ಯೂಕ್ ಬೈಕ್ ಅನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಮುಂಬೈನಲ್ಲಿ ಮಾರಾಟ ಮಾಡಲಾದ ಮೊದಲ ಕೆ‍‍ಟಿ‍ಎಂ 790 ಡ್ಯೂಕ್ ಬೈಕ್ ಅನ್ನು ಡಿನೊ ಮೊರಿಯಾರವರಿಗೆ ವಿತರಿಸಲಾಗಿದೆ. ಈ ಬಗ್ಗೆ ಅಹುಜಾ ಆಟೋಮೊಬೈಲ್‍‍ನ ಮೋಹಿತ್ ಅಹುಜಾರವರು ತಮ್ಮ ಫೇಸ್‍‍ಬುಕ್ ಪೇಜ್‍‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಮುಂಬೈನಲ್ಲಿರುವ ಡಿನೊ ಮೊರಿಯಾರವರ ಮನೆಗೆ ಖುದ್ದಾಗಿ ಹೋಗಿ ಹೊಸ ಕೆ‍‍ಟಿ‍ಎಂ 790 ಡ್ಯೂಕ್ ಬೈಕ್ ವಿತರಿಸಿದ್ದಾರೆ. ಡಿನೊ ಮೊರಿಯಾರವರಿಗೆ ಬೈಕಿನ ಕೀ ನೀಡುತ್ತಿರುವ, ಡಿನೊ ಮೊರಿಯಾರವರು ಬೈಕಿನ ಕೀಯನ್ನು ಗಿಟಾರ್‍‍ನಂತೆ ಹಿಡಿದು ಪೋಸ್ ನೀಡುತ್ತಿರುವ ಫೋಟೊಗಳನ್ನು ಪೋಸ್ಟ್ ಮಾಡಲಾಗಿದೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಸ್ಕಾಲ್‍‍‍ಪೆಲ್ ಬೈಕ್ ಅನ್ನು ಖರೀದಿಸಿದ್ದಕ್ಕೆ ಟೀಂ ಅಹುಜಾ ಆಟೋಮೊಬೈಲ್ಸ್ ನಿಂದ ಅಭಿನಂದನೆಗಳು ಸಾರ್ ಎಂದು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ನೀವೂ ಸಹ ನಿಮ್ಮ ಬೈಕ್ ಅನ್ನು ಇಂದೇ ಬುಕ್ಕಿಂಗ್ ಮಾಡಿ ಎಂದು ಹೇಳಿದ್ದಾರೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಇನ್ನು ಹೊಸ ಕೆ‍‍ಟಿ‍ಎಂ ಡ್ಯೂಕ್ 790 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.63 ಲಕ್ಷಗಳಾಗಿದೆ. ಈ ಬೈಕಿನೊಂದಿಗೆ ಕೆಟಿ‍ಎಂ ಕಂಪನಿಯು ಭಾರತದಲ್ಲಿ ಬಲಶಾಲಿಯಾದ ಬೈಕ್ ಅನ್ನು ಬಿಡುಗಡೆಗೊಳಿಸಿದಂತಾಗಿದೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಕೆ‍ಟಿ‍ಎಂ ಡ್ಯೂಕ್ 790 ಬೈಕ್ ಅನ್ನು ಭಾರತದಲ್ಲಿರುವ ಪ್ರಮುಖ ನಗರಗಳ ಆಯ್ದ ಡೀಲರ್‍‍ಶಿಪ್‍ಗಳ ಬಳಿ ಮಾತ್ರ ಮಾರಾಟ ಮಾಡಲಾಗುವುದು. ಸದ್ಯಕ್ಕೆ ಡ್ಯೂಕ್ 790 ಬೈಕಿನ ಬುಕ್ಕಿಂಗ್‍‍ಗಳನ್ನು 10 ನಗರಗಳಲ್ಲಿ ಆರಂಭಿಸಲಾಗಿದೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಜೂನ್ ತಿಂಗಳಿನಲ್ಲಿ ಅನೇಕರು ರೂ.30,000 ಪಾವತಿಸಿ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಿದ್ದರು. ಆದರೆ ಭಾರತದಲ್ಲಿ ಮಾರಾಟ ಮಾಡಲು ಅನುಮತಿ ದೊರಕದ ಕಾರಣ ಕೆ‍‍ಟಿ‍ಎಂ ಕಂಪನಿಯು ಈ ಬೈಕಿನ ಬಿಡುಗಡೆಯನ್ನು ಮುಂದೂಡಿತ್ತು.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಇದರಿಂದಾಗಿ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಿದ ಜನರು ನಿರಾಶಾರಾಗಿದ್ದರು. ಈ ಬೈಕ್ ಅನ್ನು ಬಿಡುಗಡೆಗೊಳಿಸುವ ಮೊದಲು ಭಾರತದಲ್ಲಿ ಅನೇಕ ಬಾರಿ ಈ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಕರ್ನಾಟಕದಲ್ಲಿ ಕೊನೆಯ ಬಾರಿಗೆ ಸ್ಪಾಟ್ ಟೆಸ್ಟ್ ಮಾಡುವ ಸಂದರ್ಭದಲ್ಲಿ ಈ ಬೈಕ್ ಪಾರ್ಕಿಂಗ್ ಸ್ಥಳವೊಂದರಲ್ಲಿ ಕಂಡು ಬಂದಿತ್ತು.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಸ್ಪಾಟ್ ಟೆಸ್ಟ್ ಮಾಡುವ ಸಂದರ್ಭದಲ್ಲಿ ಈ ಬೈಕಿನಲ್ಲಿ ಸ್ಯಾರಿ ಗಾರ್ಡ್ ಅಳವಡಿಸಲಾಗಿತ್ತು. 2020ರ ಏಪ್ರಿಲ್ ನಂತರ ಇನ್ನೂ 30 ನಗರಗಳಲ್ಲಿ ಈ ಬೈಕುಗಳ ಮಾರಾಟವನ್ನು ಆರಂಭಿಸಲಾಗುವುದು. ಬೈಕಿನ ಡೆಲಿವರಿಯನ್ನು ಶೀಘ್ರದಲ್ಲೇ ಶುರುಮಾಡುವುದಾಗಿ ತಿಳಿದು ಬಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಈ ಬೈಕಿನಲ್ಲಿ 799 ಸಿಸಿಯ ಲಿಕ್ವಿಡ್ ಕೂಲ್ ಪ್ಯಾರೆಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‍‍ಪಿ‍ಎಂನಲ್ಲಿ 103 ಬಿಹೆಚ್‍‍ಪಿ ಪವರ್ ಹಾಗೂ 8,000 ಆರ್‍‍ಪಿ‍ಎಂ ನಲ್ಲಿ 86 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. 189 ಕೆ,ಜಿ ತೂಕವನ್ನು ಹೊಂದಿರುವ ಈ ಬೈಕ್ ಪ್ರತಿ ಟನ್ನಿಗೆ 612 ಬಿ‍‍ಹೆಚ್‍‍ಪಿಯಲ್ಲಿ ಪವರ್ ಟು ವೇಟ್ ಅನುಪಾತವನ್ನು ನೀಡುತ್ತದೆ. ಈ ಹೊಸ ಬೈಕ್ - ರೇನ್, ಸ್ಟ್ರೀಟ್ಸ್, ಸ್ಪೋರ್ಟ್ಸ್ ಹಾಗೂ ಟ್ರಾಕ್ ಎಂಬ ನಾಲ್ಕು ರೈಡಿಂಗ್ ಮೋಡ್‍‍ಗಳನ್ನು ಹೊಂದಿದೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಈ ಮೋಡ್‍‍ಗಳನ್ನು ಇತರ ಫೀಚರ್‍‍ಗಳ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಕೆಟಿ‍ಎಂ ಡ್ಯೂಕ್ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಲೀನ್ ಆಂಗಲ್ ಸೆನ್ಸಿಟಿವಿಟಿ, ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಸ್ಟಾಬಿಲಿಟಿ ಕಂಟ್ರೋಲ್, ಸ್ಲಿಪರ್ ಕ್ಲಚ್ ಹಾಗೂ ಕ್ಲಚ್‍‍ಲೆಸ್ ಅಪ್‍‍ಶಿಫ್ಟ್ ಹಾಗೂ ಡೌನ್‍‍ಶಿಫ್ಟ್ ಗಳಿಗಾಗಿ ಟೂ ವೇ ಕ್ವಿಕ್ ಶಿಫ್ಟರ್ ಗಳಿವೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಹೊಸ ಬೈಕಿನಲ್ಲಿರುವ ಇತರ ಫೀಚರ್‍ ಎಂದರೆ ಫುಲಿ ಡಿಜಿಟಲ್ ಟಿ‍ಎಫ್‍‍ಟಿ ಇನ್ಸ್ ಟ್ರೂಮೆಂಟ್ ಡಿಸ್‍‍ಪ್ಲೇ. ಇದರ ಜೊತೆಗೆ ಬೈಕಿನ ಸುತ್ತಲೂ ಎಲ್‍ಇ‍‍ಡಿ ಲೈಟಿಂಗ್‍‍ಗಳಿವೆ. ಇದರ ಜೊತೆಗೆ ಈ ಬೈಕ್ ಲಾಂಚ್ ಕಂಟ್ರೋಲ್ ಹಾಗೂ ವ್ಹೀಲಿ ಕಂಟ್ರೋಲ್‍‍ಗಳನ್ನು ಹೊಂದಿದೆ.

ದುಬಾರಿ ಬೆಲೆಯ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಖರೀದಿಸಿದ ಡಿನೊ ಮೊರಿಯಾ

ಕೆ‍‍ಟಿ‍ಎಂ ಡ್ಯೂಕ್ 790 ಬೈಕಿನ ಮುಂಭಾಗದಲ್ಲಿ 43 ಎಂಎಂನ ಅಪ್‍‍ಸೈಡ್ ಡೌನ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಫುಲಿ ಅಡ್ಜಸ್ಟಬಲ್ ಮೊನೊ ಶಾಕ್‍‍ಗಳಿವೆ. ಈ ಎರಡೂ ಸಸ್ಪೆಂಷನ್‍‍ಗಳೂ ಡಬ್ಲ್ಯು‍‍ಪಿ ಕಂಪನಿಗೆ ಸೇರಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂನ ಡಿಸ್ಕ್ ಗಳಿದ್ದರೆ, ಹಿಂಭಾಗದಲ್ಲಿ 240 ಎಂಎಂನ ಸಿಂಗಲ್‍ ಡಿಸ್ಕ್ ಅಳವಡಿಸಲಾಗಿದೆ.

Image Courtesy: Mohit Ahuja/Facebook

Most Read Articles

Kannada
Read more on ಕೆಟಿಎಂ ktm
English summary
Dino Morea Buys Mumbai's First KTM 790 Duke - Read in Kannada
Story first published: Friday, October 4, 2019, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X