ಚೇತಕ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಬಜಾಜ್ ಆಟೋ ಮುಖ್ಯಸ್ಥರಾದ ರಾಜೀವ್ ಬಜಾಜ್‍‍ರವರು, ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ವಿನ್ಯಾಸವನ್ನು ಟೀಕಿಸಿದ್ದಕ್ಕಾಗಿ ಟಾಟಾ ಮೋಟಾರ್ಸ್‍‍ನ ಡಿಸೈನ್ ವಿಂಗ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ.

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಬಜಾಜ್ ಕಂಪನಿಯು ಕಳೆದ ತಿಂಗಳು ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಎಲೆಕ್ಟ್ರಿಕ್ ಸ್ಕೂಟರಿಗೆ ತನ್ನ ಹಳೆಯ ಜನಪ್ರಿಯ ಚೇತಕ್ ಸ್ಕೂಟರಿನ ಹೆಸರನ್ನು ಇಡಲಾಗಿದೆ. ಈ ಸ್ಕೂಟರಿನ ವಿನ್ಯಾಸವು ವಿಭಿನ್ನವಾಗಿದೆ.

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಟಾಟಾ ಮೋಟಾರ್ಸ್ ವಿನ್ಯಾಸ ವಿಭಾಗದ ಉಪಾಧ್ಯಕ್ಷರಾದ ಪ್ರತಾಪ್ ಬೋಸ್‍‍ರವರು ಸಾಮಾಜಿಕ ಜಾಲತಾಣದ ಮೂಲಕ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ವಿನ್ಯಾಸ ಹಾಗೂ ಗುಣಮಟ್ಟವನ್ನು ಟೀಕಿಸಿದ್ದಾರೆ.

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಭಾರತದಲ್ಲಿರುವ ಡಿಸೈನ್ ಪ್ರತಿಭೆಗಳಿಗೆ ಇಂದು ದುಃಖದ ದಿನವಾಗಿದೆ. ವೆಸ್ಪಾವನ್ನು ರಕ್ಷಿಸಲು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಿಸಲಾಗಿದೆ. ಬಜಾಜ್ ಆಟೋ ಸರಿಯಾದ ವಿನ್ಯಾಸ ಅವಕಾಶವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದರು.

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಇದು ಸಾಮಾಜಿಕ ವೆಬ್‌ಸೈಟ್‌ಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು. 3,000 ಕಿ.ಮೀ ಪ್ರಯಾಣದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಯಾತ್ರೆ ನಿನ್ನೆ ಪುಣೆಯಲ್ಲಿ ಪೂರ್ಣಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜೀವ್ ಬಜಾಜ್, ಪ್ರತಾಪ್ ಬೋಸ್ ಅವರ ಟೀಕೆಗಳ ಬಗ್ಗೆ ಮಾತನಾಡಿದರು.

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಈ ಬಗ್ಗೆ ಮಾತನಾಡಿದ ರಾಜೀವ್ ಬಜಾಜ್‍‍ರವರು ನನಗೆ ಪ್ರತಾಪ್ ಬೋಸ್ ಯಾರೆಂದು ಗೊತ್ತೇ ಇಲ್ಲ ಎಂದು ಹೇಳಿದರು. ಟಾಟಾ ಹ್ಯಾರಿಯರ್ ಎಸ್‍‍ಯುವಿಯನ್ನು ಲ್ಯಾಂಡ್ ರೋವರ್ ಸಹಾಯದಿಂದ ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಿರುವ ಬಗ್ಗೆ ಪರೋಕ್ಷವಾಗಿ ಹೇಳಿದರು.

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಅವರ ಪ್ರಕಾರ ಡಿಸೈನ್ ಒಂದೇ ಯಾವುದೇ ವಾಹನದ ವ್ಯವಹಾರವನ್ನು ನಿರ್ಧರಿಸುವುದಿಲ್ಲ. ಡಿಸೈನ್‍‍ಗೆ ಹೆಚ್ಚು ಆದ್ಯತೆ ನೀಡದ ಮಾರುತಿ ಸುಜುಕಿ ಕಂಪನಿಯ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ವಿನ್ಯಾಸಕ್ಕಿಂತ ಬೆಲೆ ಮುಖ್ಯವಾಗುತ್ತದೆ ಎಂದು ಹೇಳಿದರು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಅಂದ ಹಾಗೆ ಬಜಾಜ್ ಎಲೆಕ್ಟ್ರಿಕ್ ಸ್ಕೂಟರಿನ ಆನ್‍‍ಲೈನ್ ಬುಕ್ಕಿಂಗ್‍‍‍ಗಳು ಮುಂದಿನ ತಿಂಗಳಿನಿಂದ ಶುರುವಾಗಲಿವೆ. ಜನವರಿಯಿಂದ ಸ್ಕೂಟರ್‍‍ಗಳನ್ನು ವಿತರಿಸಲಾಗುವುದು. ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆಯು ರೂ.1 ಲಕ್ಷದಿಂದ ರೂ.1.30 ಲಕ್ಷಗಳಾಗುವ ಸಾಧ್ಯತೆಗಳಿವೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಈ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಆರಂಭದಲ್ಲಿ ಪುಣೆ ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುವುದು. ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಅಥೆರ್ 450 ಸ್ಕೂಟರಿಗೆ ಪೈಪೋಟಿ ನೀಡಲಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಹೊಸ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರಿಗೆ ಅಪ್‍‍ಗ್ರೇಡ್ ಮಾಡಿಕೊಳ್ಳಬಹುದು. ಈ ಸ್ಕೂಟರ್ ಎಲ್‍ಇ‍‍ಡಿ ಹೆಡ್‍‍ಲೈಟ್, ಎಲ್‍ಇ‍‍ಡಿ ಟೇಲ್ ಲೈಟ್ ಹಾಗೂ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳನ್ನು ಹೊಂದಿದೆ.

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 4 ಕಿ.ವ್ಯಾ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಈ ಸ್ಕೂಟರ್ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 75ರಿಂದ 85 ಕಿ.ಮೀ ದೂರದವರೆಗೂ ಚಲಿಸಬಹುದು.

ಚೇತಕ್ ಸ್ಕೂಟರ್ ಟೀಕಿಸಿದ ಟಾಟಾ ಅಧಿಕಾರಿಗೆ ಟಾಂಗ್ ನೀಡಿದ ಬಜಾಜ್ ಮುಖ್ಯಸ್ಥ..!

ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಬ್ಯಾಟರಿಯನ್ನು ಚಾರ್ಜ್ ಮಾಡಲು ಸಾಮಾನ್ಯ ಚಾರ್ಜರ್‍‍ಗಳನ್ನು ನೀಡಲಾಗುತ್ತದೆ. ವಿತರಣೆಯ ಸಮಯದಲ್ಲಿ ಫಾಸ್ಟ್ ಚಾರ್ಜರ್‍‍ಗಳನ್ನು ನೀಡಲಾಗುವುದಿಲ್ಲ.

Most Read Articles

Kannada
English summary
Rajiv bajaj thrashes out tata design head pratap bose - Read in Kannada
Story first published: Friday, November 15, 2019, 16:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X