ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ಕಂಪನಿಯು ತನ್ನ ಜಿಕ್ಸರ್ ಎಸ್‍ಎಫ್ 150 ಮಾದರಿ ಬೈಕಿನ ಮಾರಾಟದಲ್ಲಿ ಕುಸಿತ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣವೇಂದರೆ ಈ ಬೈಕಿನ ಪ್ರತಿಸ್ಪರ್ಧಿಯಾದ ಯಮಹಾ ಆರ್15 ಬೈಕಿನಲ್ಲಿರುವ ವಿನ್ಯಾಸ ಹಾಗೂ ಆ ಬೈಕ್ ಹೊಂದಿರುವ ಫೀಚರ್‍‍ಗಳು.

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಮಾರಾಟದಲ್ಲಿನ ಕುಸಿತವನ್ನು ತಡೆಗಟ್ಟಿ, ಚೇತರಿಕೆ ನೀಡಲು, ಸುಜುಕಿ ಕಂಪನಿಯು ಜಿಕ್ಸರ್ 150 ಮೋಟಾರ್‍‍ಸೈಕಲಿನ ವಿನ್ಯಾಸದಲ್ಲಿ ಬದಲಾವಣೆ ಮಾಡಲಿದೆ. ಸುಜುಕಿ ಜಿಕ್ಸರ್ ಎಸ್‍ಎಫ್ 150 ಮೋಟಾರ್‍‍ಸೈಕಲಿನಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತಿದ್ದರೂ, ಅದರಲ್ಲಿ ಗಮನಿಸಬೇಕಾದ ಬದಲಾವಣೆ ಎಂದರೆ ಪೂರ್ತಿಯಾಗಿ ಕಪ್ಪು ಬಣ್ಣವನ್ನು ಹೊಂದಿರಲಿದೆ. ಹೊಸ ಆವೃತ್ತಿಯಲ್ಲೂ ಈಗಿರುವ ಬೈಕಿನಲ್ಲಿರುವ ಅನೇಕ ವಿನ್ಯಾಸಗಳನ್ನು ಮುಂದುವರೆಸಲಾಗುತ್ತದೆ. ಆದರೆ ಸ್ವಿಂಗ್ ಆರ್ಮ್‍‍ಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಹೊಸ ಮಡ್‍‍ಗಾರ್ಡ್ ಅಳವಡಿಸಲಾಗುವುದು.

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಮತ್ತೊಂದು ಗಮನಾರ್ಹ ಬದಲಾವಣೆಯೆಂದರೆ ಮೋಟಾರ್‍‍ಸೈಕಲ್‍‍ನಲ್ಲಿರುವ ಹೊಸ ಬಗೆಯ ಸೀಟುಗಳು. ಹಳೆಯ ಒಂದೇ ಪೀಸಿನ ಸೀಟಿನ ಬದಲಿಗೆ ಸ್ಪೋರ್ಟಿ ಲುಕ್ ಇರುವ ಸ್ಪ್ಲಿಟ್ ಸೀಟುಗಳನ್ನು ಅಳವಡಿಸಲಾಗಿದೆ. ಫ್ಯೂಯಲ್ ಟ್ಯಾಂಕ್ ಹೆಚ್ಚು ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣುತ್ತದೆ, ಫೇರಿಂಗ್‍‍ನಲ್ಲಿ ಹೊಸ ಡೆಕಾಲ್‍‍ಗಳನ್ನು ಅಳವಡಿಸಲಾಗಿದೆ.

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಮೋಟಾರ್‍‍ಸೈಕಲ್‍‍ನ ಮುಂಭಾಗದಲ್ಲಿ ಹೆಚ್ಚು ಸ್ಟೈಲಿಶ್, ಶಾರ್ಪ್ ಆಗಿರುವ, ಎಲ್‍ಇ‍‍ಡಿ ಹೆಡ್ ಲ್ಯಾಂಪ್‍‍ಗಳನ್ನು ಹೊಂದಿರುವ ಹೆಡ್‍‍ಲೈಟ್ ಕ್ಲಸ್ಟರ್‍‍ಗಳನ್ನು ಅಳವಡಿಸುವುದರ ಜೊತೆಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಡಿಸ್‍‍ಪ್ಲೇಗಳನ್ನು ನೀಡಲಾಗಿದೆ. ಮೋಟಾರ್‍‍ಸೈಕಲ್‍‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‍‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೋಶಾಕ್‍‍ಗಳನ್ನು ನೀಡಲಾಗಿದೆ.

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಮೇಲೆ ತಿಳಿಸಿದ ಅಪ್‍‍ಡೇಟ್‍‍ಗಳ ಹೊರತಾಗಿ, ತನ್ನ ಪ್ರತಿಸ್ಪರ್ಧಿ ಬೈಕುಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಇನ್ನೂ ಹಲವಾರು ಫೀಚರ್‍‍ಗಳನ್ನು ಹೊಂದುವ ನಿರೀಕ್ಷೆಯಿದೆ. ಆದರೆ 2019ರ ಹೊಸ ಸುಜುಕಿ ಜಿಕ್ಸರ್ ಮೋಟಾರ್‍‍ಸೈಕಲ್ ಯಾವುದೇ ಮೆಕಾನಿಕಲ್ ಬದಲಾವಣೆಗಳನ್ನು ಹೊಂದುವುದಿಲ್ಲ. ಸುಜುಕಿ ಜಿಕ್ಸರ್ ಎಸ್‍ಎಫ್ 150 ಬೈಕ್, 155 ಸಿಸಿಯ ಡ್ಯೂಯಲ್ ವಾಲ್ವ್, ಎಸ್‍ಒ‍‍ಹೆಚ್‍‍ಸಿ, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಇದು 14.6 ಬಿಹೆಚ್‍‍ಪಿಯನ್ನು 8,000 ಆರ್‍‍ಪಿ‍ಎಂ ನಲ್ಲಿ ಹಾಗೂ 14 ಎನ್‍ಎಂ ಟಾರ್ಕ್‍ಅನ್ನು 6,000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

MOST READ: ರಾಯಲ್ ಎನ್‍‍ಫೀಲ್ಡ್ ಹೊಸ ಬೈಕಿನ ಹೆಸರೇನು ಗೊತ್ತಾ?

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಈ ಎಂಜಿನ್ ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಉತ್ತಮವಾದ ಇಂಧನ ಕ್ಷಮತೆಗಾಗಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ.

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಈಗಿರುವ ಸುಜುಕಿ ಜಿಕ್ಸರ್ ಎಸ್‍ಎಫ್ 150 ಮೋಟಾರ್‍‍ಸೈಕಲ್ - ಮೆಟಾಲಿಕ್ ಟ್ರಿಟಾನ್ ಬ್ಲೂ, ಮ್ಯಾಟ್ ಫಿಬ್ರಾಯಿನ್ ಗ್ರೇ/ಗ್ಲಾಸ್ ಸ್ಪಾರ್ಕಲ್ ಬ್ಲಾಕ್, ಪರ್ಲ್ ಮಿರೇಜ್ ರೆಡ್ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲಾಕ್/ಮೆಟಾಲಿಕ್ ಮ್ಯಾಟ್ ಬ್ಲಾಕ್ - ಎಂಬ ನಾಲ್ಕು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಈ ಮೋಟಾರ್‍‍ಸೈಕಲ್‍‍ನ ಬೆಲೆಯನ್ನು ಭಾರತದ ಎಕ್ಸ್ ಶೋರೂಂ ದರದಂತೆ ರೂ.91,921 ಎಂದು ನಿಗದಿಪಡಿಸಲಾಗಿದೆ.

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

2019ರ ಹೊಸ ಸುಜುಕಿ ಜಿಕ್ಸರ್ ಎಸ್‍ಎಫ್ 150 ಬೈಕಿನ ಬೆಲೆಯು ದೇಶಿಯ ಮಾರುಕಟ್ಟೆಯ ದರದಂತೆ ರೂ.1.10 ಲಕ್ಷಗಳಿರ ಬಹುದೆಂದು ನಿರೀಕ್ಷಿಸಲಾಗಿದೆ.

ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುಕಟ್ಟೆಯಲ್ಲಿ ಈಗ ಲಭ್ಯವಿರುವ ಸುಜುಕಿ ಜಿಕ್ಸರ್ ಎಸ್‍ಎಫ್ ಗಿಂತ ಯಮಹಾ ಆರ್15 ಹೆಚ್ಚು ಆಕರ್ಷಕ ವಿನ್ಯಾಸ ಹೊಂದಿದೆ. 150 ಸೆಗ್‍‍ಮೆಂಟಿನ ಬೈಕಿನ ವಿನ್ಯಾಸದಲ್ಲಿ ಬದಲಾವಣೆ ಮಾಡಲು ಸುಜುಕಿ ಕಂಪನಿಯು ಇಷ್ಟು ಸಮಯ ತೆಗೆದುಕೊಂಡಿದ್ದು ಆಶ್ಚರ್ಯಕರವಾಗಿದೆ. ವಿನ್ಯಾಸದಲ್ಲಿ ಬದಲಾವಣೆ ಮಾಡಿದ ಮೇಲಾದರೂ ಮಾರಾಟದಲ್ಲಿ ಚೇತರಿಕೆ ಕಾಣಲಿ ಎಂದು ಹಾರೈಸುತ್ತೇವೆ.

Most Read Articles

Kannada
Read more on ಸುಜುಕಿ suzuki
English summary
Suzuki Gixxer 150 Gets Cosmetic Upgrades — The Battle Of The 150s - Read in kannada
Story first published: Monday, May 13, 2019, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X