ರಾಯಲ್ ಎನ್‍‍ಫೀಲ್ಡ್ ಬೈಕಿನ ಮೇಲೆ ಟ್ರಯಂಫ್ ನೀಡಲಿದೆ ಭರ್ಜರಿ ಎಕ್ಸ್ ಚೇಂಚ್ ಆಫರ್

ಟ್ರಯಂಫ್ ಮೋಟರ್‍‍ಸೈಕಲ್ ಕಂಪನಿಯ ಡೀಲರ್‍‍ಗಳು ರಾಯಲ್ ಎನ್‍‍ಫೀಲ್ಡ್ ಬೈಕ್‍ಗಳ ಮಾಲೀಕರಿಗೆ ಎಕ್ಸ್ ಚೇಂಚ್ ಆಫರ್ ಅನ್ನು ಘೋಷಿಸಿದ್ದಾರೆ. ಮುಂಬೈ ಪುಣೆ, ಬೆಂಗಳೂರು ಮತ್ತು ದೆಹಲಿಯಾದ್ಯಂತ ಇರುವ ಡೀಲರ್‍‍ಗಳು ರಾಯಲ್ ಎನ್‍ಫೀಲ್ಡ್ ಬೈಕುಗಳ ಮೇಲೆ ರೂ.1.5 ಲಕ್ಷ ಎಕ್ಸ್ ಚೇಂಚ್ ಆಫರ್ ಅನ್ನು ನೀಡಿದೆ. ಎಕ್ಸ್ ಚೇಂಚ್ ಆಫರ್‍‍ಗೆ ಕೇವಲ ಟ್ರಯಂಫ್ ಸ್ಟ್ರೀಟ್ ಟ್ವಿನ್ ಮಾದರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ರಾಯಲ್ ಎನ್‍‍ಫೀಲ್ಡ್ ಬೈಕಿನ ಮೇಲೆ ಟ್ರಯಂಫ್ ನೀಡಲಿದೆ ಭರ್ಜರಿ ಎಕ್ಸ್ ಚೇಂಚ್ ಆಫರ್

ಮುಂಬೈ ಮತ್ತು ಪುಣೆಯ ಡೀಲರ್‍‍ಗಳು ಯಾವುದೇ ರಾಯಲ್‍ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಷರತ್ತುಗಳಿಲ್ಲದೆ ರೂ.1.5 ಲಕ್ಷ ಎಕ್ಸ್ ಚೇಂಚ್ ಆಫರ್ ನೀಡಲಿದ್ದಾರೆ. ಆದರೆ ಬೆಂಗಳೂರು ಮತ್ತು ದೆಹಲಿಯ ಡೀಲರ್‍‍ಗಳು ರಾಯಲ್ ಎನ್‍‍ಫೀಲ್ಡ್ ಬೈಕಿನ ಮಾದರಿ ಮತ್ತು ಬೈಕಿನ ಸ್ಥಿತಿಯನ್ನು ಅವಲಂಬಿಸಿ ರೂ.1.5 ಲಕ್ಷ ಎಕ್ಸ್ ಚೇಂಚ್ ಆಫರ್ ನೀಡುತ್ತಾರೆ.

ರಾಯಲ್ ಎನ್‍‍ಫೀಲ್ಡ್ ಬೈಕಿನ ಮೇಲೆ ಟ್ರಯಂಫ್ ನೀಡಲಿದೆ ಭರ್ಜರಿ ಎಕ್ಸ್ ಚೇಂಚ್ ಆಫರ್

ರೂ.1.5 ಲಕ್ಷಗಳಿಗೆ ಹೊಸ ಟ್ರಯಂಫ್ ಬೈಕ್‍‍ಗಳನ್ನು ನೀಡಲಾಗುತ್ತದೆ. ಡೀಲರ್‍‍ಗಳು ಹಣವನ್ನು ಡೌನ್‍ ಪೇಮೆಂಟ್‍ ಆಗಿ ಬಳಸಬಹುದು ಅಥವಾ ಹೊಸ ಬೈಕ್‍‍ಗಳಿಗಾಗಿ ಪೂರ್ಣ ಪ್ರಮಾಣದಲ್ಲಿ ಪಾವತಿ ಭಾಗವಾಗಿ ಬಳಸಬಹುದು.

ರಾಯಲ್ ಎನ್‍‍ಫೀಲ್ಡ್ ಬೈಕಿನ ಮೇಲೆ ಟ್ರಯಂಫ್ ನೀಡಲಿದೆ ಭರ್ಜರಿ ಎಕ್ಸ್ ಚೇಂಚ್ ಆಫರ್

ಒಬ್ಬ ಗ್ರಾಹಕನು ರೂ.1.5 ಲಕ್ಷ ಡೌನ್‍ ಪೇಮೆಂಟ್ ಆಗಿ ಬಳಸಲು ಆರಿಸಿದರೆ, ಬೈಕಿನ ವೇಟಿಂಗ್ ಪೀರಿಡ್‍‍ನಲ್ಲಿ ಹೆಚ್ಚುವರಿಯಾಗಿ ರೂ.34 ಸಾವಿರ ಪಾವತಿಸಬೇಕಾಗುತ್ತದೆ. ಈ ವಿಮೆಯು ಐದು ವರ್ಷಗಳ ವ್ಯಾಲಿ‍ಡಿಟಿ ಹೊಂದಿರುತ್ತದೆ. ಇದನ್ನು ಮೊದಲ ವರ್ಷಕ್ಕೆ ಸಮಗ್ರವಾಗಿ ಮತ್ತು ಐದು ವರ್ಷಗಳ ಕಾಲ ಪೂರ್ಣ ಅವಧಿಗೆ ಮೂರನೇ ವ್ಯಕ್ತಿಯೆಂದು ವಿಂಗಡಿಸಲಾಗಿದೆ.

ರಾಯಲ್ ಎನ್‍‍ಫೀಲ್ಡ್ ಬೈಕಿನ ಮೇಲೆ ಟ್ರಯಂಫ್ ನೀಡಲಿದೆ ಭರ್ಜರಿ ಎಕ್ಸ್ ಚೇಂಚ್ ಆಫರ್

ಇದಲ್ಲದೆ ಮುಂಬೈ ಡೀಲರ್ ಬೇರೆ ರಾಜ್ಯದಲ್ಲಿ ನೋಂದಾಯಿಸಲಾಗಿರುವ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೂ ಕೂಡ ಎಕ್ಸ್ ಚೇಂಚ್ ಆಫರ್ ಅನ್ನು ನೀಡುತ್ತಾರೆ. ಡೀಲರ್‍‍ಗಳಿಗೆ ಆರ್‌ಟಿಒನಿಂದ ನೋ-ಅಬ್ಜೆಕ್ಷನ್ ಪ್ರಮಾಣಪತ್ರ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್ ಮಾಲೀಕರು ಸಹಿ ಮಾಡಿದ ಫಾರ್ಮ್ 29, ಫಾರ್ಮ್ 30 ಮತ್ತು ಫಾರ್ಮ್ 31ರ ಅಗತ್ಯವಿದೆ.

ರಾಯಲ್ ಎನ್‍‍ಫೀಲ್ಡ್ ಬೈಕಿನ ಮೇಲೆ ಟ್ರಯಂಫ್ ನೀಡಲಿದೆ ಭರ್ಜರಿ ಎಕ್ಸ್ ಚೇಂಚ್ ಆಫರ್

ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕ್‍‍ಗಳನ್ನು ಹೊಂದಿರುವ ಮತ್ತು ಅಪ್‍‍ಗ್ರೇಡ್ ಮಾಡಲು ಬಯಸುವವರಿಗೆ ಹೊಸ ಸುದ್ದಿ ಇದೆ. ರಾಯಲ್ ಎನ್‍‍ಫೀಲ್ಡ್ ತನ್ನ ಸರಣಿಯ ಎಲ್ಲಾ 500 ಸಿಸಿ ಬೈಕ್‍ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಯೋಜಿಸುತ್ತಿದೆ. ಇದರಲ್ಲಿ ಜನಪ್ರಿಯ ಮಾದರಿಗಳಾದ ಬುಲೆಟ್ 500, ಥಂಡರ್‍‍ಬರ್ಡ್ 500 ಮತ್ತು ಕ್ಲಾಸಿಕ್ 500 ಬೈಕ್‍‍ಗಳು ಸೇರಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ರಾಯಲ್ ಎನ್‍‍ಫೀಲ್ಡ್ ಬೈಕಿನ ಮೇಲೆ ಟ್ರಯಂಫ್ ನೀಡಲಿದೆ ಭರ್ಜರಿ ಎಕ್ಸ್ ಚೇಂಚ್ ಆಫರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿ‍ನಲ್ಲಿ 900 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 64 ಬಿ‍‍ಹೆಚ್‍‍ಪಿ ಪವರ್ ಮತ್ತು 80 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಪ್ರಸ್ತುತ ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.70 ಲಕ್ಷಗಳಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ರಾಯಲ್ ಎನ್‍‍ಫೀಲ್ಡ್ ಬೈಕಿನ ಮೇಲೆ ಟ್ರಯಂಫ್ ನೀಡಲಿದೆ ಭರ್ಜರಿ ಎಕ್ಸ್ ಚೇಂಚ್ ಆಫರ್

ಇದು ಟ್ರಯಂಫ್ ಡೀಲರ್‍‍‍ಗಳ ಚಾಣಾಕ್ಷ ನಡೆಯಾಗಿದೆ. ಆದರೆ ರಾಯಲ್ ಎನ್‍‍ಫೀಲ್ಡ್ ಗ್ರಾಹಕರು ಟ್ರಯಂಫ್ ಬೈಕ್ ಖರೀದಿಗೆ ಮುಂದಾಗುತ್ತಾರಾ ಎಂಬ ಪ್ರಶ್ನೆಯು ಕಾಡುತ್ತದೆ. ಟ್ರಯಂಫ್ ಘೋಷಿಸಿದ ಎಕ್ಸ್ ಚೇಂಚ್ ಆಫರ್ ಎಷ್ಟರ ಮಟ್ಟಿಗೆ ಯಶ್ವಸಿಯಾಗುತ್ತೆ ಎಂಬುದನ್ನು ಕಾದು ನೋಡಬೇಕು.

Most Read Articles

Kannada
English summary
Triumph Dealers Offer Up To Rs 1.5 Lakh For Exchanging A Royal Enfield Motorcycle - Read in Kannada
Story first published: Tuesday, November 26, 2019, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X