2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಕೆಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಿತ್ರ ಸಕ್ಕತ್ ವೈರಲ್ ಆಗುತ್ತಿದೆ. ಈ ಚಿತ್ರವನ್ನು ಕಂಡ ವಾಹನ ಸವಾರರಲ್ಲಿ ಕೆಲವರು ನೊಂದಿದ್ದರೆ ಇನ್ನು ಕೆಲವರು ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಚಿತ್ರ ಯಾವುದು ಮತ್ತು ಆ ಚಿತ್ರದಲ್ಲಿರುವ ಅಂತಹ ಮಾಹಿತಿಯಾದ್ರು ಏನು ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ...

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಸಧ್ಯ ಸಾಮಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾಗಿರುವ ಈ ಚಿತ್ರದಲ್ಲಿ ಯಮಹಾ ಆರ್‍ಎಕ್ಸ್ ಸರಣಿಯ ಬೈಕ್‍ಗಳು, ಆರ್‍‍‍ಡಿ 350, ಸುಜುಕಿ ಶೊಗನ್, ಯೆಜ್ಡಿ ಬೈಕ್, ಬಜಾಜ್ ಚೇತಕ್ ಮತ್ತು ಕೈನೆಟಿಕ್ ಹೋಂಡಾ ಸ್ಕೂಟರ್‍‍ಗಳನ್ನು ಒಳಗೊಂಡಂತೆ ಈ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂಬ ಸ್ಪೋಟಕ ಸುದ್ದಿಯನ್ನು ಒಳಗೊಂಡಿದೆ.

Photo Credits: TeamBHP

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಮೇಲೆ ಚಿತ್ರಗಳಲ್ಲಿ ನೀಡಿರುವ ವಾಹನಗಳನ್ನು ಎಪ್ರಿಲ್ 1, 2019ರ ನಂತರ ಬಳಸಲಾಗುವುದಿಲ್ಲವೆಂದು ಮತ್ತು ಸಂಪೂರ್ಣವಾಗಿ ಈ ವಾಹನಗಳ ಮಾರಾಟವನ್ನು ಸಹ ಬ್ಯಾನ್ ಮಾಡಲಾಗುವುದಂತೆ. ಈ ಕುರಿತಾಗಿ ನ್ಯೂಸ್9 ಚಾನಲ್‍ನವರು ಆರ್‍‍ಟಿಒ ಕಮಿಷನರ್ ಆದ ವಿ.ಪಿ, ಹಿಕ್ಕೆರಿಯವರ ಜೊತೆಗೆ ಸಂದರ್ಶಣೆಯನ್ನು ನಡೆಸಲಾಗಿತ್ತು.

ಈ ಸಂದರ್ಶನದಲ್ಲಿ ಹಿಕ್ಕೆರಿಯವರು 2 ಸ್ಟ್ರೋಕ್ ಆಧಾರಿತ ವಾಹನಗಳನ್ನು ನಿಶೇಧಿಸುವುದರ ಬಗ್ಗೆ 'ಹಲವರು ತಮ್ಮ ಬೈಕ್‍ಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದಾರೆ. ಆದ್ರೆ ಈಗಿರುವ ಪರಿಸ್ಥಿತಿಯಲ್ಲಿ ಇಂತಹ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದ್ದು, ನಾವು ತೆಗೆದುಕೊಂಡ ಈ ನಿರ್ಣಯವು ಮುಂದಿನ ಪೀಳಿಗೆಗೆ ಉಪಯುಕ್ತವಾಗಿರುತ್ತದೆ.

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ನ್ಯೂಸ್9 ವರದಿಯ ತನಿಖೆ ವರದಿಯ ಪ್ರಕಾರ 2 ಸ್ಟ್ರೋಕ್ ಎಂಜಿನ್ ಬಳಕೆಯನ್ನು ಇನ್ನು ಎರಡು ಅಥವಾ ಮೂರು ತಿಂಗಳುಗಳಲ್ಲಿ ಸಂಪೂರ್ಣವಾಗಿ ನಿಶೇಧಿಸಲಾಗಿವುದಾಗಿದ್ದು, ನಿಷೇಧದ ದಿನಾಂಕವನ್ನು ಸಹ ಮೇಲಿರುವ ಚಿತ್ರದಲ್ಲಿ ನೀವು ಗಮನಿಸಬಹುದಾಗಿದೆ.

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಇದೆಲ್ಲಾ ಹಳೆಯ ವಿಚಾರ ಹೊಸ ವಿಚಾರ ಏನಿದೆ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ 2 ಸ್ಟ್ರೋಕ್ ಎಂಜಿನ್ ಆಧಾರಿತ ಬೈಕ್‍ಗಳನ್ನು ನಿಷೇಧ ಮಾಡುವ ವಿಷಯವನ್ನು ತಿಳಿದ ಬೆಂಗಳೂರಿನಲ್ಲಿರುವ 2 ಸ್ಟ್ರೋಕ್ ಎಂಜಿನ್ ಬೈಕ್‍ಗಳ ಪ್ರಿಯರು ಈ ನಿರ್ಣಯದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ದೇಶದಲ್ಲಿರುವ ಹಲವಾರು ಪ್ರಮುಖ ನಗರಗಳಲ್ಲಿ 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳು ಕಡಿಮೆಯಾದರೂ, ನಮ್ಮ ಬೆಂಗಳೂರಿನಲ್ಲಿ ಮಾತ್ರ ಆಟೋ ರಿಕ್ಷಾಗಳು ಸೇರಿದಂತೆ 80 ಸಾವಿರಕ್ಕು ಹೆಚ್ಚು ಸಂಖ್ಯೆಯಲ್ಲಿ 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳು ಈಗಲೂ ಸಂಚರಿಸುತ್ತಿದೆ.

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಆರ್‍‍ಟಿಒ ಇಲಾಖೆಯು 2 ಸ್ಟ್ರೋಕ್ ಎಂಜಿನ್ ಮೋಟಾರ್‍‍ಸೈಕಲ್ ಅನ್ನು ನಿಷೇಧ ಮಾಡುವ ವಿಷಯಕ್ಕೆ ಬಂದಾಗ, ಈ ಆದೇಶವು ಮೊದಲಿಗೆ ಮೋಟಾರ್ ವೆಹಿಕಲ್ ಕಾಯ್ದೆಯಲ್ಲಿ ಬದಲಾವಣೆಯನ್ನು ಮಾಡದೆ, ಇದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಮತ್ತು ನಿಷೇಧಕ್ಕೆ ತಕ್ಕಂತೆ ಆಕ್ಟ್ ನಲ್ಲಿ ತಿದ್ದುಪಡಿಗಳನ್ನು ಮಾಡಬೇಕಾಗಿರುತ್ತದೆ. ಇದರ ಮೇಲೆಯು ರಾಜ್ಯ ಸರ್ಕಾರ ಈ ಆದೇಶವನ್ನು ಜಾರಿ ಮಾಡಿದರೂ ಸಹ ಇದು ಕೇವಲ ರಾಜ್ಯದಲ್ಲಿರುವ ರೈಡರ್‍‍ಗಳ ಮೇಲೆ ಪರಿಣಾಮ ಬೀರುತ್ತದೆ.

MOST READ: ಪಾರ್ಟಿ ಮಾಡಕ್ಕೆ ಗೋವಾನಲ್ಲಿ ಹಣ ಸಾಕಾಗಿಲ್ಲಾಂದ್ರೆ ಹೀಗೆ ಮಾಡಿ ಹಣ ಸಂಪಾದಿಸಿ...

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ನಮ್ಮ ಡ್ರೈವ್‍ಸ್ಪಾರ್ಕ್ ತಂಡವು ಬೆಂಗಳೂರಿನಲ್ಲಿರುವ ಕೆಲ 2 ಸ್ಟ್ರೋಕ್ ಎಂಜಿನ್ ಮಾಲೀಕರು ಮತ್ತು ಅವುಗಳ ಪ್ರಿಯರು ಆದ ಕೆಲ ರೈಡರ್‍‍ಗಳ ಹತ್ತಿರ ಈ ನಿಷೇಧದ ಬಗ್ಗೆ ಕೆಲವು ಸಂಭಾಷಣೆಯನ್ನು ನಡೆಸಲಾಗಿದ್ದು, ಅವರ ಅಭಿಪ್ರಾಯ ಏನು ಎಂಬುದನ್ನು ಇಲ್ಲಿ ತಿಳಿಯಿರಿ...

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ದೀಪಕ್ ಚಿನ್ನಪ್ಪ - (ನಾಲ್ಕು ಬಾರಿ ನ್ಯಾಷನಲ್ ರೇಸಿಂಗ್ ಚಾಂಪಿಯನ್)

ಸರ್ಕಾರವು ತಪ್ಪು ದಾರಿಯಲ್ಲಿ ನಗರವನ್ನು ಶುಚಿಗೊಳಿಸುವ ಕಾರ್ಯವನ್ನು ಮಾಡಲು ಮುಂದಾಗುತ್ತಿದೆ. ಮೊದಲಿಗೆ ತಾವು ಹಳೆದ ಬಸ್ ಮತ್ತು ಟ್ರಕ್‍‍ಗಳ ಬಳಕೆಯನ್ನು ನಗರ ಪ್ರದೇಶಗಳಲ್ಲಿ ಬಳಸುವುದನ್ನು ರದ್ದುಗೊಳಿಸಬೇಕಿದೆ. 2 ಸ್ಟ್ರೋಕ್ ಬೈಕ್ಸ್ ಮತ್ತು ಸ್ಕೂಟರ್‍‍ಗಳ ಮಾಲೀಕರು ಅವುಗಳನ್ನು ಯಾವಾಗಲೂ ರೈಡ್ ಮಾಡುವುದಿಲ್ಲ. ನಾನು ಸೇರಿದಂತೆ ಹಲವರು 2 ಸ್ಟ್ರೋಕ್ ಎಂಜಿನ್ ವಾಹನ ಮಾಲೀಕರು ಸಮಯಾನುಸಾರವಾಗಿ ಬಳಸುತ್ತೆವೆ ಮತ್ತು ನಗರದಲ್ಲಿ ಕಡಿಮೆ ಸಂಖ್ಯೆಯ 2 ಸ್ಟ್ರೋಕ್ ವಾಹನಗಳು ಸಂಚರಿಸುತ್ತಿವೆ. ಎಂದು ದೀಪಕ್ ಹೇಳಿಕೊಂಡಿದ್ದಾರೆ.

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಬಾಬಾ ಬ್ಲೇಜ್ - 2 ಸ್ಟ್ರೋಕ್ ವಾಹನ ಉತ್ಸಾಹಿ ಮತ್ತು ರೇಸರ್

ಇದು 2 ಸ್ಟ್ರೋಕ್ ವಾಹನ ಉತ್ಸಾಹಿಗಳ ಮೇಲೆ ಗುರಿಯಿಟ್ಟ ಆಕ್ರಮಣವಾಗಿದೆ. ರಸ್ತೆಯ ಮೇಲೆ 2 ಸ್ಟ್ರೋಕ್ ಸಂಚರಣೆಯು ಶೇಕಡಾ ಕಡಿಮೆಯಾಗಿದೆ. ಏಕೆಂದರೆ ನಿರ್ವಹಣೆ, ಇಂಧನ ಸರಾಸರಿ, ಮತ್ತು ಬಿಡಿಭಾಗಗಳು ಈ ವಾಹನಗಳನ್ನು ಪ್ರತಿದಿನವೂ ಪ್ರಾಯೋಗಿಕವಾಗಿ ಸಾಗಿಸಲು ಸಾಧ್ಯವಿಲ್ಲ. ಆದ್ದರಿಂದ 2 ಸ್ಟ್ರೋಕ್‍ ಬೈಕ್/ಸ್ಕೂಟರ್ ಅನ್ನು ನಿಷೇಧಿಸಿದರೆ, ವರ್ಷಗಳ ಕಾಲ ದ್ವಿಚಕ್ರ ವಾಹನಗಳ ಯಂತ್ರಶಾಸ್ತ್ರದಲ್ಲಿ ಪರಿಣತಿಯನ್ನು ಪಡೆದ ಜೀವನೋಪಾಯಕ್ಕೆ ಏನಾಗುತ್ತದೆ? ಈ ವಾಹನಗಳನ್ನು ಪುನಃಸ್ಥಾಪಿಸಲು ಮತ್ತು ಕಾಪಾಡಿಕೊಳ್ಳಲು ಲಕ್ಷಾಂತರ ಖರ್ಚು ಮಾಡಿದ ಮಾಲೀಕರಿಗೆ ತೊಂದರೆಯಾಗುವುದಿಲ್ಲವೇ? ವಾಹನಗಳಿಗಿಂತಲೂ ಹೆಚ್ಚಾಗಿ ಅವುಗಳೊಂದಿಗೆ ಭಾವನಾತ್ಮಕವಾಗಿ ನಾವು ಬೆರತು ಹೋಗಿದ್ದೆವೆ. ನಮ್ಮಲ್ಲಿರುವ ಹಲವಾರು 2 ಸ್ಟ್ರೋಕ್ ವಾಹನಗಳ ಮಾಲೀಕರು ಇದನ್ನು ತಮ್ಮ ತಂದೆ ಮತ್ತು ತಾತನ ಕಾಲದಿಂದಲೂ ಬಳಸುತ್ತಿದ್ದೇವೆ. ಎಂದು ಹೇಳಿಕೊಂಡಿದ್ದಾರೆ.

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಗೋಕುಲ್ ಯುಮ್ - ಬೆಂಗಳೂರು ಕ್ಲಾಸಿಕ್ ಸ್ಕೂಟರ್ ಕ್ಲಬ್ ಸ್ಥಾಪಕ

2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳ ಬಳಕೆಯನ್ನು ನಿಷೇಧಿಸಲಿದೆ ಎಂದು ಆರ್‍‍ಟಿಒ ತೆಗೆದುಕೊಂಡ ನಿರ್ಧಾರ ನಿಜಕ್ಕೂ ದೊಡ್ಡ ಪ್ರಮಾಣದಲ್ಲಿ ಬದಲಾವಣೇಯನ್ನು ತರುವುದಿಲ್ಲ. ಬದಲಿಗೆ ಈ ವಾಹನಗಳ ಫಿಟ್ನೆಸ್ ಪರೀಕ್ಷೆಗಳ ಮೇಲೆ ಹೆಚ್ಚು ಕಟ್ಟುನಿಟ್ಟಾಗಿ ಕೇಂದ್ರೀಕರಿಸಬೇಕಿದೆ. ಎಂದು ಹೇಳಿದ್ದಾರೆ

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ವಿಶಾಲ್ ಅಗರ್‍‍ವಾಲ್ - ಬೆಂಗಳೂರು ಆರ್‍‍ಡಿ350 ಕ್ಲಬ್ ಸ್ಥಾಪಕ

ಎರಡು ಸ್ಟ್ರೋಕ್ ಬೈಕ್‍ಗಳನ್ನು ನಿಷೇಧಿಸುವುದು ಸೂಕ್ತವಲ್ಲ.ಫಿಟ್ನೆಸ್ ಪ್ರಮಾಣಪತ್ರಗಳನ್ನು ನವೀಕರಿಸಲಾಗದಿದ್ದಲ್ಲಿ ಆರ್‍‍ಟಿಒ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಗತ್ಯವಿದ್ದಲ್ಲಿ, ಫಿಟ್ನೆಸ್ ಪ್ರಮಾಣಪತ್ರಗಳನ್ನು ನವೀಕರಿಸದ ಅಥವಾ ರಸ್ತೆ ಕಾನೂನುಬದ್ಧವಾಗಿರದ ಈ ಬೈಕುಗಳನ್ನು ಆರ್‍‍ಟಿಒ ನಿಷೇಧಿಸಬಹುದು. ಎಂದು ಹೇಳಿದ್ದಾರೆ.

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಮಖ್ಸೂದ್ ಬೈಗ್ - 2 ಸ್ಟ್ರೋಕ್ ಎಂಜಿನ್ ಉತ್ಸಾಹಿ ಮತ್ತು ಸಂಗ್ರಾಹಕರು

ನಿಷೇಧವು ಜಾರಿಗೆ ಬಂದರೆ, ಅದು ಬೆಂಗಳೂರಿನ 2-ಸ್ಟ್ರೋಕ್ ಸಮುದಾಯಕ್ಕೆ ನಿಜವಾದ ದುರಂತವಾಗಬಹುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ವಿಚಾರವು ನನ್ನ ಹೃದಯಕ್ಕೆ ನಾಟಿದ ಬಾಣದ ಹಾಗೆ ಕಾಣುತ್ತಿದೆ. 2 ಸ್ಟ್ರೋಕ್ ಎಂಜಿನ್ ವಾಹನಗಳನ್ನು ದಿನನಿತ್ಯದ ಬಳಕೆಯಲ್ಲದೆ, ಸಾಂದರ್ಭಿಕವಾಗಿ ಮಾತ್ರ ಸವಾರಿ ಮಾಡಲಾಗುವುದು. ಈ ಬೈಕುಗಳು ಮತ್ತು ಸ್ಕೂಟರ್ಗಳು ನಮ್ಮ ಕುಟುಂಬದ ಭಾಗವೆಂದು ನಾವು ಪರಿಗಣಿಸುತ್ತೇವೆ. ಎಂದು ಹೇಳಿಕೊಂಡಿದ್ದಾರೆ.

MOST READ: ಕಾರು ಖರೀದಿದಾರರಿಗೆ ಮತ್ತಷ್ಟು ಹೊಸತನ ನೀಡಿದ ಮಾರುತಿ ಸುಜುಕಿ ಅರೆನಾ

2 ಸ್ಟ್ರೋಕ್ ಬೈಕ್ ಬ್ಯಾನ್ ಮಾಡಲು ಹೊರಟ ಸರ್ಕಾರದ ನಿರ್ಧಾರ ಸಫಲವಾಗುತ್ತಾ.?

ಪ್ರಸ್ಥುತ ಬಳಕೆಯಲ್ಲಿರುವ 4 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳಿಗಿಂತಲೂ 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳು ಹೆಚ್ಚು ವಾಯು ಮಾಲಿನ್ಯವನ್ನು ಉಂಟು ಮಾಡುತ್ತಿದ್ದು, ಇಂತಹ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು 2020ರಲ್ಲಿ 6 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳನ್ನು ಸಹ ಜಾರಿ ಮಾಡಲಾಗುತ್ತಿದೆ.

ಹಾಗಾದರೆ 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳ ಬಳೆಕೆಯ ಕುರಿತಾಗಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

Most Read Articles

Kannada
English summary
Two Stroke Motorcycle Scooter Ban In Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X