ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಬೆಂಗಳೂರಿನ ಸ್ಟಾರ್ಟ್ ಅಪ್ ಆಟೋ ಉತ್ಪಾದನಾ ಸಂಸ್ಥೆಯಾದ ಆಲ್ಟ್ರಾವಯೊಲೆಟ್ ತನ್ನ ಬಹುನೀರಿಕ್ಷಿತ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಖರೀದಿಗೆ ಲಭ್ಯವಾಗಿರುವ ಹೊಸ ಬೈಕ್ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್‌ಗಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಮತ್ತು ಮಾರಾಟ ಹೆಚ್ಚು ಒತ್ತು ನೀಡುತ್ತಿವೆ. ಇದರಲ್ಲಿ ಕೆಲವು ಸ್ಟಾರ್ಟ್ ಅಪ್ ಸಂಸ್ಥೆಗಳು ಸಹ ಎಲಕ್ಟ್ರಿಕ್ ವಾಹನ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಬೆಂಗಳೂರು ಮೂಲದ ಆಲ್ಟ್ರಾವಯೊಲೆಟ್ ಕೂಡಾ ಆಟೋ ಉದ್ಯಮಕ್ಕೆ ಭರ್ಜರಿಯಾಗಿ ಎಂಟ್ರಿ ನೀಡಿದೆ.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ ಅಲ್ಟ್ರಾವಯೊಲೆಟ್ ಸಂಸ್ಥೆಯು ಮೊದಲ ಹಂತವಾಗಿ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಹೊಸ ಎಲೆಕ್ಟ್ರಿಕ್ ಬೈಕ್ ಬೆಲೆಯನ್ನು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಆನ್ ರೋಡ್ ಪ್ರಕಾರ ಆರಂಭಿಕ ಆವೃತ್ತಿಗೆ ರೂ.3 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.3.25 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಸದ್ಯಕ್ಕೆ ಬಿಡುಗಡೆ ಮಾಡಿ ಬುಕ್ಕಿಂಗ್ ಆರಂಭಿಸಿರುವ ಆಲ್ಟ್ರಾವಯೊಲೆಟ್ ಸಂಸ್ಥೆಯು ಹೊಸ ಬೈಕ್ ಅನ್ನು 2020ರ ಮಧ್ಯಂತರದಲ್ಲಿ ಅಧಿಕೃತವಾಗಿ ವಿತರಣೆಗೆ ಚಾಲನೆ ನೀಡಲಿದೆ.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಜನಪ್ರಿಯ ಜೆಟ್ ಫೈಟರ್ ಎಫ್77 ವಿನ್ಯಾಸದ ಪ್ರೇರಣೆಯೊಂದಿಗೆ ಎಫ್77 ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಗೊಳಿಸಿರುವ ಆಲ್ಟ್ರಾವಯೊಲೆಟ್ ಸಂಸ್ಥೆಯು ಬೆಲೆಗೆ ತಕ್ಕಂತೆ ಹೊಸ ಬೈಕಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹೊಸ ಬೈಕಿನಲ್ಲಿ ಆ್ಯಂಗುಲರ್ ಬಾಡಿ ಪ್ಯಾನೆಲ್, ಶಾರ್ಪ್ ಫ್ರಂಟ್ ಫ್ಯಾಸಿಯಾ ಮತ್ತು ಫುಲ್ ಎಲ್ಇಡಿ ಹೆಡ್‌ಲೈಟ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಕ್ಲಿಪ್ ಹ್ಯಾಂಡ್ ಬಾರ್ ಮತ್ತು ಹಿಂಬದಿಯಲ್ಲಿರುವ ಫುಟ್ ಪೆಗ್ ಸೌಲಭ್ಯವು ಬೈಕ್ ರೈಡಿಂಗ್ ಶೈಲಿಗೆ ಮತ್ತಷ್ಟು ಬಲಿಷ್ಠತೆ ನೀಡುತ್ತವೆ.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಇನ್ನು ಹೊಸ ಬೈಕಿನಲ್ಲಿ ವಿವಿಧ ತಾಂತ್ರಿಕ ಮಾಹಿತಿಗಳನ್ನು ಒಂದೇ ಸೂರಿನಡಿ ನೀಡಬಲ್ಲ ಟಿಎಫ್‌‌ಟಿ ಸ್ಕ್ರೀನ್, ಬ್ಲೂಟೂಥ್ ಕನೆಕ್ವಿವಿಟಿ, ಬೈಕ್ ಲೋಕೆಟರ್ ಮತ್ತು ಆ್ಯಪ್ ಮೂಲಕವೇ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾದ ಸೌಲಭ್ಯವಿದೆ.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಜೊತೆಗೆ ಇಕೋ, ಸ್ಪೋರ್ಟ್ ಮತ್ತು ಇನ್‌ಸೆನ್ ಎನ್ನುವ ಮೂರು ರೀತಿಯ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, 25ಕಿಲೋ ವ್ಯಾಟ್ ಬಿಎಲ್‌ಡಿಸಿ ಮೋಟಾರ್ ಪ್ರೇರಣೆಯೊಂದಿಗೆ 33.5-ಬಿಎಚ್‌ಪಿ ಮೂಲಕ 147ಕಿ.ಮಿ ಟಾಪ್ ಸ್ಪೀಡ್ ಗುರಿಹೊಂದಬಲ್ಲ ಬಲಿಷ್ಠ ಎಲೆಕ್ಟ್ರಿಕ್ ಬೈಕ್ ಮಾದರಿಯಾಗಿದೆ.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಎಫ್77 ಬೈಕ್ ಮೈಲೇಜ್

ಕೇವಲ 50 ನಿಮಿಷಗಳಲ್ಲಿ ಶೇ.80 ಬ್ಯಾಟರಿ ಚಾರ್ಜ್ ಮಾಡಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರುವ ಎಫ್77 ಬೈಕ್ ಪ್ರತಿ ಚಾರ್ಜ್‌ಗೆ ರೈಡಿಂಗ್ ಮೋಡ್ ಆಧಾರದ ಮೇಲೆ 140ಕಿ.ಮಿನಿಂದ 150 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಈ ಮೂಲಕ ವೇಗದ ಬೈಕ್ ಸವಾರಿಯೊಂದಿಗೆ ಅತ್ಯುತ್ತಮ ಮೈಲೇಜ್ ಕೂಡಾ ಒದಗಿಸುವ ಸಾಮರ್ಥ್ಯ ಹೊಂದಿರುವ ಎಫ್77 ಬೈಕ್ ಮಾದರಿಯು ಯುವ ಸಮುದಾಯ ಪ್ರಮುಖ ಆಕರ್ಷಣೆಯಾಗಲಿದ್ದು, ಹೊಸ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಹೈ ಸ್ಪೀಡ್ ಎಫ್77 ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರಿನ ಆಲ್ಟ್ರಾವಯೊಲೆಟ್

ಹೊಸ ಬೈಕಿನಲ್ಲಿ ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನೆಲ್ ಎಬಿಎಸ್, 320ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220ಎಂಎಂ ರಿಯರ್ ಡಿಸ್ಕ್ ಬ್ರೇಕ್, 17-ಇಂಚಿನ ವೀಲ್ಹ್‌ ಜೋಡಣೆ ಹೊಂದಿದ್ದು, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ರಿವೋಲ್ಟ್ ಆರ್‌ವಿ400 ಎಲೆಕ್ಟ್ರಿಕ್ ಬೈಕಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.

Most Read Articles

Kannada
English summary
Ultraviolette F77 Electric Motorcycle Launched In India. Read in Kannada.
Story first published: Wednesday, November 13, 2019, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X