ಆಟೋ ಎಕ್ಸ್‌ಪೋ 2020: ಸೂಪರ್‍‍ಬೈಕ್ ಅನ್ನು ಅನಾವರಣಗೊಳಿಸಿದ ಎಪ್ರಿಲಿಯಾ

ಎಪ್ರಿಲಿಯಾ ಕಂಪನಿಯು ತನ್ನ ಹೊಸ ಆರ್‌ಎಸ್‌ವಿ4-1100 ಫ್ಯಾಕ್ಟರಿ ಬೈಕ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಎಪ್ರಿಲಿಯಾ ಸೂಪರ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಸೂಪರ್‍‍ಬೈಕ್ ಅನ್ನು ಅನಾವರಣಗೊಳಿಸಿದ ಎಪ್ರಿಲಿಯಾ

ಹೊಸ ಆರ್‍‍ಎಸ್‍‍ವಿ4 1100 ಫ್ಯಾಕ್ಟರಿ ಸೂಪರ್‍‍ಬೈಕ್ ಪವರ್‍‍ಫುಲ್ ಎಂಜಿನ್ ಅನ್ನು ಹೊಂದಿದೆ. ಆರ್‍ಎಸ್‍‍ವಿ4 1100 ಫ್ಯಾಕ್ಟರಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.22.4 ಲಕ್ಷಗಳಾಗಿದೆ. ಎಪ್ರಿಲಿಯಾ ಬೈಕ್‍ಗಾಗಿ ಬುಕ್ಕಿಂಗ್ ಮಾಡಿ 45 ದಿನಗಳ ಬಳಿಕ ಈ ಬೈಕ್ ಅನ್ನು ವಿತರಿಸಲಾಗುತ್ತದೆ. ಅಂದರೆ ಈ ಬೈಕ್ ಅನ್ನು ವಿತರಣೆ ಮಾಡಲು 45 ದಿನಗಳ ಸಮಯವಕಾಶವನ್ನು ತೆಗೆದುಕೊಳ್ಳಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಸೂಪರ್‍‍ಬೈಕ್ ಅನ್ನು ಅನಾವರಣಗೊಳಿಸಿದ ಎಪ್ರಿಲಿಯಾ

ಆರ್‍‍ವಿ4 1100 ಬೈಕ್ 1,100 ಸಿಸಿ ವಿ4 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,200 ಆರ್‍‍ಪಿ‍ಎಂನಲ್ಲಿ 217 ಬಿ‍ಹೆಚ್‍‍ಪಿ ಪವರ್ ಮತ್ತು 11,000 ಆರ್‍‍ಪಿ‍ಎಂನಲ್ಲಿ 122 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಟೋ ಎಕ್ಸ್‌ಪೋ 2020: ಸೂಪರ್‍‍ಬೈಕ್ ಅನ್ನು ಅನಾವರಣಗೊಳಿಸಿದ ಎಪ್ರಿಲಿಯಾ

ಈ ಬೈಕಿನ ಬೋರ್ ಅನ್ನು 81ಎಂಎಂ ಹೆಚ್ಚಿಸಲಾಗಿದೆ ಮತ್ತು ತಂಪಾಗಿಸಲು ಹೊಸ ಆಯಿಲ್ ಪಂಪ್ ಮತ್ತು ಆಯಿಲ್ ಇಂಜೆಕ್ಟರ್ ಅನ್ನು ಕೂಡ ಹೊಂದಿದೆ. ಇಸಿಯು ಮತ್ತು ಗೇರಿಂಗ್‍‍ನಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ.

ಆಟೋ ಎಕ್ಸ್‌ಪೋ 2020: ಸೂಪರ್‍‍ಬೈಕ್ ಅನ್ನು ಅನಾವರಣಗೊಳಿಸಿದ ಎಪ್ರಿಲಿಯಾ

ಎಂಜಿನ್ ಜೊತೆಗೆ ಎಪ್ರಿಲಿಯಾ, ಬೈಕಿನ ಫ್ರೇಮ್ ಮತ್ತು ಸಸ್ಪೆಂಷನ್ ಸೆಟಪ್ ಅನ್ನು ನವೀಕರಿಸಿದೆ. ಈ ಬೈಕಿನಲ್ಲಿ ಓಹ್ಲಿನ್ಸ್ ನಿಂದ ಎ‍ನ್‍ಐಎಕ್ಸ್ ಮತ್ತು ಮೊನೊಶಾಕ್ ಮತ್ತು ಸ್ಟೀಯರಿಂಗ್ ಡ್ಯಾಂಪರ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಸೂಪರ್‍‍ಬೈಕ್ ಅನ್ನು ಅನಾವರಣಗೊಳಿಸಿದ ಎಪ್ರಿಲಿಯಾ

ಈ ಬೈಕಿನಲ್ಲಿ ಬ್ರೆಂಬೊ ಸ್ಟೈಲ್ಮಾ ಕ್ಯಾಲಿಪರ್ಸ್ ಬ್ರೇಕಿಂಗ್ ಸಿಸ್ಟಂ ಅನ್ನು ನೀಡಲಾಗಿದೆ. ಎಪ್ರಿಲಿಯಾ ಆರ್‍‍ವಿ4 1100 ಬೈಕ್ ಮೋಟೋ ಜಿಪಿ ರೀತಿಯ ಏರೋ ವಿಂಗ್ಲೆಟ್‍‍ಗಳನ್ನು ಹೊಂದಿದೆ. ಟೈಟಾನಿಯಂ ಅಕ್ರಪೋವಿಕ್ ಎಕ್ಸಾಸ್ಟ್ ಕೂಡ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಸೂಪರ್‍‍ಬೈಕ್ ಅನ್ನು ಅನಾವರಣಗೊಳಿಸಿದ ಎಪ್ರಿಲಿಯಾ

ಈ ಬೈಕ್ 199 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್, ವ್ಹೀಲ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಸ್ಪೀಡ್ ಲಿಮಿಟರ್‍‍ಗಳಿವೆ. ಎಪ್ರಿಲಿಯಾ ಪರ್ಫಾರ್ಮೆನ್ಸ್ ರೈಡ್ ಕಂಟ್ರೋಲ್ ಅನ್ನು ಕೂಡ ಹೊಂದಿದೆ.

ಆಟೋ ಎಕ್ಸ್‌ಪೋ 2020: ಸೂಪರ್‍‍ಬೈಕ್ ಅನ್ನು ಅನಾವರಣಗೊಳಿಸಿದ ಎಪ್ರಿಲಿಯಾ

ಈ ಬೈಕ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ. ಏಪ್ರಿಲ್ ತಿಂಗಳಲ್ಲಿ ಬಿ‍ಎಸ್-6 ಮಾಲಿನ್ಯ ನಿಯಮ ಜಾರಿಯಾಗಲಿದೆ. ಇದರಿಂದಾಗಿ ಈ ಬೈಕ್ ಕೇವಲ ಮಾರ್ಚ್ ಅಂತ್ಯದವರೆಗೆ ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ.

Most Read Articles

Kannada
English summary
Aprilia RSV4 1100 Factory priced at Rs 22.4 lakh. Read in Kannada.
Story first published: Friday, February 7, 2020, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X