ಆರ್‌ಎಸ್ 660 ಸ್ಪೋರ್ಟ್ಸ್ ಬೈಕಿನ ಟೀಸರ್ ಅನಾವರಣಗೊಳಿಸಿದ ಎಪ್ರಿಲಿಯಾ

ಎಪ್ರಿಲಿಯಾ ಕಂಪನಿಯು ತನ್ನ ಹೊಸ ಆರ್‌ಎಸ್ 660 ಸ್ಪೋರ್ಟ್ಸ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಕಂಪನಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಈ ಬೈಕಿನ ಟೀಸರ್ ಅನ್ನು ಅನಾವರಣಗೊಳಿಸಿದೆ.

ಆರ್‌ಎಸ್ 660 ಸ್ಪೋರ್ಟ್ಸ್ ಬೈಕಿನ ಟೀಸರ್ ಅನಾವರಣಗೊಳಿಸಿದ ಎಪ್ರಿಲಿಯಾ

ಎಪ್ರಿಲಿಯಾ ಆರ್‌ಎಸ್ 660 ಬೈಕಿನ ಪ್ರೀ-ಬುಕಿಂಗ್ ಗಳನ್ನು ಅಕ್ಟೋಬರ್ ನಲ್ಲಿ ಆರಂಭಿಸಲಾಗುವುದೆಂದು ಕಂಪನಿ ಹೇಳಿದೆ. ಕಂಪನಿಯು ಈ ಬೈಕ್‌ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಸೇರ್ಪಡೆಗೊಳಿಸಿದೆ. ಈ ಬೈಕ್ 2021ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ವರ್ಷದ ಮಧ್ಯ ಭಾಗದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾ ವೈರಸ್ ಕಾರಣದಿಂದಾಗಿ ಈ ಬೈಕಿನ ಬಿಡುಗಡೆಯನ್ನು ಮುಂದೂಡಲಾಗಿದೆ.

ಆರ್‌ಎಸ್ 660 ಸ್ಪೋರ್ಟ್ಸ್ ಬೈಕಿನ ಟೀಸರ್ ಅನಾವರಣಗೊಳಿಸಿದ ಎಪ್ರಿಲಿಯಾ

ಕಂಪನಿಯು ಈ ಬೈಕಿನ ಫೀಚರ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಬಿಡುಗಡೆಗೊಳಿಸಿದೆ. ಎಪ್ರಿಲಿಯಾ ಆರ್‌ಎಸ್ 660 ಬೈಕಿನ ವಿನ್ಯಾಸವನ್ನು ಆರ್‌ಎಸ್ ವಿ 4 ಎಂಬ ದೊಡ್ಡ ಬೈಕಿನ ಮಾದರಿಯಿಂದ ಪಡೆಯಲಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಆರ್‌ಎಸ್ 660 ಸ್ಪೋರ್ಟ್ಸ್ ಬೈಕಿನ ಟೀಸರ್ ಅನಾವರಣಗೊಳಿಸಿದ ಎಪ್ರಿಲಿಯಾ

ಆರ್‌ಎಸ್ 660 ಬೈಕ್ ಸ್ಪೋರ್ಟಿ ಹಾಗೂ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಬೈಕಿನ ಮುಂಭಾಗದಲ್ಲಿರುವ ಎಲ್‌ಇಡಿ ಡಿಆರ್‌ಎಲ್ ಗಳು ಬೈಕಿಗೆ ಆಕರ್ಷಕ ಲುಕ್ ನೀಡುತ್ತವೆ. ಈ ಬೈಕಿನಲ್ಲಿ ರೇಸಿಂಗ್‌ಗಾಗಿ ಏರೋಡೈನಾಮಿಕ್ ವಿನ್ಯಾಸವನ್ನು ನೀಡಲಾಗಿದೆ. ಇದರಿಂದಾಗಿ ಬೈಕ್‌ ಹೆಚ್ಚಿನ ವೇಗದಲ್ಲಿಯೂ ಬ್ಯಾಲೆನ್ಸ್ ಹೊಂದಿರುತ್ತದೆ.

ಆರ್‌ಎಸ್ 660 ಸ್ಪೋರ್ಟ್ಸ್ ಬೈಕಿನ ಟೀಸರ್ ಅನಾವರಣಗೊಳಿಸಿದ ಎಪ್ರಿಲಿಯಾ

ಈ ಬೈಕಿನಲ್ಲಿ ಎಲ್‌ಇಡಿ ಡಿಆರ್‌ಎಲ್ ಗಳನ್ನು ಹೊಂದಿರುವ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇನ್ನು ಸೈಡ್ ಪ್ರೊಫೈಲ್ ಶಾರ್ಪ್ ಆದ ವಿನ್ಯಾಸವನ್ನು ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಆರ್‌ಎಸ್ 660 ಸ್ಪೋರ್ಟ್ಸ್ ಬೈಕಿನ ಟೀಸರ್ ಅನಾವರಣಗೊಳಿಸಿದ ಎಪ್ರಿಲಿಯಾ

ಈ ಬೈಕ್ ಶಾರ್ಪ್ ಕ್ರೀಸ್ ಲೈನ್ ಹೊಂದಿರುವ ಸ್ಪೋರ್ಟಿ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಈ ಬೈಕಿನ ವಿನ್ಯಾಸವು ಎಪ್ರಿಲಿಯಾ ಆರ್‌ಎಸ್ ವಿ 4 ಬೈಕಿನ ವಿನ್ಯಾಸದಂತಿದೆ. ಎಪ್ರಿಲಿಯಾ ಆರ್‌ಎಸ್ 660 ಬೈಕಿನಲ್ಲಿ 660 ಸಿಸಿ ಪ್ಯಾರಲೆಲ್-ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 100 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಆರ್‌ಎಸ್ 660 ಸ್ಪೋರ್ಟ್ಸ್ ಬೈಕಿನ ಟೀಸರ್ ಅನಾವರಣಗೊಳಿಸಿದ ಎಪ್ರಿಲಿಯಾ

ಈ ಬೈಕಿನಲ್ಲಿ ದೊಡ್ಡ ಗಾತ್ರದ ಎಂಜಿನ್ ಇದ್ದರೂ, ಈ ಬೈಕಿನ ತೂಕ 165 ಕೆ.ಜಿಗಳಾಗಿದೆ. ಆರ್‌ಎಸ್ 660 ಬೈಕ್ 650 ಸಿಸಿ ಸೆಗ್ ಮೆಂಟಿನಲ್ಲಿರುವ ಕಡಿಮೆ ತೂಕದ ಬೈಕ್ ಆಗಿದೆ. ಎಪ್ರಿಲಿಯಾ ಕಂಪನಿಯು ಈ ಬೈಕಿನಲ್ಲಿ ಹಲವು ಹೊಸ ಟೆಕ್ನಾಲಜಿ ಹಾಗೂ ಸುರಕ್ಷತಾ ಫೀಚರ್ ಗಳನ್ನು ಅಳವಡಿಸಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಬೈಕ್ ಎಬಿಎಸ್, ಕಾರ್ನರಿಂಗ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್ ಹಾಗೂ 5 ಡ್ರೈವ್ ಮೋಡ್ ಸೇರಿದಂತೆ ಹಲವು ಫೀಚರ್ ಗಳನ್ನು ಹೊಂದಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.

ಆರ್‌ಎಸ್ 660 ಸ್ಪೋರ್ಟ್ಸ್ ಬೈಕಿನ ಟೀಸರ್ ಅನಾವರಣಗೊಳಿಸಿದ ಎಪ್ರಿಲಿಯಾ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಈ ಬೈಕ್ ಹೋಂಡಾ ಸಿಬಿಆರ್ 650, ಕವಾಸಕಿ ನಿಂಜಾ 650 ಹಾಗೂ ಕೆಟಿಎಂ 790 ಡ್ಯೂಕ್ ಬೈಕ್ ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Aprilia unveils RS660 bike teaser bookings starts in October. Read in Kannada.
Story first published: Wednesday, August 19, 2020, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X