ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ತನ್ನ ಸ್ಕೂಟರ್ ಉತ್ಪನ್ನಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಉನ್ನತೀಕರಿಸುತ್ತಿದ್ದು, ಇದೀಗ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಪರಿಚಯಿಸಲಾಗಿರುವ ಕನೆಕ್ಟೆಡ್ ಫೀಚರ್ಸ್ ಅನ್ನು ಉನ್ನತೀಕರಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕನೆಕ್ಟೆಡ್ ಫೀಚರ್ಸ್‍ಗಳನ್ನು ಜೋಡಿಸುತ್ತಿದ್ದು, ಹೊಸ ಫೀಚರ್ಸ್ ಬಿಡುಗಡೆಯ ನಂತರ ಹಲವಾರು ಬಾರಿ ಉನ್ನತೀಕರಿಸಲಾಗಿದೆ. ಕನೆಕ್ಟೆಡ್ ಫೀಚರ್ಸ್‌ಗಳನ್ನು ಸ್ಕೂಟರ್ ಸವಾರರು ಮೊಬೈಲ್ ಅಪ್ಲಿಕೇಷನ್ ಮೂಲಕವೇ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಬಳಕೆದಾರರ ಸಲಹೆ ಮೇರೆಗೆ ಕನೆಕ್ಟೆಡ್ ಫೀಚರ್ಸ್ ಅಪ್ಲಿಕೇಷನ್‌ನಲ್ಲಿ ಕೆಲವು ಬದಲಾವಣೆ ತರಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಆಂಡ್ರಾಯ್ಡ್ ಮತ್ತು ಐಒಎಸ್‌ ಬಳಕೆದಾರರಿಗಾಗಿ ಪ್ರತ್ಯೇಕ ಅಪ್ಲಿಕೇಷನ್ ಅಭಿವೃದ್ದಿಗೊಳಿಸಿರುವ ಎಥರ್ ಎನರ್ಜಿ ಕಂಪನಿಯು ಇದೀಗ ಅಪ್ಲಿಕೇಷನ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡುವ ಮೂಲಕ ಅಪ್ಲಿಕೇಷನ್‌ನಲ್ಲಿರುವ ಸೂಚನೆಗಳನ್ನು ಬಳಕೆದಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಬದಲಾವಣೆಗೊಳಿಸಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಅಪ್ಲಿಕೇಷನ್‌ನಲ್ಲಿರುವ ಸೂಚನೆಗಳನ್ನು ಬಳಕೆದಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಬದಲಾವಣೆಗೊಳಿಸಿರುವುದರಿಂದ ಸ್ಕೂಟರ್ ಚಾಲನೆ ವೇಳೆ ಯಾವುದೇ ಗೊಂದಲಗಳಿಲ್ಲದೆ ಮಾಹಿತಿಯನ್ನು ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್‌ನಲ್ಲಿ ನಿಖರವಾಗಿ ನೋಡಬಹುದಾಗಿದ್ದು, ಬಳಕೆದಾರರ ಸಲಹೆ ಮೇರೆಗೆ ಹೊಸ ಬದಲಾವಣೆಯನ್ನು ಪರಿಚಯಿಸಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಇನ್ನು ಎಥರ್ ಎನರ್ಜಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ 450ಎಕ್ಸ್ ಮತ್ತು 450ಎಕ್ಸ್ ಸೀರಿಸ್ 1 ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು ಈ ಹಿಂದಿನ 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಳ್ಳುವ ಮೂಲಕ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಸದ್ಯ ಸ್ಟ್ಯಾಂಡರ್ಡ್ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, 450ಎಕ್ಸ್ ಸೀರಿಸ್ 1 ಸ್ಕೂಟರ್ ಮಾದರಿಯು ಸ್ಪೆಷಲ್ ಎಡಿಷನ್ ಆಗಿ ಮಾರಾಟಗೊಳ್ಳುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಎಲೆಕ್ಟ್ರಿಕ್ ಸ್ಕೂಟರ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಮುಂಬರುವ ಜನವರಿ ಕೊನೆಯ ತನಕ ಮಾತ್ರ ಖರೀದಿಗೆ ಲಭ್ಯವಿರಲಿರುವ 450ಎಕ್ಸ್ ಸೀರಿಸ್ 1 ಮಾದರಿಯ ನಿಗದಿತ ಸಮಯದ ನಂತರ ಸ್ಥಗಿತವಾಗಲಿದ್ದು, ಸ್ಟ್ಯಾಂಡರ್ಡ್ 450ಎಕ್ಸ್ ಮಾರಾಟ ಮಾತ್ರ ಮುಂದುವರಿಯಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

450ಎಕ್ಸ್ ಸ್ಕೂಟರ್ ಮಾದರಿಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1.59 ಲಕ್ಷ ಬೆಲೆ ಹೊಂದಿದ್ದು, ಬಣ್ಣದ ಆಯ್ಕೆ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಾದ 450ಎಕ್ಸ್ ಮಾದರಿಯಲ್ಲೇ ಸ್ಪೆಷಲ್ ಎಡಿಷನ್ ಕೂಡಾ ಒಂದೇ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರೇ, ವೈಟ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆ ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಎಲೆಕ್ಟ್ರಿಕ್ ಸ್ಕೂಟರ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

Most Read Articles

Kannada
English summary
Ather 450x Electric Scooter Gets Performance Improvements. Read in Kannada.
Story first published: Friday, December 25, 2020, 20:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X