ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಬಜಾಜ್ ಆಟೋ ಕಂಪನಿಯ ಸರಣಿಯಲ್ಲಿ ಪಲ್ಸರ್ ಬೈಕುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೀಗ ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಬಜಾಜ್ ಆಟೋ ಕಂಪನಿಯು ಈ ಪಲ್ಸರ್ ಆರ್‌ಎಸ್‌400 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಆದರೆ ಈ ಹೊಸ ಪಲ್ಸರ್ ಆರ್‌ಎಸ್‌400 ಬೈಕಿನ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ ಸ್ವಲ್ಪ ಕಡಿಮೆ ಎತ್ತರ ಹೆಚ್ಚು ಆರಾಮದಾಯಕವಾಗಿರಲಿದೆ. ಕಂಪನಿಯು ಪಲ್ಸರ್ ಆರ್ಎಸ್ ವಿಭಾಗದಲ್ಲಿ ಪಲ್ಸರ್ ಆರ್ಎಸ್ 200 ಮಾದರಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಹೊಸ ಪಲ್ಸರ್ ಆರ್ಎಸ್ 400 ಬೈಕ್ ಮಾರುಕಟ್ಟೆಯಲ್ಲಿರುವ ಆರ್ಎಸ್ 200 ಮಾದರಿಯಿಂದ ಪ್ರೇರಣೆ ಪಡೆಯಲಿದೆ. ಈ ಹೊಸ ಆರ್‌ಎಸ್‌400 ಬೈಕ್ ಆರ್ಎಸ್ 200 ಮಾದರಿಯ ಅಗ್ರೇಸಿವ್ ಲುಕ್ ಅನ್ನು ಹೊಂದಿರಬಹುದು.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೊಸ ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿನಲ್ಲಿ 199.5 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 4-ವಾಲ್ವ್, ಫ್ಯೂಯಲ್-ಇಂಜೆಕ್ಟ್, ಟ್ರಿಪಲ್ ಸ್ಪಾರ್ಕ್, ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಈ ಎಂಜಿನ್ 9,750 ಆರ್‌ಪಿಎಂನಲ್ಲಿ 24.15 ಬಿ‍‍ಹೆಚ್‍‍ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 18.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಅದೇ ರೀತಿ ಹೊಸ ಪಲ್ಸರ್ ಆರ್‌ಎಸ್‌400 ಬೈಕ್ 373.3 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ 373.3 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 40 ಬಿಹೆಚ್‍ಪಿ ಪವರ್ ಮತ್ತು 35 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಈ ಎಂಜಿನ್ ನಲ್ಲಿ ಮೂರು ಸ್ಪಾರ್ಕ್ ಪ್ಲಗ್‌ಗಳು ಮತ್ತು ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿರಲಿದೆ. ಇದರೊಂದಿಗೆ ಡಿಒಹೆಚ್‍ಸಿ ಸಿಸ್ಟಂ ಅನ್ನು ಕೂಡ ಅಳವಡಿಸಲಾಗುವುದು.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್ ಹೊಂದಲಿರುವ ಪಲ್ಸರ್ ಆರ್‍ಎಸ್ 200 ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿವೆ. ಆಂಕರಿಂಗ್ ಪವರ್‍‍ಗಾಗಿ ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 230 ಎಂಎಂ ಪೆಟಲ್ ಟೈಪ್‍ ಡಿಸ್ಕ್ ಬ್ರೇಕ್‌ಗಳಿವೆ. ಇದೇ ರೀತಿಯ ಫೀಚರ್ ಗಳನ್ನು ಹೊಸ ಪಲ್ಸರ್ ಆರ್‌ಎಸ್‌400 ಬೈಕ್ ಹೊಂದಿರಲಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಹೊಸ ಬೈಕಿನಲ್ಲಿ ಎಲ್ಇಡಿ ಡಿಆರ್‍ಎಲ್ ಹೊಂದಿರುವ ಟ್ವಿನ್ ಪಾಡ್ ಪ್ರೊಜೆಕ್ಟರ್‍‍ಗಳು, ಎಲ್ಇಡಿ ಟೇಲ್‍‍ಲೈಟ್, ಬ್ಲಿಂಕರ್‍‍ಗಳು, ಪೂರ್ಣ ಪ್ರಮಾಣದ ಫೇರಿಂಗ್ ಡಿಸೈನ್, ಮಸ್ಕ್ಯುಲರ್ ಶೇಪ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್‍ ಹಾಗೂ ಸ್ಪ್ಲಿಟ್ ಸ್ಟೈಲ್ ಸೀಟುಗಳನ್ನು ಹೊಂದಿರಲಿದೆ.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಪಲ್ಸರ್ ಆರ್‌ಎಸ್‌400 ಬೈಕ್

ಈ ವರ್ಷದ ಆಗಸ್ಟ್ ತಿಂಗಳಲ್ಲಿ ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಈ ಹೊಸ ಬಜಾಜ್ ಪಲ್ಸರ್ ಆರ್ಎಸ್400 ಬೈಕನ್ನು ಬಿಡುಗಡೆಗೊಳಿಸಬಹುದು. ಈ ಹೊಸ ಬೈಕನ್ನು ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Bajaj Pulsar RS400 launch: What to expect?. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X