ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಜನಪ್ರಿಯ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಹೊಸ ಲಿಯಾನ್‍‍ಸಿನೊ 500 ಬೈಕನ್ನು ಅಮೆರಿಕಾದಲ್ಲಿ ಬಿಡುಗಡೆಗೊಳಿಸಿದೆ. ಬೆನೆಲ್ಲಿ ಲಿಯಾನ್‍‍ಸಿನೊ 500 ಅಮೆರಿಕಾ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ.

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಭಾರತದಲ್ಲಿ ಮಾರಾಟವಾದ ಮಾದರಿಗೆ ಹೋಲುತ್ತದೆ. ಈ ಬೆನೆಲ್ಲಿ ಟಿಆರ್‌ಕೆ 502 ರಿಂದ ಎರವಲು ಪಡೆದ 499ಸಿಸಿ ಪ್ಯಾರಲಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 4500 ಆರ್‌ಪಿಎಂನಲ್ಲಿ 45 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ರೆಟ್ರೊ ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಹೊಂದಿದೆ. ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಹಲವಾರು ಫೀಚರ್ ಗಳನ್ನು ಹೊಂದಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಸ್ಕ್ರ್ಯಾಂಬ್ಲರ್ ಶೈಲಿಯ ಈ ಬೈಕ್ ಟ್ಯೂಬುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಂಗಳನ್ನು ಹೊಂದಿರಲಿದೆ. ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಅಪ್‌ಸೈಡ್ ಡೌನ್ 50 ಎಂಎಂ ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿವೆ.

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಇವುಗಳು ಪ್ರಿ ಲೋಡ್ ಅಡ್ಜಸ್ಟ್ ಮೆಂಟ್ ಹೊಂದಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ಬೆನೆಲ್ಲಿ ಲಿಯಾನ್‍‍ಸಿನೊ 500 ಕನಿಷ್ಠ ವಿನ್ಯಾಸಗಳನ್ನು ಹೊಂದಿದೆ. ಇವುಗಳಲ್ಲಿ ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಲೋ ಸೆಟ್ ಹ್ಯಾಂಡಲ್‌ಬಾರ್‌, ಹಿಂಭಾಗದಲ್ಲಿ ಮಿನಿಮಲ್ ಪ್ಯಾನೆಲ್ ಹಾಗೂ ಮುಂಭಾಗದ ಫೆಂಡರ್‌ನಲ್ಲಿ ಮೆಟಾಲಿಕ್ ಆರ್ನಾಮೆಂಟ್‍‍ಗಳಿವೆ.

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಲಿಯಾನ್‍‍ಸಿನೊ 500 ಪಾಡ್ ಶೈಲಿಯ ವಿನ್ಯಾಸದಲ್ಲಿರುವ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನ ಜೊತೆಗೆ, ಎಲ್ಇಡಿ ಡಿಆರ್‍ಎಲ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್‍‍‍ಗಳನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಹಿಂದಿನ ಮಾದರಿ ಬಿಎಸ್-4 ಲಿಯಾನ್‍‍ಸಿನೊ 500 ಬೈಕ್ ಭಾರತದಲ್ಲಿರುವ ಬೆನೆಲ್ಲಿ ಕಂಪನಿಯ ಟಿಎನ್‌ಟಿ 300 ಹಾಗೂ ಟಿಆರ್‌ಕೆ 502 ಬೈಕುಗಳ ನಡುವಿನ ಸರಣಿಯಲ್ಲಿರಲಿತ್ತು. ಲಿಯಾನ್‍‍ಸಿನೊ 500 ಬೈಕ್ ಅನ್ನು ಸಿಲ್ವರ್ ಹಾಗೂ ಕೆಂಪು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಬಿಡುಗಡೆ

ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾದ ಬಳಿಕ ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ. ಬಿಎಸ್ 6 ಬೆನೆಲ್ಲಿ ಲಿಯಾನ್‍‍ಸಿನೊ 500 ಬೈಕ್ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Benelli Leoncino 500 launched In The USA. Read In Kannada.
Story first published: Thursday, October 15, 2020, 20:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X